ಹೆರಿಗೆಯ ನಂತರ ತಿನ್ನಬೇಕಾದ ಆಹಾರಗಳು

ಗರ್ಭಾವಸ್ಥೆಯ ಸಂದರ್ಭದಲ್ಲಿ ಗರ್ಭಿಣಿಯರು ಆರೋಗ್ಯಕರ ಮಗುವಿಗೆ ಜನ್ಮ ನೀಡುವ ಸಲುವಾಗಿ ಹಲವು ರೀತಿಯ ಆಹಾರಗಳಿಂದ ದೂರವುಳಿಯಬೇಕಾಗುತ್ತದೆ. ಆದರೆ ಮಗುವಿನ ಜನನದ ನಂತರ ತಾಯಿಗೆ ಹಲವು ರೀತಿಯ ಆಹಾರವನ್ನು ತಿನ್ನಲು ಮನಸ್ಸಾಗುತ್ತದೆ. ಪರಿಣಿತರ ಪ್ರಕಾರ ಯಾವುದನ್ನು ಗರ್ಭಿಣಿಯಾಗಿದ್ದಾಗ ತಿನ್ನಬಾರದು ಅಂತಹ ಆಹಾರಗಳನ್ನು ಮಗುವಿನ ಜನನದ ನಂತರ ತಾಯಿ ಆರಾಮವಾಗಿ ತಿನ್ನಬಹುದು.

ಕೆಳಗೆ ಕೊಟ್ಟಿರುವ ಆಹಾರಗಳಲ್ಲಿ ಕ್ಯಾಲೊರಿಗಳು ಹೆಚ್ಚಿದ್ದು ಹೆರಿಗೆಯ ನಂತರ ತೂಕ ಹೆಚ್ಚಿಸುವ ಸಾಧ್ಯತೆ ಕೂಡ ಇರುತ್ತದೆ. ಆದ್ದರಿಂದ ತೂಕವನ್ನು ನಿಯಂತ್ರಣದಲ್ಲಿರಿಸಿಕೊಳ್ಳುವ ಚಾಲೆಂಜನ್ನು ತಾಯಿ ತೆಗೆದುಕೊಳ್ಳಬೇಕಾಗುತ್ತದೆ. ಕೆಲವು ತಾಯಂದಿರು ಈ ಕೆಳಗೆ ಕೊಟ್ಟಿರುವ ಆಹಾರಗಳನ್ನು ತಿನ್ನುವುದರಿಂದ ಮಗುವಿನ ಆರೋಗ್ಯ ಕೆಡಬಹುದು ಎಂದು ಯೋಚಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಈ ಆಹಾರಗಳನ್ನು ಹೆಚ್ಚಾಗಿ ತಿಂದಲ್ಲಿ ಈ ರೀತಿಯಾಗುವ ಸಾಧ್ಯತೆಯಿರುತ್ತದೆ.

ಮುಖ್ಯವಾಗಿ ತಾಯಂದಿರು ನೆನಪಿನಲ್ಲಿಡಬೇಕಾದ ಅಂಶವೆಂದರೆ ಇವುಗಳನ್ನು ಹೆಚ್ಚಾಗಿ ಸೇವಿಸಬಾರದು. ಇವುಗಳನ್ನು ಹೆಚ್ಚಾಗಿ ತಿನ್ನುವುದರಿಂದ ಹೊಟ್ಟೆಕೆಡಬಹುದು ಅಥವ ವಾಂತಿಯಾಗಬಹುದು. ಗಂಟೆಗಳ ಹೆರಿಗೆ ನೋವು ಮತ್ತು ಹೆರಿಗೆಯ ನಂತರ ಆತಂಕಗೊಂಡ ಮನೆಯವರು ಬಾಣಂತಿಯರಿಗೆ ಹೆಚ್ಚು ಆರೋಗ್ಯಕರವಾದ ಆಹಾರವನ್ನೇ ನೀಡಲು ಬಯಸುತ್ತಾರೆ.

ಹೆರಿಗೆಯ ನಂತರ ತಿನ್ನಬೇಕಾದ ಆಹಾರಗಳು:

ಪಾಸ್ತಾ

ಪಾಸ್ತಾ

ಹೆರಿಗೆಯ ನಂತರ ತಿನ್ನಬಹುದಾದ ಒಳ್ಳೆಯ ಆಹಾರಗಳಲ್ಲಿ ಪಾಸ್ತಾ ಕೂಡ ಒಂದು. ಇದರಲ್ಲಿ ಹೆಚ್ಚಿನ ಕ್ಯಾಲೊರಿಗಳಿದ್ದು ಹೆರಿಗೆಯ ನಂತರ ನಿಶ್ಯಕ್ತಳಾದ ತಾಯಿಗೆ ಶಕ್ತಿಯನ್ನು ಒದಗಿಸುತ್ತದೆ.

ಚೀಸ್

ಚೀಸ್

ಈ ಹಾಲಿನ ಉತ್ಪನ್ನದಲ್ಲಿ ಕ್ಯಾಲ್ಸಿಯಂ ಹೆಚ್ಚಿರುತ್ತದೆ. ಇದು ಸ್ತನಪಾನ ಮಾಡಿಸುವ ತಾಯಂದಿರಿಗೆ ಒಳ್ಳೆಯದು.

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ಹೆರಿಗೆಯ ನಂತರ ನೀವು ತಿನ್ನಬಹುದಾದ ಅಸಂಖ್ಯ ಸಿಟ್ರಸ್ ಹಣ್ಣುಗಳಿವೆ. ಕಿತ್ತಳೆ ಹಣ್ಣು, ಅನಾನಸ್, ದ್ರಾಕ್ಷಿ ಹಣ್ಣುಗಳು ಇವುಗಳಲ್ಲಿ ಕೆಲವು. ಆದರೆ ಇವುಗಳನ್ನು ಮಿತವಾಗಿ ತಿನ್ನುವುದು ಒಳ್ಳೆಯದು ಇಲ್ಲಿದಿದ್ದರೆ ಶೀತ ಕಟ್ಟಿಟ್ಟ ಬುತ್ತಿ.

ಸೂರ್ಯಕಾಂತಿಯ ಬೀಜಗಳು

ಸೂರ್ಯಕಾಂತಿಯ ಬೀಜಗಳು

ಸೂರ್ಯಕಾಂತಿಯ ಬೀಜಗಳಲ್ಲಿ ಫೊಲಿಕ್ ಆ್ಯಸಿಡ್ ಹೆಚ್ಚಿರುತ್ತದೆ. ಮಗುವಿಗೆ ಹಾಲು ಕುಡಿಸುವ ಮುನ್ನ ಒಂದು ಹಿಡಿಯಷ್ಟು ಸೂರ್ಯಕಾಂತಿಯ ಬೀಜಗಳನ್ನು ತಿನ್ನುವುದರಿಂದ ಹಾಲು ಸರಾಗವಾಗಿ ಬರುತ್ತದೆ.

ಕಾಫಿ

ಕಾಫಿ

ಗರ್ಭಿಣಿಯರಿಗೆ ಮಗುವಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣದಿಂದ ಕಾಫಿಯಿಂದ ದೂರವಿರಿ ಎಂದು ಹೇಳಲಾಗುತ್ತದೆ. ಆದರೆ ಹೆರಿಗೆಯ ನಂತರ ಕಾಫಿ ಕುಡಿಯುವುದರಿಂದ ಆಯಾಸ ಕಡಿಮೆಯಾಗಿ ಶಕ್ತಿ ಬಂದಂತಾಗುತ್ತದೆ.

ಹಾಲು

ಹಾಲು

ಹೆರಿಗೆಯ ನಂತರ ಸೇವಿಸಲೇಬೇಕಾದ ಆಹಾರಗಳಲ್ಲಿ ಇದು ಮುಖ್ಯವಾದುದು. ಹಾಲಿನಲ್ಲಿ ಕ್ಯಾಲ್ಸಿಯಂ ಹೆಚ್ಚಿದ್ದು ಸ್ತನಪಾನ ಮಾಡಿಸುವ ತಾಯಂದಿರಿಗೆ ಒಳ್ಳೆಯದು. ಮಗುವಿಗೆ ಹಾಲು ಕುಡಿಸುವ ಮುನ್ನ ಒಂದು ಲೋಟ ಹಾಲು ಕುಡಿಯುವುದು ಒಳ್ಳೆಯದು.

ಎಲೆ ತರಕಾರಿಗಳನ್ನು ತಿನ್ನಿ

ಎಲೆ ತರಕಾರಿಗಳನ್ನು ತಿನ್ನಿ

ಹೆರಿಗೆಯ ನಂತರ ಹಸಿರೆಲೆ ತರಕಾರಿಗಳನ್ನು ತಿನ್ನುವುದು ಒಳ್ಳೆಯದು. ಹೆರಿಗೆಯ ನಂತರ ಸಮತೋಲನ ಆಹಾರ ಸೇವನೆ ಅತ್ಯಗತ್ಯ. ವಿಟಮಿನ್ ಕೆ ಹೆಚ್ಚಿರುವ ಆಹಾರಗಳನ್ನು ತಿನ್ನುವುದು ಒಳ್ಳೆಯದು. ಇದರಿಂದ ಎದೆಹಾಲಿನ ಮೂಲಕ ಮಗುವಿಗೆ ಕಬ್ಬಿಣದಂಶ ದೊರಕುತ್ತದೆ.

ಮೀನು

ಮೀನು

ಸಾಲಮೊನ್ ಮತ್ತು ತುನ ಎನ್ನುವ ಮೀನಿನಲ್ಲಿ ಒಮೆಗ-3 ಎನ್ನುವ ಫ್ಯಾಟಿ ಆಸಿಡ್ ಇರುತ್ತದೆ. ಇದು ಮಗುವಿನ ಮೆದುಳು ಮತ್ತು ಕಣ್ಣಿನ ಬೆಳವಣಿಗೆಗೆ ಸಹಕಾರಿ. ಪರಿಣಿತರ ಪ್ರಕಾರ ಬಾಣಂತಿಯರು ವಾರಕ್ಕೆ ಎರಡು ಬಾರಿ ಇದನ್ನು ಬಳಸಿದರೆ ಒಳ್ಳೆಯದು.

ಕಾಬ್ರೋಹೈಡ್ರೈಡ್ ಗಳು

ಕಾಬ್ರೋಹೈಡ್ರೈಡ್ ಗಳು

ಕಳೆದುಕೊಂಡ ಶಕ್ತಿಯನ್ನು ಮರುಗಳಿಸಲು ಹೆಚ್ಚಿನ ಕಾರ್ಬೋಹೈಡ್ರೆಡ್ ಗಳನ್ನು ಸೇವಿಸುವುದು ಅಗತ್ಯ. ಬಾರ್ಲಿ ಅಥವ ಕುಚ್ಚಲಕ್ಕಿಯನ್ನು ಹೆರಿಗೆಯ ನಂತರ ತಾಯಂದಿರು ಬಳಸುವುದು ಉತ್ತಮ.

ಗ್ರಾನೊಲ

ಗ್ರಾನೊಲ

ಹೆರಿಗೆಯ ನಂತರ ತಾಯಂದಿರು ತಿನ್ನಬೇಕಾದ ಅತ್ಯುತ್ತಮ ಆಹಾರಗಳಲ್ಲಿ ಇದು ಕೂಡ ಒಂದು. ಗ್ರಾನೊಲದಲ್ಲಿ ಫೈಬರ್ ಹೆಚ್ಚಿರುತ್ತದೆ. ಇದು ಚಯಾಪಚಯ ಕ್ರಿಯೆಗೆ ನೆರವು ನೀಡುತ್ತದೆ. ಇದು ಮಾಂಸಖಂಡಗಳಿಗೆ ಶಕ್ತಿಯನ್ನು ಒದಗಿಸುತ್ತದೆ.

Story first published: Tuesday, December 10, 2013, 14:03 [IST]
X
Desktop Bottom Promotion