Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
Karnataka-Ration Card: ಲಕ್ಷ ಲಕ್ಷ ಬಿಪಿಎಲ್ ಕಾರ್ಡ್ ರದ್ದು! ಸರ್ಕಾರದ ಬೊಕ್ಕಸಕ್ಕೆ ಕೋಟಿ ಆದಾಯ
ಕರ್ನಾಟಕದಲ್ಲಿ ರೇಷನ್ ಕಾರ್ಡ್ (Ration Card-Karnataka) ಮೂಲಕ ಸರ್ಕಾರಿ ಸಬ್ಸಿಡಿ ಆಹಾರ ಧಾನ್ಯಗಳು, ಅಕ್ಕಿ, ಎಣ್ಣೆ, ಹೀಗೆ ಅಗತ್ಯ ಸಾಮಾನುಗಳನ್ನು ಕಡಿಮೆ ಬೆಲೆಗೆ ಪಡೆಯುವಂತೆ ಅನುಕೂಲವಾಗುವ ಅಗತ್ಯ ದಾಖಲೆಯಾಗಿಬಿಟ್ಟಿದೆ. ಇನ್ನು ಈ ದಾಖಲೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ವಹಿಸುತ್ತದೆ. ಇನ್ನು ರೇಷನ್ ಕಾರ್ಡ್ ಸದ್ಯ ಅಗತ್ಯ ದಾಖಲೆಯಾಗಿಯೂ ಗುರುತಿಸಿಕೊಂಡಿದೆ. ಇನ್ನು ಈ ದಾಖೆಲ ಅನೇಕ ಸರ್ಕಾರಿ ಯೋಜನೆಗಳಿಗೆ (ಗೃಹಲಕ್ಷ್ಮಿ, ಅನ್ನಭಾಗ್ಯ) ಮಾನ್ಯ ದಾಖಲೆಯಾಗಿದೆ. ಸಾಮಾನ್ಯವಾಗಿ ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಬಿಪಿಎಲ್ ಕಾರ್ಡ್ (BPL Card) ನೀಡಲಾಗುತ್ತದೆ. ಆದ್ರೆ ಇತ್ತೀಚೆಗೆ ಈ ಬಿಪಿಎಲ್ ಕಾರ್ಡ್‌ಗಳು ದುರುಪಯೋಗವಾಗುತ್ತಿದೆ ಎಂಬ ಆರೋಪ ಕೇಳುತ್ತಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ರಾಜ್ಯ ಸರಕಾರ ಕೂಡಾ ತನ್ನ ಆಪರೇಷನ್ ಶುರು ಮಾಡಿದೆ.

ಕರ್ನಾಟಕ ಸರ್ಕಾರವು ಬಿಪಿಎಲ್ ರೇಷನ್ ಕಾರ್ಡ್ ವಿಚಾರದಲ್ಲಿ ಸದ್ಯ ಮಹತ್ವದ ಕ್ರಮ ಕೈಗೊಳ್ಳುತ್ತಿದೆ. ಈ ನಿರ್ಧಾರದಿಂದ ರಾಜ್ಯ ಸರ್ಕಾರ ಕೂಡಾ ಕೋಟ್ಯಾಂತರ ಹಣ ಉಳಿತಾಯ ಮಾಡುತ್ತಿದೆ. ಬಿಪಿಎಲ್ ಕಾರ್ಡ್ ಸಂಬಂಧಿಸಿ ಹಲವಾರು ನಿಯಮಗಳಿವೆ. ಆದರೆ ಈ ನಿಯಮಗಳನ್ನು ಉಲ್ಲಂಘಿಸುವರ ವಿರುದ್ಧ ಈಗಾಗಲೇ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಈ ಪರಿಶೀಲನೆಯಿಂದಾಗಿ ರಾಜ್ಯದಲ್ಲಿ ಇದುವರೆಗೆ ಲಕ್ಷಗಟ್ಟಲೆ ಬಿಪಿಎಲ್ ಕಾರ್ಡ್‌ಗಳು ರದ್ದಾಗಿದೆ ಎಂದು ವರದಿಯಾಗಿದೆ.
ಲಕ್ಷ ಲಕ್ಷ ಬಿಪಿಎಲ್ ಕಾರ್ಡ್ ರದ್ದು!
ಹೌದು, ಪ್ರಸ್ತುತ ಕರ್ನಾಟಕದಲ್ಲಿ 4.50 ಲಕ್ಷಕ್ಕೂ ಅಧಿಕ ಬಿಪಿಎಲ್ ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ಆದ್ರೆ ಇದು ಸಂಪೂರ್ಣ ರದ್ದು ಪಡಿಸುವ ಪ್ರಕ್ರಿಯೆ ಅಲ್ಲ. ಬದಲಿಗೆ ಅನರ್ಹ ಕಾರ್ಡ್‌ಗಳನ್ನು ಗುರುತಿಸಿ ಎಪಿಎಲ್ ಕಾರ್ಡ್‌ಗೆ ವರ್ಗಾಯಿಸುವುದಾಗಿದೆ. ಇನ್ನು ಕೇವಲ ಬೆಂಗಳೂರಿನಲ್ಲೇ 1 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್‌ಗಳನ್ನು ಬಿಪಿಎಲ್‌ಗೆ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ.
ಸರ್ಕಾರದ ಬೊಕ್ಕಸಕ್ಕೆ ಲಾಭ!
ಈಗಾಗಲೇ ಗ್ಯಾರಂಟಿ ಯೋಜನೆಗಳಿಂದಾಗಿ ಕರ್ನಾಟಕ ಸರ್ಕಾರ ನಷ್ಟದ ಹಾದಿ ಹಿಡಿದಿದೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇದೆ. ಆದ್ದರಿಂದ ಸರ್ಕಾರದ ಖಜಾನೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಹಲವು ಸರ್ಕಸ್ ನಡೆಸುತ್ತಲೇ ಇದೆ. ಅದರಲ್ಲೊಂದಿ ರೇಷನ್ ಕಾರ್ಡ್ ಪರಿಷ್ಕರಣೆ. ಇದೀಗ ಲಕ್ಷಗಟ್ಟಲೆ ಬಿಪಿಎಲ್ ಕಾರ್ಡ್ ರದ್ದಾಗಿರುವುದರಿಂದ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ, ಹೀಗೆ ಹಲವು ಯೋಜನೆಗಳಿಂದ ಕೋಟ್ಯಾಂತರ ಹಣ ಉಳಿತಾಯಬಾಗಿದೆ.
ಅಂದರೆ ಸರ್ಕಾರ ತೆಗೆದುಕೊಂಡ ಈ ಒಂದು ಕ್ರಮದಿಂದ ಪ್ರತೀ ತಿಂಗಳು 110 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣ ಸರ್ಕಾರದ ಬೊಕ್ಕಸದಲ್ಲಿ ಉಳಿತಾಯವಾಗಲಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ ಸದ್ಯ 4.50 ಲಕ್ಷ ಬಿಪಿಎಲ್ ಕಾರ್ಡ್ ರದ್ದಾಗಿದ್ದು, ಈ ಪರಿಣಾಮ ಇಷ್ಟೂ ಮಂದಿಗೂ ಗೃಹಲಕ್ಷ್ಮಿ ಯೋಜನೆ ಪ್ರಯೋಜನ ಸಿಗುವುದಿಲ್ಲ. ಆದ್ದರಿಂದ ಸರ್ಕಾರಕ್ಕೂ ಭಾರೀ ಉಳಿತಾಯವಾಗಲಿದೆ.
ಯಾವ ಕಾರ್ಡ್‌ಗಳು ರದ್ದು?
- ಆದಾಯ ತೆರಿಗೆ ಪಾವತಿಸುವವರು
- ಸರ್ಕಾರಿ ನೌಕರರು
- ವಾರ್ಷಿಕ ಆದಾಯ 1.2 ಲಕ್ಷಕ್ಕಿಂತ ಹೆಚ್ಚು ಇರುವ ಕುಟುಂಬ
- ನಾಲ್ಕು ಚಕ್ರದ ವಾಹನ ಹೊಂದಿರುವವರು
Credit: Goodreturns



Click it and Unblock the Notifications
