Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಕ್ಕಳಿಗೆ ಬಾದಾಮಿ ಹಾಲು ಎಷ್ಟು ಸೂಕ್ತ?
ಅಲರ್ಜಿ ಅನ್ನುವುದು ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಲ್ಲೂ ಕಂಡು ಬರುತ್ತದೆ. ಅದರಲ್ಲೂ ಮಕ್ಕಳಿಗೆ ಬಾಲ್ಯದಲ್ಲೇ ಕೆಲವೊಂದು ವಸ್ತುಗಳಿಂದ ಅಲರ್ಜಿ ಆಗುತ್ತದೆ. ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಅಲರ್ಜಿ ಮುಂದುವರಿಯಬಹುದು ಅಥವಾ ಬಾಲ್ಯದಲ್ಲೇ ಅದು ಕೊನೆಗೊಳ್ಳಬಹುದು. ಇದನ್ನು ಹೇಳಲು ಸಾಧ್ಯವಿಲ್ಲ.

ಅದರಲ್ಲೂ ಕೆಲವು ಮಕ್ಕಳಿಗೆ ಪ್ರಾಣಿಗಳ ಹಾಲಿನಿಂದ ಅಲರ್ಜಿಯಿರುತ್ತದೆ. ಇಂತಹ ಮಕ್ಕಳಿಗೆ ಬಾದಾಮಿ ಹಾಲನ್ನು ಪೋಷಕರು ನೀಡುತ್ತಾರೆ. ಇನ್ನು ಕೆಲವು ಮಕ್ಕಳಿಗೆ ಬೀಜಗಳಿಂದಲೇ ಅಲರ್ಜಿ ಇರುವುದು. ಹೀಗಿದ್ದಾಗ ಬಾದಾಮಿ ಹಾಲು ಕೂಡ ಅಲರ್ಜಿ ಆಗಬಹುದು. ಇಂತಹ ಮಕ್ಕಳಿಗೆ ಬಾದಾಮಿ ಹಾಲನ್ನು ನೀಡಬಹುದೇ ಎಂದು ತಿಳಿಯಲು ನೀವು ವೈದ್ಯರನ್ನು ಭೇಟಿಯಾಗಬೇಕು. ಗೋಧಿಯ ಸತ್ವದಲ್ಲಿದೆ ಮಕ್ಕಳ ಆರೋಗ್ಯದ ಗುಟ್ಟು....
ಅವರಿಂದ ಸಲಹೆಯನ್ನು ಪಡೆದುಕೊಂಡು ಮುಂದುವರಿದರೆ ಒಳ್ಳೆಯದು. ಬೀಜಗಳಿಂದ ಆಗುವಂತಹ ಅಲರ್ಜಿ ಬಗ್ಗೆ ತುಂಬಾ ಎಚ್ಚರಿಕೆ ವಹಿಸಿಕೊಳ್ಳಬೇಕು. ಯಾಕೆಂದರೆ ಕೆಲವೊಂದು ಸಂದರ್ಭಗಳಲ್ಲಿ ಇದು ಪ್ರಾಣಕ್ಕೆ ಕುತ್ತು ಉಂಟುಮಾಡಬಹುದು. ಬೀಜದ ಅಲರ್ಜಿಯಿಂದ ವಾಂತಿ, ಭೇದಿ, ಹೊಟ್ಟೆಯಲ್ಲಿ ಸೆಳೆತ, ಕೆಮ್ಮು, ಮೂಗುಕಟ್ಟುವುದು, ತುರಿಕೆ ಹೀಗೆ ಹಲವಾರು ಸಮಸ್ಯೆಗಳು ಕಾಣಿಸಬಹುದು.
ಮಕ್ಕಳು ಆರೋಗ್ಯವಾಗಿ ಬೆಳೆಯಬೇಕೆಂದರೆ ಅವರ ಆಹಾರದಲ್ಲಿ ಕೊಬ್ಬು ಮುಖ್ಯವಾಗಿ ಬೇಕಾಗುತ್ತದೆ. ಆದರೆ ಬಾದಾಮಿ ಹಾಲಿನಲ್ಲಿ ಮಕ್ಕಳ ಬೆಳವಣಿಗೆಗೆ ಬೇಕಾಗುವಂತಹ ಪೋಷಕಾಂಶಗಳು ಇಲ್ಲ. ಬಾದಾಮಿಯಲ್ಲಿ ಹೆಚ್ಚಿನ ಪೋಷಕಾಂಶಗಳಿವೆಯಾದರೂ ಬಾದಾಮಿ ಹಾಲು ನೀರಿನಂತೆ ಇರುವ ಕಾರಣದಿಂದ ಬಾದಾಮಿಯಷ್ಟು ಪೋಷಕಾಂಶಗಳು ಬಾದಾಮಿ ಹಾಲಿನಲ್ಲಿರಲ್ಲ.
ಮಗುವಿಗೆ ಹೆಚ್ಚುವರಿಯಾಗಿ ಏನಾದರೂ ಆಹಾರ ನೀಡಬೇಕೆಂದು ನೀವು ಬಯಸುವಿರಾದರೆ ಒಂದುವರೆ ವರ್ಷ ದಾಟಿದ ಬಳಿಕ ಬಾದಾಮಿ ಹಾಲನ್ನು ನೀಡಿ. ಹೀಗೆ ಮಾಡುವ ಮೊದಲೊಮ್ಮೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.
ಬಾದಾಮಿ ಹಾಲಿನ ಪೋಷಕಾಂಶಗಳ ಬಗ್ಗೆ ಹೇಳುವುದಾದರೆ ಇದರಲ್ಲಿ ಪ್ರೋಸ್ಪರಸ್, ವಿಟಮಿನ್ ಬಿ, ವಿಟಮಿನ್ ಎ, ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂ ಇದೆ. ಮಕ್ಕಳು ದಿನಕ್ಕೆ ಒಂದು ಕಪ್ ಬಾದಾಮಿ ಹಾಲನ್ನು ಕುಡಿದರೆ ಆ ದಿನಕ್ಕೆ ಬೇಕಾಗುವ ಶೇ.33ರಷ್ಟು ಕ್ಯಾಲ್ಸಿಯಂ ಅವರಿಗೆ ಲಭ್ಯವಾಗುತ್ತದೆ. ಮಗುವಿನ ಜೊತೆ ಊಟ ಮಾಡಿ, ಆರೋಗ್ಯ ಕಾಪಾಡಿಕೊಳ್ಳಿ
ಬಾದಾಮಿ ಹಾಲಿನ ಮತ್ತೊಂದು ಉಪಯೋಗವೆಂದರೆ ಅದು ಮಕ್ಕಳ ದೇಹದಲ್ಲಿ ಶಕ್ತಿ ತುಂಬಿ ಚುರುಕಾಗಿರುವಂತೆ ಮಾಡುವುದು. ಮಕ್ಕಳಿಗೆ ಬಾದಾಮಿ ಹಾಲು ನೀಡಲು ಬಯಸುವುದಾದರೆ ನೀವು ಮೊದಲು ವೈದ್ಯರನ್ನು ಭೇಟಿಯಾಗಿ ಅವರಿಂದ ಸೂಕ್ತ ಮಾಹಿತಿ ಪಡೆಯಿರಿ.



Click it and Unblock the Notifications



