ಹೆರಿಗೆಯ ಬಳಿಕ ಋತುಚಕ್ರದಲ್ಲಿ ಏರುಪೇರು! ಯಾಕೆ ಹೀಗೆ?

Posted By: Arshad
Subscribe to Boldsky

ಹೆರಿಗೆಯ ನಂತರ ಮಾಸಿಕ ಋತುಚಕ್ರ ಮೊದಲಿನಂತಾಗಬೇಕು ಎಂಬುದೇ ಪ್ರತಿ ಬಾಣಂತಿಯ ಬಯಕೆಯಾಗಿರುತ್ತದೆ. ಆದರೆ ಇದು ಕೊಂಚ ಬೇಗ ಅಥವಾ ತಡಾವಾದರೆ ಆತಂಕ ತಪ್ಪಿದ್ದಲ್ಲ. ವಾಸ್ತವವಾಗಿ ಹೆರಿಗೆಯ ಬಳಿಕ ಹಿಂದಿನಷ್ಟೇ ನಿಖರವಾಗಿ ಮಾಸಿಕ ದಿನಗಳು ಇರುವ ಸಾಧ್ಯತೆ ಅತ್ಯಲ್ಪ. ಶಾರೀರಿಕ ಸ್ಥಿತಿಯನ್ನು ಅನುಸರಿಸಿ ಇದು ಹೆಚ್ಚು ಕಡಿಮೆಯಾಗುವುದು ಸ್ವಾಭಾವಿಕವಾಗಿದೆ. ಹೆರಿಗೆಯ ಬಳಿಕ, ಮಹಿಳೆಯ ಸಮಸ್ಯೆ ಕೇಳುವವರು ಯಾರು?

ಇದಕ್ಕೆ ಪ್ರಮುಖವಾದ ಕಾರಣವೆಂದರೆ ಬಾಣಂತಿಯ ದೇಹದಲ್ಲಿ ಉತ್ಪತ್ತಿಯಾಗುವ ತಾಯಿಹಾಲು ಹಾಗೂ ಇದಕ್ಕಾಗಿ ಸ್ರವಿಸುವ ಹಾರ್ಮೋನುಗಳು ಅಥವಾ ರಸದೂತಗಳು. ಈ ರಸದೂತಗಳ ಪ್ರಭಾವ ಮಾಸಿಕ ದಿನಗಳ ಅವಧಿಯ ಮೇಲೆ ನೇರವಾಗಿ ಆಗುವುದರಿಂದ ಇದು ಬದಲಾಗುವುದು ಮಾತ್ರವೇ ಅಲ್ಲ, ದೈಹಿಕವಾಗಿಯೂ ಕೆಲವಾರು ಬದಲಾವಣೆಗಳಾಗುತ್ತವೆ. ಹೆರಿಗೆಯ ವೇಳೆ ಎಷ್ಟೇ ಧೈರ್ಯ ಮಾಡಿಕೊಂಡರೂ, ಕಾಡುವ ಭಯ....

ಕೆಲವು ಮಹಿಳೆಯರಿಗೆ ಮಾಸಿಕ ದಿನಗಳ ಹೊರತಾದ ದಿನಗಳಲ್ಲಿಯೂ ರಕ್ತಭರಿತ ಸ್ರಾವ ಕಾಣಿಸಿಕೊಂಡು ಇದನ್ನು ಮಾಸಿಕದಿನಗಳೆಂದು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯೂ ಇದೆ. ಆದರೆ ಇದು ಗರ್ಭನಾಳದ ಒಳಗಣ ಲೋಳೆ ಅಥವಾ ಕಫವಾಗಿದ್ದು ಇದನ್ನು ಸಡಿಲಿಸಿ ಹೊರದೂಡಲು ಸ್ರವಿಸುವ ರಕ್ತ ಜೊತೆಗೂಡಿ ರಕ್ತಮಿಶ್ರಿತ ಸ್ರಾವವಾಗುತ್ತದೆ. ಹಾಗಾಗಿ ಈ ಬಗ್ಗೆ ಆತಂಕಗೊಳ್ಳುವ ಯಾವುದೇ ಕಾರಣವಿಲ್ಲ. ಬನ್ನಿ, ಹೆರಿಗೆಯ ಬಳಿಕ ಬದಲಾಗುವ ಋತುಚಕ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.....  

ವಾಸ್ತವಾಂಶ #1

ವಾಸ್ತವಾಂಶ #1

ಹೆರಿಗೆಯ ಬಳಿಕ ಹೆಚ್ಚಿನ ಎಲ್ಲಾ ಬಾಣಂತಿಯರಿಗೂ ಪ್ರಥಮ ತಿಂಗಳ ರಜಾದಿನಗಳಲ್ಲಿ ಬದಲಾವಣೆ ಕಂಡು ಬಂದೇ ಬರುತ್ತದೆ. ಈ ದಿನಗಳನ್ನು ಇದೇ ದಿನಕ್ಕೆ ಬರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ ಅಥವಾ ವೈದ್ಯರೂ ನಿಖರವಾಗಿ ತಿಳಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಹೆರಿಗೆಯ ಆರನೆಯ ಅಥವಾ ಏಳನೆಯ ವಾರದಲ್ಲಿ ಹೆಚ್ಚಿನ ಬಾಣಂತಿಯರಿಗೆ ಇದು ಸಾಧ್ಯವಾಗುತ್ತದೆ. ಅಂದರೆ ನಿಗದಿತ ಸಮಯಕ್ಕಿಂತಲೂ ತಡವಾಗುತ್ತದೆ. ಆದ್ದರಿಂದ ಹೆಚ್ಚಿನ ಬಾಣಂತಿಯರು ಈ ಬಗ್ಗೆ ಆತಂಕಗೊಳ್ಳುತ್ತಾರೆ.

ವಾಸ್ತವಾಂಶ #2

ವಾಸ್ತವಾಂಶ #2

ಮಾಸಿಕ ಚಕ್ರದಲ್ಲಿ ಏರುಪೇರಿನ ಜೊತೆಗೇ ಆವರಿಸುವ ಇನ್ನೊಂದು ಸಾಮಾನ್ಯ ತೊಂದರೆ ಎಂದರೆ ಅತಿ ಹೆಚ್ಚಿನ ಸ್ರಾವ. ಇದು ಸಾಮಾನ್ಯವೇ ಆಗಿದ್ದರೂ ಇದರ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಬಹುತೇಕ ಎಲ್ಲಾ ತಾಯಂದಿರೂ ಇದನ್ನು ಅನುಭವಿಸುತ್ತಾರೆ. ಆದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸದೇ ವೈದ್ಯರಲ್ಲಿ ತಿಳಿಸಿ ಸೂಕ್ತ ಸಲಹೆಯನ್ನು ಪಡೆದುಕೊಳ್ಳಬೇಕು.

ವಾಸ್ತವಾಂಶ #3

ವಾಸ್ತವಾಂಶ #3

ಹೆರಿಗೆಯ ಬಳಿಕ ಮಾಸಿಕ ದಿನಗಳ ಅವಧಿಯಲ್ಲಿ ಭಾರೀ ಹೆಚ್ಚು ಕಡಿಮೆಯಾಗುತ್ತದೆ. ಅಂದರೆ ಇದು ತುಂಬಾ ಹೆಚ್ಚಿನ ದಿನಗಳಿಗೂ ಅಥವಾ ತುಂಬಾ ಕಡಿಮೆ ದಿನಗಳಿಗೂ ಸಾಧ್ಯವಾಗಬಹುದು. ಕೆಲವು ಪರೀಕ್ಷೆಗಳನ್ನು ಮಾಡಿ ಇಡಿಯ ದೇಹದ ತಪಾಸಣೆಯ ಬಳಿಕವೇ ವೈದ್ಯರು ಈ ಬಗ್ಗೆ ಸೂಕ್ತ ಚಿಕಿತ್ಸೆಯನ್ನು ನೀಡಬಲ್ಲರು. ಕೆಲವು ಮಹಿಳೆಯರಿಗೆ ಹೆರಿಗೆಯ ಹಿಂದಿನ ದಿನಗಳ ಋತುಚಕ್ರದ ಅವಧಿಯ ದುಪ್ಪಟ್ಟು ದಿನಗಳಷ್ಟು ತಡವಾಗಿ ಈಗ ಆಗಬಹುದು.

ವಾಸ್ತವಾಂಶ #4

ವಾಸ್ತವಾಂಶ #4

ಕೆಲವು ಬಾಣಂತಿಯರಲ್ಲಿ ಋತುಸ್ರಾವ ಬಹಳ ನೋವಿನಿಂದ ಕೂಡಿರಬಹುದು. ಇದರೊಂದಿಗೆ ವಾಕರಿಕೆ, ಊದಿಕೊಳ್ಳುವುದು, ಭಾವನೆಗಳಲ್ಲಿ ಭಾರೀ ಬದಲಾವಣೆ, ಸಿಡುಕುತನ, ಕೆಳಹೊಟ್ಟೆಯ ನೋವು, ಸುಸ್ತು, ತಲೆ ತಿರುಗುವಿಕೆ ಮೊದಲಾದವೂ ಕಾಣ ಬರಬಹುದು.

ವಾಸ್ತವಾಂಶ #5

ವಾಸ್ತವಾಂಶ #5

ಮಗುವಿಗೆ ಹಾಲೂಡಿಸುತ್ತಿರುವಷ್ಟೂ ತಿಂಗಳುಗಳಲ್ಲಿ ಈ ತಾಯಂದಿರ ಮಾಸಿಕ ಚಕ್ರ ತಡವಾಗಬಹುದು. ಆದರೆ ಹಾಲೂಡಿಸುವುದನ್ನು ನಿಲ್ಲಿಸಿದ ಬಳಿಕ ಈ ಚಕ್ರ ಬಹುತೇಕ ತಾಯಂದಿರಲ್ಲಿ ಹಿಂದಿನಂತೆಯೇ ಸಾಮಾನ್ಯ ಸ್ಥಿತಿಗೆ ಬರುತ್ತದೆ.

ವಾಸ್ತವಾಂಶ #6

ವಾಸ್ತವಾಂಶ #6

ಹೆರಿಗೆಯ ಬಳಿಕ ಋತುಚಕ್ರದ ಅವಧಿ ಏರುಪೇರಾಗಲು ರಸದೂತಗಳ ಪ್ರಭಾವ ಹಾಗೂ ಮಗುವಿಗೆ ಹಾಲೂಡಿಸುವುದೇ ಪ್ರಮುಖ ಕಾರಣ ಎಂದು ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ.

ವಾಸ್ತವಾಂಶ #7

ವಾಸ್ತವಾಂಶ #7

ಮಗುವಿಗೆ ಹಾಲೂಡಿಸುತ್ತಿರುವ ಅವಧಿಯಲ್ಲಿ ತಾಯಿಯ ದೇಹದಲ್ಲಿ ಪ್ರೊಲಾಕ್ಟಿನ್ ಎಂಬ ರಸದೂತ ಸ್ರವಿತವಾಗುತ್ತದೆ. ಈ ರಸದೂತ ಅಂಡಾಣುವಿನ ಬಿಡುಗಡೆಯ ಮೇಲೆ ನೇರವಾಗಿ ಪ್ರಭಾವ ಬೀರುವ ಕಾರಣದಿಂದ ಕೆಲಸಮಯದವರೆಗೆ ಋತುಚಕ್ರದಲ್ಲಿ ಬದಲಾವಣೆಯಾಗುತ್ತದೆ.

 
For Quick Alerts
ALLOW NOTIFICATIONS
For Daily Alerts

    English summary

    Changes In Periods After Delivery

    Childbirth and lactation cause several changes in the body and this could impact the periods first. Some women who see vaginal discharge in red, may mistake it to be the period. But that could actually be blood and mucous. Here are some facts about the reasons behind the changes in periods after childbirth.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more