Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪುಟ್ಟ ಕಂದಮ್ಮನಿಗೆ ನೀಡಬಾರದ ಆಹಾರಗಳಿವು!

ಹಸುವಿನ ಹಾಲು: ಹಸುವಿನ ಹಾಲಿನಲ್ಲಿ ಅಧಿಕ ಪ್ರೊಟೀನ್ ಅಂಶವಿದ್ದು, ಒಂದು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಈ ಹಾಲನ್ನು ಕರಗಿಸಿಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಆದ್ದರಿಂದ ಈ ಹಾಲನ್ನು ಕುಡಿದಾಗ ಅಜೀರ್ಣ, ಅಲರ್ಜಿ ಮುಂತಾದ ಸಮಸ್ಯೆಗಳು ಕಂಡುಬರುತ್ತದೆ. ಒಂದು ವೇಳೆ ಹಸುವಿನ ಹಾಲು ಕೊಡುವುದಾದರೂ ತುಂಬಾ ತೆಳ್ಳಗೆ ಮಾಡಿ ಕೊಡುವುದು ಒಳ್ಳೆಯುವುದು.
ಜೇನು: ಮಕ್ಕಳಿಗೆ ಕೆಮ್ಮು, ಶೀತ ಇರುವಾಗ ಮನೆಮದ್ದಾಗಿ ತುಳಸಿ ಕೊಡಬಹುದು, ಆದರೆ ಅದರ ಜೊತೆ ಜೇನು ಸೇರಿಸದಿರುವುದು ಒಳ್ಳೆಯದು. ಜೇನು ದೊಡ್ಡವರ ಆರೋಗ್ಯಕ್ಕೆ ಒಳ್ಳೆಯದಾದರೂ ಚಿಕ್ಕ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ.
ಸಿಟ್ರಸ್ ಇರುವ ಆಹಾರ: ಸಿಟ್ರಸ್ ಇರುವ ಆಹಾರಗಳನ್ನು ತಿಂದರೆ ಅಜೀರ್ಣ ಸಮಸ್ಯೆ ಉಂಟಾಗುವುದು. ಆದ್ದರಿಂದ ಒಂದು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಸಿಟ್ರಸ್ ಇರುವ ಆಹಾರವನ್ನು ಕೊಡದಿರುವುದು ಒಳ್ಳೆಯದು.
ಪೀನಟ್ ಬಟರ್ (Peanut butter): ಈ ಬೆಣ್ಣೆಯನ್ನು ಕೊಟ್ಟರೆ ಮಗುವಿಗೆ ಜೀರ್ಣ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಇದರಿಂದ ವಾಂತಿ ಉಂಟಾಗಬಹುದು. ಆದ್ದರಿಂದ ಮಗುವಿನ ಈ ರೀತಿಯ ಆಹಾರ ಕೊಡಬೇಡಿ.
ಮೊಟ್ಟೆಯ ಬಿಳಿ: ಒಂದು ವರ್ಷಕ್ಕಿಂತ ಅಧಿಕ ವಯಸ್ಸಿನ ಮಕ್ಕಳಿಗೆ ಮೊಟ್ಟೆಯ ಬಿಳಿ ಕೊಡುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಒಂದು ವರ್ಷಕ್ಕಿಂತ ಚಿಕ್ಕ ಮಗುವಿಗೆ ಮೊಟ್ಟೆಯ ಬಿಳಿಯನ್ನು ಕರಗಿಸಿಕೊಳ್ಳುವ ಸಾಮರ್ಥ್ಯವಿರುವುದಿಲ್ಲ.
ಮಗುವಿಗೆ ತಾಯಿ ಹಾಲಿನಷ್ಟು ಪೌಷ್ಠಿಕ ಆಹಾರ ಮತ್ತೊಂದಿಲ್ಲ. ಒಂದು ವೇಳೆ ಹೊಟ್ಟೆ ತುಂಬದಿದ್ದರೆ ರಾಗಿಯಿಂದ ಹಿಟ್ಟು ಮಾಡಿ ಕೊಡಬಹುದು, ಯಾವುದೇ ಕಾರಣಕ್ಕೂ ಈ ಮೇಲಿನ ಆಹಾರವನ್ನು ಮಗುವಿಗೆ ಒಂದು ವರ್ಷ ತುಂಬುವವರೆಗೆ ಕೊಡದಿರುವುದು ಒಳ್ಳೆಯದು.



Click it and Unblock the Notifications
