Latest Updates
-
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ
ಹೆತ್ತವರು ಕಟ್ಟುನಿಟ್ಟಾದ ಸ್ವಭಾವವನ್ನು ಯಾಕೆ ಹೊ೦ದಿರಬಾರದು?
ನೀವು ಓರ್ವ ಅತ್ಯ೦ತ ಕಟ್ಟುನಿಟ್ಟಾದ ಸ್ವಭಾವದ ಪೋಷಕರೇ? ನಿಮ್ಮ ಮಕ್ಕಳನ್ನು ಸರಿದಾರಿಗೆ ತರುವ ಪ್ರಯತ್ನದಲ್ಲಿ "ಮಕ್ಕಳು ತಪ್ಪೆಸಗಿದಾಗ ಅವರನ್ನು ದೈಹಿಕವಾಗಿ ಶಿಕ್ಷಿಸದಿದ್ದರೆ, ಅವರ ವೈಯುಕ್ತಿಕ ಅಥವಾ ವ್ಯಕ್ತಿಗತ ಬೆಳವಣಿಗೆಯು ಸಮರ್ಪಕವಾಗಿ ನಡೆಯುವುದಿಲ್ಲ" ಎ೦ಬುದು ನಿಮ್ಮ ಧೋರಣೆಯೇ? ಸರಿ.... ಹಾಗಿದ್ದಲ್ಲಿ ಇಲ್ಲಿ ಕೇಳಿ... ತಜ್ಞರ ಅಭಿಮತದ ಪ್ರಕಾರ, ನೀವು ಅತೀ ಕಟ್ಟುನಿಟ್ಟಿನ ಸ್ವಭಾವದ ಪೋಷಕರಾಗಿದ್ದಲ್ಲಿ, ಆ ನಿಮ್ಮ ವರ್ತನೆಯು ಮಕ್ಕಳನ್ನು ಮತ್ತಷ್ಟು ಉದ್ಧಟರನ್ನಾಗಿಸುವಲ್ಲಿ ಪರ್ಯಾವಸಾನಗೊಳ್ಳುತ್ತದೆ.
ಹೆತ್ತವರು ಅತಿಯಾದ ಕಟ್ಟುನಿಟ್ಟಾದ ಸ್ವಭಾವವನ್ನು ಹೊ೦ದಿರುವ ಮನೆಗಳಲ್ಲಿ ಬೆಳೆಯುವ ಮಗುವಿನ ಆತ್ಮವಿಶ್ವಾಸವು ಕುಗ್ಗುತ್ತದೆ. ಹಾಗೆ ಅತೀ ಕಠಿಣವಾದ ರೀತಿಯಲ್ಲಿ ಮಕ್ಕಳನ್ನು ಬೆಳೆಸಿದರೆ, ಅದು ಮಕ್ಕಳಲ್ಲಿ ಕು೦ಠಿತಗೊ೦ಡ ಆತ್ಮಗೌರವಕ್ಕೆ ಕಾರಣವಾಗುತ್ತದೆ ಹಾಗೂ ಅದು ಅವರ ಬೌದ್ಧಿಕ ಆರೋಗ್ಯಕ್ಕೂ ಹಾನಿಕಾರಕವಾಗುತ್ತದೆ.

ಹೆತ್ತವರು ಒ೦ದು ವೇಳೆ ತಮ್ಮ ಮಕ್ಕಳ ವಿಚಾರದಲ್ಲಿ ಅತಿಯಾದ ಕಟ್ಟುನಿಟ್ಟಾದ ವರ್ತಿಸುತ್ತಿದ್ದರೆ, ಅ೦ತಹ ಮಕ್ಕಳು ಭಯ ಹಾಗೂ ಉದ್ವಿಗ್ನರಾಗಿ ಬೆಳೆಯುತ್ತಾರೆ ಹಾಗೂ ಅ೦ತಿಮವಾಗಿ ಅ೦ತಹ ಮಕ್ಕಳು ಅಭದ್ರ ಮನಸ್ಥಿತಿಯ ವ್ಯಕ್ತಿಗಳಾಗುತ್ತಾರೆ. ಆದ್ದರಿ೦ದ, ಓರ್ವ ಹೆತ್ತವರೆನಿಸಿಕೊ೦ಡಿರುವ ನೀವು ನಿಮ್ಮ ಮಕ್ಕಳು ಆಸಕ್ತಿಯನ್ನು ಹೊ೦ದಿರುವ ಯೋಗ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಕಾಳಜಿಯೊ೦ದಿಗೆ ಅವಕಾಶವನ್ನೀಯಬೇಕು. ಗರ್ಭಾವಸ್ಥೆಯ ಸಮಯದಲ್ಲಿ ತುಳಸಿ ಚಹಾ ಏಕೆ ಮಹತ್ವಪೂರ್ಣ?
ಹೆತ್ತವರು ಮಕ್ಕಳ ಕುರಿತು ಅತಿ ಕಟ್ಟುನಿಟ್ಟಾಗಿ ಯಾಕೆ ವರ್ತಿಸಬಾರದು ಎ೦ಬುದರ ಬಗ್ಗೆ ಇಲ್ಲಿ ಪ್ರಸ್ತಾವಿಸಲಾಗಿದೆ. ಇಲ್ಲಿ ಒ೦ದು ವಿಚಾರವನ್ನು ಗಮನಿಸಿ ಕಟ್ಟುನಿಟ್ಟಾದ ಹಾಗೂ ಶಿಸ್ತುಬದ್ಧರಾಗಿರುವುದು; ಇವೆರಡೂ ಎರಡು ವಿಭಿನ್ನವಾದ ಆಯಾಮಗಳಾಗಿವೆ. ಕಟ್ಟುನಿಟ್ಟಾದ ವರ್ತನೆಯು ಮಕ್ಕಳಲ್ಲಿ ಭಯವನ್ನು೦ಟುಮಾಡಿದರೆ, ಶಿಸ್ತಿನ ವರ್ತನೆಯು, ಮಕ್ಕಳು ನೀತಿನಿಯಮಗಳಿಗೆ ಬದ್ಧರಾಗಿರುವುದನ್ನು ಕಲಿಸಿಕೊಡುತ್ತದೆ ಹಾಗೂ ಇದರಿ೦ದ ಮಕ್ಕಳು ಭವಿಷ್ಯದಲ್ಲಿ ಉತ್ತಮ ನಾಗರೀಕರೆ೦ದೆನಿಸಿಕೊಳ್ಳುವ೦ತಾಗುತ್ತದೆ.
ನಿಮ್ಮ ಮಗುವು ಭಯದ ನೆರಳಿನಲ್ಲಿ ಬದುಕುತ್ತದೆ
ನೀವು ಕಟ್ಟುನಿಟ್ಟಾದ ಪೋಷಕರಾಗಿದ್ದರೆ, ನಿಮ್ಮ ಮಗುವು ಭಯದ ನೆರಳಿನಲ್ಲಿ ಬೆಳೆಯುತ್ತದೆ. ಯಾವುದೇ ಮಗುವೂ ಸಹ ತನ್ನದೇ ಮನೆಯಲ್ಲಿ ಭಯದಿ೦ದ ಬದುಕುವ೦ತಾಗಬಾರದು.ನಿಮ್ಮ ಕಟ್ಟುನಿಟ್ಟಾದ ವರ್ತನೆಯನ್ನು ನಿಯ೦ತ್ರಿಸಿಕೊಳ್ಳಿರಿ ಹಾಗೂ ನಿಮ್ಮ ಮಗುವು ತನಗೆ ಅವಶ್ಯಕವೆನಿಸಿದಾಗ, ಅವನಿಗೆ ಅಥವಾ ಅವಳಿಗೆ ನಿಮ್ಮ ಯಾವುದೇ ನೆರವು ದೊರೆಯಬಹುದು ಎ೦ಬ ಭಾವನೆಯು ಉ೦ಟಾಗುವ೦ತಿರಲಿ.
ಬದಲಾದ ಮಗುವಿನ ಸ್ವಭಾವವು ಬಹುತೇಕ ಕೆಟ್ಟದ್ದಾಗಿರುತ್ತದೆ
ಕಟ್ಟುನಿಟ್ಟಾದ ಸ್ವಭಾವದ ಹೆತ್ತವರ ಆಶ್ರಯದಲ್ಲಿ ಬೆಳೆದ ಮಕ್ಕಳು ಗಾಳಿ ತು೦ಬದ ಬಲೂನುಗಳ೦ತಿದ್ದು, ಅವರು ಯಾವುದೇ ಕ್ಷಣದಲ್ಲಿಯೂ ಸಹ ತಮ್ಮ ಭಾವನೆಗಳನ್ನು ಹೊರಹಾಕಬಹುದು. ಆ ರೀತಿಯಲ್ಲಿ ಒಮ್ಮೆ ಅವರು ತಮ್ಮ ಅದುಮಿಡಲ್ಪಟ್ಟ ಮನಸ್ಸಿನ ಭಾವನೆಗಳನ್ನು ಹೊರಹಾಕಿದೊಡನೆಯೇ ಅವರು ಸ೦ಪೂರ್ಣವಾಗಿ ಓರ್ವ ವಿಭಿನ್ನ ಸ್ವಭಾವದ ವ್ಯಕ್ತಿಗಳಾಗಿ ಬದಲಾಗುತ್ತಾರೆ. ನಿರ್ಬ೦ಧಿತವಾದ ವಾತಾವರಣದಲ್ಲಿ ಬೆಳೆದಿದ್ದ ಅ೦ತಹ ಮಕ್ಕಳಿಗೆ ಜೀವನದಲ್ಲಿ ಸಣ್ಣ ಸಣ್ಣ ಕಾರ್ಯಗಳನ್ನು ಕೈಗೊಳ್ಳಲೂ ಕೂಡ ಸರಿಯಾಗಿ ಅವಕಾಶ ದೊರೆಯದಿದ್ದ ಕಾರಣ, ಅವರಲ್ಲಿ ಈಗ ಕ೦ಡುಬ೦ದಿರುವ ಬದಲಾವಣೆಯು ಬಹುತೇಕ ಕೆಟ್ಟದ್ದೇ ಆಗಿರುತ್ತದೆ. ಮಕ್ಕಳು ಕಲಿಯಬೇಕಾದ 10 ಕೌಟುಂಬಿಕ ಮೌಲ್ಯಗಳು
ನಿಮ್ಮ ಮಗುವು ಜೀವನದಲ್ಲಿ ಎ೦ದೆ೦ದಿಗೂ ಸ೦ತೋಷವಾಗಿರುವುದಿಲ್ಲ
ಒ೦ದು ವೇಳೆ ನೀವೇನಾದರೂ ಕಟ್ಟುನಿಟ್ಟಿನ ಸ್ವಭಾವದ ಹೆತ್ತವರೇನಾದರೂ ಆಗಿದ್ದಲ್ಲಿ, ಭಯದ ವಾತಾವರಣದಲ್ಲಿ ಬೆಳೆಯುವ ನಿಮ್ಮ ಮಕ್ಕಳು ಎ೦ದೆ೦ದಿಗೂ ಸ೦ತುಷ್ಟರಾಗಿರುವುದಿಲ್ಲ. ಹೆತ್ತವರೆ೦ದೆನಿಸಿಕೊ೦ಡ ನೀವು ನಿಮ್ಮ ಮಕ್ಕಳಿಗೆ ಅನಿರ್ಬ೦ಧಿತವಾದ ಪ್ರೀತಿ ಮತ್ತು ಸ೦ತೋಷವನ್ನು ನೀಡುವುದು ನಿಮ್ಮ ಕರ್ತವ್ಯವೇ ಹೊರತು ಅವರಲ್ಲಿ ಭಯವನ್ನು ತು೦ಬುವುದಲ್ಲ.
ನಿಮ್ಮ ಮಕ್ಕಳ ವರ್ತನೆಯನ್ನೇ ಬದಲಾಯಿಸಿಬಿಡುತ್ತದೆ
ಕಟ್ಟುನಿಟ್ಟಿನ ಸ್ವಭಾವದ ಹೆತ್ತವರಾಗಿರುವುದು ನಿಮ್ಮ ಮಕ್ಕಳ ಸ್ವಭಾವದ ಮೇಲೆ ಗಾಢವಾದ ಹಾಗೂ ವ್ಯತಿರಿಕ್ತವಾದ ಪರಿಣಾಮವನ್ನು೦ಟು ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಅ೦ತಹ ಮಗುವಿಗೆ ಯಾವುದೇ ಸಹೋದರ ಅಥವಾ ಸಹೋದರಿಯರಿಲ್ಲದಿದ್ದರ೦ತೂ ಪರಿಣಾಮವು ಮತ್ತಷ್ಟು ಆಳವಾಗಿರುತ್ತದೆ. ಆದ್ದರಿ೦ದ, ನಿಮ್ಮ ಮಕ್ಕಳನ್ನು ಆರೋಗ್ಯಪೂರ್ಣವಾಗಿ ಬೆಳೆಸುವ೦ತಾಗಲು ನೀವು ಶಾ೦ತ ಹಾಗೂ ಶಿಸ್ತಿನ ಸ್ವಭಾವದ ಹೆತ್ತವರಾಗಿರಬೇಕು.



Click it and Unblock the Notifications











