Latest Updates
-
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ?
Gold Rate India: 10 ಗ್ರಾಂ ಚಿನ್ನದ ಬೆಲೆಯಲ್ಲಿ 1,910 ರೂ. ಭಾರೀ ಇಳಿಕೆ! ಗ್ರಾಹಕರೇ ಚಿನ್ನ ಖರೀದಿಸೋಕೆ ಇದೇ ಬೆಸ್ಟ್ ಸಮಯ
ಅಬ್ಬಾ... ಕೊನೆಗೂ ಚಿನ್ನ ಪ್ರಿಯರಿಗೆ ಸಿಕ್ಕೇ ಬಿಡ್ತು ಗುಡ್ ನ್ಯೂಸ್. ದಿಢೀರ್ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ನಿನ್ನೆಗೆ ಹೋಲಿಸಿದ್ರೆ ಇಂದು (ಅ.30) ಭಾರತದಲ್ಲಿ ಚಿನ್ನದ ದರ ಭಾರೀ ಇಳಿಕೆಯಾಗಿದೆ. ಹಾಗಿದ್ರೆ ಇಂದು ಚಿನ್ನದ ಬೆಲೆ (Gold Rate) ಎಷ್ಟು ಕಮ್ಮಿಯಾಗಿದೆ ಗೊತ್ತಾ? ಇಲ್ಲಿದೆ ಓದಿ ಸಂಪೂರ್ಣ ಮಾಹಿತಿ.

ಭಾರತದಲ್ಲಿ 24K ಚಿನ್ನದ ಬೆಲೆ:
ದೀಪಾವಳಿ ಹಬ್ಬದ ನಂತರ ಚಿನ್ನ ಪ್ರಿಯರಿಗೆ ಸಿಹಿಸುದ್ದಿ ಸಿಗುತ್ತಲೇ ಇದೆ. ಒಂದೆರಡು ದಿನ ಚಿನ್ನದ ಬೆಲೆ ಏರಿಕೆಯಾಗಿದೆ ಬಿಟ್ಟರೆ, ಉಳಿದ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇದೆ. ಇಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ ₹12,049 ರೂ. ಆಗಿದೆ. ನಿನ್ನೆ ₹12,240 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹191 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹96,392 ರೂ. ಆಗಿದ್ದು, ನಿನ್ನೆ ₹97,920 ಇತ್ತು. ಈ ಮೂಲಕ 8 ಗ್ರಾಂ ಚಿನ್ನದಲ್ಲಿ ಒಂದೇ ದಿನ ಬರೋಬ್ಬರಿ 1,528 ರೂ. ಭಾರೀ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,20,490 ರೂ. ಆಗಿದ್ದು, ನಿನ್ನೆಗಿಂತ 1,910 ರೂ ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,04,900 ರೂ. ಆಗಿದೆ. ಒಂದೇ ದಿನದಲ್ಲಿ 19,100 ರೂ.ನಷ್ಟು ಏರಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
ಇಂದು 22K ಚಿನ್ನದ 1 ಗ್ರಾಂ ಬೆಲೆ 11,045 ರೂ. ಆಗಿದ್ದು, ನಿನ್ನೆ ₹11,220 ರೂ. ಇತ್ತು. ಈ ಮೂಲಕ ಒಂದೇ ದಿನ ₹175 ರೂ. ದಿಢೀರ್ ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 88,360 ರೂ. ಆಗಿದ್ದು, ನಿನ್ನೆಗೆ ಹೋಲಿಸಿದ್ರೆ, ಇಂದು 1,400 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,12,200 ರೂ ಆಗಿದ್ದು, ನಿನ್ನೆ ₹1,12,200 ರೂ ಇತ್ತು. ನಿನ್ನೆಗಿಂತ ಇಂದು 1,750 ರೂ ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ ಇಂದು 11,04,500 ರೂ. ಆಗಿದ್ದು, ನಿನ್ನೆ ₹11,22,000 ರೂ. ಇತ್ತು. ಒಂದೇ ದಿನದಲ್ಲಿ 17,500 ರೂ. ಇಳಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು ₹9,037 ರೂ. ಆಗಿದ್ದು, ನಿನ್ನೆ 9,180 ರೂ. ಇತ್ತು. ಒಂದೇ ದಿನದಲ್ಲಿ 143 ರೂ. ಇಳಿಕೆಯಾಗಿದ್ದು ವಿಶೇಷ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹72,296 ರೂ. ಆಗಿದ್ದು, ನಿನ್ನೆ 73,440 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,144 ರೂ. ಇಳಿಕೆ ಕಂಡಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು 90,370 ರೂ. ಆಗಿದ್ದು, ನಿನ್ನೆಗಿಂತ ಇಂದು 1,430 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 12,109, 22K ರೂ. 11,100, 18K ರೂ. 9,260
ಮುಂಬೈ: 24K ರೂ. 12,049, 22K ರೂ. 11,045, 18K ರೂ. 9,037
ದೆಹಲಿ: 24K ರೂ. 12,064, 22K ರೂ. 11,060, 18K ರೂ. 9,052
ಕೋಲ್ಕತ್ತಾ: 24K ರೂ. 12,049, 22K ರೂ. 11,045, 18K ರೂ. 9,037
ಬೆಂಗಳೂರು: 24K ರೂ. 12,049, 22K ರೂ. 11,045, 18K ರೂ. 9,037
ಹೈದರಾಬಾದ್: 24K ರೂ. 12,049, 22K ರೂ. 11,045, 18K ರೂ. 9,037
ಕೇರಳ: 24K ರೂ. 12,049, 22K ರೂ. 11,045, 18K ರೂ. 9,037
ಪುಣೆ: 24K ರೂ. 12,049, 22K ರೂ. 11,045, 18K ರೂ. 9,037
ವಡೋದರಾ: 24K ರೂ. 12,054, 22K ರೂ. 11,050, 18K ರೂ. 9,042
ಅಹಮದಾಬಾದ್: 24K ರೂ. 12,054, 22K ರೂ. 11,050, 18K ರೂ. 9,042
ಸ್ಪಾಟ್ ಗೋಲ್ಡ್ ವಿವರ:
ಅಕ್ಟೋಬರ್ 30ರ ರಾಯಿಟರ್ಸ್ ವರದಿ ಪ್ರಕಾರ, ಡಾಲರ್ ಮೌಲ್ಯದಲ್ಲಿ ಸ್ವಲ್ಪ ಹಿನ್ನಡೆಯಾಗಿದ್ದರಿಂದ, ಗುರುವಾರ ಚಿನ್ನದ ಬೆಲೆ ಏರಿಕೆ ಕಂಡಿತು, ಆದರೆ ಹೂಡಿಕೆದಾರರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವ್ಯಾಪಾರ ಒಪ್ಪಂದ ಏನಾಗುತ್ತೆ ಎಂದು ಕಾತುರದಿಂದ ಕಾದು ನಿಂತಿದ್ದಾರೆ. ಇನ್ನು 0235 GMT ವೇಳೆಗೆ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 0.2% ಏರಿಕೆಯಾಗಿ $3,937.88 ಕ್ಕೆ ತಲುಪಿದೆ.
ಇಂದಿನ ಬೆಳ್ಳಿ ಬೆಲೆ:
ಬೆಳ್ಳಿ ಬೆಲೆಯಲ್ಲೂ ಇಂದು ಪ್ರತೀ ಗ್ರಾಂಗೆ 1 ರೂಪಾಯಿಯಂತೆ ಇಳಿಕೆಯಾಗಿದೆ. ಅದರಂತೆ 1 ಗ್ರಾಂ ಬೆಳ್ಳಿ ಬೆಲೆ ಇಂದು 151 ರೂಪಾಯಿ ಆಗಿದ್ದು, ನಿನ್ನೆ ₹152 ರೂ. ಇತ್ತು. ಈ ಮೂಲಕ ನಿನ್ನೆಗಿಂತ ಇಂದು 1 ರೂ. ಇಳಿಕೆಯಾಗಿದೆ. ಅದೇ ರೀತಿ 10 ಗ್ರಾಂ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, ಇಂದು ಹತ್ತು ಗ್ರಾಂ ಬೆಳ್ಳಿ ದರ 15,100 ರೂ. ಆಗಿದೆ. ಒಂದೇ ದಿನದಲ್ಲಿ 100 ರೂ. ಇಳಿಕೆಯಾಗಿದೆ. ಹಾಗೆಯೇ ಒಂದು ಕಿಲೋ ಬೆಳ್ಳಿ ಬೆಲೆ ಇಂದು 1000 ರೂ. ಇಳಿಕೆಯಾಗಿದ್ದು, ಒಟ್ಟು ಬೆಲೆ 1,51,000 ರೂ. ಆಗಿದೆ.
ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸುವುದು ಮುಖ್ಯ. ಆದ್ದರಿಂದ ಚಿನ್ನದ ಬೆಲೆ ಇಂದು ಇಳಿಕೆಯಾಗಿದ್ದು, ಬೆಳ್ಳಿ ದರದಲ್ಲೂ ಕುಸಿತ ಕಂಡಿದೆ. ಆದ್ರೆ ಏರಿಕೆ ಪ್ರಮಾಣಕ್ಕೆ ಹೋಲಿಸಿದ್ರೆ ಇತ್ತೀಚೆಗೆ ಇಳಿಕೆ ಪ್ರಮಾಣದಲ್ಲಿ ಭಾರೀ ಕಡಿಮೆಯಾಗುತ್ತಿದೆ. ಆದ್ದರಿಂದ ಮಾರುಕಟ್ಟೆ ಬೆಳವಣಿಗಳನ್ನು ನೋಡಿಕೊಂಡು ಹೂಡಿಕೆ ಮಾಡಿದ್ರೆ ಉತ್ತಮ.
Credit: Goodreturns



Click it and Unblock the Notifications
