Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ನೀವರಿಯಬೇಕಾದ ಗರ್ಭಾವಸ್ಥೆಯ ಚಿಕನ್‌ಫಾಕ್ಸ್ ಅಪಾಯಗಳು!
ಗರ್ಭಿಣಿ ಸ್ತ್ರೀಯರನ್ನು ಅಪಾಯಕ್ಕೀಡು ಮಾಡುವ ಭಯಂಕರ ಕಾಯಿಲೆ ಚಿಕನ್‌ಫಾಕ್ಸ್ ಆಗಿದೆ. ಗರ್ಭಾವಸ್ಥೆಯಲ್ಲಿರುವಾಗ ಈ ರೋಗದ ದಾಳಿಗೆ ತುತ್ತಾಗಿದ್ದರೆ ಅದು ತಾಯಿ ಮಗುವಿಗೆ ಖಂಡಿತ ಅಪಾಯವನ್ನುಂಟುಮಾಡುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ನವಜಾತ ಶಿಶುವಿಗೆ ಈ ರೋಗ ಹರಡದಂತೆ ವೈರಸ್ ಪ್ರಭಾವ ಬೀರದಂತೆ ಆರೋಗ್ಯದಿಂದಿರುವುದು ಅತ್ಯವಶ್ಯಕ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸ್ತನದಲ್ಲಿ ನೋವಿರುವಾಗ ಮಗುವಿಗೆ ಹೀಗೆ ಹಾಲುಣಿಸಿ
ಗರ್ಭಿಣಿ ತಾಯಿಯಲ್ಲಿ ರೋಗಾಣುವನ್ನು ತಡೆಯುವ ಪ್ರತಿರೋಧಕ ಶಕ್ತಿ ಇಲ್ಲದಿದ್ದರೆ ಅಥವಾ ಈ ಸಮಯದಲ್ಲಿ ಈ ರೋಗ ಬೆಳವಣಿಗೆ ಹೊಂದಿತೆಂದರೆ ತುರ್ತಾಗಿ ವೈದ್ಯರನ್ನು ಭೇಟಿ ಮಾಡುವುದು ಅತ್ಯವಶ್ಯಕ.
ಗರ್ಭಾವಸ್ಥೆಯ ಸಮಯದಲ್ಲಿ ಚಿಕನ್‌ಫಾಕ್ಸ್ ತೀವ್ರ ತೆರನಾದ ಅಪಾಯವನ್ನುಂಟು ಮಾಡುತ್ತದೆ. ಏಕೆಂದರೆ ಈ ಸಮಯದಲ್ಲಿ ಗರ್ಭಿಣಿಯರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಈ ರೋಗದ ಹಾವಳಿ ಹೆಚ್ಚಾಗಿರುತ್ತದೆ.
ವರಿಸೆಲ್ಲಾ ವೈರಸ್ ಗರ್ಭಾವಸ್ಥೆಯ ಸಂದರ್ಭದಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದಾದಲ್ಲಿ, ತಾಯಿ ಮತ್ತು ನಿಮ್ಮ ಮಗು ಗಂಭೀರ ಪ್ರಮಾಣದ ಆರೋಗ್ಯ ಸಮಸ್ಯೆಗಳನ್ನು ಹೊಂದಬಹುದು. ಗರ್ಭಿಣಿಯರು ಈ ಸೋಂಕನ್ನು ಎರಡು ವಿಧಾನದಲ್ಲಿ ನಿವಾರಿಸಬಹುದು ಒಂದು ಆರೋಗ್ಯಕರ ಆಹಾರಗಳನ್ನು ಸೇವಿಸುವುದು ಇಲ್ಲವೇ ರೋಗವಿರುವ ವ್ಯಕ್ತಿಯಿಂದ ದೂರವಿರುವುದಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈ 8 ಔಷಧಿಗಳನ್ನು ಎಳೆಯಮಕ್ಕಳಿಗೆ ಕೊಡಬೇಡಿ
ಗರ್ಭಾವಸ್ಥೆಯಲ್ಲಿ ಚಿಕನ್‌ಫಾಕ್ಸ್ ಯಾವೆಲ್ಲಾ ಸಮಸ್ಯೆಗಳನ್ನು ಉಂಟುಮಾಡಬಹುದೆಂಬುದನ್ನು ಈ ಲೇಖನ ವಿವರವಾಗಿ ತಿಳಿಸುತ್ತದೆ.

ಚಿಕನ್‌ಫಾಕ್ಸ್ ಮಗುವಿನಲ್ಲಿ ಕಾಣಿಸಿಕೊಳ್ಳುತ್ತದೆ:
ಗರ್ಭಾವಸ್ಥೆಯ ಐದು ದಿನದೊಳಗೆ ಅಥವಾ ಗರ್ಭಾವಸ್ಥೆಯ 1-2 ದಿನಗಳ ನಂತರ, 20 - 25 ಶೇಕಡ ನಿಖರವಾಗಿ ಈ ರೋಗ ನವಜಾತ ಮಗುವನ್ನು ಕಾಡಬಹುದು.

ಜನನ ದೋಷಗಳು:
ಗರ್ಭಾವಸ್ಥೆಯ ಸಂದರ್ಭದಲ್ಲಿ ಚಿಕನ್‌ಫಾಕ್ಸ್‌ಗೆ ನೀವು ಒಳಗಾದಿರೆಂದರೆ, ನಿಮ್ಮ ಮಗು ಕಣ್ಣಿನ ಸಮಸ್ಯೆ, ಸಣ್ಣ ಗಾತ್ರದ ತಲೆ ಮತ್ತು ಮಾನಸಿಕ ಕುಂಠಿತ ತೊಂದರೆಗಳನ್ನು ಅನುಭವಿಸಬಹುದು.

ಆಂತರಿಕ ಅಂಗಗಳಲ್ಲಿ:
ಫೋಟಲ್ ವರಿಸೆಲ್ಲಾ ಸಿಂಡ್ರೋಮ್ (ಎಫ್‌ವಿಎಸ್) ಮಗು ಬೆಳೆಯಿಸಿಕೊಳ್ಳಬಹುದು. ಈ ಸಿಂಡ್ರೋಮ್ ನಿಮ್ಮ ಮಗುವಿನ ಚರ್ಮ, ಕಣ್ಣುಗಳು, ಕಾಲುಗಳು, ಕೈಗಳು ಮತ್ತು ಮೆದುಳನ್ನು ಹಾನಿಗೊಳಿಸಬಹುದು.

ಜನನ ತೂಕ:
ಗರ್ಭಿಣಿಯಾಗಿರುವಾಗ ಈ ವೈರಸ್‌ಗೆ ಒಳಗಾದಿರೆಂದರೆ, ಇದು ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು. ಅದರಲ್ಲಿ ಒಂದು ಸಮಸ್ಯೆಯೆಂದರೆ ಜನನ ತೂಕವಾಗಿದೆ. ಹುಟ್ಟುವ ಮಗುವಿನ ತೂಕವು ಕಡಿಮೆಯಾಗಿರುತ್ತದೆ. ಗರ್ಭಿಣಿ ಸ್ತ್ರೀಯರು ತೆಗೆದುಕೊಳ್ಳುವ ಆಹಾರ ವೈರಸ್‌ಗೆ ತಲುಪುತ್ತದೆ ಹುಟ್ಟುವ ಮಗುವಿಗಲ್ಲ.

ತ್ವಚೆಯ ಗಾಯ:
ಚಿಕನ್‌ಫಾಕ್ಸ್ ಜನನ ದೋಷಗಳನ್ನು ಹೊಂದಿರುವುದರಿಂದ ನಿಮ್ಮ ನವಜಾತ ಮಗುವಿಗೆ ತ್ವಚೆಯ ಗಾಯಗಳನ್ನುಂಟುಮಾಡಬಹುದು.

ನ್ಯುಮೋನಿಯಾ:
ಗರ್ಭಾವಸ್ಥೆಯ ಸಂದರ್ಭದಲ್ಲಿ ಚಿಕನ್‌ಫಾಕ್ಸ್ ಉಂಟುಮಾಡುವ ಅಪಾಯವೆಂದರೆ ನ್ಯುಮೋನಿಯಾ ಆಗಿದೆ. ಈ ಸಮಯದಲ್ಲಿ ನಿಮ್ಮ ದೇಹ ಕೃಶವಾಗುತ್ತದೆ ಮತ್ತು ನ್ಯುಮೀನಿಯಾ ವೇಗವಾಗಿ ದೇಹದಲ್ಲಿ ಅಭಿವೃದ್ಧಿಗೊಳ್ಳಬಹುದು.

ಗರ್ಭಪಾತ:
ಬೆಳೆಯುತ್ತಿರುವ ನವಜಾತ ಮಗುವು ಸಿವಿಎಸ್‌ನಿಂದ ಹಾನಿಗೊಳಗಾಯಿತೆಂದರೆ, ಗರ್ಭಪಾತ ಉಂಟಾಗುವ ಅಪಾಯ ಹೆಚ್ಚಾಗಿರುತ್ತದೆ.

ಪ್ರಸವ ಪೂರ್ವ ಹೆರಿಗೆ:
ಗರ್ಭಾವಸ್ಥೆಯ ಮೊದಲ 20 ವಾರಗಳಲ್ಲಿ ಚಿಕನ್‌ಫಾಕ್ಸ್ ಕಂಡುಬಂದಾಗ ಪ್ರಸವ ಪೂರ್ವ ಹೆರಿಗೆಯ ತೊಂದರೆಗಳು ಹೆಚ್ಚಾಗಿರುತ್ತವೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಚಿಕನ್‌ಫಾಕ್ಸ್ ಕಂಡುಬಂದಾಗ ಬಂದೊದಗುವ ಅಪಾಯದಲ್ಲಿ ಇದೂ ಒಂದು. ಈ ಸಂದರ್ಭದಲ್ಲಿ ಗರ್ಭಿಣಿಯರು ಆದಷ್ಟು ಆರೋಗ್ಯವನ್ನು ಕಾಪಾಡಿಕೊಂಡಿರಬೇಕು.



Click it and Unblock the Notifications