Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
JusticeforMihir:ಕಮೋಡ್‌ನಲ್ಲಿ ಮುಖವನ್ನು ಒತ್ತಿ ಹಿಡಿದು ರ‍್ಯಾಗಿಂಗ್: ಪೋಷಕರೇ ನಿಮ್ಮನ್ನು ಬೆಚ್ಚಿ ಬೀಳಿಸುತ್ತೆ ಈ ದುರಂತೆ ಕತೆ
ಕೇರಳದ 15ರ ಪ್ರಾಯದ ಮಿಹೀರ್ ಎಂಬ ಬಾಲಕನ ದುರಂತ ಕತೆ ಕೇಳಿದರೆ ಪ್ರತಿಯೊಂದು ಪೋಷಕರು ಬೆಚ್ಚಿ ಬೀಳುವಂತಿದೆ, ಪೋಷಕರೇ ನಮ್ಮ ಮಕ್ಕಳ ಪ್ರತಿಯೊಂದು ಹೆಜ್ಜೆಯನ್ನು ನಾವು ಗಮನಿಸಬೇಕು, ನಮ್ಮ ಮಕ್ಕಳ ಮನಸ್ಸನ್ನು ನಾವು ಅರಿಯಬೇಕು, ಅದರಲ್ಲಿಯೂ ಹದಿಹರೆಯದ ವಯಸ್ಸಿನಲ್ಲಿ ಅವರ ಪ್ರತಿಯೊಂದು ಚಲನವಲನ ಗಮನಿಸಬೇಕು, ಇಲ್ಲದಿದ್ದರೆ ದೊಡ್ಡ ಅನಾಹುತ ಸಂಭವಿಸಬಹುದು. ಇಷ್ಟೆಲ್ಲಾ ಹೇಳಲು ಕಾರಣ ಮಿಹೀರ್ ಎಂಬ ಬಾಲಕನ ದುರಂತ ಅಂತ್ಯ.

ಕೇರಳದ ಪ್ರತಿಷ್ಠಿತ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಹುಡುಗ, ರ‍್ಯಾಗಿಂಗ್ ಭೂತಕ್ಕೆ ಜೀವ ಕಳೆದುಕೊಂಡಿದ್ದಾನೆ, ಜನವರಿ 15ಕ್ಕೆ 26ನೇ ಮಹಡಿಯಿಂದ ಹಾರಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಬಾಲಕ ಹೀಗೆ ಪ್ರಾಣ ಕಳೆದುಕೊಂಡಾಗ ಅವನ ಸಾವಿಗೆ ಕಾರಣವೇನು ಎಂಬುವುದು ಆವಾಗ ಅಷ್ಟಾಗಿ ಹೊರ ಬಂದಿರಲಿಲ್ಲ, ಓದಿನ ಒತ್ತಡ ಅಥವಾ ಮತ್ತಿತರ ಕಾರಣದಿಂದಾಗಿ ಆ ಹುಡುಗ ಪ್ರಾಣ ಕಳೆದುಕೊಂಡಿರಬಹುದು ಎಂದು ಹೇಳಲಾಗಿತ್ತು, ಆದರೆ ಆ ಹುಡುಗ ನಾವೆಲ್ಲಾ ಊಹಿಸಿರುವುದಕ್ಕಿಂತಲೂ ಹೆಚ್ಚಿನ ನರಕವನ್ನು ರ‍್ಯಾಗಿಂಗ್ ಹೆಸರಿನಲ್ಲಿ ಅನುಭವಿಸಿದ್ದು. ಈ ವಿಷಯ ಹೊರ ಬರುತ್ತಿದ್ದಂತೆ JusticeforMihir ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಟಾಯ್ಲೆಟ್ ಕಮೋಡ್‌ನಲ್ಲಿ ಆತನ ತಲೆಯನ್ನು ಒತ್ತಿ ಹಿಡಿದು ಫ್ಲಶ್ ಮಾಡಿದ್ದರಂತೆ!
ಅಬ್ಬಾಬ್ಬ! ಎಂಥ ಕ್ರೂರ ಮನಸ್ಥಿತಿ, ಹೈಸ್ಕೂಲ್ ಓದುವ ಮಕ್ಕಳಲ್ಲಿ ಇಂಥ ಮನಸ್ಥಿತಿಯೇ? ಒಂದು ಶಾಲೆಯಲ್ಲಿ ಮಕ್ಕಳು ಈ ರೀತಿ ಹದ್ದುಮೀರಿ ವರ್ತಿಸಿದ್ದಾರೆ ಎಂದಾಗ ಆ ಶಾಲೆಯ ಶಿಕ್ಷಕರಿಗೆ, ಪ್ರಿನ್ಸಿಪಾಲ್‌ಗೆ ಗೊತ್ತಿರಲೇ ಇಲ್ಲ ಎಂದು ಹೇಳಿದರೆ ಅದು ಶುದ್ಧ ಸುಳ್ಳು, ಆ ಮಕ್ಕಳೆಲ್ಲಾ ದೊಡ್ಡ-ದೊಡ್ಡ ಉದ್ಯಮಿಗಳ ಮಕ್ಕಳು ಅವರ ವಿರುದ್ಧ ಮಾತನಾಡಿದರೆ ಸುಮ್ಮನೆ ಶಾಲೆಗೆ, ಶಾಲೆಗೆ ಅವರು ನೀಡುತ್ತಿರುವ ಫಂಡ್‌ಗೆ ತೊಂದರೆಯಾಗುವುದು ಎಂದು ಸುಮ್ಮನಿದ್ದರೇ? ಅನ್ಯಾಯವಾಗಿ ಒಂದು ಜೀವ ಬಲಿಯಾಗಿದೆ, ಮಗನ ಬಗ್ಗೆ ನೂರಾರು ಕನಸು ಕಂಡಿದ್ದ ಪೋಷಕರ ಮಡಿಲು ಬರಿದಾಗಿದೆ.
ಆತ ಜನವರಿ 15ಕ್ಕೆ ಆತ್ಮಹತ್ಯೆ ಮಾಡಿಕೊಂಡಾಗ ಆತನ ಸಾವಿನ ಹಿಂದೆ ಇಂಥ ಕತೆಯಿದೆ ಎಂದು ಯಾರೂ ಊಹಿಸಿರಲಿಲ್ಲ, ಸಾಮಾನ್ಯವಾಗಿ ಕೇಳಿ ಬರುವಂತೆ ಓದಿನ ಒತ್ತಡ, ಖಿನ್ನತೆ ಈ ಕಾರಣದಿಂದ ಆ ನಿರ್ಧಾರಕ್ಕೆ ಬಂದಿರಬಹುದು ಎಂದು ಊಹಿಸಿಲಾಗಿತ್ತು, ಆದರೆ ಆ ಕಾಲೇಜಿನ ವಿದ್ಯಾರ್ಥಿಗಳು ವಾಟ್ಸಾಪ್ ಗ್ರೂಪ್‌ನಿಂದಾಗಿ ಸತ್ಯ ಹೊರಬಿತ್ತು. ಮಿಹೀರ್ ರೀತಿಯೇ ನೊಂದ ವಿದ್ಯಾರ್ಥಿಗಳು ವಾಟ್ಸಾಪ್ ಗ್ರೂಪ್‌ನಲ್ಲಿ ಸಾಯುವುದಕ್ಕೆ ಮೊದಲು ಆತನು ಅನುಭವಿಸಿದ ಕಷ್ಟಗಳನ್ನು ಕೇಳಿದಾಗ ನಮ್ಮ ಮನಸ್ಸು ಭಾರವಾಗುತ್ತೆ, ಅವನ ಹೆತ್ತವರು ಸಹಿಸುವುದಾದರು ಹೇಗೆ?
ಈ ಮಿಹೀರ್ ಆ ಶಾಲೆಗೆ ಈ ವರ್ಷವಷ್ಟೇ ಬಂದಿದ್ದ, ಅವನನ್ನು ರ‍್ಯಾಗಿಂಗ್ ಮಾಡಿದಾಗ ಅದನ್ನು ಧೈರ್ಯವಾಗಿ ಎದುರಿಸಿದ್ದ, ಅದನ್ನು ಸಹಿಸಲು ಸಾಧ್ಯವಾಗದ ಆ ವಿದ್ಯಾರ್ಥಿಗಳ ಗುಂಪು ನಂತರ ಇವನ ಬಣ್ಣ, ರೂಪ ಹೇಳಿ ಹೀಯಾಳಿಸಲು ಆರಂಭಿಸುತ್ತಾರೆ, ತುಂಬಾ ಚುರುಕಾಗಿದ್ದ ಹುಡುಗ ನಿಧಾನಕ್ಕೆ ಮಂಕಾಗಲು ಆರಂಭಿಸುತ್ತಾರೆ, ಪೋಷಕರು ಇದನ್ನು ಗಮನಿಸುತ್ತಾರೆ, ಹೊಸ ಸ್ಕೂಲ್, ಹೊಂದಿಕೊಳ್ಳಲು ಸ್ವಲ್ಪ ಸಮಯವಾಗುತ್ತೆ ಅಂದುಕೊಂಡಿರಬಹುದು. ಮಿಹೀರ್ ಕೂಡ ನನಗೆ ಏನು ಆಗುತ್ತಿದೆ ಎಂದು ಪೋಷಕರ ಬಳಿ ಹೇಳಿಕೊಳ್ಳಲಿಲ್ಲ. ರ‍್ಯಾಗಿಂಗ್ ಎಷ್ಟರಮಟ್ಟಿಗೆ ಇತ್ತೆಂದರೆ ಈತನ ತಲೆಯನ್ನು ಕಮೋಡ್‌ನೊಳಗೆ ಹಾಕಿ ಫ್ಲಶ್ ಮಾಡಿದ್ದರು, ಟಾಯ್ಲೆಟ್ ನೀರು ಆತನ ಮುಖಕ್ಕೆ ಬಿದ್ದಾಗ ಆ ಹುಡುಗ ಅನುಭವಿಸಿದ ಅವಮಾನ, ನೋವು ಎಂಥದ್ದು ಎಂದು ನಮಗೆ ಊಹಿಸಲೂ ಸಾಧ್ಯವಾಗಲ್ಲ, ಅದೇ ಕಾರಣದಿಂದಾಗಿ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರ‍್ಯಾಗಿಂಗ್ ಮಾಡಿದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿದೆ,, ಹೀಗಾಗಿ JusticeforMihir ಕೂಗು ಜೋರಾಗಿ ಕೇಳಿ ಬರುತ್ತಿದೆ.
ಪೋಷಕರೇ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದ ಮೇಲೆ ಅಲ್ಲಿ ನಡೆಯುವ ಪ್ರತಿಯೊಂದು ವಿಷಯಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು, ಪ್ರತಿಷ್ಠಿತ ಶಾಲೆ ಎಂದು ಸುಮ್ಮನಾಗಬಾರದು, ಅಲ್ಲಿರುವ ಹುಳುಕುಗಳ ಬಗ್ಗೆ ಕೂಡ ತಿಳಿಯಬೇಕು, ಇಲ್ಲದಿದ್ದರೆ ನಮ್ಮ ಮಕ್ಕಳಿಗೆ ಕಂಟಕವಾಗಬಹುದು. ಮಿಹೀರ್‌ನ ಆ ನಗು ಮುಖ ನೋಡುವಾಗ ಕಣ್ಣಂಚಿನಲ್ಲಿ ನೀರು ಬರುತ್ತೆ... ಮಿಹೀರ್ ಸಾವಿಗೆ ಕಾರಣವಾದ ಮಕ್ಕಳಿಗೆ ತಕ್ಕ ಶಿಕ್ಷೆ ಆಗಲೇಬೇಕಾಗಿದೆ, ಎಲ್ಲಿಯೂ ರ‍್ಯಾಗಿಂಗ್ ಎಂಬ ಪದ ಕೂಡ ಕೇಳಿ ಬರಬಾರದು ಆ ರೀತಿಯ ಭಯ ವಿದ್ಯಾರ್ಥಿಗಳಲ್ಲಿಯೂ ಬರಬೇಕಾಗಿದೆ...Rest in peace dear Mihir



Click it and Unblock the Notifications











