Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ?
ಗರ್ಭಿಣಿಯರೇ ಚಳಿಗಾಲದ ಸತ್ವಪರೀಕ್ಷೆಗೆ ಭಯಪಡಬೇಡಿ
ಗರ್ಭದೊಳಗೆ ಬೆಳೆಯುತ್ತಿರುವ ಶಿಶುವಿನ ಕಲ್ಪನೆಯೇ ತಾಯಿಯಾಗುತ್ತಿರುವವಳಿಗೆ ಒಂದು ಸುಂದರ ಅನುಭವ. ಶಿಶು ಕೊಂಚ ಮಿಸುಕಾಡಿದರೂ ಆಗುವ ಅನುಭವ ಅನನ್ಯ. ಆ ಸುಂದರ ಅನುಭವ ನನಸಾಗುವ ಅವಧಿಯಲ್ಲಿ ಶರೀರ ಹಲವು ಬದಲಾವಣೆಗಳಿಗೆ ಒಳಪಡುತ್ತದೆ. ಇದಕ್ಕೆ ಅನುಸಾರವಾಗಿ ಆರೋಗ್ಯದಲ್ಲಿ ಏರುಪೇರು ಸಹಾ ಸಹಜ. ಅಂತೆಯೇ ಆರೋಗ್ಯದ ಬಗ್ಗೆ ಈ ಹೊತ್ತಿನಲ್ಲಿ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ.
ಒಂಬತ್ತು ತಿಂಗಳ ಗರ್ಭಾವಸ್ಥೆಯನ್ನು ತ್ರೈಮಾಸಿಕವಾಗಿ ವಿಭಾಜಿಸುವ ವೈದ್ಯರು ಪ್ರತಿ ತ್ರೈಮಾಸಿಕಕ್ಕೂ ಪ್ರತ್ಯೇಕ ಪರೀಕ್ಷೆ ಮತ್ತು ಔಷಧಿಗಳನ್ನು ಸಲಹೆ ಮಾಡುತ್ತಾರೆ. ಇನ್ನೇನು ಚಳಿಗಾಲ ಶುರುವಾಗಿಯೇ ಬಿಟ್ಟಿದೆ, ತಣ್ಣನೆಯ ಹವೆಯ ಜೊತೆಗೆ ಇನ್ನೂ ಹಲವಾರು ಸಮಸ್ಯೆಗಳು ಗರ್ಭಾವಸ್ಥೆಯಲ್ಲಿರುವ ಗರ್ಭಿಣಿಯರಿಗೆ ಎದುರಾಗುತ್ತಲೇ ಇರುತ್ತವೆ, ಇಂತಹ ಸಂದರ್ಭದಲ್ಲಿ ಗರ್ಭಿಣಿಯರಿಗೆ ಹೆಚ್ಚಿನ ಪೌಷ್ಠಿಕಾಂಶವುಳ್ಳ ಆಹಾರ, ವೈದ್ಯರ ಸಲಹೆ, ನಿದ್ದೆ ಮತ್ತು ಸೂಕ್ತ ವ್ಯಾಯಮದ ಅವಶ್ಯಕತೆಯಿದೆ.
ಹಾಗಾಗಿ ಚಳಿಗಾಲದಲ್ಲಿ ಗರ್ಭವತಿಯರು, ಅದರಲ್ಲೂ ಕೊನೆಯ ತಿಂಗಳುಗಳನ್ನು ಕಳೆಯುತ್ತಿರುವವರಿಗೆ ಚಳಿಗಾಲ ಒಂದು ಸತ್ವಪರೀಕ್ಷೆಯಾಗಿದೆ. ಅಷ್ಟೇ ಅಲ್ಲದೆ ಚಳಿಯಲ್ಲಿ ವಿಪರೀತವಾಗಿ ಒಣಗುವ ಚರ್ಮ ತುರಿಕೆ ಹಾಗೂ ಉರಿಗೂ ಕಾರಣವಾಗಬಹುದು. ಬನ್ನಿ ಇಂತಹ ಸಮಯದಲ್ಲಿ ನೀವು ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು ಎಂಬುದನ್ನು ನೋಡೋಣ...

ಶುಂಠಿ ಟೀ ಸೇವಿಸಿ
ಸಾಮಾನ್ಯವಾಗಿ ಚಳಿಗಾಲದಲ್ಲಿ ತಣ್ಣನೆಯ ಹವೆ ಇರುವುದರಿಂದ ಗರ್ಭಾವಸ್ಥೆಯಲ್ಲಿ ಶೀತ, ಕೆಮ್ಮು, ತಲೆ ನೋವು ಮುಂತಾದ ಸಮಸ್ಯೆಗಳು ಕಾಡುವುದು ಸರ್ವೆ ಸಾಮಾನ್ಯ. ಹಾಗಾಗಿ ಹಸಿಶುಂಠಿಯ ರಸ ಬೆರೆಸಿದ ಟೀ ಈ ಅವಧಿಯಲ್ಲಿ ಶೀತ ಮತ್ತು ಕೆಮ್ಮು ಕಡಿಮೆಮಾಡಲು ಉತ್ತಮವಾದ ಆಯ್ಕೆಯಾಗಿದೆ. ನಿತ್ಯ ಮೂರರಿಂದ ನಾಲ್ಕು ಕಪ್ ಹಾಲು ಬೆರೆಸದ ಶುಂಠಿಯ ಚಹಾ ಸೇವಿಸುವ ಮೂಲಕ ಮೂರು ಅಥವಾ ನಾಲ್ಕು ದಿನಗಳಲ್ಲಿಯೇ ಶೀತ ಮತ್ತು ಕೆಮ್ಮು ಹತೋಟಿಗೆ ಬರುತ್ತದೆ.

ಚಳಿಗೆ ಕೆಮ್ಮು, ಕಫ ಕಟ್ಟಿಕೊಂಡಿದ್ದರೆ
ಬಹಳ ಹಿಂದಿನಿಂದಲೂ ಜೇನನ್ನು ಶೀತ ಮತ್ತು ಕೆಮ್ಮಿನ ಪರಿಹಾರವಾಗಿ ಬಳಸಲಾಗುತ್ತಾ ಬರಲಾಗಿದೆ. ನಿಮ್ಮ ನಿತ್ಯದ ಟೀ (ಹಾಲಿಲ್ಲದಿದ್ದರೆ ಉತ್ತಮ) ಕಪ್‌ನಲ್ಲಿ ಒಂದು ಚಮಚ ಶುದ್ಧವಾದ ಜೇನುತುಪ್ಪವನ್ನು ಕದಡಿ ದಿನಕ್ಕೆ ನಾಲ್ಕಾರು ಬಾರಿ ಕುಡಿಯುವ ಮೂಲಕವೂ ಕೆಮ್ಮು ಮತ್ತು ಶೀತ ಕಡಿಮೆಯಾಗುತ್ತದೆ. ಅದರಲ್ಲೂ ಕಫ ಕಟ್ಟಿಕೊಂಡಿದ್ದರೆ ಒಂದು ಲೋಟ ಬರೆಯ ಬಿಸಿನೀರಿಗೆ ಒಂದು ಚಮಚ ಜೇನು ಸೇರಿಸಿ ಎಷ್ಟು ಸಾಧ್ಯವೋ ಅಷ್ಟು ಬಿಸಿಯಾಗಿ ಕುಡಿಯಿರಿ. ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದಿದ್ದು ಮಗುವಿಗೂ ನಿರಪಾಯಕಾರಿಯಾಗಿದೆ.

ಹನ್ನೆರಡು ಲೋಟ ನೀರು ಕುಡಿಯಿರಿ
ಗರ್ಭಿಣಿಯರಿಗೆ ದಿನವಿಡೀ ಸಾಕಷ್ಟು ನೀರು ಕುಡಿಯುತ್ತಿರುವುದು ಅಗತ್ಯವಾಗಿದೆ. ಆದರೆ ಚಳಿಗಾಲದಲ್ಲಿ ಕೊಂಚ ಹೆಚ್ಚು ನೀರು ಕುಡಿಯುವುದು ಅತ್ಯಗತ್ಯ. ಏಕೆಂದರೆ ಚಳಿಗಾಲದಲ್ಲಿಯೂ ನಮ್ಮ ದೇಹ ಸಾಕಷ್ಟು ನೀರನ್ನು ಬೆವರಿನ ಮೂಲಕ ಕಳೆದುಕೊಳ್ಳುತ್ತದೆ. ಅಲ್ಲದೇ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಹೆಚ್ಚಿನ ನೀರು ಮತ್ತು ಆಹಾರದ ಅವಶ್ಯಕತೆಯಿದೆ. ಸಾಮಾನ್ಯವಾಗಿ ದಿನಕ್ಕೆ ಎಂಟು ಲೋಟ ನೀರು ಕುಡಿಯುತ್ತಿದ್ದಲ್ಲಿ ಚಳಿಗಾಲದಲ್ಲಿ ಹನ್ನೆರಡು ಲೋಟ ಕುಡಿಯಬೇಕು.

ನೈಸರ್ಗಿಕವಾಗಿ ದೊರೆಯುವ ಮಾಯಿಶ್ಚರೈಸರ್ ಅನ್ನು ಉಪಯೋಗಿಸಿ
ನಮ್ಮ ಚರ್ಮಕ್ಕೆ ಗಾಳಿಯಲ್ಲಿ ತೇವಾಂಶವಿರುವುದು ಅಗತ್ಯ. ತೇವಾಂಶವಿಲ್ಲದಿದ್ದರೆ ಚರ್ಮ ಒಣಗುತ್ತದೆ ಹಾಗೂ ನಿಧಾನವಾಗಿ ಬಿರುಕುಗಳು ಮೂಡತೊಡಗುತ್ತವೆ. ಅದರಲ್ಲೂ ಏಕಪದರವಿರುವ ಮೂಗಿನ ಒಳಭಾಗದಲ್ಲಿ ಬಿರುಕು ಮೂಡಿದ ಕೂಡಲೇ ರಕ್ತ ಜಿನುಗಲು ಪ್ರಾರಂಭವಾಗುತ್ತದೆ. ಇದು ಅಸ್ತಮಾ ಹಾಗೂ ಶ್ವಾಸಸಂಬಂಧಿ ತೊಂದರೆಗಳಿಗೆ ಆಹ್ವಾನ ನೀಡುತ್ತದೆ. ಈ ತೊಂದರೆಯಿಂದ ಮುಕ್ತಿ ಪಡೆಯಲು ಮನೆಯಲ್ಲಿ ತೇವಾಂಶ ಒದಗಿಸುವ ಸಾಧನವೊಂದನ್ನು ಅಳವಡಿಸಿ ಗಾಳಿಯಲ್ಲಿ ಆರ್ದ್ರತೆ ಸದಾ ಇರುವಂತೆ ನೋಡಿಕೊಳ್ಳಬಹುದು.

ವೈದ್ಯರ ಭೇಟಿ
ಚಳಿಗಾಲದ ಅವಧಿಯಲ್ಲಿ ವೈದ್ಯರಲ್ಲಿ ಅಗತ್ಯವಾಗಿ ಕೇಳಿ ತಿಳಿದುಕೊಳ್ಳಬೇಕಾಗಿರುವ ಮತ್ತೊ೦ದು ಸ೦ಗತಿಯು ಯಾವುದೆ೦ದರೆ, ಈ ಅವಧಿಯಲ್ಲಿ ನೀವು ಸೇವಿಸಬೇಕಾಗಿರುವ ಆಹಾರ ಪದ್ಧತಿ ಹಾಗೂ ದಿನಿತ್ಯ ಕೈಗೊಳ್ಳಬಹುದಾದ ವ್ಯಾಯಮದ ಕುರಿತಾದುದಾಗಿದೆ. ಅಲ್ಲದೆ ವೈದ್ಯರ ಶಿಫಾರಸ್ಸಿನ ಅಗತ್ಯವಿಲ್ಲದೇ ಸೇವಿಸುವ ಔಷಧಾಲಯಗಳ ಬಗ್ಗೆ ನೇರವಾಗಿ ಕೇಳಿ, ಪಡೆದು, ಸೇವಿಸಲು ಅನುಮತಿಸಲ್ಪಟ್ಟಿರುವ ಔಷಧಗಳು, ಗುಳಿಗೆಗಳು ಕುರಿತು ಕೇಳಿ ತಿಳಿದುಕೊಳ್ಳಿರಿ.



Click it and Unblock the Notifications










