Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಗು ಬೇಕೆಂಬ ಒತ್ತಡ ಹೆಚ್ಚಾದಾಂತೆ ಮಿಲನಕ್ರಿಯೆಯಲ್ಲಿ ನಿರಾಸಕ್ತಿ ಉಂಟಾಗಲು ಕಾರಣವೇನು?
ಲಕ್ಷ್ಮಿ ಮತ್ತು ಶರತ್ (ಕಾಲ್ಪಾನಿಕ ಹೆಸರುಗಳು) ಮದುವೆಯಾಗಿ 7 ವರ್ಷಗಳು ಕಳೆದಿತ್ತು. ಇಬ್ಬರ ನಡುವೆ ಸುಂದರ ಅನುಬಂಧವಿತ್ತು, ಇಬ್ಬರು ತುಂಬ ಖುಷಿ-ಖುಷಿಯಾಗಿ ಇದ್ದರು . ಮದುವೆಯಾಗಿ ಎರಡು ಮೂರು ವರ್ಷ ಕಳೆಯುತ್ತಿದ್ದಂತೆ ನಾವಿಬ್ಬರು ಇದ್ದದ್ದು ಸಾಕು, ನಮ್ಮ ನಡುವೆ ಎರಡು ಮುದ್ದಾದ ಕಾಲುಗಳು ಓಡಾಡುವಂತಾಗಲಿ ಎಂದು ಬಯಸುತ್ತಾರೆ.
ಪ್ರೆಗ್ನನ್ಸಿ ಪ್ಲ್ಯಾನಿಂಗ್ ಮಾಡುತ್ತಾರೆ, ಆದರೆ ಗರ್ಭಧಾರಣೆಯಾಗಿರಲ್ಲ, ಆಗಬಹುದು ಅಂತ ಒಂದು ವರ್ಷ ಪ್ರಯತ್ನಿಸುತ್ತಾರೆ, ನಂತರ ವೈದ್ಯರನ್ನು ಭೇಟಿಯಾಗುತ್ತಾರೆ. ಅವರು ಕೆಲವೊಂದು ಸಲಹೆ ಸೂಚನೆಗಳನ್ನು ನೀಡುತ್ತಾರೆ, ಇಬ್ಬರು ಯಾವ ದಿನಗಳಲ್ಲಿ ಒಂದಾಗಬೇಕು ಎಂಬುವುದರ ಬಗ್ಗೆ ಕೂಡ ಹೇಳುತ್ತಾರೆ.

ವೈದ್ಯರು ಹೇಳಿದಂತೆ ಪ್ರಯತ್ನಿಸುತ್ತಾರೆ. ಪ್ರಾರಂಭದಲ್ಲಿ ಇದ್ದ ಆಸಕ್ತಿ ನಿಧಾನಕ್ಕೆ ದೂರಾದಂತೆನಿಸುವುದು. ಇಬ್ಬರು ಜೊತೆಯಾಗಿ ಖುಷಿಯಿಂದ ಸಮಯ ಕಳೆದು ತುಂಬಾ ದಿನಗಳಾದಂತೆ ಅನಿಸುವುದು, ದೈಹಿಕವಾಗಿ ಒಂದಾಗುತ್ತಿದ್ದರು, ಮೊದಲು ಅನುಭವಿಸುತ್ತಿದ್ದ ರೊಮ್ಯಾನ್ಸ್, ಖುಷಿ ಅನುಭವಿಸುತ್ತಿಲ್ಲ, ಮಿಲನ ಪ್ರಕ್ರಿಯೆಯನ್ನು ಒಂದು ಕ್ರಿಯೆಯಂತೆ ಮಾಡುವ ಅನಿವಾರ್ಯತೆ.
ಅಂಡಾಣು ಉತ್ಪತ್ತಿ ಸಮಯದಲ್ಲಿ ಆಸಕ್ತಿ ಇಲ್ಲದಿದ್ದರೂ ಬಲವಂತದಿಂದ ಒಂದಾಗಬೇಕಾದ ಪರಿಸ್ಥಿತಿ, ಬರು ಬರುತ್ತಾ ಇಬ್ಬರಲ್ಲಿ ಲೈಂಗಿಕ ಆಸಕ್ತಿಯಾದಂತೆ ಕಡಿಮೆಯಾದಂತೆ ಅನಿಸುವುದಕ್ಕೆ ಶುರುವಾಗುತ್ತೆ, ಒಂದು ಕಡೆ ಮಗುವಾಗಿಲ್ಲ ಎಂಬ ಚಿಂತೆ, ಮತ್ತೊಂದೆಡೆ ಮೊದಲಿನಂತೆ ಬದುಕಿಲ್ಲ ಎಂಬ ಅನಿಸಿಕೆ ಎಲ್ಲಾ ಸೇರಿದಾಗ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುವಂತಾಗುವುದು. ಇದು ಬರೀ ಒಬ್ಬರ ಕತೆಯಲ್ಲ, ಫರ್ಟಿಲಿಟಿ ಚಿಕಿತ್ಸೆ ಪಡೆಯುತ್ತಿರುವ ಬಹುತೇಕರು ಇದೇ ಮಾತನ್ನು ಹೇಳುತ್ತಾರೆ.
ಮೊದಲೆಲ್ಲಾ ಇಬ್ಬರು ಒಂದಾಗುವಾಗ ಖುಷಿಯಿರುತ್ತಿತ್ತು, ಆದರೆ ಈಗ ಮಗುವಿಗಾಗಿ ಪ್ರಯತ್ನಿಸಬೇಕು, ಇಬ್ಬರಲ್ಲಿ ಒಬ್ಬರಿಗೆ ಮೂಡ್ ಇಲ್ಲಾಂದ್ರೂ ಸೇರಬೇಕಾದಾಗ ಒಂಥರಾ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಈ ರೀತಿಯಾಗಲು ಕಾರಣವೇನು? ಈ ಭಾವನೆಗಳನ್ನು ಬದಲಾಯಿಸುವುದು ಹೇಗೆ ಎಂದು ನೋಡೋಣ ಬನ್ನಿ:
ಸೆಕ್ಸ್ ಎಂಬುವುದು ಅದೊಂದು ಕೆಲಸದಂತೆ ಭಾಸವಾಗುವುದು
ಮಗುವಿಗಾಗಿ ಪ್ರಯತ್ನಿಸುವಾಗ ಮೊದಲು ಅನುಭವಿಸುತ್ತಿದ್ದ ಖುಷಿ ಅನುಭವಿಸಲು ಸಾಧ್ಯವಾಗಲ್ಲ, ಮೊದಲೆಲ್ಲಾ ಇಬ್ಬರು ಪರಸ್ಪರ ರೊಮ್ಯಾಂಟಿಕ್ ಮೂಡ್‌ನಲ್ಲಿ ಸಮಯ ಕಳೆಯುತ್ತಿದ್ದರು, ಆದರೆ ಯಾವಾಗ ವೈದ್ಯರು ನೀವು ಈ ದಿನಗಳಲ್ಲಿ ಕಡ್ಡಾಯವಾಗಿ ಪ್ರಯತ್ನಿಸಬೇಕು ಎಂದು ಹೇಳುತ್ತಾರೋ ಆವಾಗ ಅದೊಂದು ಉದ್ಯೋಗದಂತೆ ಭಾಸವಾಗುವುದು. ಇದರಿಂದಾಗಿ ಖುಷಿ ದೂರಾಗುವುದು.
ಮಹಿಳೆಗೆ ಮಾತ್ರವಲ್ಲ ಪುರುಷನಲ್ಲೂ ಖಿನ್ನತೆ ಉಂಟಾಗುವುದು
ಮಗು ಬೇಕೆಂಬ ಬಯಕೆ ಇಬ್ಬರಲೂ ಇರುತ್ತದೆ. ಆದ್ದರಿಂದ ಗರ್ಭಧಾರಣೆಯಾಗದೇ ಇದ್ದಾಗ ಅದು ಕೇವಲ ಮಹಿಳೆ ಮೇಲೆ ಮಾತ್ರವಲ್ಲ, ಪುರುಷರ ಮೇಲೂ ಪರಿಣಾಮ ಬೀರುವುದು. ಅವರು ಕೂಡ ಮಾನಸಿಕ ಒತ್ತಡಕ್ಕೆ ಒಳಗಾಗಬಹುದು, ಇದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಬಹುದು ಅಥವಾ ಶೀಘ್ರ ಸ್ಖಲನ ಉಂಟಾಗಬಹುದು.
ಚಿಕಿತ್ಸೆಯಿಂದಾಗಿ ಒಂದು ರೀತಿಯ ಬೇಸರ ಉಂಟಾಗುವುದು
ಗರ್ಭಧಾರಣೆಗೆ ತೆಗೆದುಕೊಳ್ಳುವ ಚಿಕಿತ್ಸೆ ಭಾವನೆಗಳ ಮೇಲೆ ಕೂಡ ಪರಿಣಾಮ ಬೀರುವುದು. ಪ್ರತಿತಿಂಗಳು ಪ್ರೆಗ್ನೆನ್ಸಿ ಕಿಟ್‌ನಲ್ಲಿ ಡಬಲ್ ಲೈನ್ ಬರಲಿ ಎಂದು ಆಸೆಬಟ್ಟು ಪರೀಕ್ಷೆ ಮಾಡಿದಾಗ ಗರ್ಭಿಣಿಯಾಗಿಲ್ಲ ಎಂದು ತಿಳಿದಾಗ ಮನಸ್ಸಿಗೆ ತುಂಬಾನೇ ನೋವಾಗುವುದು. ಈ ಬಗೆಯ ಭಾವನೆಗಳು ಲೈಂಗಿಕ ಆಸಕ್ತಿ ಕಡಿಮೆಯಾಗುವಂತೆ ಮಾಡುವುದು.
ಮಹಿಳೆ ವಾಚ್ ವುಮೆನ್ ಆಗುತ್ತಾಳೆ
ಇತರ ಸಂದರ್ಭದಲ್ಲಿ ತನ್ನ ಅಂಡೋತ್ಪತ್ತಿ ದಿನದ ಬಗ್ಗೆ ಕೇರ್ ಮಾಡುವುದಿಲ್ಲ. ಮುಟ್ಟಿನ ದಿನಾಂಕ ಗೊತ್ತಿರುತ್ತದೆ,ಆದರೆ ಅಂಡೋತ್ಪತ್ತಿ ದಿನದ ಟ್ರ್ಯಾಕ್ ಮಾಡಲು ಹೋಗುವುದಿಲ್ಲ. ಆದರೆ ಗರ್ಭಧಾರಣೆಗೆ ಚಿಕಿತ್ಸೆಗೆ ಪ್ರಯತ್ನಿಸುವಾಗ ಈ ದಿನಗಳು ತುಂಬಾ ಮುಖ್ಯವಾಗಿರುವುದರಿಂದ ಅವಳು ಮುಟ್ಟಾದ ದಿನದಿಂದ ಅಂಡೋತ್ಪತ್ತಿ ದಿನದವರೆಗೆ ಪ್ರತಿಯೊಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇವೆಲ್ಲಾ ಅವಳಲ್ಲಿ ಮಾನಸಿಕ ಒತ್ತಡ ಹೆಚ್ಚಿಸುವುದು.
ಈ ಭಾವನೆಗಳನ್ನು ಬದಲಾಯಿಸುವುದು ಹೇಗೆ?
* ನೀವಿಬ್ಬರು ತುಂಬಾ ಚಿಂತಿಸಬೇಡಿ
ನೀವು ಚಿಕಿತ್ಸೆ ಪಡೆಯುತ್ತಿದ್ದೀರಾ ಸರಿ, ಹಾಗಂತ ತುಂಬಾ ಯೋಚಿಸಬೇಡಿ, ಮೊದಲು ಇರುವಂತೆಯೇ ಸಹಜವಾಗಿರಲು ಪ್ರಯತ್ನಿಸಿ, ಸದಾ ಧನಾತ್ಮಕ ಯೋಚನೆ ನಿಮ್ಮದಾಗಿರಲಿ, ಇವೆಲ್ಲಾ ನಿಮ್ಮಿಬ್ಬರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವುದು.
* ಭಾವನಾತ್ಮಕ ಬೆಂಬಲ ಮುಖ್ಯ: ಅದರಲ್ಲೂ ಮಹಿಳೆಗೆ ಈ ಸಮಯದಲ್ಲಿ ಭಾವನಾತ್ಮಕ ಬೆಂಬಲ ತುಂಬಾನೇ ಮುಖ್ಯವಾಗಿರುತ್ತದೆ. ಅವಳಿಗೆ ಭಾವನಾತ್ಮಕ ಬೆಂಬಲ ನೀಡಿ, ಆದಷ್ಟು ಇತರ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿರಿ. ಇದರಿಂದ ನಿಮ್ಮಿಬ್ಬರ ಮಾನಸಿಕ ಒತ್ತಡ ಕಡಿಮೆಯಾಗುವುದು.



Click it and Unblock the Notifications
