Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಸುರಕ್ಷಿತವೇ?
ಗರ್ಭವತಿಯಾಗುವುದು ಪ್ರತಿ ಹೆಣ್ಣಿನ ಒಂದು ಸುಂದರ ಕನಸಾಗಿದೆ. ಗರ್ಭ ನಿಂತ ಬಗ್ಗೆ ಖಚಿತ ಮಾಹಿತಿ ಪಡೆದ ಬಳಿಕ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಹಿರಿಯರು ಮತ್ತು ವೈದ್ಯರು ತಿಳಿಸಿಕೊಡುತ್ತಾರೆ. ಈ ಸಮಯದಲ್ಲಿ ಹೆಚ್ಚು ನೆಗೆಯುವುದು, ವೇಗವಾಗಿ ಮೆಟ್ಟಿಲು ಇಳಿಯುವುದು ಮೊದಲಾದವುಗಳನ್ನು ಮಾಡಬಾರದು. ಅಂತೆಯೇ ಗರ್ಭಕ್ಕೆ ಮಾರಕವಾದ ಆಹಾರಗಳನ್ನೂ ಸೇವಿಸಬಾರದು (ಉದಾಹರಣೆಗೆ ಹಸಿಪೊಪ್ಪಾಯಿ). ಇದೇ ವೇಳೆ ಏಕಾಂತದ ವೇಳೆಯಲ್ಲಿ ಕೂಡುವುದನ್ನೂ ಕೆಲ ದಂಪತಿಗಳು ಬರಲಿರುವ ಮಗುವಿಗೆ ಅಪಾಯಕರ ಎಂದು ಪರಿಗಣಿಸಿ ದೂರವೇ ಉಳಿಯುತ್ತಾರೆ.

ಆದರೆ ವೈದ್ಯರು ಹಾಗೂ ಪ್ರಸೂತಿ ತಜ್ಞರು ಗರ್ಭನಿಂತ ಮೂರನೆಯ ತಿಂಗಳಿನಿಂದ ಎಂಟನೆಯ ತಿಂಗಳಿನವರೆಗೂ ಕೂಡುವುದು ಉತ್ತಮ ಹಾಗೂ ಪ್ರಸವ ಕಾಲದಲ್ಲಿ ಸುಖಪ್ರಸವಕ್ಕೂ ನೆರವಾಗುವುದು ಎಂದು ಸಲಹೆ ನೀಡುತ್ತಾರೆ. ಆದರೆ ಈ ಸಮಯದಲ್ಲಿ ಪಾಲಿಸಬೇಕಾದ ಸುರಕ್ಷತಾ ವಿಧಾನ ಹಾಗೂ ಭಂಗಿಗಳನ್ನು ಅನುಸರಿಸುವುದು ಮೊದಲ ಆದ್ಯತೆಯಾಗಿದೆ. ಲೈಂಗಿಕ ಸಂಭೋಗದ ಸಂದರ್ಭದಲ್ಲಿ ಮತ್ತು ವಿಶೇಷವಾಗಿ ಹೆಣ್ಣು ಭಾವಪ್ರಾಪ್ತಿ (ಆರ್ಗಸಮ್) ಹೊಂದುವ ಸಮಯದಲ್ಲಿ ಎಲ್ಲಾ ಲೈಂಗಿಕಾಂಗಗಳು ರಕ್ತ ತುಂಬಿಕೆಯಿಂದ ಕೂಡಿರುತ್ತದೆ.
ಇದರಿಂದ, ಸಾಕಷ್ಟು ಪ್ರಮಾಣದ ಅಗತ್ಯವಾದ ಪೌಷ್ಠಿಕ ಆಹಾರ ಹಾಗೂ ಆಮ್ಲಜನಕವು ಬೆಳೆಯುತ್ತಿರುವ ಕೂಸಿಗೆ ಪೂರೈಕೆ ಆಗುತ್ತದೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಗರ್ಭಿಣಿಯರಲ್ಲಿ ಹುಳಿ ತಿನ್ನುವ ಬಯಕೆ; ಏನಿದರ ರಹಸ್ಯ?
ಹಿಂಬಾಗಿಲಿನ ಪ್ರವೇಶ ಸಲ್ಲದು
ಗರ್ಭಾವಸ್ಥೆಯಲ್ಲಿ ಗರ್ಭಾಶಯ ಹಲವು ಬದಲಾವಣೆಗಳನ್ನು ಪಡೆಯುತ್ತದೆ. ಗರ್ಭಾಶಯ ಹಾಗೂ ಜಠರ ಕುಹರ (pelvis) ಕೊಂಚ ಸ್ಥಳಾಂತರಗೊಂಡಿರುವ ಕಾರಣ ಈ ಭಂಗಿಯಲ್ಲಿ ಹೃದಯಕ್ಕಿಂತಲೂ ಮೇಲಿರುತ್ತವೆ. ಈ ಭಂಗಿಯಲ್ಲಿ ಕೂಡುವುದರಿಂದ ದೇಹದ ಒಳಬರುವ ಗಾಳಿ ಅಭಿಧಮನನಿಗಳಿಗೆ ಒತ್ತಿಕೊಂಡು ಸರಾಗವಾದ ರಕ್ತ ಸಂಚಾರಕ್ಕೆ ಅಡ್ಡಿಪಡಿಸುತ್ತವೆ (venous air embolism). ಇದು ಗರ್ಭವತಿಯ ಪ್ರಾಣಕ್ಕೇ ಕುತ್ತು ತರಬಲ್ಲದು.
ಮಗುವಿರುವ ಭಾಗಕ್ಕೆ ಭಾರ ನೀಡದ ಭಂಗಿಗಳು ಉತ್ತಮ
ಸಾಮಾನ್ಯವಾಗಿ ಎರಡನೆಯ ತಿಂಗಳಿನಿಂದಲೇ ಗರ್ಭದ ಲಕ್ಷಣಗಳನ್ನು ಸ್ಪರ್ಶದಿಂದ ತಿಳಿದುಕೊಳ್ಳಬಹುದು. ಈ ಸ್ಥಳಕ್ಕೆ ಯಾವುದೇ ರೀತಿಯ ಭಾರ ಬರದ ಭಂಗಿಗಳು ದಂಪತಿಗಳಿಗೆ ಉತ್ತಮವಾಗಿವೆ. ದಂಪತಿಗಳಿಗೆ ಯಾವ ಭಂಗಿ ಅತ್ಯುತ್ತಮ ಸಂವೇದನೆ ನೀಡುತ್ತದೆಯೋ ಹಾಗೂ ಗರ್ಭದ ಸ್ಥಳಕ್ಕೆ ಭಾರ ನೀಡದಿರುತ್ತದೆಯೋ ಅದನ್ನೇ ಹೆಚ್ಚಾಗಿ ಅನುಸರಿಸಿ. ಹೆಣ್ಣು ಮೇಲೆ ಬರುವ, ಪಕ್ಕ-ಪಕ್ಕ ಮಲಗುವ ಸಂಗಾತಿಯ ಬೆನ್ನು ತಾಕುವಂತೆ ಪಕ್ಕದಲ್ಲಿ ಮಲಗುವ ಭಂಗಿಗಳು ಹೆಚ್ಚು ಸೂಕ್ತವಾಗಿವೆ. ಅಯ್ಯೋ ದೇವ್ರೆ, ಹೀಗಾಗಲ್ಲ ಅಂದುಕೊಂಡಿದ್ದೆ!
ಕೇವಲ ನಲಿವಿನ ಕ್ಷಣಗಳನ್ನು ಅನುಭವಿಸುವುದು
ಗರ್ಭಾವಸ್ಥೆಯಲ್ಲಿ ಅತ್ಯಂತ ಸುರಕ್ಷಿತವೆಂದರೆ ನಲಿವಿನ ಇತರ ಕ್ಷಣಗಳನ್ನು ಸಂಪೂರ್ಣವಾಗಿ ಅನುಭವಿಸುವುದು. ಇತರ ನಲಿವಿನ ಕ್ಷಣಗಳೆಂದರೆ ಪರಸ್ಪರ ಚುಂಬನ, ಬಾಹುಬಂಧನ, ಬಿಸಿಯಪ್ಪುಗೆ, ವಿವಸ್ತ್ರರಾಗಿ ಅಪ್ಪಿ ಮಲಗುವುದು ಮೊದಲಾದವು.
ಮುಖಮೈಥುನ ಲೇಸು
ಮುಖಮೈಥುನದಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದ ಕಾರಣ ಭಾವಪ್ರಾಪ್ತಿ ಹೊಂದುವವರೆಗೂ ಪಡೆಯಬಹುದು. ಆದರೆ ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಗಾಳಿಯನ್ನು ಊದದಿರುವಂತೆ ಕಟ್ಟಪ್ಪಣೆ ಮಾಡಬೇಕು. ಏಕೆಂದರೆ ಅಪ್ಪಿ ತಪ್ಪಿ ಒಳನುಗ್ಗಿದ ಗಾಳಿಗುಳ್ಳೆ (venous air embolism) ತೊಂದರೆಗೆ ಕಾರಣವಾಗಬಹುದು.
ಜಾರು ಎಣ್ಣೆಗಳು ಉರಿಯುಂಟುಮಾಡಬಹುದು
ಸಾಮಾನ್ಯವಾಗಿ ಲಭ್ಯವಿರುವ ಜಾರುವ ಎಣ್ಣೆಗಳು ಹಾಗೂ ಜೆಲ್ ಗಳು ಈ ಸಮಯದಲ್ಲಿ ಕೊಂಚ ಉರಿಯುಂಟುಮಾಡಬಹುದು. ಏಕೆಂದರೆ ಗರ್ಭವಸ್ಥೆಯಲ್ಲಿ ದೇಹದ ಒಳಭಾಗಗಳು ಅತಿಸೂಕ್ಷ್ಮವಾಗುವ ಕಾರಣ ಹಾಗೂ ಸಂವೇದನೆ ಹೆಚ್ಚಾಗುವ ಕಾರಣ ಇವನ್ನು ಬಳಸದಿರುವುದು ಲೇಸು. ಬದಲಿಗೆ ದೇಹ ಈ ಹೊತ್ತಿನಲ್ಲಿ ಹೆಚ್ಚು ಸ್ರವಿಸುವ ದ್ರವವೇ ಸುಖವಾದ ಮಿಲನಕ್ಕೆ ಸಾಕಷ್ಟಾಯಿತು. ಗರ್ಭಾವಸ್ಥೆಯ ಪೂರ್ಣ ಸಮಯದಲ್ಲಿ ನೈರ್ಮಲ್ಯ ಕಾಪಾಡುವುದು ಅತಿ ಅಗತ್ಯ. ಈ ಭಾಗದ ರೋಮಗಳನ್ನು ಕಾಲಕಾಲಕ್ಕೆ ನಿವಾರಿಸಿ ಸೂಕ್ತ ಮಾರ್ಜಕಗಳನ್ನು ಬಳಸಿ ಸ್ವಚ್ಛಗೊಳಿಸುತ್ತಾ ಇರಬೇಕು. ಅದರಲ್ಲೂ ಪ್ರತಿಬಾರಿಯ ಮಿಲನದ ಬಳಿಕ ಸ್ವಚ್ಛಗೊಳಿಸುವುದು ಅತಿ ಅಗತ್ಯ.



Click it and Unblock the Notifications















