Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮಕ್ಕಳನ್ನು ಕಾಡುವ ಮಲಬದ್ಧತೆ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರೋಪಾಯಗಳು
ದೊಡ್ಡವರನ್ನು ಕಾಡುವ ಮಲಬದ್ಧತೆಯು ಮಕ್ಕಳನ್ನೂ ಬಿಡುವುದಿಲ್ಲ. ಕಡಿಮೆ ಚಲನೆ, ಅಸಮರ್ಪಕ ಆಹಾರ ಪದ್ಧತಿ ಮೊದಲಾದ ಅಂಶಗಳು ಮಕ್ಕಳಲ್ಲಿ ಮಲಬದ್ಧತೆ ಉಂಟುಮಾಡುತ್ತದೆ. ಈ ಸಮಯದಲ್ಲಿ ತಾಯಿಯಾದವಳು ಆತಂಕಕ್ಕೆ ಒಳಗಾಗುವುದು ಸಹಜ.
ಆದರೆ, ಚಿಂತೆ ಮಾಡುವ ಅಗತ್ಯವಿಲ್ಲ. ಮಗುವಿನ ಕರುಳಿನ ಚಲನೆಗೆ ಅಂದರೆ, ಉತ್ತಮ ಜೀರ್ಣಕ್ರಿಯೆಗೆ ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನ ಮಾಡಬಹುದು. ಇದರಿಂದ ಯಾವುದೇ ಅಡ್ಡಪರಿಣಾಮಗಳಾಗದೇ, ಮಗುವಿನ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುವುದು.
ಮಕ್ಕಳಲ್ಲಿ ಕಂಡುಬರುವ ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಕೆಲವೊಂದು ಆಯುರ್ವೇದ ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:

ಮಕ್ಕಳಲ್ಲಿ ಮಲಬದ್ಧತೆಗೆ ಮನೆಮದ್ದುಗಳು:
ಒಣದ್ರಾಕ್ಷಿ:
ಒಣದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ, ಕಬ್ಬಿನಾಂಶ, ಪೊಟಾಶಿಯಂ ಮತ್ತು ಮೆಗ್ನಿಶಿಯಂ ಸಮೃದ್ಧವಾಗಿದೆ. ಇದನ್ನು ಸರಿಯಾಗಿ ನೆನೆಸಿಟ್ಟ ಬಳಿಕ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4-5 ಒಣದ್ರಾಕ್ಷಿ ನೀಡಿ. ಮಗು ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿದ್ದಾಗಿದ್ದರೆ ಇದನ್ನು ಬಳಸಬೇಡಿ.

ತೆಂಗಿನ ಎಣ್ಣೆ:
ಸಣ್ಣ ಚಮಚ ತೆಂಗಿನ ಎಣ್ಣೆಯನ್ನು ಮಗುವಿನ ಆಹಾರಕ್ಕೆ ಬೆರೆಸಿ ನೀಡಿ. ತೆಂಗಿನೆಣ್ಣೆಯು ನೈಸರ್ಗಿಕ ವಿರೇಚಕವಾಗಿದ್ದು, ಕರುಳಿನ ಕ್ರಿಯೆಯನ್ನು ಇದು ಸರಾಗಗೊಳಿಸುವುದು. ಜೊತೆಗೆ ಮಗುವಿನ ಗುದದ್ವಾರಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಹಚ್ಚಿದರೆ ಅದರಿಂದ ಮಲ ಸುಲಭವಾಗಿ ಹೊರಹೋಗಲು ನೆರವಾಗುವುದು.

ಆಹಾರ ಕ್ರಮದಲ್ಲಿ ಪಪ್ಪಾಯ ಸೇರಿಸಿ:
ಪಪ್ಪಾಯಿ ಕೂಡ ನೈಸರ್ಗಿಕ ವಿರೇಚಕವಾಗಿದೆ. ಇದು ಕರುಳಿನ ಕ್ರಿಯೆ ಸರಾಗವಾಗಿಸುವುದು ಮಾತ್ರವಲ್ಲದೆ, ಜೀರ್ಣಕ್ರಿಯೆಗೆ ಸಹಕಾರಿ. ಹಣ್ಣು ಪಪ್ಪಾಯಿಯನ್ನು ಸರಿಯಾಗಿ ಹಿಚುಕಿ ಮಗುವಿಗೆ ನೀಡಿ. ಇದನ್ನು ಮಗುವಿನ ಆಹಾರ ಮತ್ತು ಹಾಲಿಗೆ ಬೆರೆಸಬಹುದು. ಆದರೆ ಮಗು ಆರು ತಿಂಗಳಿಗಿಂತಲೂ ಚಿಕ್ಕದಾಗಿದ್ದರೆ ಈ ಮನೆಮದ್ದು ಬಳಸಬೇಡಿ.

ಹೆಸರುಬೇಳೆ:
ಮೂರು ಟೀ ಸ್ಪೂನ್ ಹೆಸರು ಬೇಳೆಯನ್ನು ಚೆನ್ನಾಗಿ ಬೇಯಿಸಿ, ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಅದಕ್ಕೆ ಒಂದು ಚಮಚ ತುಪ್ಪು ಸೇರಿಸಿ ಮಕ್ಕಳಿಗೆ ನೀಡುವುದರಿಂದ ಸಹ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಬಹುದು.

ಬಾಳೆಹಣ್ಣು:
ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳಲಾರಂಭಿಸಿದಾಗಲೇ, ಬಾಳೆಹಣ್ಣನ್ನು ಹೆಚ್ಚಾಗಿ ಸೇವಿಸಿ. ದಿನಕ್ಕೆ ಕನಿಷ್ಠ ಒಂದು ಬಾಳೆಹಣ್ಣನ್ನಾದರೂ ಮಕ್ಕಳಿಗೆ ನೀಡಿ.

ಇದರ ಜೊತೆಗೆ ಮಲಬದ್ಧತೆಯನ್ನು ಎದುರಿಸಲು ಈ ಮಾರ್ಗಗಳನ್ನು ಅನುಸರಿಸಿ:
* ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬೆಚ್ಚಗಿನ ನೀರನ್ನು ಅವರಿಗೆ ನೀಡಲು ಪ್ರಾರಂಭಿಸಿ .
*ಅವರಿಗೆ ಮಲಗುವ ವೇಳೆಗೆ ಒಂದು ಲೋಟ ಬೆಚ್ಚಗಿನ ಹಾಲನ್ನು ಅರ್ಧ ಚಮಚ ತುಪ್ಪದೊಂದಿಗೆ ನೀಡಿ .
* ಗ್ಯಾಸ್ ಸಮಸ್ಯೆಗಳನ್ನು ನಿವಾರಿಸಲು ಪ್ರದಕ್ಷಿಣಾಕಾರವಾಗಿ ರಾತ್ರಿಯಲ್ಲಿ ಅವರ ಹೊಟ್ಟೆಯ ಮೇಲೆ ಇಂಗನ್ನು ಹಚ್ಚಿ.
*ಹಸಿ ಆಹಾರವನ್ನು ತಪ್ಪಿಸಿ ಮತ್ತು ಬೇಯಿಸಿದ ಆಹಾರವನ್ನು ನೀಡಿ.
* ಸಕ್ಕರೆ, ಜಂಕ್ ಮತ್ತು ಒಣ ಪ್ಯಾಕೇಜ್ ಮಾಡಿದ ತಿಂಡಿಗಳ ಪ್ರಮಾಣವನ್ನು ಕಡಿಮೆ ಮಾಡ , ಬದಲಿಗೆ ಬೆಚ್ಚಗಿನ ಅರೆ-ಘನ ತಾಜಾ ಬೇಯಿಸಿದ ಊಟವನ್ನು ನೀಡಿ.
*ಮಕ್ಕಳು ಸಾಕಷ್ಟು ಚಲಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ. ಬಹಳಷ್ಟು ನಡಿಗೆ ಮತ್ತು ಓಟವನ್ನು ಒಳಗೊಂಡಿರುವ ಆಟಗಳಲ್ಲಿ ತೊಡಗಿಸಿಕೊಳ್ಳಿ.



Click it and Unblock the Notifications