Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಹೆರಿಗೆಯ ನಂತರದ ಕೂದಲುದುರುವಿಕೆ ತಡೆಯಲು ಐದು ವಿಧಾನಗಳು
ನೀವು ಈಗಷ್ಟೇ ಮಗುವನ್ನು ಪಡೆದು ಹೊಸ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದೀರಾ? ಈ ಸಂತೋಷವನ್ನು ಅನುಭವಿಸುವುದರ ಜೊತೆಗೆ ನಿಮ್ಮ ದೇಹದ ಬಗ್ಗೆ ಕಾಳಜಿ ಕೂಡ ಅಷ್ಟೇ ಮುಖ್ಯವಾಗಿದೆ.ಹೆಚ್ಚಿನ ಮಹಿಳೆಯರು ಹೆರಿಗೆಯ ನಂತರ ಮುಖದ ಕಾಂತಿಯನ್ನು ಹಿಂತಿರುಗಿ ಪಡೆಯಲು ಪ್ರಯತ್ನಿಸುತ್ತಾರೆ ಆದರೆ ಕೂದಲಿನ ಕಾಳಜಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿಬಿಟ್ಟಿರುತ್ತಾರೆ.ಮಗು ಹುಟ್ಟಿದ ನಂತರ ತಾಯಿಯ ಈಸ್ಟ್ರೋಜೆನ್ ಮಟ್ಟದಲ್ಲಿ ಏರುಪೇರು ಕಂಡು ಬರುವುದರಿಂದ ಕೂದಲುದುರುವಿಕೆ ಸಾಮಾನ್ಯ.ನೀವೂ ಕೂಡ ಕೂದಲಿನ ಆರೈಕೆಗೆ ಸರಿಯಾದ ಮಾರ್ಗ ಹುಡುಕುತ್ತಿದ್ದಲ್ಲಿ ಈ ಕೆಳಗೆ ನೀಡಲಾಗಿರುವ ಐದು ವಿಧಾನಗಳನ್ನು ಪಾಲಿಸಿ.

ಮೊಟ್ಟೆಯ ಬಿಳಿ ಭಾಗ
ನಿಮಗೆ ಬೇರೇನನ್ನು ಮಾಡಲು ಸಮಯವಿಲ್ಲದಿದ್ದರೆ ಮೂರು ಚಮಚ ಆಲೀವ್ ಎಣ್ಣೆಗೆ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಕೂದಲಿಗೆ ಹಚ್ಚಿ ಇದರಿಂದ ಸಿಗುವ ಫಲಿತಾಂಶ ನಿಮ್ಮನ್ನು ನಿಬ್ಬೆರಗಾಗಿಸುತ್ತದೆ.ಇದು ನಿಮ್ಮ ಕೂದಲಿಗೆ ಬೇಕಾದ ನುಣುಪನ್ನು ನೀಡಿ ಕೂದಲ ಪೋಷಣೆ ಮಾಡುತ್ತದೆ.

ಮೆಂತೆ ಕಾಳು
ಕೂದಲು ಉದುರುವಿಕೆ ತಡೆಯುವಲ್ಲಿ ಮೆಂತೆ ಕಾಳು ಹೆಚ್ಚು ಕೆಲಸ ಮಾಡುತ್ತದೆ. ಮೆಂತೆಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ ಈ ನೀರನ್ನು ಕೂದಲಿಗೆ ಮರುದಿನ ಬೆಳಗ್ಗೆ ಹಚ್ಚಿ ಇದನ್ನು ಎರಡು ಗಂಟೆಗಳ ಕಾಲ ಹಾಗೆಯೇ ಬಿಡಿ.ಇದು ಕೂದಲನ್ನು ಆರೋಗ್ಯಯುತವಾಗಿ ಮಾಡುವುದರ ಜೊತೆಗೆ ತಲೆಹೊಟ್ಟನ್ನು ಕೂಡ ಹೋಗಲಾಡಿಸುತ್ತದೆ.

ಮೊಸರು
ಇದು ಕೂದಲಿಗೆ ಅತ್ಯುತ್ತಮ ಟಾನಿಕ್.ಸ್ವಲ್ಪ ಕಡೆದ ಮೊಸರನ್ನು ಕೂದಲಿನ ಬುಡಕ್ಕೆ ಹಚ್ಚಿ ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ.ಇದರಿಂದ ದೊರೆತ ಫಲಿತಾಂಶದಿಂದ ನೀವು ನಿಮ್ಮ ಕೂದಲನ್ನು ಇಷ್ಟಪಡಲು ಪ್ರಾರಂಭಿಸುತ್ತೀರಿ.

ಕಾಯಿ ಹಾಲು
ಕೊಬ್ಬರಿ ಎಣ್ಣೆ ಬಳಸುವುದರಿಂದ ಕೂದಲು ಉದುರುವಿಕೆ ತಡೆಯಬಹುದು ಎಂಬುದು ಎಲ್ಲರಿಗೂ ತಿಳಿದ ವಿಷಯ.ಆದರೆ ಹೆಚ್ಚಿನ ಜನರಿಗೆ ಕಾಯಿ ಹಾಲು ಬಳಸುವುದರಿಂದ ಕೂದಲು ಉದುರುವುದು ಮಾತ್ರವಲ್ಲ,ಕೂದಲ ಬೆಳವಣಿಗೆ ಕೂಡ ಹೆಚ್ಚುತ್ತದೆ ಎಂಬುದು ತಿಳಿದಿಲ್ಲ.ನಿಯಮಿತವಾಗಿ ಕೂದಲಿಗೆ ಕಾಯಿ ಹಾಲು ಬಳಸುವುದರಿಂದ ಕೂದಲು ಉದುರುವುದನ್ನು ತಡೆಯುವುದರ ಜೊತೆಗೆ ದಟ್ಟವಾಗಿ ಬೆಳೆಯಲು ಕೂಡ ಸಹಕರಿಸುತ್ತದೆ.

ಭೃ೦ಗರಾಜ ತೈಲ
ಎಲ್ಲೆಡೆ ಸುಲಭವಾಗಿ ದೊರಕುವ ಭೃ೦ಗರಾ ಅಥವಾ ಫಾಲ್ಸ್ ಡೈಸಿ ಎಂದೇ ಕರೆಯಲ್ಪಡುವ ಸಸ್ಯವು ಕೂದಲು ಉದುರುವಿಕೆ ತಡೆಯಲು ಅನುಕೂಲಕರ.ಒಂದು ಮುಷ್ಠಿ ಭೃಂಗರಾಜ ಎಲೆಗಳನ್ನು ತೆಗೆದುಕೊಳ್ಳಿ ನಂತರ ಇದನ್ನು ಸಂಪೂರ್ಣ ಪೇಸ್ಟ್ ತಯಾರಿಸಿಕೊಳ್ಳಿ.ಇದನ್ನು ಹಾಗೆಯೇ ಕೂದಲಿಗೆ ಹಚ್ಚಬಹುದು ಅಥವಾ ಹಾಲಿನ ಜೊತೆ ಮಿಕ್ಸ್ ಮಾಡಿ ಕೂಡ ಬಳಸಬಹುದು.



Click it and Unblock the Notifications
