Latest Updates
-
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ
ಗರ್ಭಿಣಿಯರಿಗೆ ವಾತಾವರಣದಿಂದ ಕೂಡ ಅಪಾಯವಾಗಬಹುದೇ?
ಸ್ತ್ರೀಯ ಜೀವನದಲ್ಲಿ ಗರ್ಭಧಾರಣೆ ಎನ್ನುವುದು ಮಹತ್ವದ ಘಟ್ಟವಾಗಿದೆ. ಈ ಸಮಯದಲ್ಲಿ ಆಕೆ ಆದಷ್ಟೂ ಜಾಗರೂಕತೆಯಿಂದ ಪ್ರತಿಯೊಂದು ಹೆಜ್ಜೆಯನ್ನೂ ಇಡಬೇಕು. ತನ್ನೊಳಗೆ ಮತ್ತೊಂದು ಜೀವವನ್ನು ಕಾಪಾಡುವ ತಾಯಿಯ ಪಾತ್ರ ದೇವರು ಕೊಡುವ ನಿಜವಾದ ವರವಾಗಿದೆ. ತಾಯ್ತನದ ಸೌಭಾಗ್ಯ ಒಂದು ಹೆಣ್ಣಿಗೆ ಮಹಾಭಾಗ್ಯವಿದ್ದಂತೆ ಎಂಬುದು ಪುರಾತನ ಕಾಲದಿಂದಲೂ ನಂಬಿಕೊಂಡು ಬಂದಿರುವ ಸಿದ್ಧಾಂತವಾಗಿದೆ.
ಗರ್ಭಿಣಿಯರಿಗೆ ಕಂಡುಬರುವ ಸುಸ್ತು ಹಾಗೂ ಜಡತ್ವಕ್ಕೆ ಕಾರಣವೇನು?
ಹೆಣ್ಣು ನವಮಾಸ ತುಂಬಿ ತನ್ನ ಕರುಳ ಕುಡಿಗೆ ಜನ್ಮ ನೀಡುವವರೆಗೂ ತನ್ನ ಹೆಜ್ಜೆಯನ್ನು ಅತೀ ಜಾಗರೂಕತೆಯಿಂದ ಇಡಬೇಕಾದ್ದು ಅನಿವಾರ್ಯವಾಗಿದೆ. ಮನೆಯಲ್ಲಿ ಹಿರಿಯರಿದ್ದರಂತೂ ಗರ್ಭಿಣಿಯರನ್ನು ಪ್ರೀತಿಯಿಂದ ಗದರಿಕೊಳ್ಳುವುದನ್ನು ನೋಡಬಹುದು. ಇದರೊಂದಿಗೆ ಸ್ವತಃ ಗರ್ಭಿಣಿಯರೂ ಕೂಡ ತಮ್ಮ ಸುರಕ್ಷತೆಯ ಬಗ್ಗೆ ಅತಿಯಾದ ಮುತುವರ್ಜಿಯನ್ನು ವಹಿಸಬೇಕು.
ನಿಮ್ಮನ್ನು ಈ ಸಮಯದಲ್ಲಿ ಅತಿಯಾದ ಸುಸ್ತು ಬಳಲಿಕೆ ಕಾಡುತ್ತಿರುತ್ತದೆ. ವಾತಾವರಣ ಕೂಡ ಒಮ್ಮೊಮ್ಮೆ ಪ್ರತೀಕೂಲ ಪರಿಣಾಮವನ್ನು ನಿಮ್ಮ ಮೇಲೆ ಬೀರಬಹುದು. ರಾಸಾಯನಿಕಗಳು, ವಿಷಪದಾರ್ಥಗಳು ಮತ್ತು ಇತರ ಕೆಲವೊಂದು ಸಮಸ್ಯೆಗಳು ಗರ್ಭಿಣಿಗೆ ತೊಂದರೆಯನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಈ ಸಮಸ್ಯೆಗಳು ಹೆಚ್ಚಾದಾಗ ಗರ್ಭಪಾತದ ಅಪಾಯ ಕೂಡ ಇರುತ್ತದೆ. ಇಂದಿನ ಲೇಖನದಲ್ಲಿ ಗರ್ಭಿಣಿಯರಿಗೆ ತೊಂದರೆಯನ್ನಂಟು ಮಾಡುವ ಕೆಲವೊಂದು ಅಂಶಗಳನ್ನು ಇಲ್ಲಿ ನೀಡುತ್ತಿದ್ದು ಈ ಅಂಶಗಳನ್ನು ಗಮನಕ್ಕೆ ತಂದುಕೊಳ್ಳಿ.
ಗರ್ಭಾವಸ್ಥೆಯಲ್ಲಿರುವ ಗರ್ಭಿಣಿಯರಿಗೆ ಸೂಕ್ತ ಸಲಹೆಗಳು

ಸಾಕುಪ್ರಾಣಿಗಳು
ಸಾಕುಪ್ರಾಣಿಗಳು ನಿಮ್ಮ ಗರ್ಭಾವಸ್ಥೆಯ ಸಂದರ್ಭದಲ್ಲಿ ಹೆಚ್ಚುವರಿ ತೊಂದರೆಯನ್ನುಂಟು ಮಾಡುತ್ತದೆ. ಸಾಕುಪ್ರಾಣಿಯ ಸುತ್ತಲೂ ಇರುವಂತಹ ಕಲುಷಿತ ಗಾಳಿಯನ್ನು ನೀವು ಉಸಿರಾಡುವುದು ನಿಮ್ಮಲ್ಲಿ ಸೋಂಕನ್ನು ಉತ್ಪತ್ತಿ ಮಾಡುತ್ತದೆ. ಇದು ನಿಮ್ಮ ಗರ್ಭದಲ್ಲಿರುವ ಶಿಶುವಿಗೆ ತೊಂದರೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಸಾಕುಪ್ರಾಣಿಗಳು ನಿಮ್ಮ ಹತ್ತಿರಕ್ಕೆ ಬರುವುದನ್ನು ನಿಲ್ಲಿಸಿ.

ಧೂಮಪಾನ
ನಿಮ್ಮ ಪತಿ ಅಥವಾ ಮನೆಯವರು ಯಾರಾದರೂ ಧೂಮಪಾನ ಮಾಡುತ್ತಿದ್ದಾರೆ ಎಂದಾದಲ್ಲಿ ಕೂಡಲೇ ಮತ್ತೊಂದು ಕೊಠಡಿಗೆ ತೆರಳಿ. ನೀವು ಈ ಸಮಯದಲ್ಲಿ ಧೂಮಪಾನ ಮಾಡುವುದೂ ಕೂಡ ಅಪಾಯವನ್ನುಂಟು ಮಾಡಬಹುದು.

ಪೀಠೋಪಕರಣಗಳ ಸ್ವಚ್ಛತೆ
ಪ್ರತಿಯೊಂದು ಪೀಠೋಪಕರಣದಲ್ಲಿ ಕ್ರಿಯೋಸಲ್ ಎನ್ನುವ ರಾಸಾಯನಿಕ ಇದ್ದು ಇದು ಗರ್ಭಿಣಿ ಸ್ತ್ರೀಯರಿಗೆ ಹಾನಿಯನ್ನುಂಟು ಮಾಡುತ್ತದೆ. ಇದು ಚರ್ಮವನ್ನು ಸುಲಭವಾಗಿ ಪ್ರವೇಶಿಸಿ ಸೋಂಕಿಗೆ ಕಾರಣವಾಗುತ್ತದೆ.

ಪೆಟ್ರೋಲ್ ವಾಸನೆ
ಗರ್ಭಿಣಿಯಾಗಿರುವಾಗ ಕೆಲವೊಬ್ಬರಿಗೆ ಕೆಲವೊಂದು ವಾಸನೆಗಳು ಅಲರ್ಜಿಯನ್ನು ಉಂಟುಮಾಡುತ್ತದೆ. ಪೆಟ್ರೋಲ್‌ನ ವಾಸನೆ ಕೂಡ ಕೆಲವೊಮ್ಮೆ ಗರ್ಭಿಣಿ ಸ್ತ್ರೀಯರಲ್ಲಿ ವಾಕರಿಕೆ ಕೆಲವೊಂದು ಸಮಸ್ಯೆಗಳಿಗೆ ಕಾರಣವಾಗಿರುತ್ತದೆ.

ಅಡುಗೆ ಪರಿಕರಗಳು
ಮೈಕ್ರೋವೇವ್ ಓವನ್ಸ್‌ನಂತಹ ಕೆಲವೊಂದು ಅಡುಗೆ ಪರಿಕರಗಳು ರೇಡಿಯೇಂಟ್ ಬಿಸಿಯನ್ನು ಒಳಗೊಂಡಿರುತ್ತದೆ ಇದು ಮಗುವಿಗೆ ಹಾನಿಯನ್ನು ಉಂಟು ಮಾಡುವ ಸಂಭವ ಹೆಚ್ಚಾಗಿರುತ್ತದೆ. ಈ ರೀತಿಯ ವಾತಾವರಣ ಕೂಡ ಗರ್ಭಿಣಿ ಸ್ತ್ರೀಯರಿಗೆ ಅಪಾಯವನ್ನು ತಂದೊಡ್ಡುತ್ತದೆ.

ರಾಸಾಯನಿಕ ಸಾಮಿಪ್ಯ
ರಾಸಾಯನಿಕಗಳಿಗೆ ಹೆಚ್ಚಾಗಿ ದೇಹವನ್ನು ಒಡ್ಡಿಕೊಳ್ಳುವುದೂ ಕೂಡ ಗರ್ಭಿಣಿ ಸ್ತ್ರೀಯರಲ್ಲಿ ಕೆಲವೊಂದು ಅಪಾಯಗಳನ್ನು ತಂದೊಡ್ಡಬಹುದು. ಕೃತಕ ಗಿಡಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ಕೆಲವೊಂದು ರಾಸಾಯನಿಕ ಅಂಶಗಳುಳ್ಳ ಗಿಡಗಳ ಸಾಮಿಪ್ಯವನ್ನು ಗರ್ಭಿಣಿ ಸ್ತ್ರೀಯರು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು. ಇಂತಹ ರಾಸಾಯನಿಕಗಳು ಮಗುವಿಗೆ ಹೆಚ್ಚುವರಿ ತೊಂದರೆಯನ್ನುಂಟು ಮಾಡುತ್ತದೆ.

ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿರುವುದು
ವೈದ್ಯರ ಸಲಹೆ ಇಲ್ಲದೆ ಯಾವುದೇ ನಿರ್ಣಯಗಳನ್ನು ನಿಮ್ಮಷ್ಟಕ್ಕೇ ತೆಗೆದುಕೊಳ್ಳುವುದೂ ಕೂಡ ಜನನ ಕಾಲದಲ್ಲಿ ಉಂಟಾಗುವ ಅಪಾಯಗಳಿಗೆ ಕಾರಣವಾಗಿರುತ್ತವೆ ಎಂಬುದು ನಿಮ್ಮ ಗಮನದಲ್ಲಿರಬೇಕು. ಆದ್ದರಿಂದ ನೀವಾಗಿಯೇ ತೆಗೆದುಕೊಳ್ಳುವ ಕೆಲವೊಂದು ತೀರ್ಮಾನಗಳಿಗೆ ಜೋತು ಬೀಳುವ ಮುನ್ನ ವೈದ್ಯರು ಅಥವಾ ಮನೆಯ ಹಿರಿಯರನ್ನು ಸಂಪರ್ಕಿಸಿ ಅವರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ.

ಲಾಂಡ್ರಿ ಮಾರ್ಜಕಗಳು
ಲಾಂಡ್ರಿ ಮಾರ್ಜಕಗಳಂತಹ (ಸೋಪುಗಳು) ಗರ್ಭಿಣಿ ಸ್ತ್ರೀಯರ ಮೇಲೆ ಮಾರಕ ಪರಿಣಾಮವನ್ನು ಬೀರುತ್ತದೆ. ಇದು ಅವರಿಗೆ ಸುರಕ್ಷಿತವಲ್ಲ. ರಾಸಾಯನಿಕ ಅಂಶಗಳಾದ ಬೆಂಜಿನ್, ಸಲ್ಫರಿಕ್ ಆಸಿಡ್ ಅಥವಾ ಟೋಲ್ಯೂನ್ ಅನ್ನು ಈ ಮಾರ್ಜಕಗಳು ಒಳಗೊಂಡಿರಬಹುದು. ಇವುಗಳು ನಿಮ್ಮ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ಹಾನಿ ಮಾಡುವುದು ಖಂಡಿತ.

ನಿಮ್ಮ ಮನೆಗೆ ಬಣ್ಣ ಹಚ್ಚುವಾಗ
ಗರ್ಭಿಣಿ ಮಹಿಳೆಯರಲ್ಲಿ ಬಣ್ಣದ (ಪೇಂಟ್) ವಾಸನೆಗೆ ಮನಸ್ಸು ಹಂಬಲಿಸುವುದು ಸಹಜ. ಆದರೆ ಪೇಂಟ್ ಸೀಸವನ್ನು ಒಳಗೊಂಡಿರುವುದರಿಂದ ಇದನ್ನು ಗರ್ಭಿಣಿ ಸ್ತ್ರೀ ಉಸಿರಾಡುವುದು ಅವರಿಗೆ ತೊಂದರೆಯನ್ನುಂಟು ಮಾಡುತ್ತದೆ.

ಕಸದ ತೊಟ್ಟಿ
ಕಸದ ತೊಟ್ಟಿಗಳು ಹೆಚ್ಚಿನ ಬ್ಯಾಕ್ಟೀರಿಯಾ ಮತ್ತು ಕೆಲವೊಂದು ವಿಧದ ರಾಸಾಯನಿಕವನ್ನು ಒಳಗೊಂಡಿರುವುದರಿಂದ ನಿಮ್ಮ ಗರ್ಭದಲ್ಲಿರುವ ಶಿಶುವಿಗೆ ಇದು ಹಾನಿಯನ್ನುಂಟು ಮಾಡಬಹುದು. ಆದ್ದರಿಂದ ಆದಷ್ಟು ಕಸದ ತೊಟ್ಟಿ ಮತ್ತು ಕಸವನ್ನು ಒಳಗೊಂಡಿರುವ ಟ್ರಕ್‌ಗಳಿಂದ ದೂರವಿರಿ.



Click it and Unblock the Notifications











