Latest Updates
-
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ!
ಪ್ರಸವಪೂರ್ವ ಸ್ವಾಸ್ಥ್ಯ ವಿಧಾನದ ಪ್ರಯೋಜನಗಳು
ಸಾಮಾನ್ಯ( ಆಪರೇಶನ್ ಇಲ್ಲದೇ ಹೆರಿಗೆಯಾಗುವುದು) ಮತ್ತು ಸುಲಭ ಹೆರಿಗೆಯ ಪ್ರಯೋಜನವನ್ನು ನಾವು ತಿಳಿದಿದ್ದೇವೆ. ಆದರೆ ಇಂದಿನ ಒತ್ತಡದಾಯಕ ಜೀವನ, ವ್ಯಾಯಾಮಗಳನ್ನು ಮಾಡದೇ ಇರುವುದು ಸ್ತ್ರೀಯ ಹೆರಿಗೆ ನೋವಿನ ಭಾರವನ್ನು ಹೆಚ್ಚಿಸಿವೆ. ಆದರೆ ಇದಕ್ಕೆ ಪರಿಹಾರವಾಗಿ, ಪ್ರಸವಪೂರ್ವ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದರಿಂದ ನೀವು ಮಗುವಿಗೆ ಜನ್ಮ ನೀಡುವುದು ತುಸು ಸುಲಭವಾಗಬಹುದು!
ನೀವು ಸುಲಭವಾಗಿ ನಿಮ್ಮ ಮಗುವಿಗೆ ಜನ್ಮ ನೀಡಲು ಸಹಾಯಕವಾಗಿವ ಪ್ರಸವಪೂರ್ವ ಕ್ಷೇಮಮನ್ನು ಕಾಪಾಡಿಕೊಳ್ಳುವ ಬಗೆಗಳಾದ ಸಂಮೋಹನಾ ರೀತಿಯ ಚಿಕಿತ್ಸೆಗಳು, ಧ್ಯಾನ ಮತ್ತು ಉಸಿರಾಟದ ವಿಧಾನಗಳು ಮತ್ತು ಯೋಗದ ಮೂಲಕ ಮಸ್ತಕದ (ಮನಸ್ಸಿನ) ಮಟ್ಟವನ್ನು ಬಲಪಡಿಸುವ ವ್ಯಾಯಾಮಗಳು ಮೊದಲಾದವುಗಳು ಇವುಗಳ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ಮಾಹಿತಿಯನ್ನು ಓದಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಜನನ ನಿಯಂತ್ರಣದ ಬಳಿಕ ಗರ್ಭಧರಿಸಬಹುದೇ?

ಹಿಪ್ನೋಥೆರಪಿ (ಸಂಮೋಹನ ಚಿಕಿತ್ಸೆ):
ಹಿಪ್ನಾಸಿಸ್, ಮೇಲ್ನೋಟಕ್ಕೆ ನಿದ್ರೆಯನ್ನು ಹೋಲುವ ಕೆಲವು ಶಾರೀರಿಕ ಲಕ್ಷಣಗಳಾಗಿದ್ದು, ಒಂದು ವಿಶೇಷ ಮಾನಸಿಕ ಸ್ಥಿತಿ. ಸಾಮಾನ್ಯ ಜಾಗೃತ ಮನಸ್ಸಿಗಿಂತ ಹೆಚ್ಚು ಸೂಪ್ತ ಮನಸ್ಸಿನ / ಒಳ ಮನಸ್ಸಿನ ಅರಿವಿನ ಮಟ್ಟವನ್ನು ಗುರುತಿಸುವಂತದ್ದು. ಇದು ನಿಮ್ಮೊಳಗೆ ನೀವು ಮಾತನಾಡಿಕೊಳ್ಳುವ ಮತ್ತು ನಿಮಗೆ ನೀವೇ ಉತ್ತರವನ್ನು ನೀಡುವ ಮಾನಸಿಕ ಪ್ರಕ್ರಿಯೆ. ಮಾನಸಿಕ ಭಾವನೆಗಳು ಬಾಹ್ಯ ವಾಸ್ತವ ಅಥವಾ ಬಾಹ್ಯ ಶಾರೀರಿಕ ಅಂಶಗಳಿಗಿಂತ ಅತ್ಯಂತ ಮುಖ್ಯವಾದದ್ದು. ಆದ್ದರಿಂದ ಹಿಪ್ನೋಸಿಸ್ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಉಂಟು ಮಾಡುತ್ತದೆ. ಮಾನವ ಮೆದುಳು ಈ ನಾಲ್ಕು ಮೂಲಗಳ ಮೂಲಕ ಸಂದೇಶಗಳನ್ನು ಸ್ವೀಕರಿಸುತ್ತದೆ:
ಬಾಹ್ಯ ಪರಿಸರ
ನಮ್ಮ ದೇಹ
ಜಾಗೃತ ಮನಸ್ಸು
ಅಜಾಗೃತ ಮನಸ್ಸು
ಹಿಪ್ನೋಸಿಸ್ ಗೆ ಒಳಗಾಗುವುದು ಅಷ್ಟು ಸುಲಭವಲ್ಲ. ಏಕೆಂದರೆ ನಮ್ಮ ನಮಸ್ಸಿನಲ್ಲಿ ಸಾಕಷ್ಟು ವಿಷಯಗಳು ಶೇಖರಣೆಯಾಗಿರುತ್ತವೆ. ಇದನ್ನು ಹೊರಹಾಕಲು, ನಮ್ಮ ಮನಸ್ಸನ್ನು ಹಗುರ ಮಾಡಲು ಹಿಪ್ನೋಸಿಸ್ ಮಾಡುವಾಗ ನಿಮಗೆ ಸಾಕಷ್ಟು ಕಿರಿಕಿರಿ ಎನಿಸಬಹುದು, ಸಿಟ್ಟು ಬರಬಹುದು. ಇದರಿಂದ ನೀವು ಸುಪ್ತ ಮನಸ್ಸನ್ನು ಪ್ರವೇಶಿಸುವುದು ಅಷ್ಟು ಸುಲಭವಲ್ಲ. ಆದರೆ ನೀವು ನಿಮ್ಮ ಸುಪ್ತ ಮನಸ್ಸನ್ನು ಪ್ರವೇಶಿಸುವಂತೆ ಮಾಡುವ ಹಲವು ಹಿಪ್ನೋಟಿಸ್ ತಂತ್ರಗಳಿವೆ. ಅತ್ಯಂತ ಸುರಕ್ಷಿತವಾದ ಮತ್ತು ಸುಲಭವಾದ ತಂತ್ರಗಳೆಂದರೆ ಉಸಿರಾಟದ ವಿಧಾನಗಳು, ಧ್ಯಾನದ ವಿಧಾನಗಳು ಮತ್ತು ಸಂಮೋಹನ ಪ್ರವೇಶದ ವಿಧಾನಗಳು ಇತ್ಯಾದಿ.
ಇಲ್ಲಿ ಮಹಿಳೆಯನ್ನು ಆಹಾರದಾಯಕವಾಗಿ ಕುರ್ಚಿಯಲ್ಲಿ ಕೂರಿಸಲಾಗುತ್ತದೆ ಅಥವಾ ನೆಲದ ಮೇಲೆ ಮಲಗಿಸಲಾಗುತ್ತದೆ. ಸಂಗೀತ ಮತ್ತು ಮೌಖಿಕ ಸೂಚನೆಗಳನ್ನು ನೀಡುವುದರ ಮೂಲಕ ವಿಶ್ರಾಂತಿ ನೀಡಿ, ಮೊದಲ ಹಂತದಲ್ಲಿ ಉಸಿರಾಟದ ಕೇವಲ ಉಸಿರೆಳೆದುಕೊಳ್ಳುವ ಮತ್ತು ಉಸಿರುಹೊರಬಿಡುವುದನ್ನು ಮಾಡುವುದರ ಮೂಲಕ ಅಂದರೆ, ಲಯಬದ್ಧವಾದ ಉಸಿರಾಟವನ್ನು ಮೂರು ಎಣಿಕೆಗಳ ಮೂಲಕ ಉಸಿರೆಳೆದುಕೊಳ್ಳುವುದು ಮತ್ತು ಮೂರು ಎಣಿಕೆಗಳ ಮೂಲಕ ಉಸಿರು ಹಿರಬಿಡುವುದು ಈ ರೀತಿಯ ವಿಶ್ರಾಂತಿ ಪ್ರಕ್ರಿಯೆಯನ್ನು ಮಾಡಲಾಗುವುದು.
ಇದು ಅಡಿಯಿಂದ ಮುಡಿಯವರೆಗೆ ಅಂದರೆ ದೇಹದ ತಲೆಯ ಭಾಗದಿಂದ ಕಾಲಿನವರೆಗೂ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ. ನಂತರ, ಮಹಿಳೆಯರು ಕೆಲವು ಸಂಮೋಹನ ತಂತ್ರಗಳ ಮೂಲಕ ಅಜಾಗೃತ ಮನಸ್ಸನ್ನು ಪ್ರವೇಶಿಸಲು ಅನುಕೂಲಮಾಡಿಕೊಡಲಾಗುತ್ತದೆ. ಹಿಂದುಮುಂದಾಗಿ (ರಿವರ್ಸ್ ಎಣಿಕೆಯ) ಎಣಿಸುವ ಸಾಮಾನ್ಯ ಮತ್ತು ಜನಪ್ರಿಯ ತಂತ್ರದ ಮೂಲಕ ಮಹಿಳೆಯರ ಸಂಪೂರ್ಣ ಗಮನ ಸೆಳೆಯಲಾಗುತ್ತದೆ. ಇಲ್ಲಿ ಸ್ವಯಂ ಸಲಹೆಗಳನ್ನು ನೀಡುವುದರ ಮೂಲಕ ಮನಸ್ಸನ್ನು ಜಾಗ್ರತಗೊಳಿಸಲಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಹೆರಿಗೆಯ ನಂತರ ಕೆಲಸಕ್ಕೆ ಹೊರಟು ನಿಂತಾಗ
ಇಲ್ಲಿ ತಾಯಿ ಮತ್ತು ಮಗುವಿನ ನಡುವೆ ಸಂಪರ್ಕ ಕಲ್ಪಿಸಲಾಗುತ್ತದೆ. ಇದು ತಾಯಿ ಮತ್ತು ಬೆಳೆಯುತ್ತಿರುವ ಮಗುವಿನ ನಡುವಿನ ಭಾವನಾತ್ಮಕ ಸಂಬಂಧವನ್ನು ಬೆಸೆಯಲು ಸಹಾಯ ಮಾಡುತ್ತದೆ. ಹೆಚ್ಚಿನ ಪೋಷಕರು ಈ ವಿಧಾನದ ತುಂಬಾ ಶಾಂತಿಯುತ ಮನಸ್ಥಿತಿಯನ್ನು ಕಂಡುಕೊಳ್ಳುತ್ತಾರೆ. ಇದು ತಾಯಿಯಲ್ಲಿ ಆತ್ಮವಿಶ್ವಾಸವನ್ನು ಕಲ್ಪಿಸಿಕೊಡುವುದರ ಮೂಲಕ ಹುಟ್ಟಲಿರುವ ಮಗುವಿಗೆ ಸುಲಭವಾಗಿ ಜನ್ಮ ನೀಡುವಂತೆ ಮಾನಸಿಕ ಆರೋಗ್ಯವನ್ನು ಒದಗಿಸುತ್ತದೆ. ಈ ಪ್ರಕ್ರಿಯೆಯ ನಂತರ, ಸ್ವಯಂ ಸಲಹೆಗಳನ್ನು ತಾಯಿಗೆ ಪುನರಾವರ್ತಿಸಲು ಹೇಳಲಾಗುತ್ತದೆ ನಂತರ ಆಕೆಯನ್ನು ಸಂಮೋಹನದಿಂದ ಹೊರತರಲಾಗುತ್ತದೆ.
ಈ ಸಂಪೂರ್ಣ ಪ್ರಕ್ರಿಯೆ 40 - 45 ನಿಮಿಷಗಳ ಕಾಲ ನಡೆಯುತ್ತದೆ. ಈ ಪ್ರಕ್ರಿಯೆಯನ್ನು 2 - 3 ಸಲ ಪುನರ್ರಾವರ್ತಿಸಿದ ನಂತರ ಆಕೆಯೇ ಕಲಿತು ಮನೆಯಲ್ಲಿಯೇ ಇದನ್ನು ಅಭ್ಯಸಿಸಬಹುದು.
ಧ್ಯಾನ ಮತ್ತು ಉಸಿರಾಟದ ವಿಧಾನಗಳು:
ಧ್ಯಾನ ಮತ್ತು ಉಸಿರಾಟದ ವಿಧಾನಗಳು, ಮನಸ್ಸು, ದೇಹ, ಮತ್ತು ಚೇತನವನ್ನು ಸಂಪರ್ಕಿಸುತ್ತದೆ. ಇದು ಇನ್ನೂ ಸರಳವಾದ ಆದರೆ ಗಾಢವಾದ ಪರಿಣಾಮವನ್ನು ಹೊಂದಿದೆ. ಧ್ಯಾನವನ್ನು ದಿನವೂ ಕೆಲವು ನಿಮಿಷಗಳ ಕಾಲ ಮಾಡಿದರೂ ಅದು ಸಾಕಷ್ಟು ಪ್ರಯೋಜನವನ್ನು ಒದಗಿಸುತ್ತದೆ. ಉದಾಹರಣೆಗೆ:
ಒತ್ತಡ ಕಡಿಮೆ ಮಾಡುವುದು
ದೈಹಿಕ ನೋವನ್ನು ಕಡಿಮೆ ಮಾಡುವ ಎಂಡಾರ್ಫಿನ್ ಅನ್ನು ಉತ್ಪಾದಿಸುತ್ತದೆ
ಪ್ರತಿರಕ್ಷಣಾ ವ್ಯವಸ್ಥೆಯ ಪೋಷಕ ಟಿ ಮತ್ತು ಬಿ ಲಿಂಫೋಸೈಟ್ಸ್ ( ಬಿಳಿ ರಕ್ತಕಣಗಳ ರೀತಿಯ ) ಉತ್ಪಾದನೆಯನ್ನು ಪ್ರಚೋದಿಸುವ ಡಿ ಎಚ್ ಈ ಎ( DHEA) (ಡಿಹೈಡ್ರೋಎಪಿಎಂಡ್ರೋಸ್ಟೆರೋನ್) ನ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಡಿ ಎಚ್ ಈ ಎ( DHEA) ನೀವು ಮಗುವಿಗೆ ಜನ್ಮ ನೀಡುವ ಮೊದಲು ಮತ್ತು ನಂತರ ದುಃಖ ಮತ್ತು ಖಿನ್ನತೆಯನ್ನು ತಡೆದು ಮೆದುಳಿನ ಜೀವರಸಾಯನಿಕ ಕ್ರಿಯೆಯನ್ನು (biochemistry) ಹೆಚ್ಚಿಸುತ್ತದೆ.
ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ನಂತಹ ಒತ್ತಡದ ಹಾರ್ಮೋನುಗಳ ಉತ್ಪಾದನೆಯನ್ನು ಕಡಿಮೆಮಾಡುತ್ತದೆ. ಆಕ್ಸಿಟೋಸಿನ್ ಹ್ರಿಗೆಯ ಬೇನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ,ಆದಾಗ್ಯೂ ಶಾರೀರಿಕ ನೋವು, ಆತಂಕ ಮತ್ತು ಭಯದ ಕಾರಣದಿಂದಾಗಿ ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ಬಿಡುಗಡೆಯಾಗಬಹುದು!
ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ವಿಪರೀತ ಬಿಡುಗಡೆ, ಆಕ್ಸಿಟೋಸಿನ್ ಬಿಡುಗಡೆಯನ್ನು ಪ್ರತಿಬಂಧಿಸುತ್ತದೆ. ಆದ್ದರಿಂದ ಧ್ಯಾನ ಮತ್ತು ಉಸಿರಾಟದ ವಿಧಾನಗಳ ನಿಯಮಿತ ಅಭ್ಯಾಸ, ಸುಲಭವಾಗಿ ಹೆರಿಗೆಯಾಗಲು ಅನುಕೂಲವಾಗುವಂತೆ, ಒತ್ತಡದ ಹಾರ್ಮೋನುಗಳ ಉತ್ಪಾದನೆಯನ್ನು ಕಡಿಮೆಗೊಳಿಸುತ್ತವೆ.ನಿದ್ರೆ ಮತ್ತು ಲಹರಿಯ (ಮೂಡ್) ಗುಣಮಟ್ಟವನ್ನು ಹೆಚ್ಚಿಸುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮಗು ನಿಮ್ಮ ಮಾತು ಕೇಳುವಂತೆ ಮಾಡೋದು ಹೇಗೆ?
ನೋವು ನಿವಾರಕ ಎಂಡಾರ್ಫಿನ್ ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ದೀರ್ಘ ಕಾಲದ ಪ್ರಸವಪೂರ್ವ ಧ್ಯಾನ ಎಂಡಾರ್ಫಿನ್ ಗಳ ಮಟ್ಟವನ್ನು ಹೆಚ್ಚಿಸುತ್ತದೆ.
ಧ್ಯಾನ , ರಕ್ತದೊತ್ತಡ ಮತ್ತು ಹೃದಯ ಪ್ರಮಾಣ (ಬಡಿತ) ಕಡಿಮೆ ಮಾಡುತ್ತದೆ. ಆದ್ದರಿಂದ ಪ್ರೀಕ್ಲಾಂಪ್ಸಿಯಾದ ವ್ಯಾಪ್ತಿಯು ಕಡಿಮೆಯಾಗುತ್ತದೆ.
ಇದು ದೀರ್ಘಕಾಲ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಮೇಲೆ ಚೆನ್ನಾಗಿ ಪರಿಣಾಮ ಬೀರಿ ನಕಾರಾತ್ಮಕ ಭಾವನೆಗಳನ್ನು ನಿವಾರಿಸುತ್ತದೆ.
ಹೆರಿಗೆ ಸಮಯದಲ್ಲಿ ತಾಯಿಗೆ ಧೈರ್ಯವನ್ನು ನೀಡುವ ಮೂಲಕ ಹೆರಿಗೆ ಬೇನೆಯ ಭಯವನ್ನು ಕಡಿಮೆ ಮಾಡುತ್ತದೆ. ಇದು ಹುಟ್ಟಲಿರುವ ಮಗು ತಾಯಿಯೊಂದಿಗೆ ಸಂವನವನ್ನು ಮಾಡುವ ಒಂದು ಜೈವಿಕ ಮಾರ್ಗವಾಗಿದೆ. ಆಳವಾದ ವಿಶ್ರಾಂತಿಯನ್ನು ನೀಡುವ ಈ ವಿಧಾನ ಯಾವುದೇ ಭಯವಿಲ್ಲದೆ ತಾಯಿ ತನ್ನ ಮಗುವಿಗೆ ಜನ್ಮ ನೀಡಲು ಶಕ್ತಿ ನೀಡುತ್ತದೆ.
ತಾಯಿಯ ಎದೆಹಾಲನ್ನು ಹೆಚ್ಚಿಸುತ್ತದೆ ಮತ್ತು ಪ್ರಸವ ನಂತರದ ಒತ್ತಡವನ್ನು ನಿವಾರಿಸುತ್ತದೆ
ವಿಐಎಚ್ ಎ (VIHA) ಕಾರ್ಯಕ್ರಮದಲ್ಲಿ/ ಅಭ್ಯಾಸದಲ್ಲಿ ಬಳಸಲಾಗುವ ಧ್ಯಾನದ ವಿಧಗಳು
ರಾಜಯೋಗ ಧ್ಯಾನ: ಈ ವಿಧಾನದಲ್ಲಿ ಧನಾತ್ಮಕ ಸಂಗೀತದ ಮೂಲಕ ನಿಮ್ಮ ಮನಸ್ಸನ್ನು (ಸರ್ವೋಚ್ಚ ಪ್ರಜ್ಞೆ) ಜಾಗ್ರತಗೊಳಿಸಲಾಗುತ್ತದೆ. ಸಂಗೀತದಿಂದ ನಿಮ್ಮ ಸಂಪೂರ್ಣಗಮನ ಸೆಳೆಯಲಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಗರ್ಭಧಾರಣೆಯ ಸಮಯದ ಬಾಯಿಯ ಕಾಳಜಿ
ಮಂತ್ರ ಧ್ಯಾನ :
ವಿವಿಧ ವೇದ ಮಂತ್ರಗಳು, ಅದರಲ್ಲೂ ವಿಶೇಷವಾಗಿ ಬಸಿರಿಯ ಗರ್ಭಕ್ಕೆ ಸಂಬಂಧಿಸಿದಂತೆ ರಚಿಸಲಾದ ಮಂತ್ರಗಳು ಧನಾತ್ಮಕ ಪರಿಣಾಮಗಳನ್ನು ಹೊಂದಿವೆ. ಇದು ಧನಾತ್ಮಕ ಶಕ್ತಿ ಯನ್ನುಸೃಷ್ಟಿಸುತ್ತದೆ ಮತ್ತು ಈ ಶಕ್ತಿಯನ್ನು ಭ್ರೂಣಕ್ಕೆ ವರ್ಗಾಯಿಸುತ್ತದೆ, ಹಾಗಾಗಿ ಮಗುವಿಗೆ ಆರೋಗ್ಯಕರ ವಾತಾವರಣ ದೊರಕುತ್ತದೆ.
ಹೆರಿಗೆ ಬೇನೆಯ ಸಮಯದಲ್ಲಿ ಉಸಿರಾಟ:
ರೇಚಕ ಅಥವಾ ದೀರ್ಘಕಾಲದ ಉಸಿರು ಹೊರಹಾಕುವ ವಿಧಾನ:
ಉಸಿರಾಡುವಾಗ ಉಸಿರನ್ನು ಹೊರಹಾಕುವ ಮತ್ತು ಗರಿಷ್ಠ ಮಟ್ಟದಲ್ಲಿ ಉಸಿರನ್ನು ಹೊರಹಾಕುವುದು ಹೆರಿಗೆ ಬೇನೆಯ ಸಂದರ್ಭದಲ್ಲಿ ವಿಶ್ರಾಂತಿ ಪಡೆಯುವ ರಹಸ್ಯ. 4 ಸೆಕೆಂಡುಗಳ ಅನುಕೂಲಕರ ಎಣಿಕೆಯ ಮೂಲಕ ಉಸಿರಾಡುವುದು ಅಥವಾ ಸಾಧ್ಯವಾದಷ್ಟು ನಿಧಾನವಾಗಿ ಉಸಿರನ್ನು ಹೊರಹಾಕುವ ಮೂಲಕ ವಿಶ್ರಾಂತಿಯನ್ನು ಪಡೆಯಬಹುದು.
ಬ್ಲೋಯಿಂಗ್ (ಬಾಯಿಯಿಂದ ಉಸಿರೆಳೆದುಕೊಂಡು ಬಾಯಿಯಲ್ಲಿ ಹಿಡಿದಿಟ್ಟುಕೊಳ್ಳುವುದು) :
ಮೂಗಿನ ಮೂಲಕ ಉಸಿರಾಡುವುದು ಮತ್ತು ಬಾಯಿಯಲ್ಲಿ ಉಸಿರನ್ನು ಬಿಡುವ ಸಂಪೂರ್ಣ ವಿಧಾನವನ್ನು ಪುನರಾವರ್ತಿಸುವುದು ನಿಮ್ಮ ವಿಶ್ರಾಂತಿಗೆ ಸಹಾಯಕವಾಗುತ್ತದೆ. ಉಸಿರಾಟದ ಈ ಪ್ರಕ್ರಿಯೆಯಿಂದ ಒತ್ತಡ , ಬಳಲಿಕೆ ಮತ್ತು ಅಸ್ವಸ್ಥತೆಯಿಂದ ಉಂಟಾಗುವ ಆತಂಕಗಳಿಗೆ 'ಗುಡ್ ಬೈ' ಹೇಳಿ!
ಪ್ರಸವದ ಬೇನೆಯ ಎರಡನೇ ಹಂತ:
ಗರ್ಭಕೋಶ ( ಗರ್ಭಕಂಠದ ) ಬಾಯಿ ಸಂಪೂರ್ಣವಾಗಿ ಹಿಗ್ಗಿದಾಗ (ತೆರೆದುಕೊಂಡಾಗ) ಇದು ನಿಜವಾದ ಪುಶ್ಶಿಂಗ್ (ತಳ್ಳುವ) ಸಕ್ರಿಯಗೊಳ್ಳುವ ಸಮಯ. ಸಂಕೋಚನದ (ಕುಗ್ಗುವಿಕೆ) ಸಮಯದಲ್ಲಿ ಉಸಿರಾಟದ ತಂತ್ರವಾದ ಉಸಿರನ್ನು ಒಳಗೆಳೆದುಕೊಂಡು ಸಾಧ್ಯವಾದಷ್ಟು ಸಮಯ ಹಿಡಿದಿಟ್ಟುಕೊಂಡು ಮತ್ತೆ ಜೋರಾಗಿ ಉಸಿರನ್ನು ಬಿಡುವುದು, ಕಠಿಣ ಕರುಳು ಚಲಿಸುವವರೆಗೆ,ಸಂಕೋಚನ ಮುಗಿಯುವವರೆಗೆ, ಮತ್ತೆ ಎಷ್ಟು ಸಾಧ್ಯವೋ ಅಷ್ಟು ಆಳವಾದ ಉಸಿರನ್ನು ತೆಗೆದುಕೊಂಡು ಸ್ವಲ್ಪ ಸಮಯ ಹಿಡಿದಿಟ್ಟುಕೊಂಡು ಮತ್ತೆ ಹೊರಬಿಡುವ ಪ್ರಕ್ರಿಯೆಯನ್ನು ಮಾಡಬೇಕು. ಇದು ಮಗು ಹೊರಬರಲು ಅತ್ಯಂತ ಸಹಾಯಕವಾದಂತಹ ಪ್ರಕ್ರಿಯೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಉಸಿರಾಟದ ಕ್ರಿಯೆ ಮಾಡುವುದನ್ನು ಮರೆಯದಿರಿ. ಸಂಕೋಚನ ಪ್ರಕ್ರಿಯೆ ತಾಯಿಯ ವಿಶ್ರಾಂತಿಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯಲ್ಲಿ ಭ್ರೂಣದ ಉಸಿರಾಟಕ್ಕೂ ಸಹಾಯ ಮಾಡುತ್ತದೆ. ದಣಿವಾಗಿದ್ದರೆ ಮೂಗಿನಿಂದ ಉಸಿರೆಳೆದುಕೊಂಡು ಬಾಯಿಯಿಂದ ಉಸಿರು ಬಿಡುವ ಪ್ರಕ್ರಿಯೆ ಮಾಡಬಹುದು. ಮಗು ಹುಟ್ಟುವ ತನಕ ಈ ಉಸಿರಾಟದ ಪ್ರಕ್ರಿಯೆಯನ್ನು ಮುಂದುವರಿಸಿ.



Click it and Unblock the Notifications











