Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೆಲಸಕ್ಕೆ ಹೋಗುವ ಗರ್ಭಿಣಿಯರಿಗೆ ಆಪ್ತ ಸಲಹೆಗಳು

ಆದ್ದರಿಂದ ಕೆಲಸದಲ್ಲಿರುವ ಮಹಿಳೆಯರು ಗರ್ಭಾವಸ್ಥೆಯಲ್ಲಿರುವಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು:
ಮೆಟ್ಟಿಲುಗಳನ್ನು ಹತ್ತಬೇಡಿ: ಆಫೀಸ್ ನಲ್ಲಿ ತುಂಬಾ ಮೆಟ್ಟಿಲುಗಳಿದ್ದರೆ ಮೆಟ್ಟಿಲು ಬಳಸಬೇಡಿ, ಲಿಫ್ಟ್ ಬಳಸಿ. ತುಂಬಾ ಎತ್ತರದ ಚಪ್ಪಲಿಯನ್ನು ಧರಿಸಬಾರದು ಮತ್ತು ಟೈಲ್ಸ್ ನಲ್ಲಿ ಮೆಟ್ಟಿದಾಗ ಜಾರುವಂತಹ ಚಪ್ಪಲಿಗಳನ್ನು ಬಳಸಬಾರದು.
ಭಾರ ಹೊರಬೇಡಿ: ಕೈಯಲ್ಲಿ ಭಾರವಾದ ವಸ್ತುಗಳನ್ನು ಹಿಡಿಯುವುದು ಮತ್ತು ಭಾರವಾದ ವಸ್ತುಗಳನ್ನು ಎತ್ತವುದು ಮಾಡಬಾರದು.
ಆರೋಗ್ಯಕರ ಆಹಾರ: ಆಫೀಸ್ ನಲ್ಲಿ ಕುರುಕಲು ತಿಂಡಿ ತಿನ್ನುವ ಬದಲು ನಟ್ಸ್ ನತ್ತು ಹಣ್ಣುಗಳನ್ನು ಹೆಚ್ಚಾಗಿ ತಿನ್ನಬೇಕು. ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಇರುವ ಆಹಾರಗಳನ್ನು ಹೆಚ್ಚಾಗಿ ತಿನ್ನುವ ಅಭ್ಯಾಸ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯದು.
ಕಾಫಿ ಕುಡಿಯಬೇಡಿ: ಗರ್ಭಾವಸ್ಥೆಯಲ್ಲಿ ಕಾಫಿ ಕುಡಿಯುವುದು ಒಳ್ಳೆಯದಲ್ಲ, ಅದರ ಬದಲು ಹಾಲಿಗೆ ಪ್ರೊಟೀನ್ ಪೌಡರ್ ಅಥವಾ ಹಾರ್ಲಿಕ್ಸ್ ಹಾಕಿ ಕುಡಿಯಿರಿ. ಸಿಗರೇಟ್ ಸೇವನೆಯ ಅಭ್ಯಾಸ ಇರುವವರು ಹೊಟ್ಟೆಯಲ್ಲಿರುವ ಮುದ್ದು ಕಂದ ಆರೋಗ್ಯಕರವಾಗಿ ಹುಟ್ಟಬೇಕೆಂದರೆ ಸಿಒಗರೇಟ್ ತ್ಯಜಿಸಲೇಬೇಕು.
ಕೂರುವ ಭಂಗಿ ಸರಿಯಿರಬೇಕು: ಕುಷನ್ ಚೇರ್ ಅಥವಾ ಆರಾಮದಾಯಕ ಅನಿಸುವ ಕುರ್ಚಿ ಬಳಸಿ. ಬೆನ್ನು ನೋವನ್ನು ತಡೆಯಲು ಏರ್ ಪಿಲ್ಲೊ (ಗಾಳಿ ತುಂಬಿದ ದಿಂಬು ಬಳಸಬಹುದು).
ವಿರಾಮ: ನಿರಂತರವಾಗಿ ಕುಳಿತು ಕೆಲಸ ಮಾಡಬಾರದು. ನಡು-ನಡುವೆ ಸ್ವಲ್ಪ ವಿರಾಮ ತೆಗೆದುಕೊಳ್ಳಬೇಕು. ತುಂಬಾ ನೀರು ಕುಡಿಯಬೇಕು. ಬೆಳಗ್ಗೆ ಎದ್ದು ಪ್ರಾಣಯಾಮ ಮಾಡುವುದು ಒಳ್ಳೆಯದು.
ತುಂಬಾ ಮಾನಸಿಕ ಒತ್ತಡದಿಂದ ಕೆಲಸ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.



Click it and Unblock the Notifications
