Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಈ ರೀತಿ ಮಕ್ಕಳನ್ನು ಬೆಳೆಸಿದ್ರೆ ಮಕ್ಕಳು ದಾರಿ ತಪ್ಪೋದು ಗ್ಯಾರಂಟಿ!
ಎಲ್ಲಾ ಪೋಷಕರು ಒಂದೇ ರೀತಿ ಇರೋದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಮಕ್ಕಳನ್ನು ಸಾಕುತ್ತಾರೆ. ಮಕ್ಕಳನ್ನು ಬೆಳೆಸೋದನ್ನು ಕೆಲವೊಂದು ಸಲ ಅವರು ತಮ್ಮ ಸ್ವಂತ ಅನುಭವಗಳಿಂದ ಕಲಿತುಕೊಂಡಿರುತ್ತಾರೆ. ಇನ್ನೂ ಕೆಲವು ಸಲ ತಮ್ಮ ಪೋಷಕರು ಅಥವಾ ಬೇರೆಯವರನ್ನು ನೋಡಿ, ಅಥವಾ ಹೇಳಿದ ಮಾತನ್ನು ಕೇಳಿ ಕಲಿತಿರುತ್ತಾರೆ.
ಪೋಷಕರು ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ಅದೇನೆಂದರೆ ಅವರು ಮಕ್ಕಳನ್ನು ಬೆಳೆಸುವ ರೀತಿ ಯಾವುದೇ ಕಾರಣಕ್ಕೂ ತಮ್ಮ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗದೇ ಇರೋ ರೀತಿಯಲ್ಲಿ ನೋಡಿಕೊಳ್ಳಬೇಕು. ಆದರೆ ಕೆಲವೊಂದು ಸಲ ಪೋಷಕರು ಮಕ್ಕಳೊಂದಿಗೆ ನಡೆದುಕೊಳ್ಳುವ ರೀತಿ ಅವರ ಭವಿಷ್ಯಕ್ಕೆ ತೊಂದರೆಯುಂಟು ಮಾಡಬಹುದು. ಅಷ್ಟಕ್ಕು ಪೋಷಕರು ಮಕ್ಕಳನ್ನು ಬೆಳೆಸುವಾಗ ಮಾಡುವ ತಪ್ಪುಗಳು ಯಾವುದು ಅನ್ನೋದನ್ನು ನೋಡೋಣ.

1. ಮಕ್ಕಳಿಗೆ ಸ್ಪಂದಿಸದೇ ಇರುವುದು
ಪೋಷಕರು ಅಂದ ಮೇಲೆ ಮಕ್ಕಳ ಬೇಕು-ಬೇಡಗಳಿಗೆ ಸ್ಪಂದಿಸಬೇಕು. ಹಾಗೂ ಅವರ ಬಗ್ಗೆ ಕಾಳಜಿ ಮಾಡಬೇಕು. ಆದರೆ ಕೆಲ ಮಕ್ಕಳಿಗೆ ಏನೇ ಆದ್ರೂ ಮಕ್ಕಳ ಬಗ್ಗೆ ಒಂಚೂರು ಕಾಳಜಿಯನ್ನೇ ಮಾಡೋದಿಲ್ಲ. ಮಕ್ಕಳ ಮಾತಿಗೆ ಕಿವಿಗೊಡೋದಾಗಲಿ, ಅವರಿಗೆ ಬುದ್ಧಿ ಹೇಳೋದನ್ನು ಎಂದಿಗೂ ಮಾಡೋದಿಲ್ಲ. ಮಕ್ಕಳು ಅವರಾಗಿಯೇ ಏನನ್ನಾದರೂ ಕೇಳಿದರೆ ಆ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಇದರಿಂದ ನಿಮ್ಮ ಮಕ್ಕಳು ಹಾಳಾಗುವ ಸಾಧ್ಯತೆಯೂ ಇರುತ್ತದೆ. ಇಲ್ಲದಿದ್ದರೆ ಅಪ್ಪ- ಅಮ್ಮನ ಪ್ರೀತಿ ಸಿಗಲಿಲ್ಲವೆಂದು ಖಿನ್ನತೆಗೂ ಒಳಗಾಗುವ ಅಪಾಯ ಹೆಚ್ಚಿದೆ.
2. ಪೋಷಕರು ಮಕ್ಕಳ ವೈಯಕ್ತಿಕ ಬದುಕಿನಲ್ಲಿ ಹೆಚ್ಚು ಮೂಗು ತೂರಿಸೋದು!
ಕೆಲವು ಪೋಷಕರಂತೂ ಮಕ್ಕಳ ಬಗ್ಗೆ ಅತಿಯಾಗಿ ಕಾಳಜಿ ಮಾಡುತ್ತಾರೆ. ಮಕ್ಕಳ ಪ್ರತಿಯೊಂದು ವಿಚಾರದಲ್ಲೂ ಪೋಷಕರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮಕ್ಕಳಿಂದ ಒಂಚೂರು ತಪ್ಪಾಗದಂತೆ ಕಾಳಜಿ ವಹಿಸುತ್ತಾರೆ. ಎಲ್ಲಾ ವಿಚಾರಗಳಲ್ಲಿ ಅವರು ಪರಿಪೂರ್ಣರಾಗಿರಬೇಕೆಂದು ಪೋಷಕರು ಬಯಸುತ್ತಾರೆ. ಹೀಗಾಗಿ ಮಕ್ಕಳು ಪೋಷಕರ ಮೇಲೆ ಒಂದು ರೀತಿ ಸಂಪೂರ್ಣವಾಗಿ ಅವಲಂಬಿತರಾಗಿರುತ್ತಾರೆ. ಮಕ್ಕಳಿಗೆ ಏಕಾಏಕಿ ಸಂಕಷ್ಟಗಳು ಎದುರಾದಾಗ ಅದನ್ನು ಯಾವ ರೀತಿ ಎದುರಿಸಬೇಕು ಅನ್ನೋದು ಅವರಿಗೆ ಗೊತ್ತಿರೋದಿಲ್ಲ.
3. ಮಕ್ಕಳಿಗೆ ಕಷ್ಟದ ಬಗ್ಗೆ ಗೊತ್ತು ಮಾಡಿಸದೇ ಇರುವುದು
ಇದು ಕೂಡ ಪೋಷಕರ ಅತಿಯಾದ ಕಾಳಜಿಯ ಒಂದು ಭಾಗವಷ್ಟೇ. ಇಲ್ಲಿ ಮಕ್ಕಳಿಗೆ ಕಷ್ಟಗಳು ಅಂದ್ರೆ ಏನು ಅನ್ನೋದೇ ಗೊತ್ತಿರೋದಿಲ್ಲ. ಮಕ್ಕಳಿಗೆ ಯಾವುದಾದರೂ ಕಷ್ಟ ಎದುರಾಗೋ ಮೊದಲು ಪೋಷಕರು ಅದಕ್ಕೆ ಪರಿಹಾರ ಹುಡುಕಿರುತ್ತಾರೆ. ಮಕ್ಕಳು ಎಷ್ಟೇ ದೊಡ್ಡವರಾದ್ರೂ ಕೂಡ ಎಲ್ಲಾ ಕೆಲಸವನ್ನೂ ಪೋಷಕರೇ ಮಾಡುತ್ತಾರೆ. ಊಟ ಮಾಡಿದ ತಟ್ಟೆ ತೊಳೊಯೋದಕ್ಕೂ ಆ ಮಕ್ಕಳಿಗೆ ಗೊತ್ತಿರೋದಿಲ್ಲ. ಹೀಗೆ ಗಿಣಿಯಂತೆ ಸಾಕಿದ ಮಕ್ಕಳು ಭವಿಷ್ಯದಲ್ಲಿ ಎದುರಾಗೋ ದೊಡ್ಡ ದೊಡ್ಡ ಸಮಸ್ಯೆಗಳ ಮುಂದೆ ಕುಗ್ಗಿ ಹೋಗುತ್ತಾರೆ.
ಪೋಷಕರು ಮಾಡಬೇಕಾಗಿರೋದು ಏನು?
ಹುಟ್ಟುತ್ತಲೇ ಯಾರಿಗೂ ಯಾವ ವಿಚಾರದ ಬಗ್ಗೆನೂ ಗೊತ್ತಿರೋದಿಲ್ಲ. ಆದರೆ ಮಕ್ಕಳಿಗೆ ಅದನ್ನು ಹಂತ ಹಂತವಾಗಿ ಕಲಿಸಿ ಕೊಡೋದು ಪೋಷಕರ ಕರ್ತವ್ಯ. ಮಕ್ಕಳಿಗೆ ಕಷ್ಟ ಹಾಗೂ ಸುಖಕ್ಕಿರುವ ವ್ಯತ್ಯಾಸವನ್ನು ಮೊದಲು ಅರ್ಥ ಮಾಡಿಸಿ. ಕೆಲವೊಂದು ವಿಚಾರಗಳನ್ನು ಅವರಾಗಿಯೇ ಕಲಿಯೋದಕ್ಕೆ ಅವಕಾಶ ನೀಡಿ. ಆಗ ಅವರ ಯೋಚನಾ ಸಾಮರ್ಥ್ಯ ಹಾಗೂ ಕೌಶಲ್ಯಗಳು ಕೂಡ ಹೆಚ್ಚಾಗುತ್ತದೆ.
ಮಕ್ಕಳ ಭವಿಷ್ಯ ಪೋಷಕರ ಕೈಯಲ್ಲಿದೆ. ನಾವು ಯಾವ ರೀತಿಯ ಜೀವನ ಮೌಲ್ಯಗಳನ್ನು ಮಕ್ಕಳಲ್ಲಿ ತುಂಬುತ್ತೇವೆಯೋ ದೊಡ್ಡವರಾದ ಮೇಲೆ ಅವರು ಕೂಡ ಅಂತಹದ್ದೇ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳನ್ನು ಬೆಳೆಸುವ ಹಂತದಲ್ಲಿ ಪೋಷಕರು ಜಾಗರೂಕರಾಗಿ ಇರಬೇಕು. ಹಾಗೂ ಯಾವುದೇ ಕಾರಣಕ್ಕೂ ತಪ್ಪು ಮಾಡಬೇಡಿ.



Click it and Unblock the Notifications

