Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಮಗುವಿನ ತಲೆ ಚಪ್ಪಟೆಯಾಗದಂತೆ ತಡೆಯಲು ಸಲಹೆ
ಮನೆಯಲ್ಲಿ ಅಜ್ಜಿ ಇದ್ದರೆ ಮೊಮ್ಮಗಳಿಗೆ ಹೆರಿಯಾದಾಗ ಅಥವಾ ಮೊಮ್ಮಗನಿಗೆ ಮಗುವಾದಾಗ ಮಗುವನ್ನು ಸ್ನಾನ ಮಾಡಿಸುವುದು ಹೇಗೆ? ದೇಹವನ್ನು ಹೇಗೆ ತಿಕ್ಕಬೇಕು? ಮೂಗನ್ನು ಎಳೆಯುವುದು, ಹಣೆಯನ್ನು ತೀಡುವುದು, ಎದೆಗೆ ಮಸಾಜ್ ಮಾಡುವುದು ಹೀಗೆ ಮಗುವನ್ನು ಹೇಗೆ ಆರೈಕೆ ಮಾಡಬೇಕು ಅನ್ನುವುದನ್ನು ಹೇಳಿ ಕೊಡುತ್ತಾರೆ. ಅವರು ಹೇಳುವ ಸಲಹೆಗಳು ಮಗು ಸದೃಢವಾಗಿ, ರೂಪವಂತನಾಗಿ/ಳಾಗಿ ಬೆಳೆಯಲು ಸಹಾಯ ಮಾಡುತ್ತವೆ.
ಚಿಕ್ಕ ಮಕ್ಕಳು ತುಂಬಾ ಸೂಕ್ಷ್ಮ. ಅವರನ್ನು ತುಂಬಾ ಜೋಪಾನವಾಗಿ ಎತ್ತಿಕೊಳ್ಳಬೇಕು, ಮಲಗಿಸಬೇಕು. ನಾವು ಎತ್ತಿಸುವುದು , ಮಲಗುವುದು ಸರಿಯಿಲ್ಲದಿದ್ದರೆ ಮಗುವಿನ ಒಂದು ಕಡೆ ಸ್ವಲ್ಪ ಚಪ್ಪಟೆಯಾಗುತ್ತದೆ. ಅದನ್ನು ಹಾಗೇ ಬಿಟ್ಟರೆ ಮಗು ಬೆಳೆದು ದೊಡ್ಡದಾದ ಮೇಲೂ ತಲೆ ಚಪ್ಪಟೆಯಾಗಿ ಕಂಡು ಮಗುವಿನ ಸೌಂದರ್ಯಕ್ಕೆ ಕುಂದು ತರುವುದು. ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಮಗುವಿನ ತಲೆ ಚಪ್ಪಟೆಯಾಗದಂತೆ ನೋಡಿಕೊಳ್ಳಬಹುದು.

ಮಲಗಿ ಹಾಲು ಕೊಡಬೇಡಿ: ಬಾಣಂತಿಯರು ಮಗುವಿಗೆ ಹಾಲು ಕೊಡುವಾಗ ಎದ್ದು ಕೂತು ಕೊಡಬೇಕು. ಮಲಗಿ ಕೊಟ್ಟರೆ ತಲೆ ಚಪ್ಪಟೆಯಾಗುತ್ತದೆ.
ಎತ್ತುವಾಗ ಜೋಪಾನ: ಮಗುವಿನ ಎತ್ತುವಾಗ ಮಗುವಿನ ತಲೆ ಸರಿಯಾಗಿ ಹಿಡಿಯಬೇಕು. ನಮ್ಮ ಅಂಗೈ ಒಳಗೆ ಮಗುವಿನ ತಲೆಯಿರಬೇಕು.
ದಿಂಬು: ಮಗುವಿನ ತಲೆ ಚಪ್ಪಟೆಯಾಗಿದ್ದರೆ ಅದಕ್ಕೆ ಸಾಸಿವೆಯಿಂದ ದಿಂಬು ಮಾಡಿ ಇಟ್ಟರೆ ತಲೆ ರೌಂಡಾಗುವುದು. ಮಗುವನ್ನು ಮಲಗಿಸುವಾಗ ಬಟ್ಟೆಯನ್ನು ಸುಳಿ ಸುತ್ತಿ ಚಿಕ್ಕ ದಿಂಬು ರೀತಿ ಮಾಡಿ ಮಲಗಿಸಿ. ಮಗು ಕುತ್ತಿಗೆಯನ್ನು ಒಂದೇ ಬದಿಯಲ್ಲಿಟ್ಟ ಮಲಗುವ ಅಭ್ಯಾಸ ರೂಡಿಸಿಕೊಂಡರೆ ತಲೆ ಚಪ್ಪಟೆಯಾಗುವುದು. ಮಗು ನಿದ್ರೆ ಮಾಡುವಾಗ ಅದರ ತಲೆಯನ್ನು ಸರಿಯಾಗಿ ಇಡಿ, ಒಂದು ಕಡೆ ವಾಲಿ ಮಲಗಲು ಬಿಡಬೇಡಿ.
ಒಂದೇ ಕಡೆ ನೋಡಲು ಬಿಡಬೇಡಿ: ಮಗು ಒಂದೇ ಕಡೆ ನೋಡುತ್ತಾ ಆಟ ಆಡುತ್ತಿದ್ದರೆ ಮಗುವಿನ ಗಮನವನ್ನು ಬೇರೆ ಕಡೆ ತಿರುಗಿಸಿ. ಒಂದು ಕಡೆ ನೋಡುತ್ತಾ ಮಲಗಿದರೆ ಕೂಡ ತಲೆ ಚಪ್ಪಟೆಯಾಗುವುದು.
ಮಸಾಜ್ : ಸ್ನಾನ ಮಾಡಿಸುವ ಮುನ್ನ ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡಿ. ಇದರಿಂದ ಕೂಡ ತಲೆಯನ್ನು ಉದ್ದ ಅಥವಾ ಚಪ್ಪಟೆಯಾಗದಂತೆ ತಡೆಯಬಹುದು.



Click it and Unblock the Notifications
