Bank Holidays: 5 ದಿನ ಬ್ಯಾಂಕ್‌ಗಳಿಗೆ ರಜೆ! ಕರ್ನಾಟಕದಲ್ಲಿ ಎಷ್ಟು ದಿನ ಮುಚ್ಚಿರುತ್ತದೆ? ಗ್ರಾಹಕರೇ ಇಲ್ಲಿ ಗಮನಿಸಿ

By Prajwal B

ದೀಪಾವಳಿ, ದಸರಾ ಹಬ್ಬದ ಸೀಸನ್‌ಗಳು ಮುಗಿದಾಯ್ತು. ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್‌ ಹಬ್ಬ ಬರಲಿದೆ. ಆದ್ರೆ ಅದಕ್ಕೂ ಮುನ್ನ ಕನ್ನಡ ರಾಜ್ಯೋತ್ಸವ, ಹೀಗೆ ಕೆಲವು ರಾಜ್ಯಗಳಲ್ಲಿ ಅದರದೇ ಆದ ಆಚರಣೆಗಳನ್ನು ಮಾಡಲಾಗುತ್ತದೆ. ಆದರೆ ಮುಂಬರುವ ವಾರದಲ್ಲಿ ಕರ್ನಾಟಕ ಸೇರಿ, ಕೆಲವು ರಾಜ್ಯಗಳಲ್ಲಿ ಬ್ಯಾಂಕ್‌ ರಜೆ ಘೋಷಿಸಲಾಗಿದೆ. ಅಕ್ಟೋಬರ್ 27, 2025 ರಿಂದ ನವೆಂಬರ್ 2 ರವರೆಗೆ, ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್‌ ರಜೆ ಇರಲಿದೆ. ಹಾಗಿದ್ರೆ ಕರ್ನಾಟಕದಲ್ಲಿ ಬ್ಯಾಂಕ್‌ ರಜೆ (Karnataka Bank Holidays) ಯಾವಾಗ ಇದೆ ಗೊತ್ತಾ?

Bank Holiday 2025

ಇನ್ನು ಆಯಾ ರಾಜ್ಯಗಳ ಆಚರಣೆ, ರಜಾ ವೇಳಾಪಟ್ಟಿಗಳಿಗೆ ತಕ್ಕಂತೆ ಬ್ಯಾಂಕ್‌ಗಳು ಮುಚ್ಚಿರುತ್ತದೆ. ಆದ್ದರಿಂದ ಡೆಪಾಸಿಟ್‌, ವಿಥ್‌ಡ್ರಾ, ಸಾಲ ಸೌಲಭ್ಯದ ಅಗತ್ಯವಿರುವವರು ಮೊದಲೇ ಮಾಡುವುದು ಸೂಕ್ತ. ಆದರೆ ಈ ಸಂದರ್ಭದಲ್ಲಿ ಆನ್‌ಲೈನ್‌ ಸೇವೆಗಳು, ಎಟಿಯಂಗಳು ಎಂದಿನಂತೆ ಕಾರ್ಯನಿರ್ವಹಿಸುತ್ತದೆ.

ಅಕ್ಟೋಬರ್ 27, 2025 ರಿಂದ ನವೆಂಬರ್ 2 ರವರೆಗೆ, ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ ಹಬ್ಬಗಳಿಂದಾಗಿ, ರಾಷ್ಟ್ರೀಯ ದಿನಗಳಿಂದಾಗಿ ರಜೆ ಇರಲಿದೆ. ಆದ್ದರಿಂದ ಬ್ಯಾಂಕ್‌ ಯಾವ ದಿನಗಳಲ್ಲಿ ಮುಚ್ಚಿರುತ್ತದೆ ಎಂದು ಗಮನಿಸುವುದು ಕಡ್ಡಾಯ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತೀ ಬಾರಿ, ರಾಜ್ಯವಾರು ಬ್ಯಾಂಕ್‌ ರಜಾ ಪಟ್ಟಿಗಳನ್ನು ಬಿಡುಗಡೆ ಮಾಡುತ್ತದೆ. ಅಲ್ಲದೇ ರಜಾ ಪಟ್ಟಿಗಳನ್ನು ಆರ್‌ಬಿಐ ತನ್ನ ಅಧಿಕೃತ ವೆಬ್‌ಸೈಟ್‌ ಮೂಲಕ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

ಛಠ್ ಪೂಜೆ ಪ್ರಯುಕ್ತ ಬ್ಯಾಂಕ್‌ಗಳಿಗೆ ರಜೆ!
ಸೂರ್ಯ ದೇವರನ್ನು ಪೂಜಿಸುವ ಛಠ್‌ ಪೂಜೆಯನ್ನು ಕೆಲವು ರಾಜ್ಯಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದ್ದರಿಂದ ಈ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ. ಮುಖ್ಯವಾಗಿ ಛಠ್‌ ಪೂಜೆಯನ್ನು ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ಭಾರೀ ಸಂಭ್ರಮದಿಂದ ಆಚರಿಸಲಾಗುತ್ತದೆ.

ಅಕ್ಟೋಬರ್ 27, ಸೋಮವಾರದರಂದು ಕೋಲ್ಕತ್ತಾ, ಪಾಟ್ನಾ ಮತ್ತು ರಾಂಚಿಯಲ್ಲಿ ಛಠ್ ಪೂಜೆಗಾಗಿ ಬ್ಯಾಂಕ್‌ಗಳು ಮುಚ್ಚಿರುತ್ತದೆ. ಅದೇ ರೀತಿ ಅಕ್ಟೋಬರ್‌ 28, ಮಂಗಳವಾರದಂದು ಪಾಟ್ನಾ ಮತ್ತು ರಾಂಚಿಯಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತವೆ ಎನ್ನಲಾಗಿದೆ. ಈ ಮೂಲಕ ಪಾಟ್ನಾ ಮತ್ತು ರಾಂಚಿಯಲ್ಲಿನ ಬ್ಯಾಂಕುಗಳು ಈ ವಾರದಲ್ಲಿ ಸತತ ನಾಲ್ಕು ದಿನಗಳವರೆಗೆ ರಜೆ ಇರಲಿದೆ.

ಕನ್ನಡ ರಾಜ್ಯೋತ್ಸವ:
ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬಹಳ ಪ್ರಾಶಸ್ತ್ಯ ನೀಡಲಾಗುತ್ತದೆ. ಆದ್ದರಿಂದ ಈ ಪ್ರಯುಕ್ತ ಕೆಲವು ಜಿಲ್ಲೆಗಳಲ್ಲಿ ನವೆಂಬರ್‌ 1 ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗುತ್ತದೆ. ಅದೇ ರೀತಿ ಈ ದಿನ ಬ್ಯಾಂಕುಗಳು ಕೂಡಾ ಮುಚ್ಚಲಿದ್ದು, ಬೆಂಗಳೂರಿನ ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಈ ಮಧ್ಯೆ, ನವೆಂಬರ್ 1 ರ ಶನಿವಾರದಂದು ಇಗಾಸ್ ಬಗ್ವಾಲ್ ನಿಮಿತ್ತ ಡೆಹ್ರಾಡೂನ್‌ನಲ್ಲಿರುವ ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿದೆ. ದೀಪಾವಳಿಯ 11 ದಿನಗಳ ನಂತರ ಉತ್ತರಾಖಂಡದಲ್ಲಿ ಈ ಆಚರಣೆಯನ್ನು ಮಾಡಲಾಗುತ್ತದೆ. ಆದ್ದರಿಂದ ಡೆಹ್ರಾಡೂನ್‌ನಲ್ಲಿ ಶನಿವಾರ ರಜೆ ಇರಲಿದೆ.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಜನ್ಮದಿನ:
ಅಕ್ಟೋಬರ್ 31, ಶುಕ್ರವಾರದಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಜನ್ಮದಿನ. ಈ ದಿನ ಅಹಮದಾಬಾದ್‌ನಲ್ಲಿ ಬ್ಯಾಂಕುಗಳಿಗೆ ರಜೆ ನೀಡಲಾಗಿದೆ. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಸರ್ದಾರ್‌ವಲ್ಲಭಭಾಯಿ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲದೇ 1947 ರಿಂದ 1950 ರವರೆಗೆ ದೇಶದ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದರು.

Credit: Goodreturns

X
Desktop Bottom Promotion