Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
"ಇದೇ ಚಾನ್ಸ್ ನಿಮ್ಮ ಅಕ್ಕ-ತಂಗಿಗೆ ಸಿಕ್ಕಿದ್ರೆ ಹೀಗೆ ಟ್ರೋಲ್ ಮಾಡ್ತಿದ್ರಾ?" ಟ್ರೋಲಿಗರಿಗೆ ಹೂವಿನ ಹುಡುಗಿಯ ಪಾಠ
ಕೆಲವು ದಿನಗಳ ಹಿಂದೆ ಹೂವಿನ ಬಾಣದಂತೆ ಅಂತ ಹಾಡನ್ನು ಹಾಡಿ ಯುವತಿಯೊಬ್ಬರು ವೈರಲ್ ಆಗಿದ್ದರು. ರಾತ್ರೋ ರಾತ್ರಿ ಆ ಯುವತಿ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದರು. ಅರ್ಜುನ್ ಜನ್ಯ ಕಂಪೋಸ್ ಮಾಡಿದ್ದ ಈ ಜನಪ್ರಿಯ ಗೀತೆಯನ್ನು ಯುವತಿ ತನ್ನದೇ ಶೈಲಿಯಲ್ಲಿ ಹಾಡಿದ್ದರು. ಅದೇ ಹುಡುಗಿಗೆ ಇತ್ತೀಚೆಗೆ ಕಾಮಿಡಿ ಕಿಲಾಡಿಗಳು ಶೋನಲ್ಲಿ ಅತಿಥಿಯಾಗಿ ಭಾಗವಹಿಸುವ ಅವಕಾಶ ಸಿಕ್ಕಿತ್ತು.
ಜೀ ಕನ್ನಡದ ಪ್ರತಿಷ್ಠಿತ ಕಾಮಿಡಿ ಶೋನಲ್ಲಿ ನಿತ್ಯಾಶ್ರೀ ಅತಿಥಿಯಾಗಿ ಭಾಗವಹಿಸಿದ್ದರು. ಯೋಗರಾಜ್ ಭಟ್, ಜಗ್ಗೇಶ್, ತಾರಾ ಅವರಂತಹ ದಿಗ್ಗಜರ ಎದುರು ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ, ಕಾಮಿಡಿ ಕಿಲಾಡಿಗಳು ಶೋನಲ್ಲಿ ಅತಿಥಿಯಾಗಿ ಪರ್ಫಾಮ್ ಮಾಡಿ ಬರುತ್ತಿದ್ದಂತೆ ನಿತ್ಯಾಶ್ರೀಗೆ ಸೋಶಿಯಲ್ ಮೀಡಿಯಾಗಳಲ್ಲಿ ಕಾಲೆಳೆಯುವುದಕ್ಕೆ ಶುರು ಮಾಡಿದ್ದರು. ನೆಗೆಟಿವ್ ಕಾಮೆಂಟ್‌ಗಳನ್ನು ಹಾಕುತ್ತಿದ್ದರು.

ಅಂತಹವರಿಗೆ ನಿತ್ಯಾಶ್ರೀ ತಿರುಗೇಟು ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ನಿತ್ಯಾಶ್ರೀ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ನಿತ್ಯಾಶ್ರೀಯವರ ಪ್ರತಿಭೆಯನ್ನು ಪ್ರಶ್ನೆ ಮಾಡಿದ್ದಾರೆ. ಇಂತಹವರಿಗೆ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಂತಹದ್ದೇನು ಹೇಳಿದ್ದಾರೆ ಅಂತ ನೋಡುವುದಾರೇ,
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಾಲೆಳೆದವರಿಗೆ ನಿತ್ಯಾಶ್ರೀ ಪ್ರಬುದ್ಧವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ವಿರುದ್ಧ ವಿಡಿಯೋ ಮಾಡಿ ವಿರೋಧಿಸುವುದಕ್ಕೂ ಮುನ್ನ ಒಮ್ಮೆ ಯೋಚನೆ ಮಾಡಿ ಎಂದು ಹೇಳುತ್ತಾ? ಕೆಟ್ಟದಾಗಿ ಕಾಮೆಂಟ್‌ಗಳನ್ನು ಪಾಸ್ ಮಾಡಿದವರಿಗೆ ಕೂಲ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
"ಈ ವಿಡಿಯೋ ಮಾಡುವುದಕ್ಕೆ ಕಾರಣ, ಮೊನ್ನೆ ನಡೆದ ಕಾಮಿಡಿ ಕಿಲಾಡಿಗಳು ಶೋನಲ್ಲಿ ನಾನು ಅತಿಥಿಯಾಗಿ ನಟಿಸಿದ್ದೇನೆ. ಅದನ್ನು ತುಂಬಾ ಜನ ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ. ಅವರೆಲ್ಲರಿಗೂ ನಾನು ಕೇಳುವುದು ಇಷ್ಟೇ. ಇದೇ ಚಾನ್ಸ್ ನಿಮ್ಮ ಅಕ್ಕನಿಗೋ, ತಂಗಿಗೋ ಸಿಕ್ಕಿದ್ರೆ ಇದನ್ನು ಬಳಸಿಕೊಳ್ಳುತ್ತಿದ್ರಾ? ಬಿಡ್ತಿದ್ರಾ? ಹಾಗೇ ಇಷ್ಟು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ರಾ?" ಎಂದು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವವರಿಗೆ ಪ್ರತಿಕ್ರಿಯಿಸಿದ್ದಾರೆ.
"ಹೌದು ನಾನು ಕೆಟ್ಟದಾಗಿ ಹಾಡಿದ್ದೀನಿ. ಅದನ್ನು ಅರಿತುಕೊಂಡು ಸಾರಿ ಕೂಡ ಕೇಳಿದ್ದೀನಿ. ಸಾರಿ ಕೇಳುವ ಅವಶ್ಯಕತೆಯಿಲ್ಲ ಅಂತ ಅರ್ಜುನ್ ಸರ್ ಕೂಡ ಹೇಳಿದ್ದಾರೆ. ಅದನ್ನು ನಾನು ಪ್ರೇರಣೆಯಾಗಿ ತೆಗೆದುಕೊಳ್ಳುತ್ತಿಲ್ಲ. ಜಸ್ಟ್ ನೆನೆಪು ಮಾಡಿದ್ದಷ್ಟೇ." ಎಂದು ನಿತ್ಯಾಶ್ರೀ ಕಾಲೆಳೆದವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಹೂವಿನ ಬಾಣದಂತೆ ಹಾಡನ್ನು ತಮ್ಮದೇ ಶೈಲಿಯಲ್ಲಿ ನಿತ್ಯಾಶ್ರೀ ಹಾಡಿದ ದಿನದಿಂದಲೂ ಟ್ರೋಲ್ ಆಗುತ್ತಲೇ ಇದ್ದಾರೆ. ಈಗ ಕಾಮಿಡಿ ಕಿಲಾಡಿಗಳು ವೇದಿಕೆ ಏರಿ ಬಂದ್ಮೇಲೆ ವಿಡಿಯೋ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ನಿತ್ಯಾಶ್ರೀ ನೊಂದುಕೊಂಡಿದ್ದಾರೆ. ತನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಸ್ಟೇಜ್ ಹತ್ತಿದ್ದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
"ನನ್ನ ಲೈಫ್‌ನಲ್ಲಿ ಫಸ್ಟ್ ಟೈಮ್ ಸ್ಟೇಜ್ ಹತ್ತಿದ್ದು ಅಂದರೆ ಕಾಮಿಡಿ ಕಿಲಾಡಿಗಳು. ತುಂಬಾ ಜನ ಆರ್ಟಿಸ್ಟ್‌ಗಳು, ಜಡ್ಜ್‌ಗಳು ತುಂಬಾ ಜನ ಇದ್ದರು. ಅವರ ಮುಂದೆ ಸ್ಟೇಜ್ ಫಿಯರ್ ಇಲ್ಲದೆ ನಾನು ಆಕ್ಟ್ ಮಾಡಿದ್ದೀನಿ. ಅದನ್ನು ನಮ್ಮ ಕಡೆ ಟ್ಯಾಲೆಂಟ್ ಅಂತಾನೇ ಕರೆಯೋದು." ಎಂದು ನಿತ್ಯಾಶ್ರೀ ವಿಡಿಯೋದಲ್ಲಿ ಹೇಳಿದ್ದಾರೆ.
ಇದರೊಂದಿಗೆ "ಏನು ಸಾಧನೆ ಮಾಡಿದೀನಿ ಅಂತ ಹೇಳುತ್ತಿದ್ದೀರಿ. ಹೌದು, ನಾನು ಸಾಧನೆ ಮಾಡಿಲ್ಲ ನಿಜ. ಅದನ್ನು ಮಾಡುವುದಕ್ಕೆ ಕರ್ನಾಟಕದ ಜನತೆ ನನಗೊಂದು ದಾರಿ ಮಾಡಿಕೊಟ್ಟಿದ್ದೀರ. ಅದನ್ನು ನಾನು ಬಳಸಿಕೊಳ್ಳುತ್ತಿದ್ದೀನಿ ಅಷ್ಟೇ. ನೀವು ಮಾಡೋ ವಿಡಿಯೋ ಬಗ್ಗೆ ಒಂದೇ ಒಂದು ಸಾರಿ ಯೋಚನೆ ಮಾಡಿ. ನಮ್ಮ ಅಪ್ಪ-ಅಮ್ಮ ಏನಾದರೂ ನೋಡಿದರೆ, ಅವರ ಮನಸ್ಸಿಗೆ ಎಷ್ಟು ಬೇಜಾರಾಗಬಹುದು. ಆಗಾದರೂ ಹೀಗೆ ವಿಡಿಯೋ ಮಾಡೋದನ್ನು ನಿಲ್ಲಿಸುತ್ತೀರ." ಎಂದು ಬೇಸರ ಹೊರ ಹಾಕಿದ್ದಾರೆ.
Credit: Filmibeat



Click it and Unblock the Notifications
