Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಈ 4 ಮಾತುಗಳು ಮಕ್ಕಳ ಭವಿಷ್ಯಕ್ಕೆ ಮುಳುವಾದಿತು ಎಚ್ಚರ!
ಮನೆಯೇ ಮೊದಲ ಪಾಠ ಶಾಲೆ ಎನ್ನುವ ಹಾಗೆ ಮಕ್ಕಳು ಪ್ರತಿಯೊಂದು ವಿಚಾರವನ್ನು ಮನೆಯಿಂದಲೇ ಕಲಿತುಕೊಳ್ಳುತ್ತಾರೆ. ಅದಕ್ಕೆ ಹೇಳೋದು ಮಕ್ಕಳ ಮುಂದೆ ಯಾವುದೇ ವಿಚಾರವನ್ನು ಮಾತನಾಡುವಾಗಲೂ ತುಂಬಾನೇ ಹುಷಾರಾಗಿ ಇರಬೇಕು. ಯಾಕಂದ್ರೆ ಮಕ್ಕಳು ಕೂಡ ಅದನ್ನೇ ಕಲಿತುಕೊಳ್ಳುತ್ತಾರೆ. ಕೆಲವೊಂದು ಸಂದರ್ಭದಲ್ಲಿ ನೀವು ಆಡಿದ ಮಾತುಗಳು ಅವರ ಮೇಲೆ ದೊಡ್ಡ ಪರಿಣಾಮವನ್ನು ಬೀರಬಹುದು. ಅಷ್ಟಕ್ಕು ಮಕ್ಕಳ ಮುಂದೆ ಯಾವ ಮಾತುಗಳನ್ನು ಆಡಬಾರದು ಅನ್ನೋದನ್ನು ತಿಳಿಯೋಣ.
ಮಕ್ಕಳು ತುಂಬಾನೇ ಸೂಕ್ಷ್ಮ ಸ್ವಭಾವದವರು. ಮನೆಯ ವಾತಾವರಣ ಹೇಗಿರುತ್ತದೆಯೋ ಅವರು ಅದನ್ನೇ ಕಲಿತುಕೊಳ್ಳುತ್ತಾರೆ. ಹೀಗಾಗಿ ಪೋಷಕರು ಆದಷ್ಟು ಮನೆಯಲ್ಲಿ ಅವಾಚ್ಯ ಶಬ್ಧಗಳನ್ನು ಬಳಸೋದನ್ನು ಮಾಡಬಾರದು. ನಿಮ್ಮ ಬಾಯಿಯಲ್ಲಿ ಬರುವ ಮಾತುಗಳೇ ನಾಳೆ ಅವರ ಬಾಯಿಯಲ್ಲಿಯೂ ಬರಬಹುದು. ಹೀಗಾಗಿ ಮನೆಯಲ್ಲಿ ಪದ ಬಳಕೆ ಚೆನ್ನಾಗಿರುವಂತೆ ನೋಡಿಕೊಳ್ಳಿ.

ಮನೆಯಲ್ಲಿ ಗಂಡ ಹಾಗೂ ಹೆಂಡತಿ ಒಬ್ಬರಿಗೊಬ್ಬರು ಗೌರವ ಕೊಟ್ಟು ಮಾತನಾಡಬೇಕು. ಗೌರವ ಇಲ್ಲದೇ ಇರುವ ಹಾಗೆ ಯಾವುದೇ ಕಾರಣಕ್ಕೂ ಮಾತನಾಡೋದಕ್ಕೆ ಹೋಗಬೇಡಿ. ನಿಮ್ಮ ಧರ್ಮದ ಆಚಾರ-ವಿಚಾರ, ಪೂಜೆ-ಪುನಸ್ಕಾರಗಳನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ರೂಢಿಯಾಗುವಂತೆ ನೋಡಿಕೊಳ್ಳಿ.
1. ನೀನು 'ಹಾಳಾಗಿದ್ದೀಯ' ಎಂದು ಹೇಳಬೇಡಿ!
ಕೆಲವೊಂದು ಸಲ ಪೋಷಕರು ಮಕ್ಕಳನ್ನು ಅತಿಯಾಗಿ ಪ್ರೀತಿ, ಕಾಳಜಿಯಿಂದ ಸಾಕಿ. ಅವರಿಗೆ ಬೇಕಾದ ಎಲ್ಲಾ ವಸ್ತುಗಳನ್ನು ತೆಗೆದುಕೊಟ್ಟರೆ ಮಕ್ಕಳು ಬೇಗನೇ ಹಾಳಾಗುತ್ತಾರೆ. ಹೇಳಿದ ಮಾತನ್ನು ಕೇಳೋದಿಲ್ಲ. ಏನಾದರೂ ಬೇಕು ಎಂದು ಹಠ ಮಾಡುತ್ತಾರೆ. ಓದಿನಲ್ಲಿ ಹಿಂದೆ ಬೀಳುತ್ತಾರೆ.
ಇಂತಹ ಸಂದರ್ಭದಲ್ಲಿ ನೀವು ಮಗುವನ್ನು ನೀನು ಹಾಳಾಗಿ ಹೋಗಿದ್ದೀಯಾ ಎಂದು ಸಿಟ್ಟಿನಲ್ಲಿ ಗದರಿದರೆ ಅವರು ತುಂಬಾನೇ ನೋವು ಪಟ್ಟುಕೊಳ್ಳುತ್ತಾರೆ. ಇದು ಅವರ ಸ್ವಾಭಿಮಾನವನ್ನು ಕೂಡ ಘಾಸಿಗೊಳಿಸಬಹುದು. ಹೀಗಾಗಿ ಏಕಾಏಕಿ ಅವರ ಮೇಲೆ ಆರೋಪ ಮಾಡುವ ಬದಲು ಅವರು ತಿದ್ದಿ ಸರಿ ದಾರಿಗೆ ತರೋದಕ್ಕೆ ಯತ್ನಿಸಿ.
2. ಬುದ್ಧಿವಂತ
ನಿಮ್ಮ ಮಗು ಎಲ್ಲರಿಗಿಂತ ಭಿನ್ನವಾಗಿ ಇರಬಹುದು. ಕಲಿಕೆಯಲ್ಲಿ ಮುಂದಿರಬಹುದು. ಯಾವುದೇ ಕೆಲಸವನ್ನಾದರೂ ತುಂಬಾನೇ ಸುಲಭವಾಗಿ ಮಾಡಿ ಮುಗಿಸಬಹುದು. ಇಂತಹ ಸಂದರ್ಭದಲ್ಲಿ ನೀವು ನಿಮ್ಮ ಮಗುವಿಗೆ ಪದೇ ಪದೇ ಸ್ಮಾರ್ಟ್ ಅಂತ ಹೇಳಬೇಡಿ. ನೀನು ತುಂಬಾನೇ ಬುದ್ಧಿವಂತ ಎಂದು ಪದೇ ಪದೇ ಉದ್ಘರಿಸಬೇಡಿ. ಇದು ಮಕ್ಕಳ ತಲೆಯಲ್ಲಿ ಹಾಗೆಯೇ ಕೂತು ಬಿಟ್ಟರೆ ಅವರು ದೊಡ್ಡವರಾದ ಮೇಲೆ ಅವರಿಗೆ ಅಹಂ ಹೆಚ್ಚಾಗಬಹುದು. ಬುದ್ಧಿವಂತಿಕೆಯ ಜಂಬ ಅವರ ತಲೆಗೆ ಹತ್ತಬಹುದು. ಹೀಗಾಗಿ ಪೋಷಕರು ಮಕ್ಕಳಿಗೆ ಬರೀ ಪ್ರೋತ್ಸಾಹ ನೀಡಿದರಷ್ಟೇ ಸಾಕು. ಅವರನ್ನು ಹೊಗಳಿ ಅಟ್ಟಕೇರಿಸಬೇಡಿ.
3. ಮೂರ್ಖ ಎಂದು ಕರೆಯಬೇಡಿ!
ಮಕ್ಕಳು ಸರಿಯಾಗಿ ಓದದಿದ್ದಾಗ, ಬರೆದಿದ್ದಾಗ ಅಥವಾ ಏನಾದರೂ ತಪ್ಪು ಮಾಡಿದಾಗ ಕೆಲ ಪೋಷಕರು ಮಕ್ಕಳನ್ನು ಮೂರ್ಖ, ದಡ್ಡ ಶಿಕಾಮಣಿ ಎಂದು ನಿಂದಿಸುತ್ತಾರೆ. ಈ ಮಾತುಗಳು ಅವರ ಮನಸ್ಸಿನ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ನೀವು ಪ್ರತಿ ಸಲ ನಿಮ್ಮ ಮಗುವನ್ನು ಈ ರೀತಿ ಕರೆಯುತ್ತಿದ್ದರೆ ಅವರ ಮನಸ್ಸಿನಲ್ಲಿಯೂ ಕೂಡ ಅವರು ಮೂರ್ಖ, ದಡ್ಡ ಎಂಬ ಭಾವನೆ ಸಹಜವಾಗಿ ಬಂದು ಬಿಡುತ್ತದೆ.
4. ರಾಜ/ರಾಣಿ ಎಂದು ಕರೆಯಬೇಡಿ
ಮಕ್ಕಳನ್ನು ಪೋಷಕರು ಮುದ್ದಾಗಿ ಅನೇಕ ಹೆಸರುಗಳಿಂದ ಕರೆಯುವುದುಂಟು ಅದ್ರಲ್ಲಿ ಮುಖ್ಯವಾಗಿ ನೀನು ನನ್ನ ರಾಜ/ರಾಣಿ ಅಂತಲೂ ಕರೆಯುತ್ತಾರೆ. ಈ ರೀತಿ ಕರೆಯೋದು ತಪ್ಪು. ಯಾಕಂದ್ರೆ ಅವರ ತಲೆಯಲ್ಲಿ ನಾನು ರಾಜನಂತೆ ಇದ್ದೇನೆ. ನಾನು ರಾಣಿಯಂತೆ ಇದ್ದೇನೆ ಎಂಬ ಭಾವನೆ ಬರುತ್ತದೆ. ಇದರಿಂದ ಬೇರೆ ಮಕ್ಕಳನ್ನು ಅವರು ತುಚ್ಛ ಭಾವದಿಂದ ಕಾಣುವ ಸಾಧ್ಯತೆಯಿದೆ.
ಹೀಗಾಗಿ ಮಕ್ಕಳನ್ನು ರಾಜ/ರಾಣಿ ಎಂದು ಕರೆದು ಪೋಷಕರು ಉದ್ಗರಿಸೋದಕ್ಕೆ ಹೋಗಬೇಡಿ. ಕೆಲವೊಂದು ಸಲ ಟಿವಿ ನೋಡಿ ಅದರಲ್ಲಿ ಬರುವ ವ್ಯಕ್ತಿತ್ವವನ್ನು ಮಕ್ಕಳು ತಾವೇ ಎಂದು ಊಹಿಸಿಕೊಳ್ಳುತ್ತಾರೆ. ಈ ರೀತಿ ಇದ್ದರೆ ಪರವಾಗಿಲ್ಲ. ಆದರೆ ಅಪ್ಪ- ಅಮ್ಮ ಮಕ್ಕಳಿಗೆ ರಾಜ, ರಾಣಿಯ ಪಟ್ಟ ಕೊಡುವುದು ತಪ್ಪು.
ಒಟ್ಟಿನಲ್ಲಿ ಈ ನಾಲ್ಕು ಮಾತುಗಳನ್ನು ಮಕ್ಕಳ ಮುಂದೆ ಹೇಳೋದಕ್ಕೆ ಹೋಗಬೇಡಿ. ಇದರಿಂದ ಅವರ ಭವಿಷ್ಯಕ್ಕೆ ಮುಳುವಾಗಬಹುದು.



Click it and Unblock the Notifications

