Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ತಾಯಿಯ ಡಯಟ್, ಉದರದಲ್ಲಿರುವ ಮಗುವಿಗೆ ಶ್ರೀರಕ್ಷೆ
ಗರ್ಭಾವಸ್ಥೆಯ ಸಂದರ್ಭದಲ್ಲಿ ತಾಯಿಯು ತನ್ನ ಭ್ರೂಣದಲ್ಲಿರುವ ಶಿಶುವಿನ ಆರೈಕೆಯನ್ನು ಸೂಕ್ತವಾಗಿ ಮಾಡಬೇಕಾಗುತ್ತದೆ. ತಾಯಿಯಾದವಳು ತನ್ನ ಆರೋಗ್ಯದ ಮೇಲೆ ಗಮನವಿತ್ತಾಗ ಮಾತ್ರವೇ ತನ್ನ ಉದರಲ್ಲಿರುವ ಶಿಶುವಿಗೆ ಬೇಕಾಗಿರುವ ಅತ್ಯಗತ್ಯ ಪೋಷಕಾಂಶ ಮತ್ತು ವಿಟಮಿನ್ಗಳ ಪೂರೈಕೆಯಾಗುವುದು ಎಂಬುದನ್ನು ಆಕೆ ಕಂಡುಕೊಳ್ಳಬೇಕು. ಆದ್ದರಿಂದ ಸಮಯಕ್ಕೆ ಸರಿಯಾಗಿ ಆಹಾರ ಸೇವನೆಯನ್ನು ಆಕೆ ಮಾಡಬೇಕಾಗುತ್ತದೆ ಮತ್ತು ತನ್ನ ದೇಹಾರೋಗ್ಯವನ್ನು ಆಕೆ ಕಾಪಾಡಿಕೊಳ್ಳಬೇಕು.

ಆಹಾರ ಸೇವನೆ ವಿಷಯದಲ್ಲೂ ಆಕೆ ಹೆಚ್ಚು ಯೋಚಿಸಿ ಅವುಗಳ ಸೇವೆನಯನ್ನು ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ತಿನ್ನುವ ಆಸೆ ಅಧಿಕವಾಗಿರುವುದರಿಂದ ಹುಳಿ, ಖಾರ, ಸಿಹಿ ಎಂದೆನ್ನದೆ ಎಲ್ಲವೂ ಹೊಟ್ಟೆಯನ್ನು ಸೇರುತ್ತದೆ. ಆದರೆ ಈ ಆಹಾರಗಳು ಸೂಕ್ತ ವಿಟಮಿನ್ಗಳನ್ನು ಒಳಗೊಂಡಿದೆ ಎಂಬುದನ್ನು ಖಾತ್ರಿಗೊಳಿಸಿರಬೇಕು.
ಜನಿಸುವ ಮಗುವಿನ ಆರೋಗ್ಯದ ಸಂಪೂರ್ಣ ಜವಬ್ದಾರಿ ತಾಯಿಯ ಮೇಲಿರುವುರಿಂದ ಸ್ವಲ್ಪವೂ ಅಸಡ್ಡೆ ತೋರಬಾರದು ಮತ್ತು ತನ್ನ ಆರೋಗ್ಯವನ್ನು ಆಕೆ ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗಿದ್ದರೆ ಗರ್ಭಿಣಿಯರು ಸೇವಿಸುವ ಆಹಾರ ಪದ್ಧತಿ ಸಾಮಾನ್ಯರಿಗಿಂತ ಭಿನ್ನವಾಗಿರಬೇಕು. ಆಕೆ ತನ್ನ ಉದರದಲ್ಲಿ ಇನ್ನೊಂದು ಜೀವವನ್ನು ಹೊತ್ತಿರುವುದರಿಂದ ಆಕೆಗೆ ಹೆಚ್ಚಿನ ಪೋಷಕಾಂಶಗಳಿರುವ ಆಹಾರಗಳನ್ನು ನೀಡಬೇಕು.
ಇದು ಆಕೆಯ ದೇಹಾರೋಗ್ಯವನ್ನು ಕಾಪಾಡುವುದರ ಜೊತೆಗೆ ಮಗುವಿನ ಪಾಲನೆಯನ್ನೂ ಮಾಡುತ್ತದೆ. ಆದ್ದರಿಂದಲೇ ಗರ್ಭಣಿಯರ ಡಯೆಟ್ ಹೆಚ್ಚು ಪ್ರೋಟೀನ್ ಮತ್ತು ನ್ಯೂಟ್ರೀನ್‌ಗಳಿಂದ ಕೂಡಿರಬೇಕು. ಅಷ್ಟಲ್ಲದೇ ಹೊಸ ಅಧ್ಯಯನವೊಂದು ಹೇಳುವಂತೆ ಗರ್ಭಾವಸ್ಥೆಯ ಸಂದರ್ಭದಲ್ಲಿ ತಾಯಿಯು ಉತ್ಕರ್ಷಣ ನಿರೋಧಿ ಆಹಾರಗಳನ್ನು ಹೆಚ್ಚು ಸೇವಿಸುತ್ತಿದ್ದಲ್ಲಿ ಉದರಲ್ಲಿರುವ ಮಗುವಿನ ವಯಸ್ಸು ನಿಧಾನವಾಗಿರುತ್ತದೆ.
ಅಂತೆಯೇ ಉದರಲ್ಲಿರುವ ಮಗುವಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾದ ಸಂದರ್ಭದಲ್ಲಿ ಅವುಗಳು ಹುಟ್ಟಿನ ನಂತರ ವಯಸ್ಸು ವೇಗವಾಗಿರುತ್ತದೆ. ಉತ್ಕರ್ಷಣ ನಿರೋಧಕಗಳು ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಆದರೆ ಗರ್ಭಾವಸ್ಥೆ ಸಂದರ್ಭದಲ್ಲಿ ಉತ್ಕರ್ಷಣ ನಿರೋಧಿ ಅಂಶಗಳನ್ನು ತಾಯಿ ಸೇವಿಸುವ ಆಹಾರಗಳು ಒಳಗೊಂಡಿಲ್ಲ ಎಂದಾದಲ್ಲಿ ಮಗುವಿನ ವಯಸ್ಸಾಗುವಿಕೆ ಪ್ರಕ್ರಿಯೆ ವೇಗವಾಗಿರುತ್ತದೆ.
ಇಂದಿನ ಕಲುಷಿತ ವಾತಾವರಣದಲ್ಲಿ ನಾವು ಉತ್ಕರ್ಷಣ ನಿರೋಧಿ ಅಂಶಗಳುಳ್ಳ ಆಹಾರಗಳನ್ನು ಸೇವಿಸಬೇಕಾಗಿದೆ ಏಕೆಂದರೆ ಈ ಆಹಾರಗಳು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತವೆ. ಆದ್ದರಿಂದ ಗರ್ಭಿಣಿಯರು ತಮ್ಮ ಮಗುವಿನ ಆರೋಗ್ಯ ರಕ್ಷಣೆಗಾಗಿ ಇಂತಹ ಆಹಾರಗಳನ್ನು ಸೇವಿಸಬೇಕಾಗಿದೆ.
ಇನ್ನು ಸಂಶೋಧಕರು ತಾವು ನಡೆಸಿದ ಸಂಶೋಧನೆಯನ್ನುಸರಿಸಿ ಹೇಳುವುದೇನೆಂದರೆ ಮಗುವಿಗೆ ಪೂರೈಕೆಯಾಗುವ ಕಡಿಮೆ ಮಟ್ಟದ ಆಮ್ಲಜನಕ ಗರ್ಭಾವಸ್ಥೆ ಸಂದರ್ಭದಲ್ಲಿ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿರ್ಧರಿಸುತ್ತದೆ ಎಂಬುದಾಗಿದೆ. ಅದಕ್ಕಾಗಿ ಗರ್ಭಿಣಿ ಮಹಿಳೆಯರಿಗೆ ಉತ್ಕರ್ಷಣ ನಿರೋಧಿ ಅಂಶಗಳು ಶ್ರೀಮಂತವಾಗಿರುವ ಆಹಾರಗಳನ್ನು ನೀಡಿದಲ್ಲಿ ವೇಗವಾಗಿ ವಯಸ್ಸಾಗುವುದು ಕಡಿಮೆಯಾಗಿ ಮಗುವಿನ ಸರ್ವತೋಮುಖ ಅಭಿವೃದ್ಧಿ ಇದು ಪೂರಕ ಎಂಬುದನ್ನು ಅಧ್ಯಯನಗಳು ತಿಳಿಸಿವೆ.
ಆದ್ದರಿಂದ ಗರ್ಭಾವಸ್ಥೆ ಸಂದರ್ಭದಲ್ಲಿ ಉತ್ಕರ್ಷಣ ನಿರೋಧಿ ಅಂಶಗಳುಳ್ಳ ಆಹಾರಗಳನ್ನು ಏಕೆ ಸೇವಿಸಬೇಕು ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದೆನಿಸಿದೆ. ಆದರೆ ಇಂತಹ ಆಹಾರಗಳನ್ನು ಸೇವಿಸುವ ಮುನ್ನ ನಿಮ್ಮ ವೈದ್ಯರನ್ನು ಕಾಣುವುದು ಅತ್ಯವಶ್ಯಕವಾಗಿದೆ.



Click it and Unblock the Notifications



