Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗರ್ಭಿಣಿಯರು ಎಳ್ಳು ತಿನ್ನುವುದು ಸುರಕ್ಷಿತವೇ?
ಸಂಕ್ರಾಂತಿಗೆ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ ಎಂಬ ಮಾತಿದೆ. ಚಳಿಗಾಲದಲ್ಲಿ ಮೈ ಉಷ್ಣತೆ ಕಾಪಾಡಲು ಎಳ್ಳು ಸಹಾಯ ಮಾಡುತ್ತದೆ. ಗರ್ಭಿಣಿಯರು ಮೈ ಉಷ್ಣಾಂಶ ಹೆಚ್ಚು ಮಾಡು ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂದು ಹೇಳುತ್ತಾರೆ.

ಹಾಗಾದರೆ ಗರ್ಭಿಣಿಯರಿಗೆ ಎಳ್ಳು ಒಳ್ಳೆಯದೇ ಎಂದು ನೋಡೋಣ ಬನ್ನಿ:
ಮೈ ಉಷ್ಣಾಂಶ ಹೆಚ್ಚಿಸುವ ಆಹಾರಗಳು ಗರ್ಭಿಣಿಯರಿಗೆ ಒಳ್ಳೆಯದಲ್ಲ
ಮೈ ಉಷ್ಣತೆ ಹೆಚ್ಚಿಸುವ ಆಹಾರಗಳನ್ನು ಮೊದಲ 3 ತಿಂಗಳು ಸೇವಿಸದಂತೆ ವೈದ್ಯರು ಕೂಡ ಸಲಹೆ ನೀಡುತ್ತಾರೆ. ಏಕೆಂದರೆ ಅಧಿಕ ಉಷ್ಣಾಂಶವಿರುವ ಆಹಾರ ಸೇವಿಸಿದರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು. ಹಾಗಾದರೆ ಎಳ್ಳು ತಿನ್ನಬಹುದೇ?
ಗರ್ಭಿಣಿಯರು ಎಳ್ಳು ತಿನ್ನಬಹುದು
ಎಳ್ಳು ತುಂಬಾ ಆರೋಗ್ಯಕರ, ಇದನ್ನು ಮಿತಿವಾಗಿ ಬಳಸಿದರೆ ಗರ್ಭಿಣಿಯರಿಗೆ ತುಂಬಾ ಒಳ್ಳೆಯದು. ಎಳ್ಳು-ಬೆಲ್ಲ ಎಂದಾಗ ಅದರ ಜೊತೆ ಕೊಬ್ಬರಿ ಕೂಡ ಬಳಸಲಾಗುವುದು. ಆದ್ದರಿಂದ ಮಕರ ಸಂಕ್ರಾಂತಿಯಲ್ಲಿ ಮಾಡುವ ಎಳ್ಳು-ಬೆಲ್ಲ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಎಳ್ಳಿನಲ್ಲಿ ಈ ಪೋಷಕಾಂಶಗಳಿರುವುದರಿಂದ ಗರ್ಭಿಣಿಯರಿಗೆ ಒಳ್ಳೆಯದು
* ಕಬ್ಬಿಣದಂಶ
* ಆಕ್ಸಾಲಿಕ್ ಆಮ್ಲ, ಅಮೈನೋ ಆಮ್ಲ, ಪ್ರೊಟೀನ್, ವಿಟಮಿನ್ ಬಿ, ಸಿ, ಇ ಮತ್ತು ಆ್ಯಂಟಿಆಕ್ಸಿಡೆಂಟ್ ಅಧಿಕವಿದೆ.
ಗರ್ಭಿಣಿಯರು ಕಬ್ಬಿಣದಂಶವಿರುವ ಆಹಾರ ಹೆಚ್ಚಾಗಿ ಸೇವಿಸಬೇಕು, ಅದರಲ್ಲೂ ಸಸ್ಯಾಹಾರಿಗಳಾದರೆ ಕಬ್ಬಿಣದಂಶವಿರುವ ಆಹಾರದ ಕಡೆ ಗಮನ ನೀಡುವುದು ತುಂಬಾನೇ ಮುಖ್ಯ. ನಾನ್‌ವೆಜ್ ತಿನ್ನುವವರಿಗೆ ಮಾಂಸಾಹಾರಗಳಲ್ಲಿ ಕಬ್ಬಿಣದಂಶ ಸಿಗುತ್ತದೆ.
ಎಳ್ಳು ತಿನ್ನುವುದು ಗರ್ಭಿಣಿಯರಿಗೆ ಹೇಗೆ ಸಹಕಾರಿ?
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು
ಎಳ್ಳಿನಲ್ಲಿ ಸತುವಿನಂಶವಿರುವುದರಿಂದ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು, ಇದರಲ್ಲಿ ಕ್ಯಾಲ್ಸಿಯಂ ಕೂಡ ಅಧಿಕವಿದೆ. ಕ್ಯಾಲ್ಸಿಯಂ ಅಧಿಕವಿರುವ ಆಹಾರಗಳನ್ನು ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ. ಹಾಲಿನ ಜೊತೆಗೆ ಸ್ವಲ್ಪ ಎಳ್ಳು-ಬೆಲ್ಲ ಸವಿಯುವುದು ಒಳ್ಳೆಯದು.
ಗರ್ಭಿಣಿಯರಲ್ಲಿ ರಕ್ತ ಹೀನತೆ ತಡೆಗಟ್ಟುತ್ತದೆ
ಗರ್ಭಿಣಿಯರಲ್ಲಿ ಕಬ್ಬಿಣದಂಶ ಕೊರತೆ ಉಂಟಾದರೆ ರಕ್ತ ಹೀನತೆ ಉಂಟಾಗುವುದು. ಎಳ್ಳಿನಲ್ಲಿ ಕಬ್ಬಿಣದಂಶ ಇರುವುದರಿಂದ ರಕ್ತ ಹೀನತೆ ತಡೆಗಟ್ಟಲು ಸಹಕಾರಿ. ಎಳ್ಳಿನಲ್ಲಿ ಕಬ್ಬಿಣದಂಶ ಮಾತ್ರವಲ್ಲ ತಾಮ್ರದಂಶ ಹಾಗೂ ವಿಟಮಿನ್ ಬಿ6 ಇರುವುದರಿಂದ ರಕ್ತ ಉತ್ಪತ್ತಿಗೆ ಸಹಕಾರಿಯಾಗಿದೆ.
ಭ್ರೂಣದ ಬೆಳವಣಿಗೆಗೆ ಸಹಕಾರಿ
ಮಗುವಿನ ಬೆಳವಣಿಗೆ ಪ್ರೊಟೀನ್ ಹಾಗೂ ಅಮೈನೋ ಆಮ್ಲ ಅವಶ್ಯಕ, ಇದರಲ್ಲಿ ಈ ಎರಡು ಅಂಶಗಳಿರುವುದರಿಂದ ಭ್ರೂಣದಲ್ಲಿರುವ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಎಳ್ಳಿನಲ್ಲಿ ವಿಟಮಿನ್ ಬಿ, ರಿಬೋಫ್ಲೇವಿನ್, ನಿಯಾಸಿನ್, ತೈಯಾಮಿನ್ ಅಂಶಗಳಿವೆ. ಗರ್ಭಿಣಿಯರು ಕಬ್ಬಿಣದಂಶ ಆಹಾರ ಹೆಚ್ಚು ಸೇವಿಸುವುದರಿಂದ ದೇಹ ಆಮ್ಲಜನಕ ಹೆಚ್ಚು ಹೀರಿಕೊಳ್ಳುತ್ತದೆ. ಇದು ಗರ್ಭದಲ್ಲಿರುವ ಮಗುವಿಗೆ ಆರೋಗ್ಯಕರವಾಗಿದೆ.
ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ
ಗರ್ಭಾವಸ್ಥೆಯಲ್ಲಿ ಕೆಲವರಿಗೆ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಎಳ್ಳು ಜ್ಯೂಸ್ ಮಾಡಿ ಕುಡಿದರೆ ಮಲಬದ್ಧತೆ ತಡೆಗಟ್ಟಲು ಸಹಕಾರಿಯಾಗಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಎಳ್ಳು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇನ್ನು ಗರ್ಭಾವಸ್ಥೆಯಲ್ಲಿ ಕೆಲವರಿಗೆ ಹಲ್ಲು ನೋವಿನ ಸಮಸ್ಯೆ ಉಂಟಾಗುವುದು. ಅದನ್ನು ತಡೆಗಟ್ಟಲು ಈ ಕ್ಯಾಲ್ಸಿಯಂ ಆಹಾರ ಸಹಕಾರಿ.
ಗರ್ಭಾವಸ್ಥೆಯಲ್ಲಿ ಮಧುಮೇಹ ತಡೆಗಟ್ಟಲು ಸಹಕಾರಿ
ಎಳ್ಳಿನಲ್ಲಿ ಅಧಿಕ ಪ್ರೊಟೀನ್ ಹಾಗೂ ಆರೋಗ್ಯಕರ ಕೊಬ್ಬಿನಂಶವಿದೆ, ಇದರಿಂದ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಎಳ್ಳು ರಕ್ತದಲ್ಲಿ ಸಕ್ಕರೆಯಂಶ ಬೇಗನೆ ಹೆಚ್ಚಾಗುವುದನ್ನು ತಡೆಗಟ್ಟುತ್ತದೆ.
ಥೈರಾಯ್ಡ್ ನಿಯಂತ್ರಣಕ್ಕೆ ಸಹಕಾರಿ
ಕೆಲವರಿಗೆ ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ ಉಂಟಾಗುವುದು, ಎಳ್ಳು ಥೈರಾಯ್ಡ್ ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಡಲು ಸಹಕಾರಿ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಎಳ್ಳು ತಿನ್ನುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಎಳ್ಳನ್ನು ಪ್ರತಿನಿತ್ಯ ಹೇಗೆ ಬಳಸಬಹುದು?
* ಎಳ್ಳು-ಬೆಲ್ಲ ಪ್ರತಿನಿತ್ಯ ಸ್ವಲ್ಪ ಸೇವಿಸಬಹುದು
* ಎಳ್ಳುಂಡೆ ಸೇವಿಸಬಹುದು
* ಎಳ್ಳು ಚಿಕ್ಕಿ ಸೇವಿಸಬಹುದು
* ನೀವು ಮಾಡುವ ಸಲಾಡ್ ಅಥವಾ ಆಹಾರಕ್ಕೆ ಸ್ವಲ್ಪ ಎಳ್ಳು ಉದುರಿಸಿ ಬಳಸಬಹುದು.
ಕೊನೆಯದಾಗಿ: ನೀವು ಎಳ್ಳನ್ನು ತಿನ್ನುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆಯಿರಿ, ಏಕೆಂದರೆ ಎಲ್ಲಾ ಗರ್ಭಿಣಿಯರ ಆರೊಗ್ಯ ಸ್ಥಿತಿ ಒಂದೇ ರೀತಿ ಇರಲ್ಲ, ವೈದ್ಯರಿಗೆ ನಿಮ್ಮ ಆರೋಗ್ಯ ಹಾಗೂ ದೇಹದ ಸ್ಥಿತಿ ಬಗ್ಗೆ ತಿಳಿದಿರುತ್ತದೆ.



Click it and Unblock the Notifications


