Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಗರ್ಭಿಣಿಯರಿಗೆ ಕೆಲವೊಂದು ಮುನ್ನೆಚ್ಚರಿಕೆಯ ಸಲಹೆಗಳು
ಇತರರಿಗಿಂತಲೂ ಗರ್ಭಿಣಿಗೆ ಹೆಚ್ಚಿನ ಆರೈಕೆಯ ಅಗತ್ಯವಿದೆ. ಒಂದು ವೇಳೆ ಗರ್ಭಿಣಿ ಉದ್ಯೋಗಸ್ಥೆಯಾಗಿದ್ದರೆ ಕೆಲಸದ ಕಾರಣ ಹೆಚ್ಚಿನ ಹೊತ್ತು ಹೊರಗೇ ಕಳೆಯಬೇಕಾಗುತ್ತದೆ. ಈ ಹೊತ್ತಿನಲ್ಲಿ ಯಾವ ವಸ್ತು ನಿಮಗೆ ಅಗತ್ಯ ಬೀಳುತ್ತದೆ ಎಂದು ಹೇಳಲು ಬರುವುದಿಲ್ಲ.
ಕೆಲವು ಅಗತ್ಯವಸ್ತುಗಳನ್ನು ನಿಮ್ಮ ಕೈಚೀಲದಲ್ಲಿ ಇಟ್ಟುಕೊಂಡಿರುವುದು ಅತಿ ಅಗತ್ಯ. ಅದರಲ್ಲೂ ಹೆರಿಗೆಯ ದಿನ ಹತ್ತಿರ ಬರುತ್ತಿದ್ದಂತೆ ಇವುಗಳ ಅಗತ್ಯತೆಯೂ ಹೆಚ್ಚುತ್ತದೆ. ಇವುಗಳ ತಕ್ಷಣದ ಲಭ್ಯತೆ ನಿಮ್ಮನ್ನು ತೊಂದರೆಗೆ ಒಳಗಾಗುವುದರಿಂದ ರಕ್ಷಿಸುತ್ತದೆ. ಬನ್ನಿ, ಈ ವಸ್ತುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಪ್ರಸವಪೂರ್ವದ ವಿಟಮಿನ್‌ಗಳು
ಈ ಗುಳಿಗೆಗಳನ್ನು ನಿಮ್ಮ ಕೈಚೀಲದಲ್ಲಿಟ್ಟುಕೊಳ್ಳದೇ ಸರ್ವಥಾ ಮನೆಯಿಂದ ಹೊರಗೆ ಹೋಗಬೇಡಿ. ಏಕೆಂದರೆ ಹೊರಗೆ ಯಾವುದೋ ಕಾರಣದಿಂದ ತಡವಾದರೆ ನಿಮ್ಮ ಮಾತ್ರೆಗಳನ್ನು ತೆಗೆದುಕೊಳ್ಳದೇ ಇರುವ ಕಾರಣದಿಂದ ಎದುರಾಗುವ ತೊಂದರೆಯಿಂದ ಹೊರಬಂದಂತಾಗುತ್ತದೆ. ಒಂದು ಹೊತ್ತು ಮಾತ್ರೆ ಮತ್ತು ಔಷಧಿಗಳನ್ನು ಸೇವಿಸದಿದ್ದರೂ ಇದು ಮಗುವಿನ ಮೇಲೆ ಪರಿಣಾಮ ಬೀರಬಹುದು.

ಆರೋಗ್ಯಕರ ಲಘು ಆಹಾರ
ಗರ್ಭಿಣಿಯಾಗಿದ್ದಾಗ ಹಸಿವಿನಿಂದಿರುವುದು ತರವಲ್ಲ. ಹಸಿವು ತಾಳಲಾರದೇ ಹೊರಗೆ ಅನಾರೋಗ್ಯಕರ ಆಹಾರ ಸೇವಿಸಿದರೆ ಇದು ಗರ್ಭಿಣಿಯ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲೆ ಪ್ರತಿಕೂಲಕರ ಪರಿಣಾಮ ಉಂಟುಮಾಡಬಹುದು. ಅತಿ ಹೆಚ್ಚು ಪೌಷ್ಟಿಕಾಂಶವಿರುವ ಆಹಾರ, ಎನರ್ಜಿ ಡ್ರಿಂಕ್ ಮತ್ತು ಚಾಕಲೇಟುಗಳು, ಭೇಲ್ ಪುರಿ ಮೊದಲಾದ ರಸ್ತೆಬದಿಯ ತಿಂಡಿಗಳು ಎಷ್ಟೇ ಆಸೆ ಉಂಟುಮಾಡಿದರೂ ಇದರ ಪ್ರಲೋಭನೆಗೆ ಒಳಗಾಗದೇ ನೀವೇ ಸ್ವತಃ ಮನೆಯಲ್ಲಿ ತಯಾರಿಸಿದ ಆಹಾರವನ್ನು ಕೈಚೀಲದಲ್ಲಿಟ್ಟುಕೊಂಡು ಹೋದರೆ ಹಸಿವೆಯೂ ನೀಗುತ್ತದೆ ಹಾಗೂ ಆರೋಗ್ಯವೂ ಕೆಡದು.

ಟಿಶ್ಯೂಗಳು
ಒಂದು ವೇಳೆ ನೀವಿರುವ ಪ್ರದೇಶ ಸೆಖೆಯಿಂದ ಕೂಡಿದ್ದು ಧೂಳು ಸಹಾ ಇದ್ದರೆ ಹಸಿ ಟಿಶ್ಯೂಗಳು ಅತಿ ಹೆಚ್ಚಿನ ಉಪಯೋಗಕ್ಕೆ ಬರುತ್ತದೆ. ಏಕೆಂದರೆ ಸೆಖೆಯ ಕಾರಣ ಚರ್ಮಕ್ಕೆ ಎದುರಾಗುವ ಬೆವರುಸಾಲೆ, ಉರಿ ಮೊದಲಾದ ತೊಂದರೆಗಳಿಂದ ಪಾರಾಗಲು ಹಸಿ ಟಿಶ್ಯೂ ಬಳಕೆ ಉತ್ತಮ. ಇದು ನಿಮ್ಮ ಕೈಚೀಲದಲ್ಲಿದೇ ಮನೆಯಿಂದ ಹೊರಹೋಗಬೇಡಿ.

ಸ್ಯಾನಿಟೈಸರ್ ದ್ರವ
ಇಂದು ಮಾರುಕಟ್ಟೆಯಲ್ಲಿ ಸ್ಯಾನಿಟೈಸರ್ ಎಂಬ ದ್ರವ ಸಿಗುತ್ತದೆ. ಇದು ನೀರಿನ ಅಗತ್ಯವಿಲ್ಲದೇ ಕೈ ತೊಳೆಯಲು ನೆರವಾಗುತ್ತದೆ. ಹೊರಗೆ ಸಾರ್ವಜನಿಕ ಸ್ಥಳಗಳಲ್ಲಿ ಅನಿವಾರ್ಯವಾಗಿ ಮುಟ್ಟಬೇಕಾದ ವಸ್ತುಗಳಿಂದ ಲಕ್ಷಾಂತರ ಬ್ಯಾಕ್ಟೀರಿಯಾಗಳು ಕೈಗೆ ಹತ್ತಿಕೊಳ್ಳಬಹುದು. ಇದು ನಿಮ್ಮ ಆರೋಗ್ಯವನ್ನು ಕೆಡಿಸದಿರಲು ಸ್ಯಾನಿಟೈಸರ್ ದ್ರವ ಉಪಯೋಗಕ್ಕೆ ಬರುತ್ತದೆ.

ತುಟಿಯ ಬಾಮ್ ಮತ್ತು ತೇವಕಾರಕ
ಗರ್ಭಾವಸ್ಥೆಯಲ್ಲಿ ತುಟಿಗಳು ಮತ್ತು ಮುಖದ ಚರ್ಮ ವಿಪರೀತವಾಗಿ ಒಣಗುತ್ತದೆ. ಇದನ್ನು ತಡೆಯಲು ಸಾಧ್ಯವಿಲ್ಲ. ಅದರಲ್ಲೂ ಕಡೆಯ ತಿಂಗಳುಗಳಲ್ಲಿ ಇದು ಅತೀವವಾಗಿ ಕಾಡುತ್ತದೆ. ಅದರಲ್ಲೂ ಸೂಕ್ಷ್ಮ ಸಂವೇದಿ ಚರ್ಮದವರಿಗೆ ಇದು ಹೆಚ್ಚು ಕಾಡುತ್ತದೆ. ಇದರಿಂದ ಪಾರಾಗಲು ತುಟಿಗೆ ಹಚ್ಚುವ ಲಿಪ್ ಬಾಮ್ ಮತ್ತು ಉತ್ತಮ ಗುಣಮಟ್ಟದ ತೇವಕಾರಕ ಅಥವಾ ಮಾಯಿಶ್ಚರೈಸರ್ ಸದಾ ನಿಮ್ಮ ಕೈಚೀಲದಲ್ಲಿರುವಂತೆ ನೋಡಿಕೊಳ್ಳಿ.

ಅಗತ್ಯ ಸಂಪರ್ಕ ಸಂಖ್ಯೆಗಳು
ಮ್ಮ ಕೈಚೀಲದಲ್ಲಿ ಚಿಕ್ಕದೊಂದು ನೋಟ್ ಪ್ಯಾಡ್ ಇಟ್ಟುಕೊಳ್ಳಿ. ಇದರ ಪ್ರಥಮ ಪುಟದಲ್ಲಿ ನಿಮ್ಮ ಅಪ್ತರ ಹೆಸರು ಮತ್ತು ಮೊಬೈಲ್ ಸಂಖ್ಯೆಗಳನ್ನು ಸ್ಪಷ್ಟವಾಗಿ ಸಮೂದಿಸಿ. ನಿಮ್ಮ ಕುಟುಂಬ ವೈದ್ಯರು, ನಿಮಗಾಗಿ ತಮ್ಮ ಸಮಯವನ್ನು ವಿನಿಯೋಗಿಸುವ ಸ್ನೇಹಿತರು, ನಿಮ್ಮ ಆಯಾ ಅಥವಾ ದಾದಿ, ಅವರು ಇರುವ ಸ್ಥಳ ಮೊದಲಾದ ಅಗತ್ಯ ವಿವರಗಳನ್ನು ಬರೆದಿಡಿ. ಇದು ಅತ್ಯಂತ ಮಹತ್ವದ ಮತ್ತು ಕೆಲಸಕ್ಕೆ ಬರುವ ವಸ್ತುವಾಗಿದೆ. ಈ ಸಂಪರ್ಕದ ಮೂಲಕ ತುರ್ತು ಸಮಯದಲ್ಲಿ ನಿಮ್ಮ ಆಪ್ತರು ನಿಮ್ಮ ಬಳಿ ಬರಲು ಸಾಧ್ಯವಾಗುತ್ತದೆ ಹಾಗೂ ಸಕಾಲಿಕ ನೆರವು ಪಡೆಯಲು ಸಾಧ್ಯವಾಗುತ್ತದೆ.



Click it and Unblock the Notifications
