Latest Updates
-
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್
ಗರ್ಭಿಣಿಯರ ಆರೋಗ್ಯ ವೃದ್ಧಿಸುವ 'ಬೆಟ್ಟದ ನೆಲ್ಲಿಕಾಯಿ'
ಗರ್ಭಿಣಿ ಆಗುವುದು ಜೀವಮಾನದ ಆನಂದ ಕ್ಷಣಗಳಾಗಿರುತ್ತವೆ ಹೆಣ್ಣಿಗೆ, ಹಾಗೆಂದು ಇದು ಕೇವಲ ಆನಂದದ ಕ್ಷಣಗಳನ್ನೆ ಹೊಂದಿರಬೇಕು ಎಂದಾದಲ್ಲಿ ಗರ್ಭಿಣಿಯರು ಮೈಯೆಲ್ಲಾ ಕಣ್ಣಾಗಿ ತಮ್ಮನ್ನು ಮತ್ತು ತಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಇರುವ ಕೆಲವೊಂದು ನೀತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದಕ್ಕಾಗಿಯೇ ಗರ್ಭಿಣಿಯರಿಗೆ ಕಂಡ ಕಂಡ ಆಹಾರ ಪದಾರ್ಥಗಳನ್ನು ತಿನ್ನಲು ಬಿಡುವುದಿಲ್ಲ ಮನೆಗಳಲ್ಲಿ. ಈ ಕುರಿತಾಗಿ ವೈದ್ಯರು ಮತ್ತು ಪೋಷಕರು ಮೊದಲೆ ಎಚ್ಚರಿಸಿರುತ್ತಾರೆ. ಗರ್ಭಿಣಿಯರು ಅಪರೂಪವಾದ ಆಹಾರ ಸೇವಿಸುವ ಮೊದಲು ಯಾರಾದರು ತಿಳಿದವರನ್ನು ಕೇಳಿ ತಿನ್ನುವ ವಾಡಿಕೆ ತುಂಬಾ ಹಿಂದಿನಿಂದ ನಡೆದುಕೊಂಡು ಬಂದಿದೆ. ಏಕೆಂದರೆ ಗರ್ಭಿಣಿಯರು ತಾವು ತಿನ್ನುವ ಆಹಾರ ಪದಾರ್ಥಗಳಿಂದ ತಮ್ಮ ಹೊಟ್ಟೆಯಲ್ಲಿ ಬೆಳೆಯುವ ಮಗುವನ್ನು ಕಳೆದುಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ. ಇದು ಅವರ ಆರೋಗ್ಯವನ್ನು ಸಹ ಹಾಳು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ 14 ಲಾಭ
ಸಾಮಾನ್ಯವಾಗಿ ಗರ್ಭಿಣಿಯರಿಗೆ ಊಟ ಮಾಡುವ ಆಸಕ್ತಿ ಸ್ವಲ್ಪ ಹೆಚ್ಚಿಗೆ ಇರುತ್ತದೆ. ಗರ್ಭಾವಧಿಯ ಹಂತವು ಮುಂದುವರೆದಂತೆಲ್ಲ ಇದು ಇನ್ನಷ್ಟು ಹೆಚ್ಚಾಗುತ್ತಾ ಇರುತ್ತದೆ. ಆಗ ಯಾವ ಆಹಾರ ಸೇವಿಸುವುದು ಮತ್ತು ಸೇವಿಸಬಾರದು ಎಂಬ ಜಿಜ್ಞಾಸೆ ಎಲ್ಲಾ ಗರ್ಭಿಣಿಯರಲ್ಲಿ ಹಲವಾರು ಬಾರಿ ಕಾಡುತ್ತದೆ. ಇದೇ ಮಾತು ಬೆಟ್ಟದ ನೆಲ್ಲಿಕಾಯಿ ಸೇವಿಸುವಾಗಲು ಸಹ ಗರ್ಭಿಣಿಯರ ಮನಸ್ಸಿನಲ್ಲಿ ಮೂಡುತ್ತದೆ.
ಬೆಟ್ಟದ ನೆಲ್ಲಿಕಾಯಿಯು ಒಂದು ಅದ್ಭುತವಾದ ಆಹಾರ ಪದಾರ್ಥವಾಗಿದ್ದು, ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಆಮ್ಲಾ ಅಥವಾ ಬೆಟ್ಟದ ನೆಲ್ಲಿಕಾಯಿಯನ್ನು ಗರ್ಭಿಣಿಯರು ಸೇವಿಸಲು ಒಳ್ಳೆಯದು ಎಂದು ಸಲಹೆ ಮಾಡಲಾಗುತ್ತದೆ. ಇದು ಗರ್ಭದಲ್ಲಿರುವ ತೊಂದರೆಗಳನ್ನು ಸಹ ನಿವಾರಿಸುತ್ತದೆ. ಬೆಟ್ಟದ ನೆಲ್ಲಿಕಾಯಿಯು ಗರ್ಭಿಣಿಯರಲ್ಲಿ ಕಂಡು ಬರುವ ಮೂಡ್ ಸ್ವಿಂಗ್ ಅಥವಾ ಬೇಸರವನ್ನು ಸಹ ನಿಯಂತ್ರಿಸುತ್ತದೆ. ಬೆಟ್ಟದ ನೆಲ್ಲಿಕಾಯಿಯನ್ನು ಪ್ರತಿದಿನ ಸೇವಿಸುವುದರಿಂದ ಅವಧಿ ಪೂರ್ವ ಪ್ರಸವದ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇದು ನಿಮ್ಮ ಮಗುವಿನ ನೆನಪಿನ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಇದರಲ್ಲಿರುವ ಯಥೇಚ್ಛ ಕಬ್ಬಿಣಾಂಶವು ಅನಿಮಿಯಾ ಬರದಂತೆ ತಡೆಯಲು ನೆರವಾಗುತ್ತವೆ. ಆದ್ದರಿಂದ ಬೆಟ್ಟದ ನೆಲ್ಲಿಕಾಯಿಯಿಂದ ಗರ್ಭಿಣಿಯರಿಗೆ ಹಲವಾರು ಪ್ರಯೋಜನಗಳು ದೊರೆಯುತ್ತವೆ. ಈ ಅಂಕಣದಲ್ಲಿ ಬೋಲ್ಡ್‌ಸ್ಕೈ ನಿಮ್ಮೊಂದಿಗೆ ಬೆಟ್ಟದ ನೆಲ್ಲಿಕಾಯಿಯಿಂದ ದೊರೆಯುವ ಪ್ರಯೋಜನಗಳ ಕುರಿತಾಗಿ ಮತ್ತಷ್ಟು ಮಾಹಿತಿಗಳನ್ನು ನೀಡುತ್ತಿದೆ. ಇದನ್ನು ತಿಳಿಯಲು ಸ್ಕ್ರೋಲ್ ಮಾಡಿ.

ಮಲಬದ್ಧತೆಯನ್ನು ನಿವಾರಿಸುತ್ತದೆ
ಗರ್ಭಿಣಿಯಾಗಿರುವಾಗ ಹಲವಾರು ಮಹಿಳೆಯರಲ್ಲಿ ಮಲಬದ್ಧತೆಯ ಸಮಸ್ಯೆ ಕಂಡು ಬರುತ್ತದೆ. ಇದನ್ನು ವೈಜ್ಞಾನಿಕವಾಗಿ ಗ್ಯಾಸ್ಟ್ರೊಇಂಟೆಸ್ಟಿನಲ್ ಡಿಸಾರ್ಡರ್‌ಗಳು ಎಂದು ಕರೆಯುತ್ತಾರೆ. ಇದರಿಂದಾಗಿ ಮಲಬದ್ದತೆ ಮತ್ತು ಹೆಮರಾಯ್ಡ್‌ನಂತಹ ಸಮಸ್ಯೆಗಳು ಕಂಡು ಬರುತ್ತವೆ. ಬೆಟ್ಟದ ನೆಲ್ಲಿಕಾಯಿಯನ್ನು ನಿಮ್ಮ ಆಹಾರದಲ್ಲಿ ಸೇವಿಸುವುದರಿಂದಾಗಿ ಈ ಸಮಸ್ಯೆಯಿಂದ ನೀವು ಪಾರಾಗಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಲಬದ್ಧತೆಯನ್ನು ನಿವಾರಿಸುತ್ತದೆ
ಏಕೆಂದರೆ ಇದು ನಿಮ್ಮ ದೇಹಕ್ಕೆ ಅಗತ್ಯವಾದ ನಾರಿನಂಶವನ್ನು ಒದಗಿಸುತ್ತದೆ. ಈ ನಾರಿನಂಶವು ನಿಮ್ಮ ಜೀರ್ಣಾಂಗವ್ಯೂಹವು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಹೀಗೆ ನೀವು ಗ್ಯಾಸ್ಟ್ರೊಇಂಟೆಸ್ಟಿನಲ್ ಡಿಸಾರ್ಡರ್‌ನಿಂದ ಹೊರಬರಬಹುದು.

ರಕ್ತದೊತ್ತಡವನ್ನು ಮತ್ತು ಎದೆ ಉರಿಯನ್ನು ಕಡಿಮೆ ಮಾಡುತ್ತದೆ
ಬೆಟ್ಟದ ನೆಲ್ಲಿಕಾಯಿಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ ಇರುತ್ತದೆ. ಇದು ರಕ್ತ ನಾಳಗಳನ್ನು ಹಿಗ್ಗಿಸುವ ಮೂಲಕ ನಿಮ್ಮ ರಕ್ತದೊತ್ತಡವನ್ನು ಸುಸ್ಥಿತಿಯಲ್ಲಿಡುತ್ತದೆ. ಅಲ್ಲದೆ ತಾಜಾ ಬೆಟ್ಟದ ನೆಲ್ಲಿಕಾಯಿಗಳನ್ನು ಸೇವಿಸುವ ಮೂಲಕ ಗರ್ಭಿಣಿಯಾಗಿರುವಾಗ ಎದೆಯುರಿಯನ್ನು ಮತ್ತು ಅಸಿಡಿಟಿಯನ್ನು ಕಡಿಮೆ ಮಾಡಿಕೊಳ್ಳಬಹುದು.

ಮುಂಜಾನೆ ಮಂಕುತನವನ್ನು ಕಡಿಮೆ ಮಾಡಿಕೊಳ್ಳಬಹುದು
ಗರ್ಭಿಣಿಯರಲ್ಲಿ ಬೆಳ್ಳಂಬೆಳಗ್ಗೆ ಒಂದು ಬಗೆಯ ಮಂಕುತನ ಕಾಡುವುದು ಸಹಜ. ಬೆಟ್ಟದ ನೆಲ್ಲಿಕಾಯಿಯಲ್ಲಿರುವ ಶಕ್ತಿ-ವರ್ಧಕ ಅಂಶಗಳು ನಿಮ್ಮನ್ನು ಸುಸ್ತು ಮತ್ತು ನಿಶ್ಶಕ್ತಿಯಿಂದ ಪಾರು ಮಾಡುತ್ತದೆ.

ಜೀರ್ಣಾಂಗ ಕ್ರಿಯೆಯನ್ನು ಸಮರ್ಪಕಗೊಳಿಸುತ್ತದೆ
ಬೆಟ್ಟದ ನೆಲ್ಲಿಕಾಯಿಯು ಜೀರ್ಣಾಂಗ ಕ್ರಿಯೆಯನ್ನು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಬೆಟ್ಟದ ನೆಲ್ಲಿಕಾಯಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಜೀರ್ಣ ಕ್ರಿಯೆಯು ಸರಾಗವಾಗಿ ಸಾಗುತ್ತದೆ. ಇದರಿಂದ ತಾಯಿ ಮತ್ತು ಮಗು ಇಬ್ಬರಿಗು ಒಳ್ಳೆಯದಾಗುತ್ತದೆ.



Click it and Unblock the Notifications