Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
"ಅವಳು ಯಾವಳೋ ಸಡೆ..ನಿನ್ನೆ ಮೊನ್ನೆ ಬಂದವಳು" ಎಂದು ರಕ್ಷಿತಾ ವಿರುದ್ಧ ಬೇಡದ ಪದ ಬಳಸಿದ ಕಾಕ್ರೋಚ್
ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಕ್ರೋಶದ ಕಾವು ಹೆಚ್ಚಾಗುತ್ತಿದೆ. ನಾಲ್ಕನೇ ವಾರಕ್ಕೆ ಸ್ಪರ್ಧಿಗಳು ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎನಿಸುತ್ತಿದೆ. ಅದರಲ್ಲೂ ರಕ್ಷಿತಾ ಶೆಟ್ಟಿ ವಿಚಾರದಲ್ಲಿ ಅಶ್ವಿನಿ ಗೌಡ, ಜಾನ್ವಿ ಬಳಿಕ ಈಗ ಕಾಕ್ರೋಚ್ ಸುಧಿ ಕೆಲವು ಬೇಡದ ಪದಗಳನ್ನು ಬಳಸಿ ಪೇಚಿಗೆ ಸಿಲುಕಿದಂತೆ ತೋರುತ್ತಿದೆ. ಮನೆಯವರು ಸುಧಿಯನ್ನು ತಡೆಯುವುದಕ್ಕೆ ಪ್ರಯತ್ನ ಪಟ್ಟರೂ ಬೈಯ್ಯುವುದನ್ನು ನಿಲ್ಲಿಸಲೇ ಇಲ್ಲ.
ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟ ದಿನದಿಂದಲೂ ಒಬ್ಬರಲ್ಲ ಒಬ್ಬರು ರಕ್ಷಿತಾ ಶೆಟ್ಟಿಯ ವಿರುದ್ಧ ತಿರುಗಿ ಬೀಳುತ್ತಲೇ ಇದ್ದಾರೆ. ಕಳೆದ ವಾರವಷ್ಟೇ ಅಶ್ವಿನಿ ಗೌಡ ಹಾಗೂ ಜಾನ್ವಿ ಇಬ್ಬರೂ ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಿದ್ದರು. ಇವರಿಬ್ಬರ ವಿರುದ್ಧವು ನೆಟ್ಟಿಗರು ಕಿಡಿ ಕಾರಿದ್ದರು. ರಕ್ಷಿತಾ ಶೆಟ್ಟಿಯ ಬೆಂಬಲಕ್ಕೆ ನಿಂತು ಸಪೋರ್ಟ್ ಮಾಡಿದ್ದರು. ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಕೂಡ ಇವರಿಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು.

ಇಂದಿನ (ಅಕ್ಟೋಬರ್ 23) ಎಪಿಸೋಡ್‌ನಲ್ಲಿ ಕಾಕ್ರೋಚ್ ಸುಧಿ ಬೇಡದ ಕೆಲವು ಪದಗಳನ್ನು ರಕ್ಷಿತಾ ಶೆಟ್ಟಿಯ ಮೇಲೆ ಪ್ರಯೋಗ ಮಾಡಿದ್ದಾರೆ. ಮನೆ ಮಂದಿಯೆಲ್ಲ ಕಾಕ್ರೋಚ್ ಸುಧಿಯನ್ನು ತಡೆಯುವುದಕ್ಕೆ ಪ್ರಯತ್ನ ಪಟ್ಟರೂ ಅವರನು ತಡೆಯುವುದಕ್ಕೆ ಸಾಧ್ಯವಾಗಲೇ ಇಲ್ಲ. ಅಷ್ಟಕ್ಕೂ ರಕ್ಷಿತಾ ಸುಧಿ ಏನೆಲ್ಲ ಪದಗಳನ್ನು ಬಳಸಿದರು? ಅದನ್ನು ವಿರೋಧಿಸಿದವರು ಯಾರು? ತಿಳಿಯುವುದಕ್ಕೆ ಮುಂದೆ ಓದಿ.
ಮೀಟಿಂಗ್ ಮಾಡುತ್ತಿದ್ದ ವೇಳೆ ಧ್ರುವಂತ್ ಮುಂದೆ ಬಂದು ಮನೆಯಲ್ಲಿ ಕೆಲವರು ಸ್ವಚ್ಚತೆಯನ್ನು ಕಾಪಾಡುತ್ತಿಲ್ಲ. ಮನೆ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ಹೀಗಾಗಿ ಇದನ್ನು ಮನೆಯ ಯಾರಿಗಾದರೂ ಒಬ್ಬ ಸದಸ್ಯರಿಗೆ ಒಪ್ಪಿಸಬೇಕೆಂದು ಹೇಳುತ್ತಿದ್ದರು. ಆ ವೇಳೆ ರಕ್ಷಿತಾ ಶೆಟ್ಟಿಯ ಹೆಸರನ್ನು ಅವರೇ ಪ್ರಸ್ತಾಪ ಮಾಡಿದ್ದರು. ಈ ವೇಳೆ ರಕ್ಷಿತಾ ಕೂಡ ಕೊಟ್ಟ ಜವಾಬ್ದಾರಿಯನ್ನು ಒಪ್ಪಿಕೊಂಡರು. ಬಳಿಕ ಯಾರು ಏನು ಕೆಲಸ ವಹಿಸಿಕೊಳ್ಳಬೇಕು ಎಂದು ಚರ್ಚೆ ನಡೆಯುತ್ತಿತ್ತು. ಆ ವೇಳೆ ಕಾಕ್ರೋಚ್ ಸುಧಿ ಎರಡು ಮೂರು ಬಾರಿ ರಕ್ಷಿತಾರನ್ನು ಕರೆದಿದ್ದಾರೆ. ಅವರಿಗೆ ಕೇಳಿಸಲಿಲ್ಲ. ಹೀಗಾಗಿ ಆ ಮೀಟಿಂಗ್‌ನಿಂದ ಎದ್ದು ಹೊರ ಹೋದರು.
BBK 12: ಗಿಲ್ಲಿ ವಿಚಾರಕ್ಕೆ ಅಶ್ವಿನಿ- ಕಾವ್ಯ ನಡುವೆ ವಾಗ್ಯುದ್ಧ; ಗಿಲ್ಲಿ 'ಕೆಂಪೇಗೌಡ' ಲುಕ್ ನೋಡಿದ್ರಾ?
ಇದನ್ನು ಗಮನಿಸಿದ ಧ್ರುವಂತ್ ಮತ್ತೆ ಅವರನ್ನು ಕರೆದುಕೊಂಡು ಬಂದರು. ಆಗ ಕೋಪದಲ್ಲಿದ್ದ ಕಾಕ್ರೋಚ್ ಸುಧಿ, ಏಕಾಏಕಿ ರಕ್ಷಿತಾ ವಿರುದ್ಧ ಕೂಗಾಡುವುದಕ್ಕೆ ಶುರು ಮಾಡಿದ್ದರು. ನನ್ನ ಮಾತುಗಳನ್ನು ಕೇಳುತ್ತಿಲ್ಲ. "ನನ್ನ ಲೋಟ ಇಲ್ಲ.. ಕದ್ದು ಇಟ್ಟುಕೊಂಡಿದ್ದಾರೆ. ಒಂದು ವಾರದಿಂದ ಲೋಟ ಇಲ್ಲ. ಅವಳು ಯಾರೋ ನಿನ್ನೆ ಮೊನ್ನೆ ಬಂದ ಸಡೆ ಮಾತಾಡುತ್ತಿದ್ದಾಳೆ. ಐದು ಸಾರಿ ಕರೆದರೂ ತಿರುಗುವುದಿಲ್ಲ." ಎಂದು ಕೂಗಾಡುವುದಕ್ಕೆ ಶುರು ಮಾಡಿದ್ದರು.
ಈ ವೇಳೆ ಜಾನ್ವಿಯಿಂದ ಎಲ್ಲರೂ ವಿರೋಧಿಸಿದ್ದರು. ಆಗಲೂ "ಪರ್ವಾಗಿಲ್ಲ ಗುರೂ, 10 ಸಾರಿ ಕರೆದೆ ಅವಳನ್ನು. ನನಗೆ ಸ್ವಾಭಿಮಾನ ಇಲ್ವಾ? ನಾನ್ಯಾಕೆ ಇವಳ ಮಾತನ್ನು ಕೇಳಬೇಕು. ಅವಳು ಒಬ್ಬಳೇ ಕಿಲಾಡಿ ಮಾತಾಡುತ್ತಿದ್ದಾಳೆ. ನಮ್ಮನ್ನು ಯಾಕೆ ಗುಡ್ಡೆ ಹಾಕಿದ್ದೀರಾ. ನೀವು ಮೂವರೇ ಮಾತಾಡಿಕೊಳ್ಳಿ." ಎಂದು ವಾದ ಮುಂದುವರೆಸಿದ್ದರು. ಆಗ ರಕ್ಷಿತಾ "ಆ ಟೈಮ್‌ನಲ್ಲಿ ಬೇರೆ ಮಾತುಕತೆ ಆಗುತ್ತಿತ್ತು." ಎಂದಾಗ.. "ನಮ್ಮದೂ ಮಧ್ಯದಲ್ಲಿ ಬೇರೆ ಏನೋ ಆಗುತ್ತಿರುತ್ತೆ. ಮಧ್ಯದಲ್ಲಿ ಯಾರಾದರೂ ಮಾತಾಡಿದರೆ ನಾಲಿಗೆಗಳನ್ನು ಸೀಳಿ ಹಾಕುತ್ತೇನೆ. ಮರ್ಯಾದೆ ಕೊಟ್ಟರೆ, ಮರ್ಯಾದೆ." ಎಂದು ಕಾಕ್ರೋಚ್ ಸುಧಿ ಎದ್ದು ಹೋದರು.
ಮನೆಯ ಹೊರಗಡೆ ಕಾಕ್ರೋಚ್ ಸುಧಿಗೆ 'ಸಡೆ' ಅಂತೆಲ್ಲ ಚಿಕ್ಕ ಹುಡುಗಿಗೆ ಮಾತಾಡಬಾರದಿತ್ತು ಎಂದು ಗಿಲ್ಲಿ ನಟ ಹೇಳಿದಾಗ, ಕಾಕ್ರೋಚ್ ಸುಧಿ ನಮ್ಮ ಕಡೆ ಇದೆಲ್ಲಾ ಕಾಮನ್ ಎಂದು ವಾಧಿಸಿದ್ದಾರೆ. ಈ ವಾರ ಕಾಕ್ರೋಚ್ ಸುಧಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ ಅಂತ ನೆಟ್ಟಿಗರು ಕಮೆಂಟ್ ಹಾಕುವುದಕ್ಕೆ ಶುರು ಮಾಡಿದ್ದಾರೆ.
Credit: Filmibeat



Click it and Unblock the Notifications