Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಬೇಸಿಗೆ ರಜೆಯಲ್ಲಿ ಮಕ್ಕಳ ಬಗ್ಗೆ ಎಚ್ಚರ! ಈ ಕಾಯಿಲೆಗಳು ಹರಡುತ್ವೆ ಹುಷಾರ್!
ಬೇಸಿಗೆ ರಜೆ ಬಂತೂ ಅಂದ್ರೆ ಸಾಕು ಮಕ್ಕಳಿಗೆ ಎಲ್ಲಿಲ್ಲದ ಉತ್ಸಾಹ. ಪಠ್ಯ-ಪುಸ್ತಕಗಳನ್ನೆಲ್ಲಾ ಬದಿಗಿಟ್ಟು ಆಟವನ್ನೇ ಕಾಯಂ ಮಾಡಿಕೊಳ್ತಾರೆ. ಅದ್ರಲ್ಲೂ ಬೇಸಿಗೆ ರಜೆಯಲ್ಲಿ ಮಕ್ಕಳು ಒಳಗಡೆ ಇರೋದು ತುಂಬಾನೇ ಕಡಿಮೆ ಸ್ನೇಹಿತರ ಜೊತೆಗೂಡಿ ಹೊರಗಡೆ ಆಟವಾಡೋದಕ್ಕೆ ಹೋಗ್ತಾರೆ.

ಆದರೆ ಬೇಸಿಗೆಯಲ್ಲಿ ಅತೀ ಹೆಚ್ಚು ಹೊತ್ತು ಮಕ್ಕಳು ಹೊರಗಡೆ ಇರೋದು ಎಷ್ಟು ಅಪಾಯ ಅನ್ನೋದು ನಿಮಗೊತ್ತಾ? ಬೇಸಿಗೆ ಕಾಲದಲ್ಲಿ ಕೆಲವೊಂದು ಅಪಾಯಕಾರಿ ಕಾಯಿಲೆಗಳಿಗೆ ಮಕ್ಕಳು ತುತ್ತಾಗುತ್ತಾರೆ. ಹಾಗಾದ್ರೆ ಆ ಕಾಯಿಲೆಗಳು ಯಾವುದು ಅನ್ನೋದನ್ನ ನೋಡೋಣ.
1. ತಲೆ ಸುತ್ತುವುದು
ಮಕ್ಕಳು ಸೂರ್ಯನ ಬಿಸಿಲಿಗೆ ಹೆಚ್ಚು ಮೈಯೊಡ್ಡಿದಾಗ ತಲೆ ಸುತ್ತುತ್ತದೆ. ಇದರಿಂದ ಹೆಚ್ಚಾಗುವ ನಾಡಿ ಬಡಿತ, ದಿಗ್ಭ್ರಮೆ, ವಾಕರಿಕೆ, ಒಣ ಊದಿಕೊಂಡ ನಾಲಿಗೆ ಮತ್ತು ಕೆಂಪು ಚರ್ಮದಂತಹ ಸಮಸ್ಯೆ ಉಂಟಾಗುವ ಸಾಧ್ಯತೆಯೂ ಇದೆ. ಸೂರ್ಯನ ಬಿಸಿಲಿನ ಹೊಡೆತವು ರೋಗಿಯ ಪ್ರಜ್ಞಾಹೀನತೆಗೆ ಕಾರಣವಾಗಬಹುದು. ಹೀಗಾಗಿ ಮಕ್ಕಳ ಬಗ್ಗೆ ಕಾಳಜಿ ವಹಿಸೋದು ಪೋಷಕರ ಕರ್ತವ್ಯ. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಹೊರಗಡೆ ಬಿಡಬೇಡಿ. ಹೆಚ್ಚು ನೀರು ಕುಡಿಸಿ ಮತ್ತು ದ್ರವಾಂಶ ಇರೋ ವಸ್ತುಗಳನ್ನು ತಿನ್ನಲು ಕೊಡಿ.
2. ಕಣ್ಣಿಗೆ ಹಾನಿಯುಂಟು ಮಾಡುತ್ತದೆ
ಸೂರ್ಯನ ಬಿಸಿಲಿನ ಕಿರಣ ನಿಮ್ಮ ಮಕ್ಕಳ ಕಣ್ಣಿಗೆ ಹಾನಿಯುಂಟು ಮಾಡಬಹುದು. ಮಗುವಿನ ಕಣ್ಣಿನ ಮಸೂರವು ವಯಸ್ಕರಿಗಿಂತ ಹೆಚ್ಚು ಪಾರದರ್ಶಕವಾಗಿರುವುದರಿಂದ ಮಕ್ಕಳ ಕಣ್ಣುಗಳು ಸೂರ್ಯನಿಂದ ಬರುವ ಹಾನಿಕಾರಕ ಯುವಿಎ ಮತ್ತು ಯುವಿಬಿ ಕಿರಣಗಳಿಂದ ಹಾನಿಯಾಗುವ ಸಾಧ್ಯತೆಯಿದೆ. ಹೀಗಾಗಿ ಮಕ್ಕಳನ್ನು ಹೊರಗಡೆ ಬಿಸಿಲಿಗೆ ಬಿಡುವಾಗ ಸನ್‌ಗ್ಲಾನ್ ಮತ್ತು ಟೋಪಿ ಧರಿಸೋದನ್ನ ಕಡ್ಡಾಯಗೊಳಿಸಿ.
3. ಜೇನು ನೊಣಗಳು ಮಕ್ಕಳಿಗೆ ಹಾನಿ ಮಾಡಬಹುದು
ಜೋನು ನೊಣಗಳು ಬೇಸಿಗೆ ಸಮಯದಲ್ಲಿ ಹೆಚ್ಚು ದಾಳಿ ಮಾಡುತ್ತದೆ. ಹೀಗಾಗಿ ಹೊರಗಡೆ ಹೋದಾಗ ಜೇನು ಗೂಡಿನ ಬಳಿ ಯಾವುದೇ ರೀತಿ ತೊಂದರೆ ಮಾಡದಂತೆ ಮಕ್ಕಳಿಗೆ ತಿಳಿಸಿ. ಯಾಕಂದ್ರೆ ಒಂದು ವೇಳೆ ಜೇನು ನೊಣಗಳು ಮಕ್ಕಳ ಮೇಲೆ ದಾಳಿ ಮಾಡಿದ್ರೆ ಇದರಿಂದ ತೀವ್ರವಾದ ಅಪಾಯವನ್ನು ಎದುರಿಸಬೇಕಾಗುತ್ತದೆ.
4. ಸ್ವಿಮ್ಮರ್ಸ್ ಇಯರ್
ಸ್ವಿಮ್ಮರ್ಸ್ ಇಯರ್ ಇದೊಂದು ರೀತಿಯ ಸೋಂಕಾಗಿದ್ದು ಇದು ಕಿವಿಯಲ್ಲಿ ನೀರು ಉಳಿದುಕೊಂಡಾಗ ಉಂಟಾಗುತ್ತದೆ. ಕಿವಿಯಲ್ಲಿ ನೀರು ಉಳಿದುಕೊಂಡಾಗ ಅಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಕ್ಕಳು ಈಜು ಮುಗಿಸಿ ಬಂದ ಮೇಲೆ ಅವರ ಕಿವಿಯ ಒಳಗಡೆ ನೀರು ನಿಲ್ಲುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ಗಮನಿಸದಿದ್ದರೆ ಕಿವಿಯ ಒಳಗಡೆ ಬ್ಯಾಕ್ಟೀರಿಯಾ ಬೆಳವಣಿಗೆ ಹೆಚ್ಚಾಗಿ ಶ್ರವಣ ದೋಷ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳು ಈಜಾಡಲು ಹೋದಾಗ ಇಯರ್ ಪ್ಲಗ್‌ಗಳನ್ನು ಕೊಡೋದನ್ನು ಮರೀಬೇಡಿ.
5. ಮೈಯಲ್ಲಿ ದದ್ದು ಉಂಟಾಗುತ್ತದೆ
ಬೇಸಿಗೆಯಲ್ಲಿ ಮಕ್ಕಳ ಮೃಮೇಲೆ ಮೇಲೆ ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ದದ್ದು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ತಲೆ, ಕುತ್ತಿಗೆ ಮತ್ತು ಭುಜಗಳ ಮೇಲೆ ಬೆವರು ನಿಂತಾಗ ಈ ರೀತಿ ದದ್ದುಗಳು ಉಂಟಾಗುತ್ತದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ದಪ್ಪಗಿರುವ ಬಟ್ಟೆಗಳನ್ನು ಧರಿಸಲೇಬಾರದು. ಆದಷ್ಟು ಕಾಟನ್ ಹಾಗೂ ತೆಲುವಾದ ಬಟ್ಟೆಗಳನ್ನೇ ಮಕ್ಕಳಿಗೆ ನೀಡಿ.
6. ಜ್ವರ
ಬೇಸಿಗೆ ಕಾಲದಲ್ಲಿ ಜ್ವರ ಹಾಗೂ ಶೀತದ ಸಾಮಾನ್ಯ ಗುಣ ಲಕ್ಷಣಗಳನ್ನು ನೋಡಬಹುದು. ಇನ್ನೂ ವಸಂತ ಬೇಸಿಗೆಯ ಸಮಯದಲ್ಲಿ ರೋಗ ಉಲ್ಬಣ ಗೊಳ್ಳುತ್ತದೆ. ಇದು ಕೆಲವು ಮಕ್ಕಳಲ್ಲಿ ಸಣ್ಣ ಪ್ರಮಾಣದಲ್ಲಿರಬಹುದು. ಇನ್ನೂ ಕೆಲವರಲ್ಲಿ ತೀವ್ರವಾಗಿರುತ್ತದೆ.
7. ಆಹಾರವು ವಿಷವಾಗುವ ಸಾಧ್ಯತೆಯಿದೆ
ಫುಡ್ ಪಾಯಿಸನಿಂಗ್ ಬೇಸಿಗೆಯಲ್ಲಿ ಇದು ಹೆಚ್ಚಾಗಿರುತ್ತದೆ. ಶಾಖವು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗೆಯೇ ಈ ವೇಳೆ ಆಹಾರವು ವಿಷವಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಇನ್ನೂ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಹೊಂದಿರುವ ಆಹಾರವನ್ನು ಸೇವಿಸಿದಾಗ ಆಹಾರ ವಿಷವಾಗಿ ಪರಿವರ್ತನೆಯಾಗುತ್ತದೆ. ಈ ಆಹಾರವು ಹೊಟ್ಟೆಗೆ ಹೋದಾಗ ಸೂಕ್ಷ್ಮಾಣು ಜೀವಿಗಳು ಜೀರ್ಣಾಂಗ ವ್ಯೂಹದಲ್ಲಿ ಬೆಳಯುತ್ತದೆ. ಇದರಿಂದಾಗಿ ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವು ಕೆಲವು ಸಂದರ್ಭಗಳಲ್ಲಿ ಜ್ವರ ಬರುವ ಸಾಧ್ಯತೆ ಕೂಡ ಇದೆ.
ಬೇಸಿಗೆ ಕಾಲದಲ್ಲಿ ಮಕ್ಕಳ ಮೇಲೆ ಒಂದು ಕಣ್ಣಿಡೋದು ಪೋಷಕರ ಕರ್ತವ್ಯ. ಇತ್ತೀಚಿನ ಕಾಲದಲ್ಲಿ ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚಿರೋದ್ರಿಂದ ನಮ್ಮ ಜಾಗ್ರತೆಯಲ್ಲಿ ನಾವಿರಬೇಕು.



Click it and Unblock the Notifications



