Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ಶುಚಿತ್ವದ ಕಾಳಜಿ: ಮಹಿಳೆಯರ ಗುಪ್ತ ಸಮಸ್ಯೆಗೆ ಫಲಪ್ರದ ಸಲಹೆ
ಹೆರಿಗೆಯಾದ ಕ್ಷಣದಿಂದ ಬಾಣಂತಿಯಾಗುವ ತಾಯಿ ಮತ್ತು ಮಗುವಿನ ಸೂಕ್ತ ಆರೈಕೆ ಮತ್ತು ಸೋಂಕುಗಳಿಂದ ರಕ್ಷಣೆ ಅತಿ ಅಗತ್ಯವಾಗಿದೆ. ಹೆರಿಗೆಯ ಸಮಯದಲ್ಲಿ ಪ್ರಸೂತಿತಜ್ಞರು ಗರ್ಭದ್ವಾರದಿಂದ ಆಸನದ್ವಾರದವೆರೆಗೆ ಶಸ್ತ್ರಚಿಕಿತ್ಸೆಯಿಂದ ಮಗು ಸುರಕ್ಷಿತವಾಗಿ ಹೊರಬರಲು ಹೆಚ್ಚಿನ ಸ್ಥಳಾವಕಾಶ ನೀಡಿದ್ದು ಹೆರಿಗೆಯ ಬಳಿಕ ತೆರೆದುಕೊಂಡಿದ್ದ ಸ್ಥಳವನ್ನು ಹೊಲಿಗೆ ಹಾಕಿರುತ್ತಾರೆ. ಅರವಳಿಕೆಯ ಪ್ರಭಾವ ಕಡಿಮೆಯಾದ ಬಳಿಕ ಈ ಸ್ಥಳದಲ್ಲಿ ನೋವು ಕಾಣಿಸಿಕೊಳ್ಳುವುದು ಸಹಜ.
ನೀವು ನಕ್ಕಾಗಲೂ, ಸೀನಿದಾಗಲೂ ಹಾಗೂ ಕೆಮ್ಮಿದಾಗಲೂ ಈ ಹೊಲಿಗೆಯ ಸುತ್ತಲ ಸ್ನಾಯುಗಳು ಸಂಕುಚಿತಗೊಂಡು ನೋವು ಉಲ್ಬಣಿಸುತ್ತದೆ. ಈ ಗಾಯ ಸಂಪೂರ್ಣವಾಗಿ ಮಾಯುವವರೆಗೂ ಅತ್ಯಂತ ಕಾಳಜಿ ವಹಿಸುವುದು ಮತ್ತು ಸೂಕ್ತ ಆರೈಕೆ ನಡೆಸುವುದು ಅತ್ಯಂತ ಅವಶ್ಯವಾಗಿದೆ. ಇಲ್ಲದಿದ್ದರೆ ಸೋಂಕು ಸುಲಭವಾಗಿ ತಗಲುತ್ತದೆ ಹಾಗೂ ಶೀಘ್ರವೇ ಉದರದ ಇತರ ಭಾಗಗಳಿಗೂ ಆವರಿಸುತ್ತದೆ.

ಅದರಲ್ಲೂ ಹೆರಿಗೆಯ ಬಳಿಕವೂ ಗರ್ಭದ್ವಾರದಿಂದ ಸ್ವಲ್ಪ ಸ್ವಲ್ಪವಾಗಿ ವಿವಿಧ ದ್ರವಗಳು ಸ್ರವಿಸುತ್ತಲೇ ಇರುತ್ತವೆ. ಅದರಲ್ಲಿ ಮುಖ್ಯವಾದುದು ರಕ್ತಸ್ರಾವ, ತಕ್ಷಣ ಶುಚಿಗೊಳಿಸದಿದ್ದಲ್ಲಿ ಸೋಂಕು ತಗಲುವ ಅಪಾಯವಿದೆ. ಇದರಿಂದ ಇನ್ನೂ ಹತ್ತು ಹಲವು ತೊಂದರೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ನಿಮ್ಮ ಬಾಣಂತಿಕಾಲದಲ್ಲಿ ಶುಚಿತ್ವವನ್ನು ಕಾಪಾಡಿ ತಾಯ್ತನದ ಸೊಬಗನ್ನು ಸವಿಯಲು ಕೆಲವು ಆಪ್ತಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಗರ್ಭಸ್ಥಳವನ್ನು ಶುಚಿಯಾಗಿ ಮತ್ತು ಒಣಗಿರುವಂತೆ ನೋಡಿಕೊಳ್ಳುವುದು ಮುಖ್ಯ
ಹೆರಿಗೆಯ ಸಮಯದಲ್ಲಿ ಹಿಗ್ಗಿದ್ದ ಗರ್ಭದ್ವಾರ ಮತ್ತು ಗರ್ಭಾಶಯ ಪುನಃ ಸಂಕುಚಿತಗೊಂಡು ಪೂರ್ವಾವಸ್ಥೆಗೆ ಮರಳಲು ಕೊಂಚ ಸಮಯ ಅಗತ್ಯವಾಗಿದೆ. ಈ ಅವಧಿಯಲ್ಲಿ ಹಲವು ದ್ರವಗಳು ಸ್ರವಿಸುತ್ತವೆ. ಈ ದ್ರವವನ್ನು ಹೀರಿಕೊಳ್ಳಲು ನಿರ್ಮಲವಾದ ಬಟ್ಟೆಯ ಮೆತ್ತೆ (sanitary pad) ಗಳನ್ನು ಉಪಯೋಗಿಸಬೇಕು. ಆದರೆ ಕೊಂಚಕಾಲದಲ್ಲಿಯೇ ದ್ರವವನ್ನು ಹೀರಿಕೊಳ್ಳುವ ಈ ಮೆತ್ತೆಗಳನ್ನು ಶೀಘ್ರವೇ ಬದಲಿಸುವುದು ಅಗತ್ಯ.
ಸ್ರಾವದ ಧಾರೆಯನ್ನು ಪರಿಗಣಿಸಿ ಸೂಕ್ತ ಸಮಯದಲ್ಲಿ ಬದಲಿಸಿ. ಪ್ರಾರಂಭದ ದಿನಗಳಲ್ಲಿ ಎರಡು ಘಂಟೆಗೆ ಬದಲಿಸಬೇಕಾದದ್ದು ಬಳಿಕ ಆರು ಘಂಟೆಗಳಿಗೊಂದು ಸಾಕಾಗುತ್ತದೆ. ಇದರಿಂದ ಗರ್ಭದ್ವಾರದ ಅಷ್ಟೂ ಪ್ರದೇಶ ಒಣದಾಗಿದ್ದು ಶೀಘ್ರ ಪೂರ್ವಾವಸ್ಥೆಗೆ ಮರಳಲು ಸಾಧ್ಯವಾಗುತ್ತದೆ. ಜೊತೆಗೇ ಉಗುರುಬೆಚ್ಚನೆಯ ಬಿಸಿನೀರು ಮತ್ತು ಸೂಕ್ತ ಕೀಟನಾಶಕ ದ್ರವವನ್ನು ಉಪಯೋಗಿಸಿ ತೊಳೆದುಕೊಂಡು ಪ್ರತಿಬಾರಿಯೂ ಹೊಸ ಬಟ್ಟೆ ಅಥವಾ ಟವೆಲ್ ನಿಂದ ಸ್ವಚ್ಛಗೊಳಿಸುತ್ತಾ ಇರುವುದೂ ಅತ್ಯಂತ ಅಗತ್ಯವಾಗಿದೆ. ಇದರಿಂದ ನೋವು ಶೀಘ್ರವಾಗಿ ಗುಣವಾಗುತ್ತದೆ ಹಾಗೂ ಊತ, ಉರಿತ, ತುರಿಕೆ ಮೊದಲಾದ ತೊಂದರೆಗಳೂ ಇಲ್ಲವಾಗುತ್ತದೆ.
ಟ್ಯಾಂಪೊನ್ ಗಳನ್ನು ಉಪಯೋಗಿಸಬೇಡಿ, ಸ್ಯಾನಿಟರಿ ಪ್ಯಾಡ್‌ಗಳನ್ನೇ ಉಪಯೋಗಿಸಿ
ಹೆರಿಗೆಯ ಬಳಿಕವೂ ಸುಮಾರು ಎರಡು ವಾರಗಳವರೆಗೆ ರಕ್ತಸ್ರಾವವಾಗುತ್ತಲೇ ಇರುವುದು ಸ್ವಾಭಾವಿಕವಾಗಿದೆ. ಒಂಭತ್ತು ತಿಂಗಳು ಕಂದನ ಆರೈಕೆ ಮಾಡಿದ ಗರ್ಭಕೋಶ ತನ್ನ ಪೂರ್ವಸ್ಥಿತಿಗೆ ಮರಳಲು ಈ ಅವಧಿಯಲ್ಲಿ ಪಡೆದುಕೊಂಡಿದ್ದ ಬೆಳವಣಿಗೆಗಳನ್ನು ನಿಧಾನವಾಗಿ ವಿಸರ್ಜಿಸುವುದೇ ಈ ಸ್ರಾವಕ್ಕೆ ಕಾರಣ. ಇತ್ತೀಚಿನ ದಿನಗಳಲ್ಲಿ ಗರ್ಭನಾಳದ ಬುಡದವೆರೆಗೆ ತೂರಿಕೊಂಡು ಎಲ್ಲಾ ಸ್ರಾವವನ್ನು ಹೀರಿಕೊಳ್ಳುವ ಸಾಧನವಾದ ಟ್ಯಾಂಪೊನ್ ಗಳು ಔಷಧಿ ಅಂಗಡಿಯಲ್ಲಿ ಲಭ್ಯವಿವೆ. ಹೆರಿಗೆಯ ಬಳಿಕ ಈ ಟ್ಯಾಂಪೊನ್ ಗಳು ಸೂಕ್ತವಲ್ಲ. ಏಕೆಂದರೆ ಪ್ರಸವದ ಬಳಿಕ ಗರ್ಭದ್ವಾರದ ಒಳಭಾಗಗಳು ಅತ್ಯಂತ ಸೂಕ್ಷ್ಮವಾಗಿದ್ದು ಟ್ಯಾಂಪೋನುಗಳ ಬಳಕೆ ಘಾಸಿಯುಂಟುಮಾಡಬಹುದು. ಅಲ್ಲದೇ ಹೀರಿಕೊಂಡ ದ್ರವ ಟ್ಯಾಂಪೋನ್ ಹೊರತೆಗೆಯುವಷ್ಟೂ ಕಾಲ ಒಳಭಾಗದಲ್ಲಿ ಸಂಪರ್ಕದಲ್ಲಿರುವುದರಿಂದ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಇದಕ್ಕಾಗಿ ಬಟ್ಟೆಯ ಮೆತ್ತೆ (sanitary pad)ಗಳೇ ಅತ್ಯುತ್ತಮವಾಗಿವೆ. ಗರ್ಭಾವಸ್ಥೆಯಲ್ಲಿ ರಕ್ತಸ್ರಾವ: ಮಗುವಿನ ಮೇಲೆ ಪರಿಣಾಮ ಬೀರಬಹುದೇ?
ಮಂಜಿನ ಪೊಟ್ಟಣಗಳನ್ನು ಉಪಯೋಗಿಸಬಹುದು
ಕೆಲವೊಮ್ಮೆ ಗರ್ಭನಾಳದ ಸ್ಥಳದಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳಬಹುದು. ಈ ನೋವನ್ನು ಕಡಿಮೆಗೊಳಿಸಲು ಅರವಳಿಕೆ ಅಥವಾ ನೋವು ನಿವಾರಕ ಗುಳಿಗೆಗಳನ್ನು ಉಪಯೋಗಿಸುವುದು ಈಗಾಗಲೇ ಜರ್ಝರಿತವಾಗಿರುವ ಬಾಣಂತಿಯರ ದೇಹಕ್ಕೆ ಉತ್ತಮವಲ್ಲ. ಈ ಸಂದರ್ಭದಲ್ಲಿ ವೈದ್ಯರು ಮಂಜಿನ ಪೊಟ್ಟಣ (Ice packs) ಗಳನ್ನು ಉಪಯೋಗಿಸಲು ಸಲಹೆ ನೀಡುತ್ತಾರೆ. ಈ ಪೊಟ್ಟಣವನ್ನು ಅಗಲವಾದ ಪ್ಲಾಸ್ಟಿಕ್ ಪೊಟ್ಟಣದಲ್ಲಿ ಹರಡಿ ಊತದ ಸ್ಥಳದಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷವಿರಿಸಿದರೆ ಊತ ಕಡಿಮೆಯಾಗುತ್ತದೆ. ಆದರೆ ಈ ಪೊಟ್ಟಣವನ್ನು ನೇರವಾಗಿ ಚರ್ಮದ ಮೇಲೆ ಇರಿಸಬಾರದು. ಸ್ವಚ್ಛವಾದ ಮತ್ತು ತೆಳುವಾದ ಬಿಳಿಯ ಬಟ್ಟೆಯನ್ನು ಹರಡಿ ಅದರ ಮೇಲೆ ಮಂಜಿನ ಪೊಟ್ಟನವನ್ನಿರಿಸುವುದು ಅಗತ್ಯವಾಗಿದೆ.
ನಂಜುನಿರೋಧಕ (Antiseptic) ಉಪಯೋಗಿಸಿ ಆಗಾಗ ಸ್ವಚ್ಛಗೊಳಿಸುತ್ತಿರಿ
ಈಗ ಮಹಿಳೆಯರ ಗೋಪ್ಯಸ್ಥಳಗಳಿಗಾಗಿಯೇ ವಿಶೇಷವಾದ ಸ್ವಚ್ಛತಾದ್ರವಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ವೈದ್ಯರ ಸಲಹೆ ಮೇರೆಗೆ ಈ ನಂಜುನಿರೋಧಕ ದ್ರವವನ್ನು ಉಪಯೋಗಿಸಿ ಆಗಾಗ ಗರ್ಭಸ್ಥಳವನ್ನು ಸ್ವಚ್ಛಗೊಳಿಸುತ್ತಿರಬೇಕು. ಇದರಿಂದ ಹೊರಗಿನಿಂದ ಸೋಂಕಾಗುವುದೂ, ಒಂದು ವೇಳೆ ಸೋಂಕು ಈಗತಾನೇ ಪ್ರಾರಂಭವಾಗಿದ್ದರೆ ಅದನ್ನು ನಿವಾರಿಸಿ ಇನ್ನಷ್ಟು ಹೆಚ್ಚದಿರುವಂತೆ ತಡೆಯಲೂ ಸಾಧ್ಯವಾಗುತ್ತದೆ. ಒಂದು ವೇಳೆ ಈ ದ್ರವ ಸಿದ್ಧರೂಪದಲ್ಲಿ ಸಿಗದಿದ್ದರೆ ಡೆಟಾಲ್ ನಂತಹ ನಂಜುನಿವಾರಕವನ್ನು ನೀರಿನಲ್ಲಿ ಮಿಶ್ರಣಗೊಳಿಸಿ ಸಾರಗುಂದಿಸಿ ಉಪಯೋಗಿಸಬೇಕು. ಅಲ್ಲದೇ ಹೊಲಿಗೆ ಹಾಕಿರುವ ಸ್ಥಳದಲ್ಲಿ ವಿಶೇಷ ಕಾಳಜಿ ವಹಿಸಿ ಸ್ವಲ್ಪ ಎತ್ತರದಿಂದ ಈ ದ್ರವ ಬೀಳುವಂತೆ ಮಾಡುವುದರಿಂದ ಹೊಲಿಗೆಗಳ ಸೂಕ್ಷ್ಮ ರಂಧ್ರಗಳ ಒಳಗೂ ಈ ದ್ರವ ತೂರಿ ಉತ್ತಮ ಸ್ವಚ್ಛತೆ ಮತ್ತು ರಕ್ಷಣೆಯನ್ನು ನೀಡುತ್ತದೆ.
ಹೆರಿಗೆಯ ಬಳಿಕ ಮಾಡಬೇಕಾದ ವ್ಯಾಯಾಮಗಳು
ಹೆರಿಗೆ ಬಳಿಕ ರಕ್ತಸ್ರಾವ ನಿಧಾನವಾಗಿ ಆಗುತ್ತಿದ್ದರೂ ಉಳಿದ ಕಾರ್ಯಗಳನ್ನು ನಿರ್ವಹಿಸಲು ನಿಧಾನವಾಗಿ ದೇಹ ಸನ್ನದ್ಧಗೊಳ್ಳುತ್ತಾ ಹೋಗುತ್ತದೆ. ಆದರೆ ಗರ್ಭನಾಳದ ಸ್ಥಳದ ಸ್ನಾಯುಗಳಿಗೂ ವ್ಯಾಯಾಮ ಅಗತ್ಯವಾಗಿದೆ. ಯಾವ ವ್ಯಾಯಾಮಗಳಿಂದ ನಿಮ್ಮ ಹೊಲಿಗೆಯ ಸ್ಥಳದಲ್ಲಿ ನೋವು ಉಂಟಾಗುವುದಿಲ್ಲವೋ ಆ ವ್ಯಾಯಾಮಗಳನ್ನು ಹೆರಿಗೆಯ ನಂತರ ಮೂರು ಅಥವಾ ನಾಲ್ಕು ದಿನಗಳಿಂದಲೇ ಪ್ರಾರಂಭಿಸಬಹುದು. ಇದರಿಂದ ಎಲ್ಲಾ ಸ್ನಾಯುಗಳಿಗೆ ವ್ಯಾಯಾಮ ದೊರೆತು ರಕ್ತಸಂಚಾರ ಹೆಚ್ಚುವುದರಿಂದ ಶೀಘ್ರವಾಗಿ ಗಾಯ ಮಾಗಿ ಪೂರ್ವ ಸ್ಥಿತಿಗೆ ಮರಳಲು ಸಾಧ್ಯವಾಗುತ್ತದೆ. ಜೊತೆಗೇ ಸೋಂಕಿನಿಂದ ರಕ್ಷಿಸಿಕೊಳ್ಳಲೂ ಹೆಚ್ಚು ಸಮರ್ಥವಾಗುತ್ತದೆ. ನಿಮ್ಮ ವೈದ್ಯರು ನಿಮಗೆ ಸೂಕ್ತವಾದ ವ್ಯಾಯಾಮಗಳನ್ನು ಸೂಚಿಸಬಲ್ಲರು.
ಸರಿಯಾದ ಸ್ವಚ್ಛತಾ ಕ್ರಮವನ್ನೇ ಅನುಸರಿಸಿ
ಹೆರಿಗೆಯ ಬಳಿಕ ಮಲವಿಸರ್ಜನೆ ಕೊಂಚ ಕಷ್ಟಕರವಾದ ಅನುಭವವಾಗಿದೆ. ಏಕೆಂದರೆ ಇದರಿಂದ ಹೊಲಿಗೆ ಹಾಕಿರುವ ಸ್ಥಳಕ್ಕೆ ಹೆಚ್ಚಿನ ಒತ್ತಡ ಬಿದ್ದು ನೋವು ಮರುಕಳಿಸುತ್ತದೆ. ಆದರೆ ವಿಸರ್ಜನೆಯ ಬಳಿಕ ತೊಳೆದುಕೊಳ್ಳುವ ಕ್ರಮ ಸರಿಯಾಗಿರದಿದ್ದಲ್ಲಿ ಸೋಂಕುಂಟಾಗುವ ಅಪಾಯವಿದೆ. ಯಾವಾಗಲೂ ಗರ್ಭನಾಳದಿಂದ ಆಸನದ್ವಾರದವರೆಗೆ (ಮುಂದಿನಿಂದ ಹಿಂದಕ್ಕೆ) ಮಾತ್ರ ಉಜ್ಜಿರಿ, ಸರ್ವಥಾ ಇದರ ವಿರುದ್ದ ದಿಕ್ಕಿನಲ್ಲಿ ಸಲ್ಲದು. ಏಕೆಂದರೆ ಈ ದಿಕ್ಕಿನಲ್ಲಿ ಉಜ್ಜುವುದರಿಂದ ಸೋಂಕುಕಾರಕ ವಸ್ತುಗಳು ಹೊಲಿಗೆಯ ಅಥವಾ ಗಾಯದ ಒಳಕ್ಕೆ ಇಳಿಯುವ ಅಪಾಯವಿರುತ್ತದೆ.
ವೈದ್ಯರನ್ನು ಕಂಡು ಸೂಕ್ತ ಸಲಹೆ ಪಡೆದುಕೊಳ್ಳಿ
ಹೆರಿಗೆಯ ಬಳಿಕ ಬಾಣಂತಿಯ ಸ್ಥಿತಿಯನ್ನು ಪರಾಮರ್ಶಿಸಿದ ಬಳಿಕ ವೈದ್ಯರು ಮನೆಗೆ ತೆರಳಲು ತಿಳಿಸುತ್ತಾರೆ. ಮನೆಗೆ ಬಂದ ಬಳಿಕ ಒಂದು ವೇಳೆ ಊತ, ನೋವು ಅಥವಾ ಸ್ರಾವದಲ್ಲಿ ವಾಸನೆ ಮೊದಲಾದ ಯಾವುದೇ ತೊಂದರೆ ಕಂಡುಬಂದರೂ ತಡಮಾಡದೇ ವೈದ್ಯರನ್ನು ಕಂಡು ತಪಾಸಿಸಿಕೊಳ್ಳಿ. ಏಕೆಂದರೆ ಇದು ಒಳಗಣ ಯಾವುದೇ ಸೋಂಕಿನಿಂದ ಉಂಟಾಗಿರಬಹುದು. ಒಂದು ವೇಳೆ ವೈದ್ಯರನ್ನು ಕಾಣಲು ತಡಮಾಡಿದರೆ ಸೋಂಕು ಹೆಚ್ಚುತ್ತಾ ಇತರ ತೊಂದರೆಗಳು ಪ್ರಾರಂಭವಾಗಬಹುದು. ಹೆರಿಗೆಯ ನಂತರ ತಾಯಿಯ ಕಾಳಜಿಗಾಗಿ ಸಲಹೆಗಳು
ಇತರ ಆಪ್ತಸಲಹೆಗಳು
* ಬಾಣಂತನದ ಅವಧಿ ಪೂರ್ಣವಾಗಿ ಮುಗಿಯುವವರೆಗೂ ವೈದ್ಯರ ಸೇವೆ ಹತ್ತಿರದಲ್ಲಿಯೇ ಸಿಗುವಂತಹ ಸ್ಥಳದಲ್ಲಿದ್ದರೆ ಉತ್ತಮ. ಹಳ್ಳಿ ಪ್ರದೇಶದ ಮಹಿಳೆಯರು ಈ ದೂರದ ಕಾರಣ ತಡವಾಗಿ ಆಗಮಿಸಿ ಹಲವು ತೊಂದರೆಗಳಿಗೆ ಸಿಲುಕಿಕೊಳ್ಳುವುದನ್ನು ವೈದ್ಯರು ಗಮನಿಸಿದ್ದಾರೆ.
* ಪ್ರತಿದಿನ ಬಿಸಿನೀರಿನ ಸ್ನಾನ ಅತ್ಯಗತ್ಯವಾಗಿದೆ. ಜೊತೆಗೆ ಎಣ್ಣೆಯ ಮಸಾಜ್ ಮಾಡಿದರೂ ಒಳಿತು.
* ಹಿಗ್ಗಿದ್ದ ಹೊಟ್ಟೆಯ ಭಾಗದಲ್ಲೆಲ್ಲಾ ನೆರಿಗೆಯ ಕಲೆಗಳು ಮೂಡಿರುತ್ತವೆ (stretch marks). ಈ ಕಲೆಗಳನ್ನು ಹೋಗಲಾಡಿಸಲು ಸೂಕ್ತ ಔಷಧಿಗಳನ್ನು ಈಗಿನಿಂದಲೇ ವೈದ್ಯರ ಸಲಹೆಯ ಮೇರೆಗೆ ಉಪಯೋಗಿಸುವುದರಿಂದ ಶೀಘ್ರವಾಗಿ ಮಾಯವಾಗುತ್ತವೆ. ಬಳಿಕ ನೋಡುವಾ ಎಂದು ಉದಾಸೀನ ಮಾಡಿದರೆ ಈ ಕಲೆಗಳು ಶಾಶ್ವತವಾಗಿ ಉಳಿದುಕೊಳ್ಳುತ್ತವೆ.
* ಎರಡು ವಾರಗಳ ಬಳಿಕ ಗರ್ಭಕೋಶ ಹೆಚ್ಚೂ ಕಡಿಮೆ ಪೂರ್ವಸ್ಥಿತಿಗೆ ಮರಳುತ್ತದೆ. ವಾಸ್ತವವೆಂದರೆ ಈ ದಿನದಿಂದಲೇ ಹೊಸ ಅಂಡ ಗರ್ಭಾಶಯಕ್ಕೆ ಆಗಮನವಾಗುತ್ತದೆ. ಅಂದರೆ ಮತ್ತೊಮ್ಮೆ ಗರ್ಭಧರಿಸುವ ಸ್ಥಿತಿಗೆ ದೇಹ ಮರಳಿರುವ ಸೂಚನೆ. ಎಷ್ಟೇ ಪ್ರಬಲವಾದ ಕಾರಣವಿದ್ದರೂ ಈ ಸಮಯ ಹೊಸ ಗರ್ಭಕ್ಕೆ ಸೂಕ್ತ ಸಮಯವಲ್ಲ! ಕನಿಷ್ಟ ಮುಂದಿನ ಮೂರು ವರ್ಷಗಳವರೆಗೆ ಗರ್ಭಧರಿಸದಿರಲು ಕ್ರಮ ಕೈಗೊಳ್ಳಿ.
* ಪೂರ್ಣಪ್ರಮಾಣದಲ್ಲಿ ದೇಹ ಮೊದಲಿನಂತಾಗಲು ನಲವತ್ತು ದಿನಗಳು ಬೇಕು ಎಂಬುವುದು ಪ್ರಸೂತಿತಜ್ಞರ ಅಭಿಪ್ರಾಯವಾಗಿದೆ. ಈ ಅಭಿಪ್ರಾಯವನ್ನು ಪರಿಗಣಿಸಿ, ಕೇವಲ ಸುಲಭ ವ್ಯಾಯಾಮ ಮತ್ತು ಮನೆಗೆಲಸಗಳನ್ನು ಮಾತ್ರ ನಿರ್ವಹಿಸಿ. ಇತರ ಕೆಲಸಗಳಿಗೆ ಸಹಾಯ ಪಡೆದುಕೊಳ್ಳಿ.



Click it and Unblock the Notifications

















