Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನಿಮ್ಮ ಮಗು ಬೆಡ್ ಒದ್ದೆ ಮಾಡುವುದೇ?
ಮಗು 2 ವರ್ಷ ಕಳೆದ ಮೇಲೂ ಬೆಡ್ ಒದ್ದೆ ಮಾಡುತ್ತಿದ್ದರೂ ಹೆಚ್ಚಿನ ಪೋಷಕರು ಆ ವಿಷಯವನ್ನು ತುಂಬಾ ಸರಳವಾಗಿ ತೆಗೆದುಕೊಳ್ಳುತ್ತಾರೆ. ಮೂರು ವರ್ಷದಲ್ಲಿ ಮಗುವಿಗೆ ನನಗೆ ಮೂತ್ರ ಮಾಡಲು ಹೋಗಬೇಕೆಂದು ಹೇಳಲು ಅಥವಾ ಕೈ ಸೆನ್ನೆ ಮಾಡಲು ಗೊತ್ತಿರುತ್ತದೆ, ಸಾಮಾನ್ಯವಾಗಿ ಎರಡು ವರ್ಷದ ಒಳಗಿಯೇ ಹೆಚ್ಚಿನ ಮಕ್ಕಳು ಬೆಡ್ ನಲ್ಲಿ ಮೂತ್ರ ಮಾಡುವುದನ್ನು ನಿಲ್ಲಿಸುತ್ತವೆ . ಮೂರು ವರ್ಷಕ್ಕಿಂತ ದೊಡ್ಡ ಮಗು ಬೆಡ್ ಒದ್ದೆ ಮಾಡುತ್ತಿದ್ದರೆ ಮಗು ಬೆಡ್ ಒದ್ದೆ ಮಾಡಲು ಕಾರಣವೇನು ಎಂದು ತಿಳಿಯಬೇಕು. ಆಗ ಪರಿಹಾರ ಸುಲಭವಾಗುತ್ತದೆ.
ಮಗು ಸ್ವಲ್ಪ ದೊಡ್ಡದಾದ ಮೇಲೂ ಮೂತ್ರ ಮಾಡುತ್ತಿದ್ದರೆ ಈ ಕೆಳಗಿನ ಅಂಶಗಳು ಪ್ರಮುಖ ಕಾರಣಗಳಾಗಿವೆ:

ಮಧುಮೇಹವಿದ್ದರೆ
ಟೈಪ್ 1 ಮಧುಮೇಹವಿದ್ದರೆ ಮಗು ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದು ಹಾಗೂ ನಿದ್ದೆಯಲ್ಲಿ ಬೆಡ್ ನಲ್ಲಿಯೇ ಮಾಡಿ ಬಿಡುತ್ತವೆ. ತಲೆಸುತ್ತು, ದೃಷ್ಟಿದೋಷ ಇವೆಲ್ಲಾ ಸಮಸ್ಯೆಯಿದ್ದರೆ ಕೂಡಲೇ ವೈದ್ಯರನ್ನು ಕಾಣಿ.
ಮಲಬದ್ಧತೆ
ಮಗುವಿನಲ್ಲಿ ಮಲಬದ್ಧತೆ ಸಮಸ್ಯೆಯಿದ್ದರೆ ಮಗು ಬೆಡ್ ಒದ್ದೆ ಮಾಡುತ್ತದೆ. ಈ ಸಮಸ್ಯೆ ದೊಡ್ಡವರಲ್ಲಿಯೂ ಕಂಡು ಬರುತ್ತದೆ.
ಗುಪ್ತಾಂಗದಲ್ಲಿ ಸಮಸ್ಯೆ
ಗುಪ್ತಾಂಗದಲ್ಲಿ ಚಿಕ್ಕ ಬ್ಲೇಡ್ ನಂತೆ ಇದ್ದರೆ ಬೆಡ್ ಒದ್ದೆ ಮಾಡುತ್ತಾರೆ. ಇದು ವಂಶಪಾರಂಪರ್ಯವಾಗಿ ಬರುವ ಕಾಯಿಲೆಯಾಗಿದ್ದು ಈ ಸಮಸ್ಯೆ ಮನೆಯಲ್ಲಿ ಯಾರಿಗಾದರೂ ಇದ್ದಿದ್ದರೆ ಮಗುವನ್ನು ವೈದ್ಯರಿಗೆ ತೋರಿಸಿ.
ಭಯ
ಮಗು ತುಂಬಾ ಭಯ ಪಟ್ಟಿದ್ದರೆ ಕೂಡ ರಾತ್ರಿಯಲ್ಲಿ ಹಾಸಿಗೆ ಒದ್ದೆ ಮಾಡುತ್ತದೆ.
ಒಡ ಹುಟ್ಟಿದವರ ಜೊತೆ ಸ್ಪರ್ಧೆ
ನೀವು ಕಿರಿಯ ಮಗುವಿನ ಮೇಲೆ ತುಂಬಾ ಆರೈಕೆ ತೋರಿಸುತ್ತಿರುವಿರಿ ಎಂದು ದೊಡ್ಡ ಕೆಲ ಮಕ್ಕಳು ಕೋಪಗೊಳ್ಳುತ್ತಾರೆ. ಅಂತಹ ಮಕ್ಕಳು ಹಠದಲ್ಲಿ ರಾತ್ರಿ ಮೂತ್ರ ಮಾಡುತ್ತವೆ. ಅಂತಹ ಮಕ್ಕಳನ್ನು ಬೆದರಿಸುವ ಬದಲು ತುಂಬಾ ಪ್ರೀತಿಸಿ. ಆಗ ತಮ್ಮ ಅಭ್ಯಾಸವನ್ನು ಬಿಡುತ್ತವೆ.
ಮಕ್ಕಳೆಡೆಗೆ ಗಮನ ಕಮ್ಮಿಯಾದರೆ
ಕೆಲಸವೆಂದು ನೀವು ತುಂಬಾ ಬ್ಯೂಸಿಯಾಗಿದ್ದು ರಾತ್ರಿ ಮಲಗುವ ಮುನ್ನ ಅವರನ್ನು ಟಾಯ್ಲೆಟ್ ಗೆ ಕರೆದುಕೊಂಡು ಹೋಗದೆ ಮಲಗಿಸಿದರೆ ಕೂಡ ಬೆಡ್ ಒದ್ದೆ ಮಾಡುತ್ತವೆ.



Click it and Unblock the Notifications
