Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
Myth Vs Facts: ಗರ್ಭಿಣಿಯರು ಪಪ್ಪಾಯಿ ತಿನ್ನಲೇಬಾರದು ಎಂಬುವುದು ಸರಿಯೇ?
ಒಬ್ಬ ಹೆಣ್ಣು ಗರ್ಭಿಣಿ ಆದರೆ ಆಕೆ ಮಾತ್ರವಲ್ಲ ಆಕೆಯ ಕುಟುಂಬದವರು ಕೂಡ ಸಂತೋಷದಲ್ಲಿ ತೇಲಾಡುತ್ತಾರೆ. ಸಂಭ್ರಮ ಮನೆ ಮಾಡಿರುತ್ತದೆ ಇನ್ನು ಗರ್ಭಿಣಿ ಆದಾಗಿಂದ ತಾಯಿಯಾದವಳು ಸಾಕಷ್ಟು ಮುತುವರ್ಜಿ ವಹಿಸಿ 9 ತಿಂಗಳು ಮಗುವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಜಾಗೃತಿ ಮಾಡಿ ಹಡೆಯಬೇಕಾಗುತ್ತದೆ. ಈ ಸಂದರ್ಭದಲ್ಲಿ ಗರ್ಭಿಣಿ ಸ್ತ್ರೀ ಸೇವಿಸುವ ಆಹಾರಗಳು ಎಷ್ಟು ಮುಖ್ಯ ಅಂತ ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಎಲ್ಲರಿಗೂ ಗೊತ್ತಿರುವಂತದ್ದೇ. ಅಷ್ಟಾಗಿಯೋ ಕೆಲವು ಆಹಾರ ಪದಾರ್ಥಗಳು ದೇಹಕ್ಕೆ ಒಳ್ಳೆಯದಲ್ಲ ಎಂದು ಗೊತ್ತಿದ್ದೂ ಸೇವಿಸುವವರಿದ್ದಾರೆ. ಉದಾಹರಣೆಗೆ ಪಪ್ಪಯ.
ಇದು ನಿಮಗೂ ಗೊತ್ತಿರಬಹುದು. ಪಪ್ಪಾಯವನ್ನು ಗರ್ಭಿಣಿ ಸ್ತ್ರೀ ಅಥವಾ ಆಗತಾನೇ ಮಗುವನ್ನು ಹಡೆದ ತಾಯಿ ಪಪ್ಪಾಯಿ ಸೇವಿಸುವುದು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಬಹುಶ: ನೀವು ಸಿನಿಮಾಗಳಲ್ಲಿಯೂ ನೋಡಿರುತ್ತೀರಿ ಪಪ್ಪಾಯ ಅಥವಾಪರಂಗೀ ಹಣ್ಣು ಸೇವಿಸಿದರೆ ಗರ್ಭಪಾತ ಆಗುತ್ತೆ ಎನ್ನುವುದನ್ನು. ಆದರೆ ಈ ನಂಬಿಕೆ ಎಷ್ಟು ಸತ್ಯ? ನಿಜವಾಗಿ ಗರ್ಭಿಣಿಯರ ಆರೋಗ್ಯಕ್ಕೆ ಅಷ್ಟು ಕೆಟ್ಟ ಪರಿಣಾಮ ಬೀರಲಿದೆಯೇ ಪಪ್ಪಾಯಿ? ನೋಡೋಣ.

ಸಾಮಾಣ್ಯವಾಗಿ ಪಪ್ಪಾಯಿ ಹಣ್ಣು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದೇ. ಯಾಕೆಂದರೆ ಇದರಲ್ಲಿ ಉತ್ಕರ್ಷಣಾ ನಿರೋಧ ಲಕ್ಷಣಗಳು ಇರುತ್ತವೆ. ವಿಟಮಿನ್ ಹಾಗೂ ಇತರ ಪೋಷಕಾಂಶಗಳೂ ಇದರಲ್ಲಿ ಸಮೃದ್ಧವಾಗಿದೆ. ಇನ್ನುಗರ್ಭಾವಸ್ಥೆಯಲ್ಲಿ ಪಪ್ಪಾಯಿ ಸೇವಿಸುವುದು ಅಪಾಯವಲ್ಲ ಎನ್ನುತ್ತಾರೆ ವೈದ್ಯರು. ಆದರೆ ಚೆನ್ನಾಗಿ ಬಲಿತ ಹಣ್ಣಾದ ಪಪ್ಪಾಯವನ್ನು ಮಾತ್ರ ಸೇವಿಸಬೇಕು ಹೊರತು ಬಲಿತಿಲ್ಲದೇ ಇರುವಂತದ್ದಲ್ಲ.
ಪಪ್ಪಾಯಿಯಲ್ಲಿ ಪೋಲಿಕ್ ಆಸಿಡ್ ಇರುತ್ತದೆ ಇದು ಮಗುವಿನ ನರಮಂಡಲದ ಬೆಳವಣಿಗೆಗೆ ಗರ್ಭಾವಸ್ಥೆಯ ಸಮಯದಲ್ಲಿ ಸೇವಿಸಿದರೆ ಒಳ್ಳೆಯದು. ಇದು ತಾಯಿಯ ಎದೆ ಹಾಲಿನ ಉತ್ಪಾದನೆಯಲ್ಲಿಯೂ ಕೂಡ ಚೆನ್ನಾಗಿ ಮಾಗಿದ ಪಪ್ಪಾಯಿ(ತುಂಬಾ ಹಣ್ಣಾದ) ಹಣ್ಣುಗಳ ಸೇವನೆ ಮಾಡುವುದು ಒಳ್ಳೆಯದು. ಪಪ್ಪಾಯಿಯಲ್ಲಿ ವಿಟಮಿನ್ ಹೆಚ್ಚಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ ಇದರಿಂದ ಗರ್ಭವಸ್ಥೆಯಲ್ಲಿ ಯಾವುದೇ ರೀತಿಯಾದಂತಹ ಸೋಂಕು ಬಾರದೆ ಇರಲು ಸಹಾಯಕವಾಗುತ್ತದೆ. ಬಲಿತ ಪಪ್ಪಾಯಿ ಹಣ್ಣಿನಲ್ಲಿ ಫೈಬರ್, ಪೊಟ್ಯಾಸಿಯಂ, ವಿಟಮಿನ್ ಎ ಬಿ ಮತ್ತು ಸಿ ಅಂಶ ಹೇರಳವಾಗಿದ್ದು ಆರೋಗ್ಯಕ್ಕೆ ಇದು ಬಹಳ ಮುಖ್ಯವಾಗಿದೆ.
ಗರ್ಭಾವಸ್ಥೆಯಲ್ಲಿ ಅಥವಾ ಮಗುವನ್ನು ಹಡೆದ ಸಂದರ್ಭದಲ್ಲಿ ಹಸಿರು ಬಣ್ಣದ ಅಥವಾ ಬಲಿಯದ ಪಪ್ಪಾಯಿ ಒಳ್ಳೆಯದಲ್ಲ. ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಹಾನಿಯಾಗಬಹುದು.ಬಲಿತಿಲ್ಲದೆ ಇರುವ ಪಪ್ಪಾಯಿಯಲ್ಲಿ ಲ್ಯಾಟಿಕ್ಸ್ ಪಫೈನ್ ಅಂಶವಿರುತ್ತದೆ ಇದು ಪೋಸ್ಟಗ್ಲಾಂಡಿನ ಹಾಗೂ ಆಕ್ಸಿಟೋಸಿಸ್ ಅನು ಉತ್ತೇಜಿಸುವುದರಿಂದ ಗರ್ಭಾಶಯದ ಸಮಸ್ಯೆ ಅಥವಾ ಅಕಾಲಿಕ ಹೆರಿಗೆ ಉಂಟಾಗುವ ಸಾಧ್ಯತೆ ಇರುತ್ತದೆ.
ಹೌದು ಹೆಚ್ಚು ಮಾಗಿಲ್ಲದ ಹಸಿರು ಹೊರಭಾಗವನ್ನು ಹೊಂದಿರುವಂತಹ ಪಪ್ಪಾಯಿ ಗರ್ಭಪಾತಕ್ಕೆ ಕಾರಣವಾಗುವ ಬಹುದು. ಇದರಲ್ಲಿ ರಕ್ತಸ್ರಾವವನ್ನು ಹೆಚ್ಚಿಸುವಂತಹ ಎಮ್ಮಿನಾಗೋಗ್ ಅಂಶ ಅಧಿಕವಾಗಿರುತ್ತದೆ. ಅದೇ ರೀತಿಯಾಗಿ ಪಪ್ಪಾಯಿ ಎಲೆಗಳಲ್ಲಿ ಹಾಗೂ ಬೀಜಗಳಲ್ಲಿ ಕಾರ್ಪೈನ ಅಂಶ ಇರುತ್ತದೆ. ಇದು ಕೂಡ ಅನಾರೋಗ್ಯ ಉಂಟು ಮಾಡಬಹುದು. ಈಗಾಗಲೇ ಗರ್ಭಪಾತ ಅಥವಾ ಹೆರಿಗೆಯನ್ನು ಅನುಭವಿಸಿದ ಮಹಿಳೆಯರು, ಮತ್ತೆ ಗರ್ಭವಸ್ಥೆಯಲ್ಲಿ ಇರುವಾಗ ಪಪ್ಪಾಯಿಯನ್ನು ಸೇವಿಸದೇ ಇರುವುದೇ ಒಳ್ಳೆಯದು. ಇನ್ನು ಗರ್ಭವಸ್ಥೆಯಲ್ಲಿ ಮಧುಮೇಹದ ಸಮಸ್ಯೆ ಬರುವುದು ಸಹಜ ಹಾಗೇನಾದರೂ ಮದುಮೇಹ ಬಂದರೆ ಮಾಗದ ಪಪ್ಪಾಯ ಕೂಡ ಒಳ್ಳೆಯದಲ್ಲ.
ಗರ್ಭವಸ್ಥೆಯಲ್ಲಿ ಇರುವಾಗ ಎಲ್ಲಾ ರೀತಿಯ ಹಣ್ಣುಗಳನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ ಅದರಲ್ಲಿ ಪಪ್ಪಾಯಿ ಹಣ್ಣು ಕೂಡ ಒಂದು. ಹಾಗಾಗಿ ಅತಿ ಕಡಿಮೆ ಪ್ರಮಾಣದಲ್ಲಿ ಗರ್ಭಿಣಿಯಾದವರು ಮಾಗಿರುವ, ಚೆನ್ನಾಗಿ ಬಲಿತಿರುವ ಪಪ್ಪಾಯಿ ಹಣ್ಣುಗಳನ್ನು ತಿನ್ನಬಹುದು. ಆದರೆ ಪಪ್ಪಾಯಿ ಗರ್ಭಪಾತವನ್ನು ಉಂಟುಮಾಡುತ್ತದೆ ಎನ್ನುವುದು ಸಾಮಾನ್ಯವಾಗಿ ನಮ್ಮಲ್ಲಿ ಇರುವ ನಂಬಿಕೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ. ಆದರೂ ಚೆನ್ನಾಗಿ ಬಲಿತಿರದ ಪಪ್ಪಾಯಿಯ ಕಾಯಿ ಸೇವಿಸುವುದು ಒಳ್ಳೆಯದಲ್ಲ. ಹಾಗಾಗಿ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಚೆನ್ನಾಗಿ ಬಲಿತಿರುವ ಪಪ್ಪಾಯ ಹಣ್ಣನ್ನು ಸೇವಿಸಿ ಆದರೂ ನಿಮಗೆ ಸಂದೇಹ ಇದ್ದಲ್ಲಿ ಮತ್ತೊಮ್ಮೆ ವೈದ್ಯರನ್ನು ಸಂಪರ್ಕಿಸಿ ಪಪ್ಪಾಯಿ ಸೇವನೆ ಮಾಡಿ.



Click it and Unblock the Notifications