"ನಾನು ವಿಜಯ್‌ನ ಬಿಟ್ಟು ಕೊಡುವುದಿಲ್ಲ"; ಮಗ-ಸೊಸೆ ಬಗ್ಗೆ ವಿಜಯ್ ತಂದೆ ಕೊಟ್ಟ ಹೇಳಿಕೆ ವೈರಲ್

By Muralidhar S

ದಳಪತಿ ವಿಜಯ್ ವಿಚ್ಚೇದನದ ವಿಷಯ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ವಿಜಯ್ ಕೇವಲ ನಟನಾಗಿ ಅಷ್ಟೇ ಇದ್ದಿದ್ದರೆ, ಅವರ ಅಭಿಮಾನಿಗಳಲ್ಲಿ, ಚಿತ್ರರಂಗದಲ್ಲಿ ಅಷ್ಟೇ ಚರ್ಚೆಯಾಗುತ್ತಿತ್ತು. ಆದರೆ, ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದರಿಂದ ವಿಜಯ್ ವೈಯಕ್ತಿಕ ವಿಚಾರ ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚು ಚರ್ಚೆಯಾಗುತ್ತಿದೆ.

ತಮಿಳಿನ ಸ್ಟಾರ್ ನಟ ಹಾಗೂ ಟಿವಿಕೆ ಪಕ್ಷದ ಲೀಡರ್ ವಿಜಯ್ ಪತ್ನಿ ಸಂಗೀತಾ ಇತ್ತೀಚೆಗೆ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಇಲ್ಲಿಂದ ವಿಜಯ್ ವೈಯಕ್ತಿಕ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ರಾಜಕೀಯ ಕ್ಷೇತ್ರದ ಎದುರಾಳಿಗಳಿಗೆ ಈ ವಿಚ್ಚೇದನ ಪ್ರಕರಣ ಅಸ್ತ್ರವಾಗಿ ಸಿಕ್ಕಂತೆ ಆಗಿದೆ. ಅದರಲ್ಲೂ ತಮಿಳುನಾಡು ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ವಿಚ್ಚೇದನ ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದಾರೆ.


Actor Vijay father S A Chandrasekhar old video about daughter in law Sangeetha is trending

ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಅವರನ್ನು ಹಿಂಬಾಲಿಸುವವರ ಸಂಖ್ಯೆನೂ ಹೆಚ್ಚಾಗಿದೆ. ತಮಿಳುನಾಡಿನಲ್ಲಿ ಸಿನಿಮಾ ಮಂದಿ ರಾಜಕೀಯಕ್ಕೆ ಎಂಟ್ರಿ ಕೊಟ್ಟು ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ವಿಜಯ್ ಮಾಸ್ ಲೀಡರ್ ಆಗಿರುವುದರಿದ ತಮಿಳುನಾಡಿನ ಚುಕ್ಕಾಣಿ ಹಿಡಿಯುವುದಕ್ಕೆ ಅವರಿಗೂ ಒಂದು ಚಾನ್ಸ್ ಸಿಗಬಹುದೆಂಬ ಲೆಕ್ಕಾಚಾರವಿತ್ತು. ಆದರೆ, ಈ ಪ್ರಕರಣ ಈಗ ಅವರಿಗೆ ಮುಳುವಾಗಿದೆ. ಇದೇ ವೇಳೆ ಮಗ ಹಾಗೂ ಸೊಸೆಯ ಬಗ್ಗೆ ಎಸ್ ಎ ಚಂದ್ರಶೇಖರ್ ಆಡಿರುವ ಮಾತುಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ದಳಪತಿ ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಅವರ ತಂದೆ ಎಸ್.ಎ.ಚಂದ್ರಶೇಖರ್ ಸಂದರ್ಶನದ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ಹಳೆಯ ಯೂಟ್ಯೂಬ್ ಸಂದರ್ಶನದಲ್ಲಿ ತಮ್ಮ ಮಗ ಹಾಗೂ ಮಗಳ ಬಗ್ಗೆ ಮಾತಾಡಿದ್ದಾರೆ. "ಸಾಮಾನ್ಯವಾಗಿ ತಂದೆಯಂದಿರಿಗೆ ಹೆಣ್ಣು ಮಕ್ಕಳ ಮೇಲೆ ಪ್ರೀತಿ ಹೆಚ್ಚು. ಅವರ ಮೇಲೆ ವಾತ್ಸಲ್ಯ ಇರುತ್ತದೆ. ಆದರೆ, ನನಗೆ ವಿಜಯ್ ಮೇಲೆ ಸಿಕ್ಕಾಪಟ್ಟೆ ಪ್ರೀತಿ. ದೇವರು ನಮಗೆ ಇಬ್ಬರು ಮಕ್ಕಳನ್ನು ಕೊಟ್ಟಿದ್ದ. ಅದರಲ್ಲಿ ಒಬ್ಬರನ್ನು ಕಳೆದುಕೊಂಡ್ವಿ. ಹೀಗಾಗಿ, ನನ್ನ ಎಲ್ಲಾ ಪ್ರೀತಿಯನ್ನು ವಿಜಯ್‌ಗೆ ಧಾರೆ ಎರೆದಿದ್ದೇನೆ" ಎಂದು ಎಸ್ ಎ ಚಂದ್ರಶೇಖರ್ ಹೇಳಿದ್ದರು.

ಮಗನ ಬಗ್ಗೆ ಅಷ್ಟೇ ಅಲ್ಲ. ತನ್ನ ಸೊಸೆಯ ಬಗ್ಗೆನೂ ಮಾತಾಡಿದ್ದಾರೆ. "ನನ್ನ ಸೊಸೆ ಸಂಗೀತಾ, ಬರೀ ಸೊಸೆಯಷ್ಟೇ ಅಲ್ಲ. ನಮ್ಮ ಮನೆಯ ಮಗಳು. ಆಕೆ ಮಕ್ಕಳನ್ನು ತುಂಬಾನೇ ಜವಾಬ್ದಾರಿಯುತವಾಗಿ ಬೆಳೆಸಿದ್ದಾಳೆ. ಶಾಲೆಗೆ ಕಳುಹಿಸುವುದರಿಂದ ಹಿಡಿದು ಪಾಠ ಹೇಳುವುದು ಹೀಗೆ ಎಲ್ಲವನ್ನು ಸಂಗೀತಾನೇ ಮಾಡಿದ್ದಾಳೆ. ಅವಳ ಲೋಕವೇ ಮಕ್ಕಳು" ಎಂದು ವಿಜಯ್ ತಂದೆ ಚಂದ್ರಶೇಖರ್ ಹೇಳಿದ್ದರು.

ಇದೇ ಸಂದರ್ಶನದಲ್ಲಿ ವಿಜಯ್ ಹಾಗೂ ಸಂಗೀತಾ ನಡುವೆ ಸಣ್ಣ ಮನಸ್ತಾಪ ಇರೋದನ್ನು ಒಪ್ಪಿಕೊಂಡಿದ್ದರು. "ಯಾವುದೇ ಕಾರಣಕ್ಕೂ ನಾನು ನನ್ನ ಮಗನನ್ನು ಬಿಟ್ಟುಕೊಡುವುದಿಲ್ಲ. ಅವನು ಪ್ರೀತಿ ಹಾಗೂ ವಾತ್ಸಲ್ಯ ಇರುವ ವ್ಯಕ್ತಿ" ಎಂದು ಎಸ್ ಎ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.


ಈ ಸಂದರ್ಶನದಲ್ಲಿ ಇನ್ನೊಂದು ವಿಷಯವನ್ನು ಬಹಿರಂಗ ಪಡಿಸಿದ್ದರು. ವಿಜಯ್‌ ಅವರನ್ನು ಸಿನಿಮಾಗೆ ಪರಿಚಯಿಸುವ ಉದ್ದೇಶ ಅವರಿಗೆ ಇರಲಿಲ್ಲ ಎಂದೂ ಹೇಳಿಕೊಂಡಿದ್ದರು. ತಮಗೆ ಇರಲಿಲ್ಲ ಎಂದು ಚಂದ್ರಶೇಖರ್ ತಿಳಿಸಿದ್ದರು. ತಮ್ಮ ಮಗ ಡಾಕ್ಟರ್ ಇಲ್ಲವೇ ಇಂಜಿನಿಯರ್ ಆಗಬೇಕೆಂದು ಎಸ್ ಎ ಚಂದ್ರಶೇಖರ್ ಹೇಳಿದ್ದರು. ಆದರೆ, ವಿಜಯ್ ತಾನು ನಟನಾಗಬೇಕು ಎಂದು ಬಯಸಿದ್ದರಂತೆ. ಅವರ ನಿರ್ಧಾರವನ್ನು ಕೇಳಿದ ಬಳಿಕ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾಗಿ ಹೇಳಿಕೊಂಡಿದ್ದರು.

ದಳಪತಿ ವಿಜಯ್ ಮೊದಲ ಚಿತ್ರ ಸೋತಾಗ ಸೆಟ್‌ನಲ್ಲಿದ್ದವರು "ನಿಮ್ಮ ಮಗ ದೊಡ್ಡ ನಟನಾಗುತ್ತಾನೆ" ಎಂದು ಹೇಳಿದ್ದರಂತೆ. ಅದನ್ನು ಸಾಬೀತು ಮಾಡಿದ ಎಂದು ಖುಷಿ ಪಟ್ಟಿದ್ದರು. ಆ ವಿಡಿಯೋ ವಿಚ್ಚೇದನದ ಪ್ರಕರಣ ಚರ್ಚೆಯಲ್ಲಿ ಇರುವಾಗ ಮತ್ತೆ ವೈರಲ್ ಆಗುತ್ತಿದೆ.

Credit: Filmibeat

X
Desktop Bottom Promotion