Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಿಮ್ಮ ಮಕ್ಕಳ ಎತ್ತರ ಮತ್ತು ತೂಕ ಹೆಚ್ಚಿಸಬೇಕಾ?

ಮಕ್ಕಳ ಎತ್ತರ ಮತ್ತು ತೂಕ ಹೆಚ್ಚಿಸಲು ಹೀಗೆ ಮಾಡಿ:
1. ನಿಮ್ಮ ಮಗುವಿನ ತೂಕ ತುಂಬಾ ಕಡಿಮೆ ಇದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸಿ. ವೈದ್ಯರು ಮಗುವಿನ ತೂಕ ಮತ್ತು ಎತ್ತರವನ್ನು ಪರೀಕ್ಷಿಸಿ, ಈ ಸಮಸ್ಯೆ ವಂಶವಾಹಿಯೋ ಅಥವಾ ಆಹಾರ ಕ್ರಮದಿಂದ ಹೀಗಾಗಿರುವುದೋ ಎಂದು ನಿಖರವಾಗ ತಿಳಿಸಿ ಉತ್ತಮ ಆಹಾರ ಕ್ರಮದ ಸಲಹೆ ನೀಡುತ್ತಾರೆ.
2. ಮಕ್ಕಳಿಗೆ ಒಟ್ಟಿಗೆ ಹೆಚ್ಚು ಆಹಾರ ನೀಡುವುದಕ್ಕಿಂತ 2-3 ಗಂಟೆಯ ಅಂತರದಲ್ಲಿ ಸ್ವಲ್ಪ ಸ್ವಲ್ಪ ಆಹಾರ ನೀಡಬೇಕು. ಹಾಲು ಕುಡಿಯುವ ಮಗುವಾದರೆ ದಿನಕ್ಕೆ 6 ಬಾರಿ ಹಾಲುಣಿಸಬೇಕು.
3. ಮಕ್ಕಳ ಎತ್ತರ ಮತ್ತು ತೂಕ ವೃದ್ಧಿಗೆ ಕಬ್ಬಿಣಾಂಶ ತುಂಬಾ ಅವಶ್ಯಕ. ಕಬ್ಬಿಣಾಂಶ ಕಡಿಮೆಯಿದ್ದು, ಆಹಾರವೂ ಒಂದೇ ರೀತಿ ಮುಂದುವರೆದರೆ ಅದು ಅನೀಮಿಯಾ ಉಂಟಾಗಬಹುದು. ಆದ್ದರಿಂದ ಕಬ್ಬಿಣಾಂಶ ಹೆಚ್ಚಿರುವ ಕಿಡ್ನಿ ಬೀನ್, ಸೊಯಾ ಬೀನ್, ಎಲ್ಲ ಧವಸ ಧಾನ್ಯಗಳು, ಬ್ರೆಡ್, ಅನ್ನ ಇಂತಹ ಆಹಾರವನ್ನು ನೀಡಬೇಕು.
4. ಮಕ್ಕಳ ತೂಕ ತುಂಬಾ ಕಡಿಮೆಯಿದ್ದರೆ ಹೆಚ್ಚು ಕ್ಯಾಲೋರಿಗಳಿರುವ ಆಹಾರವನ್ನು ನೀಡಬೇಕು. ಕ್ಯಾಲೊರಿ ಪಟ್ಟಿಯನ್ನು ತಿಳಿದುಕೊಂಡು ಮಕ್ಕಳಿಗೆ ಅದರಂತೆ ಪೋಷಕಾಂಶವನ್ನು ಒದಗಿಸುವುದರಿಂದ ರಕ್ತಹೀನತೆಯನ್ನೂ ತಡೆದು ಮಕ್ಕಳು ಶಕ್ತಿಯುತವಾಗುತ್ತವೆ.
5. ಮಕ್ಕಳ ಎತ್ತರ ಹೆಚ್ಚಿಸಲು ಮಕ್ಕಳಿಗೆ ಸೈಕ್ಲಿಂಗ್ ಮತ್ತು ಇನ್ನಿತರ ದೈಹಿಕ ಆಟವಾಡಲು ಪ್ರೋತ್ಸಾಹ ನೀಡಬೇಕು.
6. ಮಕ್ಕಳಿಗೆ ನೀಡುವ ಆಹಾರದಲ್ಲಿ ಕ್ಯಾಲ್ಸಿಯಂ ಹೆಚ್ಚಿರುವುದನ್ನು ನೀಡಿ. ಇದು ಮಕ್ಕಳ ಮೂಳೆಯನ್ನು ಗಟ್ಟಿಗೊಳಿಸಿ ಅವರ ದೈಹಿಕ ಬೆಳವಣಿಗೆಗೂ ಸಹಾಯ ಮಾಡುತ್ತದೆ. ಹಾಲು, ಮೊಸರು ಮತ್ತು ಚೀಸ್ ಅನ್ನು ಮಕ್ಕಳಿಗೆ ಬೆಳವಣಿಗೆ ಅವಧಿಯಲ್ಲಿ ನೀಡಬೇಕು.
7. ತಾಮ್ರಾಂಶ ಹೆಚ್ಚಿರುವ ಮೀನು, ಮಾಂಸ, ಕಲ್ಲಂಗಡಿ ಬೀಜ, ಕಡಲೆಕಾಯಿ, ಡಾರ್ಕ್ ಚಾಕಲೇಟ್ ಇಂತಹವುಗಳನ್ನು ನೀಡಬೇಕು.



Click it and Unblock the Notifications
