Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
Gold Rate India: ಚಿನ್ನದ ಬೆಲೆ ಮತ್ತೆ ಏರಿಕೆ! ಬಂಗಾರ ಪ್ರಿಯರಿಗೆ ನಿನ್ನೆ ಗುಡ್ ನ್ಯೂಸ್, ಇಂದು ಶಾಕ್
ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ (Gold Rate India) ಕಂಡಿತ್ತು. ಆದ್ರೆ ಇಂದು ದಿಢೀರ್ ಏರಿಕೆ ಕಂಡಿದೆ. ನಿನ್ನೆಯಷ್ಟೇ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್ ಕೊಟ್ಟಿದ್ದ ಮಾರುಕಟ್ಟೆ, ಇಂದು ದಿಢೀರ್ ಶಾಕ್ ಕೊಟ್ಟಿದೆ. ಹಾಗಿದ್ರೆ ಇಂದು (ಅ.29) ಚಿನ್ನದ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಭಾರತದಲ್ಲಿ 24K ಚಿನ್ನದ ಬೆಲೆ ಇಂದು ಎಷ್ಟಿದೆ?
ದೀಪಾವಳಿ ನಂತರವಂತೂ ಚಿನ್ನ ಪ್ರಿಯರಿಗೆ ಗುಡ್‌ನ್ಯೂಸ್ ಸಿಗುತ್ತಲೇ ಇತ್ತು. ಆದ್ರೆ ಹಲವು ದಿನಗಳ ನಂತರ ಇದೀಗ ಬಂಗಾರ ಪ್ರಿಯರಿಗೆ ನಿರಾಸೆ ಮೂಡಿದೆ. ನಿನ್ನೆ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು ದಿಢೀರ್ ಏರಿಕೆಯಾಗಿದೆ. ಇಂದು 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹12,158 ರೂ. ಆಗಿದೆ. ನಿನ್ನೆ ₹12,082 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹76 ರೂ. ಏರಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹97,264 ರೂ. ಆಗಿದ್ದು, ನಿನ್ನೆ ₹96,656 ಇತ್ತು. ಈ ಮೂಲಕ 8 ಗ್ರಾಂ ಚಿನ್ನದಲ್ಲಿ ಒಂದೇ ದಿನ ಬರೋಬ್ಬರಿ ₹608 ರೂ. ದಿಢೀರ್ ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,21,580 ರೂ. ಆಗಿದ್ದು, ನಿನ್ನೆಗಿಂತ ₹760 ರೂ ಏರಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,15,800 ರೂ. ಆಗಿದೆ. ಒಂದೇ ದಿನದಲ್ಲಿ 7,600 ರೂ.ನಷ್ಟು ಏರಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
ಇನ್ನು 24K ಚಿನ್ನದಂತೆಯೇ 22K ಚಿನ್ನದ ಬೆಲೆಯೂ ಏರಿಕೆಯಾಗಿದ್ದು, ಇಂದು 22K ಚಿನ್ನದ 1 ಗ್ರಾಂ ಬೆಲೆ 11,145 ರೂ. ಆಗಿದ್ದು, ನಿನ್ನೆ ₹11,075 ರೂ. ಇತ್ತು. ಈ ಮೂಲಕ ಒಂದೇ ದಿನ ₹70 ರೂ. ಏರಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 89,160 ರೂ. ಆಗಿದ್ದು, ನಿನ್ನೆಗೆ ಹೋಲಿಸಿದ್ರೆ, ಇಂದು ₹560 ರೂ. ಏರಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,11,450 ರೂ ಆಗಿದ್ದು, ನಿನ್ನೆ ₹1,10,750 ರೂ ಇತ್ತು. ಇದರಲ್ಲೂ ನಿನ್ನೆಗೆ ಹೋಲಿಸಿದ್ರೆ ಇಂದು ₹700 ರೂ ಏರಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ ಇಂದು ₹11,14,500 ರೂ. ಆಗಿದ್ದು, ನಿನ್ನೆ ₹11,07,500 ರೂ. ಇತ್ತು. ಒಂದೇ ದಿನದಲ್ಲಿ 7,000 ರೂ. ದಿಢೀರ್ ಏರಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಇಂದು ಎಷ್ಟಿದೆ?
18K ಚಿನ್ನದ ಬೆಲೆ ಇಂದು ಏರಿಕೆ ಕಂಡಿದೆ. 1 ಗ್ರಾಂ ಚಿನ್ನದ ಬೆಲೆ ಇಂದು ₹9,119 ರೂ. ಆಗಿದ್ದು, ನಿನ್ನೆ 9,062 ರೂ. ಇತ್ತು. ಒಂದೇ ದಿನದಲ್ಲಿ ₹57 ರೂ. ಏರಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹72,952 ರೂ. ಆಗಿದ್ದು, ನಿನ್ನೆ 72,496 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹456 ರೂ. ಏರಿಕೆ ಕಂಡಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು 91,190 ರೂ. ಆಗಿದ್ದು, ನಿನ್ನೆಗಿಂತ ಇಂದು ₹570 ರೂ. ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?
ಚೆನ್ನೈ: 24K ರೂ. 12,229, 22K ರೂ. 11,210, 18K ರೂ. 9,350
ಮುಂಬೈ: 24K ರೂ. 12,158, 22K ರೂ. 11,145, 18K ರೂ. 9,119
ದೆಹಲಿ: 24K ರೂ. 12,173, 22K ರೂ. 11,160, 18K ರೂ. 9,134
ಕೋಲ್ಕತ್ತಾ: 24K ರೂ. 12,158, 22K ರೂ. 11,145, 18K ರೂ. 9,119
ಬೆಂಗಳೂರು: 24K ರೂ. 12,158, 22K ರೂ. 11,145, 18K ರೂ. 9,119
ಹೈದರಾಬಾದ್: 24K ರೂ. 12,158, 22K ರೂ. 11,145, 18K ರೂ. 9,119
ಕೇರಳ: 24K ರೂ. 12,158, 22K ರೂ. 11,145, 18K ರೂ. 9,119
ಪುಣೆ: 24K ರೂ. 12,158, 22K ರೂ. 11,145, 18K ರೂ. 9,119
ವಡೋದರಾ: 24K ರೂ. 12,163, 22K ರೂ. 11,150, 18K ರೂ. 9,124
ಅಹಮದಾಬಾದ್: 24K ರೂ. 12,163, 22K ರೂ. 11,150, 18K ರೂ. 9,124
ಸ್ಪಾಟ್ ಗೋಲ್ಡ್ ವಿವರ:
ಅಕ್ಟೋಬರ್ 29ರ ರಾಯಿಟರ್ಸ್ ವರದಿ ಪ್ರಕಾರ, ಬುಧವಾರ ಚಿನ್ನದ ಬೆಲೆ ಸ್ವಲ್ಪ ಏರಿಕೆಯಾಗಿದೆ. ಫೆಡರಲ್ ರಿಸರ್ವ್‌ನಿಂದ ಬಡ್ಡಿ ದರ ಕಡಿತ ನಿರೀಕ್ಷೆಯಿದೆ. ಅಲ್ಲದೇ ಅಮೆರಿಕ-ಚೀನಾ ವ್ಯಾಪಾರ ಸಂಘರ್ಷ ಚೇತರಿಕೆ ಕಂಡಿರುವ ಕಾರಣ ಚಿನ್ನದ ಬೆಲೆ ಮೇಲು ಪ್ರಭಾವ ಬೀರುತ್ತಿದೆ.
ಅಕ್ಟೋಬರ್ 7 ರ ಮಂಗಳವಾರದ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿದ ನಂತರ, 0257 GMT ವೇಳೆಗೆ ಸ್ಪಾಟ್ ಚಿನ್ನ ದರವು ಪ್ರತಿ ಔನ್ಸ್‌ಗೆ 0.2% ಏರಿಕೆಯಾಗಿ $3,957.42 ಕ್ಕೆ ತಲುಪಿದೆ.
ಬೆಳ್ಳಿ ಬೆಲೆ ಹೇಗಿದೆ?
ಅತ್ತ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದ್ದಂತೆ, ಇತ್ತ ಬೆಳ್ಳಿ ಬೆಲೆಯಲ್ಲೂ ದಿಢೀರ್ ಏರಿಕೆಯಾಗಿದೆ. 1 ಗ್ರಾಂ ಬೆಳ್ಳಿ ಬೆಲೆ ಇಂದು ರೂ. ₹152 ಆಗಿದ್ದು, ನಿನ್ನೆ ₹151 ರೂ. ಇತ್ತು. ಒಂದೇ ದಿನದಲ್ಲಿ 1 ರೂ. ಏರಿಕೆಯಾಗಿದೆ. ಅಲ್ಲದೇ 10 ಗ್ರಾಂ ಬೆಳ್ಳಿ ಬೆಲೆ ಇಂದು ರೂ. 1,520 ಆಗಿದೆ. ಆದ್ರೆ ನಿನ್ನೆ ರೂ. 1,510 ಆಗಿತ್ತು. ಹಾಗೆಯೇ 100 ಗ್ರಾಂ ಬೆಳ್ಳಿ ಬೆಲೆ ಇಂದು ರೂ. 15,200 ಆಗಿದ್ದು, ನಿನ್ನೆ 15,100 ರೂ. ಇತ್ತು. 1 ಕಿಲೋಗ್ರಾಂ ಬೆಳ್ಳಿ ಬೆಲೆ ಇಂದು ರೂ. 1,52,000 ಆಗಿದ್ದು, ಒಟ್ಟು 1,000 ರೂ. ಏರಿಕೆಯಾಗಿದೆ.
ಚಿನ್ನ, ಬೆಳ್ಳಿ ಮೇಲಿನ ಹೂಡಿಕೆ ಸೇಫ್ ಎಂದು ಹೇಳಲಾಗುತ್ತದೆ. ಆದ್ರೆ ಇತ್ತೀಚೆಗೆ ಬೆಲೆ ಏರಿಳಿತವಾಗುತ್ತಲೇ ಇದೆ. ಈ ಮಧ್ಯೆ ಹೂಡಿಕೆದಾರರಿಗೆ, ಖರೀದಿದಾರರಿಗೂ ಗೊಂದಲ ಉಂಟಾಗಿದೆ. ಆದ್ದರಿಂದ ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸಿದರೆ ಉತ್ತಮ.
Credit: Goodreturns



Click it and Unblock the Notifications
