Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ತಾಯ್ತನದ ನಂತರವೂ ಸೌಂದರ್ಯ ಕಾಪಾಡುವುದು ಹೇಗೆ?
ಮಹಿಳೆಯರಿಗೆ ತಾಯ್ತನದಲ್ಲಿ ಸುಂದರವಾಗಿ ಕಾಣುವುದು ಎಂದರೆ ಒಂದು ಸವಾಲೇ ಸರಿ. ಕೆಲವು ತಾಯಂದಿರಿಗೆ ಕೆಲಸದ ಒತ್ತಡಗಳ ನಡುವೆ ತಮ್ಮ ಬಗ್ಗೆ ತಾವು ಗಮನಿಸುವಷ್ಟು ಸಮಯವೇ ಇರುವುದಿಲ್ಲ. ಇನ್ನೂ ಕೆಲವು ತಾಯಂದಿರಿಗೆ ತಮ್ಮ ಸೌಂದರ್ಯದ ಬಗ್ಗೆ ಗಮನಿಸಲು ಅವರಲ್ಲಿ ಹಣವೇ ಇರುವುದಿಲ್ಲ. ಮನೆಯಲ್ಲಿಯೇ ಇರುವ ತಾಯಂದಿರಿಗೆ ಹೊರಗಡೆ ಹೋದಾಗ ಹೇಗೆ ಕಾಣಬೇಕು ಎನ್ನುವುದರ ಬಗ್ಗೆ ಹೆಚ್ಚು ಗಮನವಿರುವುದಿಲ್ಲ. ತಾಯಿಯಾದ ಮೇಲೂ ನೀವು ಮೊದಲಿನಂತೆಯೇ ಹೇಗೆ ಸುಂದರವಾಗಿ ಕಾಣಬೇಕು ಎನ್ನುವುದರ ಬಗ್ಗೆ ಇಲ್ಲಿ ಕೆಲವು ಸಲಹೆಗಳಿವೆ.
ಹಂತಗಳು :
1. ತುಂಬಾ ಸ್ವಚ್ಚವಾಗಿರಿ: ಇದೊಂದು ಮೂಲಭೂತ ವಿಷಯ. ಜೊತೆಗೆ ಸುಂದರವಾಗಿ ಕಾಣುವುದಕ್ಕೆ ಇದು ಮೊದಲ ನಿಯಮ ಕೂಡ. ನೀವು ಚಿಕ್ಕ ಮಗುವಿನ ತಾಯಿಯಾಗಿದ್ದರೆ ದಿನಕ್ಕೆ ಎರಡು ಬಾರಿಯಾದರೂ ಸ್ನಾನ ಮಾಡುವುದು ಒಳ್ಳೆಯದು. ಕೂದಲಿಗೆ ಶಾಂಪೂ ಕಂಡೀಷನರ್ ಹಾಕುವುದನ್ನು ಮರೆಯಬೇಡಿ. ಜೊತೆಗೆ ಮುಖವನ್ನು ಚೆನ್ನಾಗಿ ತೊಳೆಯಿರಿ. ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆಯುವುದು ಇನ್ನೂ ಉತ್ತಮ.
ಬೇಡವಾದ ಕೂದಲುಗಳನ್ನು ತೆಗೆಯಿರಿ. ನಿಮ್ಮ ಕೈ ಕಾಲುಗಳನ್ನು ಹಾಗೂ ಕಂಕುಳಗಳ ಕೂದಲನ್ನು ಸ್ವಚ್ಚವಾಗಿಡಿ. ಪ್ರತಿ ವಾರಕ್ಕೊಮ್ಮೆ ಇದರ ಬಗ್ಗೆ ಗಮನಕೊಡಬೇಕು.

2. ಸರಳವಾದ ಹಾಗೂ ನೂತನ ಶೈಲಿಯ ಕೂದಲ ಸ್ಟೈಲ್ ಮಾಡಿಸಿಕೊಳ್ಳಿ. ನಿಮ್ಮ ಮುಖಕ್ಕೆ ಚೆನ್ನಾಗಿ ಕಾಣಿಸುತ್ತದೆಯೆಂದಾದರೆ ಕೂದಲಿಗೆ ಕಲರ್ ಕೂಡಾ ಮಾಡಬಹುದು. ನಿಮ್ಮ ಹುಬ್ಬುಗಳೂ ಕೂಡಾ ಕೂದಲಿನ ಹೊಸ ಶೈಲಿಗೆ ಹೊಂದುಕೊಳ್ಳುವಂತಿರಲಿ. ನಿಮ್ಮ ಹಳೆಯ ಶೈಲಿಯನ್ನು ಬದಲಾಯಿಸಿ ಸುಂದರವಾದ ತಾಯಿಯಂತೆ ಕಾಣಲು ಸಿದ್ಧರಾಗಿ !
3. ನಿಮ್ಮ ಮುಖಕ್ಕೆ ಮಾಡುವ ಮೇಕಪ್ ತುಂಬಾ ಸರಳವಾಗಿರಲಿ. ಆದರೆ ಮೇಕಪ್ ಮಾಡದೇ ಹೊರಗಡೆ ಹೋಗಬೆಡಿ. ನಿಮ್ಮ ತ್ವಚೆಗೆ ಯಾವಾಗಲೂ ಮಾಯಿಶ್ಚರೈಸರ್ ಕ್ರೀಮ್ ನ್ನು ಬಳಸುತ್ತಲೇ ಇರಿ. ತ್ವಚೆ ಬಿರುಕು ಬಿಟ್ಟರೆ ಚೆನ್ನಾಗಿ ಕಾಣಿಸುವುದಿಲ್ಲ. ಸನ್ ಸ್ಕ್ರೀನ್ ಲೋಶನ್ ಕೂಡ ಹಚ್ಚುತ್ತಿರಿ. ಮುಖದಲ್ಲಿ ಕಪ್ಪು ಕಲೆ ಬೀಳದಂತೆ ನೋಡಿಕೊಳ್ಳಿ. ನಿಮಗೆ ಸಮಯವಿದ್ದರೆ ಕಣ್ಣಿಗೆ ಕಪ್ಪು ಹಾಕುವುದನ್ನು ಮರೆಯಬೇಡಿ. ನಿಮ್ಮ ಹುಬ್ಬುಗಳು ಸಾಕಷ್ಟು ಸರಿಯಾಗಿರಲಿ. ಹೆಚ್ಚಾಗಿ ಹುಬ್ಬುಗಳಲ್ಲಿ ಕೂದಲು ಇರುವುದು ಕೆಟ್ಟದಾಗಿ ಕಾಣುಸುತ್ತದೆ.
4. ಕಡಿಮೆ ಖರ್ಚಿನ ಹಾಗೂ ಸರಳವಾದ ಮೇಕಪ್ ಕಿಟ್ ಇಟ್ಟುಕೊಳ್ಳಿ. ಮುಖದಲ್ಲಿ ಹೆಚ್ಚು ಬೆವರು ಬರದಂತೆ ಎಚ್ಚರವಹಿಸಿ. ನೀವು ತೊಡುವ ಬಟ್ಟೆಗಳಲ್ಲಿಯೂ ಜಾಗ್ರತೆವಹಿಸಿ. ಜೀನ್ಸ್ ತೊಡುವುದಾದರೆ ಅದಕ್ಕೆ ತಕ್ಕ ಹಾಗೆ ಕಡಿಮೆ ಎತ್ತರದ ಲೆದರ್ ಚಪ್ಪಲಿಗಳನ್ನು ಬಳಸಿ. ಚೂಡಿದಾರ ಹಾಕುವುದಾದರೆ ಅದಕ್ಕೆ ತಕ್ಕಂತೆ ಚಪ್ಪಲಿಗಳನ್ನು ಹಾಕಿಕೊಂಡು ಹೋಗಿ. ಬೇಸಿಗೆ ಕಾಲದಲ್ಲಿ ಉಣ್ಣೆ ಬಟ್ಟೆಗಳನ್ನು ತೊಡಬೇಡಿ. ತೆಳುವಾದ ಬಟ್ಟೆಗಳನ್ನೇ ಉಪಯೋಗಿಸಿ.ನಾವು ತೊಡುವ ಬಟ್ಟೆ ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ ಎನ್ನುವುದು ನೆನಪಿರಲಿ.
5. ಪ್ರತಿದಿನ ಹಾಕಿಕೊಳ್ಳುವುದಕ್ಕಾಗಿ ಸರಳವಾದ ಆಭರಣಗಳನ್ನೇ ಬಳಸಿ. ದಿನವೂ ಅತಿಯಾಗಿ ಆಭರಣಗಳನ್ನು ಹಾಕಿಕೊಳ್ಳುವುದು ಚೆನ್ನಾಗಿ ಕಾಣಿಸುವುದಿಲ್ಲ.
6. ಆಗಾಗ ಕಾಲು ಕೈ ಉಗುರುಗಳಿಗೆ (ಮ್ಯಾನಿಕ್ಯೂರ್ ಮತ್ತು ಪೆಡಿಕ್ಯೂರ್) ಶೇಪ್ ಕೊಡುತ್ತಾ ಇರಿ. ಇದಕ್ಕಾಗಿ ಪಾರ್ಲರ್ ಗಳಿಗೆ ಹೋಗಬೇಕೆಂದೇನೂ ಇಲ್ಲ. ನೀವು ಮನೆಯಲ್ಲಿಯೇ ಮಾಡಿಕೊಳ್ಳಬಹುದಾಗಿದೆ.
7. ವ್ಯಾಯಾಮವನ್ನು ರೂಢಿಸಿಕೊಳ್ಳಿ ದೇಹವು ಆರೋಗ್ಯವನ್ನು ಸೌಂದರ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮಕ್ಕಿಂತ ಒಳ್ಳೆಯ ಮಾರ್ಗ ಬೇರೊಂದಿಲ್ಲ. ನೀವು ಮನೆಯಲ್ಲೆ ಇರುವಾಗ ಪ್ರತಿ ದಿನ ಮಗುವನ್ನು ಕರೆದುಕೊಂಡು ಹೊರಗೆ ನಡೆಯುವುದನ್ನೂ ರೂಢಿಸಿಕೊಳ್ಳಿ. ಇದರಿಂದ ದೇಹಕ್ಕೆ ಇನ್ನಷ್ಟು ಶಕ್ತಿ ದೊರೆಯುತ್ತದೆ. ಟಿ.ವಿಯಲ್ಲಿ ಬರುವ ವ್ಯಾಯಾಮಗಳನ್ನು ನೋಡಿಯೂ ನೀವು ಅಭ್ಯಾಸ ಮಾಡಿಕೊಳ್ಳಬಹುದು.
8. ಹಲ್ಲುಗಳ ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮ ನಗು ಅತ್ಯಂತ ಸುಂದರವಾಗಿರಬೇಕೆಂದರೆ ನಮ್ಮ ಹಲ್ಲುಗಳು ಸ್ವಚ್ಚವಾಗಿ ಹೊಳೆಯುತ್ತಿರಬೇಕು. ಹಲ್ಲು ಸ್ವಚ್ಚಗೊಳಿಸಲು ಡಾಕ್ಟರ್ ನ್ನು ಕೂಡಾ ಭೇಟಿ ಮಾಡುವುದು ಉತ್ತಮ.
9. ಶಾಂತವಾಗಿ ಹಾಗೂ ವಿನಮ್ರತೆಯಿಂದ ವರ್ತಿಸಿ ನಿಮ್ಮ ವರ್ತನೆಯೇ ನಿಮ್ಮ ಸೌಂದರ್ಯಕ್ಕೆ ಹಿಡಿದ ಕೈಗನ್ನಡಿ. ನೀವು ಮನೆಯಲ್ಲಿಯೇ ಇರುವವರಾಗಿದ್ದರೆ ಮನೆಯಿಂದ ವಾರಕ್ಕೆ ಒಮ್ಮೆಯಾದರೂ ಹೊರಗಡೆ ಹೋಗಿ. ಇದರಿಂದ ಮನಸ್ಸೂ ಪ್ರಶಾಂತವಾಗಿರುತ್ತದೆ. ಹೆಚ್ಚು ಉದ್ವೇಗದಿಂದ ಕೂಗುವುದು ಮಾತನಾಡುವುದನ್ನು ಮಾಡಬೇಡಿ ಇದು ನೋಡುವವರ ಕಣ್ಣಿನಲ್ಲೂ ನಿಮ್ಮ ಬಗ್ಗೆ ಅಸಮಾಧಾನ ಮೂಡಿಸುತ್ತದೆ. ಅಲ್ಲದೇ ಇದು ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ.
ಸೂಚನೆಗಳು :
ಯಾವುದೇ ವ್ಯಾಯಾಮವನ್ನು ರೂಢಿಸಿಕೊಳ್ಳುವುದಕ್ಕೆ ಮೊದಲು ವೈದ್ಯರನ್ನು ಭೇಟಿ ಮಾಡಿ. ಅದರಲ್ಲೂ ನೀವು ಇತ್ತೀಚಿಗೆ ಹೆರಿಗೆ ಯಾಗಿದ್ದರೆ ವೈದ್ಯರ ಸಲಹೆಯನ್ನು ಕೇಳಲೇ ಬೇಕು.



Click it and Unblock the Notifications