Latest Updates
-
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!!
ಪುರುಷರ ಫಲವತ್ತತೆ ಹೆಚ್ಚಿಸುವ ವಿಟಮಿನ್ ಗಳು
ಇಂದಿನ ದಿನಗಳಲ್ಲಿ ಗರ್ಭಧಾರಣೆ ಅವಕಾಶ ಸುಧಾರಿಸುವ ಬಗ್ಗೆ ದಂಪತಿ ಹಲವಾರು ವಿಧಾನಗಳನ್ನು ಪ್ರಯತ್ನಿಸುವುದು ಹೆಚ್ಚಾಗುತ್ತಿರುವ ಸಾಮಾನ್ಯ ಸಂಗತಿ. ಗರ್ಭಧಾರಣೆ ಅವಕಾಶ ಸುಧಾರಿಸುವಲ್ಲಿ ಹಲವಾರು ವಿಷಯಗಳು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರಲ್ಲಿ ಒತ್ತಡ, ಸಂಗಾತಿಯ ಆರೋಗ್ಯ, ಬಳಸುವ ವಿಧಾನ, ಔಷಧಿ, ನ್ಯೂನತೆ ಇತ್ಯಾದಿ. ಗರ್ಭಧಾರಣೆ ಸತತವಾಗಿ ವಿಫಲವಾದರೆ ಆಗ ದಂಪತಿ ಸ್ಪೆಷಲಿಸ್ಟ್ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಬೇಕು. ಎಲ್ಲಿ ತಪ್ಪಾಗುತ್ತಿದೆ ಎಂದು ತಿಳಿಯುವುದು ತುಂಬಾ ಮುಖ್ಯ ಮತ್ತು ಇದನ್ನು ಸರಿಪಡಿಸಿ ಫಲಪಡೆಯಲು ಪ್ರಯತ್ನಿಸಬೇಕು.
ಕೆಲವೊಂದು ಸಲ ಸಮಸ್ಯೆ ಸರಳವಾಗಿರಬಹುದು ಮತ್ತು ವಿಟಮಿನ್ ಕೊರತೆಯಿಂದ ಹೀಗಾಗಿರಬಹುದು. ಗರ್ಭಧರಿಸುವ ಸಾಧ್ಯತೆ ಹೆಚ್ಚಾಗಲು ಪುರುಷ ಆರೋಗ್ಯಕರವಾಗಿರಬೇಕು. ಪುರುಷರದಲ್ಲಿ ವೀರ್ಯ ಗುಣಮಟ್ಟ ಮತ್ತು ಎಣೆಕೆ ಹೆಚ್ಚು ಮಾಡಲು ಪ್ರಮುಖ ವಿಟಮಿನ್ ಗಳ ಕೊರೆತೆಯಿಂದ ಹೀಗಾಗುತ್ತದೆ. ಕೆಲವೊಂದು ವಿಟಮಿನ್ ಗಳ ಕೊರತೆ ಪುರುಷರ ಕಾಮಾಸಕ್ತಿಯ ಮೇಲೆ ಪರಿಣಾಮ ಬೀರಬಹುದು ಮತ್ತು ಇದರ ಪರಿಣಾಮ ಗರ್ಭಧಾರಣೆಯ ಮೇಲಾಗಬಹುದು. ಪುರುಷರ ಫಲವತ್ತತೆಗಾಗಿ ವಿಟಮಿನ್ ತುಂಬಾ ಪ್ರಾಮುಖ್ಯತೆ ಪಡೆದಿದೆ.
ಇಂದಿನ ದಿನಗಳಲ್ಲಿ ಒತ್ತಡವು ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಹಾರದಲ್ಲಿ ವಿಟಮಿನ್ ಕೊರತೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳಾಗಿ ವೀರ್ಯದ ಗುಣಮಟ್ಟ ಮತ್ತು ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. ಪುರುಷರಲ್ಲಿನ ಶೇ.90ರಷ್ಟು ಬಂಜೆತನವು ಕಡಿಮೆ ವೀರ್ಯ ಎಣಿಕೆ, ಕಳಪೆ ಗುಣಮಟ್ಟದ ವೀರ್ಯ ಮತ್ತು ಎರಡೂ ಕಾರಣವಾಗಿದೆ. ಪುರುಷ ಬಂಜೆತನಕ್ಕೆ ಇತರ ಕಾರಣಗಳೆಂದರೆ ಅಂಗರಚನಾ ಸಮಸ್ಯೆಗಳು, ಹಾರ್ಮೋನುಗಳ ಅಸಮತೋಲನ ಮತ್ತು ವಂಶವಾಹಿ ದೋಷಗಳು.
ಪುರುಷರಲ್ಲಿನ ಫಲವತ್ತತೆಯನ್ನು ಹೆಚ್ಚಿಸುವ ಕೆಲವೊಂದು ಪ್ರಮುಖ ವಿಟಮಿನ್ ಗಳು ಇಲ್ಲಿವೆ.

1. ವೀರ್ಯ ಎಣಿಕೆ ಹೆಚ್ಚಿಸುವ ವಿಟಮಿನ್ ಗಳು
ವೀರ್ಯ ಎಣಿಕೆ ಹೆಚ್ಚಿಸುವಂತಹ ವಿಟಮಿನ್ ಗಳೆಂದರೆ ವಿಟಮಿನ್ ಬಿ12, ವಿಟಮಿನ್ ಸಿ, ವಿಟಮಿನ್ ಇ ಮತ್ತು ಫಾಲಿಕ್ ಆಮ್ಲ. ಫಾಲಿಕ್ ಆಮ್ಲದ ಕೊರೆತೆಯಿಂದ ಪುರುಷರಲ್ಲಿ ಕಡಿಮೆ ವೀರ್ಯ ಎಣಿಕೆ ಅಥವಾ ವೀರ್ಯ ಗುಣಮಟ್ಟದಲ್ಲಿ ಕುಂದಿಸುತ್ತದೆ. ಆರೋಗ್ಯಕರ ವೀರ್ಯವನ್ನು ಹೆಚ್ಚಿಸುವಂತಹ ಫಾಲಿಕ್ ಆಮ್ಲದ ಸಪ್ಲಿಮೆಂಟ್ ಗಳನ್ನು ತೆಗೆದುಕೊಳ್ಳಬೇಕು.

2. ಖನಿಜಗಳು
ಅದೇ ರೀತಿ ಖನಿಜಗಳಾದ ಸೆಲೆನಿಯಂ ಹಾಗೂ ಜಿಂಕ್ ವೀರ್ಯಾಣು ಹೆಚ್ಚಿಸಬಹುದು. ಈ ಖನಿಜಾಂಶಗಳು ಹೆಚ್ಚಾಗಿರುವ ಬ್ರೆಜಿಲ್ ನಟ್ಸ್, ಸೀ ಫುಡ್, ತುನಾ ಮೀನು ಇತ್ಯಾದಿ ಫಲವತ್ತತೆಗೆ ಧನಾತ್ಮಕ ಪರಿಣಾಮ ಬೀರಿ ವೀರ್ಯ ಎಣಿಕೆ ಹೆಚ್ಚಿಸುತ್ತದೆ.

3. ವಿಟಮಿನ್ ಇ
ವಿಟಮಿನ್ ಇ ಪುರುಷರ ಫಲವತ್ತತೆಗೆ ಅತ್ಯುತ್ತಮ. ಇದು ಪುರುಷರಲ್ಲಿ ವೀರ್ಯದ ಗುಣಮಟ್ಟ ಹೆಚ್ಚಿಸುತ್ತದೆ. ಹೆಚ್ಚಿನ ವೀರ್ಯ ಎಣಿಕೆಯಿದ್ದರೂ ಫಲವತ್ತತೆಯಲ್ಲಿ ಶೇ. 10ರಷ್ಟು ಕಡಿಮೆಯಿರುವ ಪುರುಷರಲ್ಲೂ ವಿಟಮಿನ್ ಇ ಫಲವತ್ತತೆ ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ.

4. ಕಾರ್ನಿಟಿನ್
ಕಾರ್ನಿಟಿನ ಪುರುಷರ ಫಲವತ್ತತೆ ಹೆಚ್ಚಿಸಲು ನೆರವಾಗುತ್ತದೆ. ಅಂಡಾಣುವನ್ನು ತಲುಪಲು ವೀರ್ಯಕ್ಕೆ ತುಂಬಾ ಪ್ರಯಾಣ ಮಾಡಬೇಕಾಗುತ್ತದೆ. ಹೀಗೆ ಮಾಡಲು ಆರೋಗ್ಯಕರ ವೀರ್ಯಕ್ಕೆ ಸಾಕಷ್ಟು ಶಕ್ತಿ ಬೇಕಾಗುತ್ತದೆ. ಪೌಷ್ಠಿಕಾಂಶವಾಗಿರುವ ಕಾರ್ನಿಟಿನ್ ವೀರ್ಯದ ಪ್ರಯಾಣಕ್ಕೆ ಬೇಕಾಗಿರುವ ಶಕ್ತಿಯನ್ನು ಒದಗಿಸುತ್ತದೆ.

5. ವಿಟಮಿನ್ ಸಿ ಇತ್ಯಾದಿ
ವಿಟಮಿನ್ ಸಿ ಹಾಗೂ ಇ, ಎನ್ಜೈಮ್ Q10 (CoQ10), ಸೆಲೆನಿಯಮ್, N-ಅಸೆಟೈಲ್ಸಿಸ್ಟೆಯಿನ್ (ಎನ್ ಎ ಸಿ) ಇತ್ಯಾದಿ ಉತ್ಕರ್ಷಣ ನಿರೋಧಕಗಳು ವೀರ್ಯ ಗುಣಮಟ್ಟ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಾಬೀತಾಗಿದೆ. ಉತ್ತಮ ಜೀವಕೋಶೀಯ ಉತ್ಕರ್ಷಣ ನಿರೋಧಕಗಳು ಹೆಚ್ಚಿನ ವೀರ್ಯಾಣು ಎಣಿಕೆಗಳು ಮತ್ತು ಉತ್ತಮ ವೀರ್ಯ ಗುಣಮಟ್ಟ ಹೊಂದಿವೆ. ಇದು ಉತ್ತಮ ವೀರ್ಯ ಗುಣಮಟ್ಟವಾಗಿ ಪರಿವರ್ತಿಸುತ್ತದೆ.

6. ಲೈಕೋಪಿನ್
ಲೈಕೋಪಿನ್ ನೈಸರ್ಗಿಕದತ್ತವಾದದ್ದು, ಸಸ್ಯದಲ್ಲಿರುವ ಕ್ಯಾರೊಟಿನಾಯ್ಡ್ ವರ್ಣದ್ರವ್ಯವು ಟೊಮೆಟೊ, ಕಲ್ಲಂಗಡಿ ಮತ್ತು ಇತರ ಹಣ್ಣುಗಳಿಗೆ ಕೆಂಪು ಬಣ್ಣ ನೀಡುತ್ತದೆ. ದಿನನಿತ್ಯದ ಆಹಾರದಲ್ಲಿ ಲೈಕೋಪಿನ್ ನ ಸೇವನೆ ಕಡಿಮೆಯಿದ್ದರೆ ಅದು ಕಳಪೆ ವೀರ್ಯ ಮತ್ತು ಪುರುಷರ ಫಲವತ್ತತೆಗೆ ಪರಿಣಾಮ ಬೀರುತ್ತದೆ. ಲೈಕೋಪಿನ್ ಸಪ್ಲಿಮೆಂಟ್ ಕೆಲವೊಂದು ಸಲ ರಿವರ್ಸ್ ಅಥವಾ ಹಾನಿಯನ್ನು ಉಂಟು ಮಾಡಿದೆ.

7. ಒಮೆಗಾ-3
ಒಮೆಗಾ-3 ಕೊಬ್ಬಿನ ಆಮ್ಲವು ವೀರ್ಯದ ಎಣಿಕೆಯನ್ನು ಹೆಚ್ಚಿಸುತ್ತದೆ ಹಾಗೂ ನಿರ್ದಿಷ್ಟ ಪೊರೆಯ ಗುಣಲಕ್ಷಣಗಳನ್ನು ಒಂದು ಅಂಡಾಣು ಪೊರೆಯ ಬಂಧಿಸಲ್ಪಡುತ್ತವೆ ಸಾಧ್ಯವಾಗುತ್ತದೆ ಮತ್ತು ಒಂದು ಜೀವಂತ ಭ್ರೂಣವನ್ನು ಉತ್ಪಾದಿಸುತ್ತದೆ. ವೀರ್ಯ ಎಣಿಕೆ ಮತ್ತು ವೀರ್ಯ ಗುಣಮಟ್ಟದ ಕೊರತೆಯಿರುವ ಪುರುಷರು ಒಮೆಗಾ-3 ಯಿಂದ ಬಳಲುತ್ತಿದ್ದಾರೆ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ.

8. ವಿಟಮಿನ್ ಡಿ
ವಿಟಮಿನ್ ಡಿ ಕೊರತೆಯಿರುವ ಪುರುಷರು ಬಂಜೆತನಕ್ಕೆ ಒಳಗಾಗುತ್ತಾರೆ. ಲ್ಯಾಬ್ ನಲ್ಲಿ ಮನುಷ್ಯನ ಜೀವಂತ ವೀರ್ಯಾಣು ಜೀವಕೋಶಕ್ಕೆ ವಿಟಮಿನ್ ಡಿಯನ್ನು ಸೇರಿಸಿದಾಗ ಅದು ವೀರ್ಯಾಣು ಚತುರತೆ ಹೆಚ್ಚಿಸಿ ಮತ್ತು ಅಂಡಾಣುವಿಗೆ ಸೇರಲು ವೀರ್ಯಾಣುವಿಗೆ ಬೇಕಾಗಿರುವ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.



Click it and Unblock the Notifications











