Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ದರ್ಶನ್ ಹಾದಿ ತಪ್ಪಲು ಅದೇ ಕಾರಣ.. ಅಲ್ಲಿ ಲಾಕ್ ಆದ್ರೆ ಮುಗೀತು, ಹೊರಗೆ ಬರುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತೆ- ಕೆಡಿ ವೆಂಕಟೇಶ್
ಕನ್ನಡ ಚಿತ್ರರಂಗದ ಹಿರಿಯ ಪೋಷಕ ಕಲಾವಿದ ಕಿಲ್ಲರ್ ವೆಂಕಟೇಶ್(ಕೆಡಿ ವೆಂಕಟೇಶ್) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಿಡ್ನಿ ವೈಫಲ್ಯದಿಂದ ವೆಂಕಟೇಶ್ ಸಂಕಷ್ಟಕ್ಕೆ ಸಿಲುಕಿದ್ದಾರೆ. 400ಕ್ಕೂ ಅಧಿಕ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಅವಕಾಶಗಳು ಇಲ್ಲದಂತಾಗಿದೆ.
ಇತ್ತೀಚೆಗೆ ಕಿಲ್ಲರ್ ವೆಂಕಟೇಶ್ ಅವರ ವಿಡಿಯೋವೊಂದು ವೈರಲ್ ಆಗಿತ್ತು. ಹೇಗಿದ್ದವರು ಹೇಗಾಗಿದ್ದಾರೆ ನೋಡಿ ಎಂದು ವೀಡಿಯೋ ತೇಲಿ ಬಿಡಲಾಗಿತ್ತು. ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ತುಮಕೂರಿನಲ್ಲಿರುವ ಕಿಲ್ಲರ್ ವೆಂಕಟೇಶ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. Beyond Limits ಯೂಟ್ಯೂಬ್ ಚಾಲನ್‌ಗಾಗಿ ಸಂದರ್ಶನ ನಡೆಸಿದ್ದಾರೆ. ವೆಂಕಟೇಶ್ ನಟಿಸಿದ ಸಿನಿಮಾಗಳು, ಸಿನಿಜರ್ನಿ, ಆರೋಗ್ಯ ಸ್ಥಿತಿ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಡಾ. ರಾಜ್‌ಕುಮಾರ್ ಸೇರಿದಂತೆ ಕನ್ನಡದ ಸ್ಟಾರ್ ನಟರ ಜೊತೆಗೆ ನಟಿಸಿದ ಅನುಭವವನ್ನು ವೆಂಕಟೇಶ್ ಬಿಚ್ಚಿಟ್ಟಿದ್ದಾರೆ.

ನಟ ದರ್ಶನ್ ಜೊತೆಗಿನ ಒಡನಾಡದ ಬಗ್ಗೆಯೂ ಕಿಲ್ಲರ್ ವೆಂಕಟೇಶ್ ಮಾತನಾಡಿದ್ದಾರೆ. ದರ್ಶನ್ ಅನ್ಯಾಯವಾಗಿ ರೇಣುಕಾಸ್ವಾಮಿ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಇದೆಲ್ಲಾ ಬೇಡವಾಗಿತ್ತು. ಕಷ್ಟದಿಂದ ಬಂದು ಚಿತ್ರರಂಗದ ಸ್ಟಾರ್ ನಟನಾಗಿ ಗುರ್ತಿಸಿಕೊಂಡಿದ್ದರು. ಆದರೆ ಸಹವಾಸ ಸರಿ ಇರಲಿಲ್ಲ. ಜೊತೆಗಿದ್ದವರು ಸರಿಯಾಗಿ ಇದ್ದಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ. ಒಮ್ಮೆ ಇಂತಹ ಪ್ರಕರಣಗಳಲ್ಲಿ ಸಿಲುಕಿಕೊಂಡು ಬಿಟ್ಟರೆ ಮುಗೀತು. ಅಷ್ಟು ಸುಲಭವಾಗಿ ಹೊರಗೆ ಬರಲು ಸಾಧ್ಯವಿಲ್ಲ. ಅವರು ಹೊರಗೆ ಬರುವ ವೇಳೆಗೆ ಎಲ್ಲಾ ಮುಗಿದು ಹೋಗಿರುತ್ತದೆ ಎಂದು ವೆಂಕಟೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಜಗ್ಗೇಶ್ ಮುಖಾಂತರ ನಟ ದರ್ಶನ್ 1 ಲಕ್ಷ ರೂ. ಸಹಾಯ ಮಾಡಿದ್ದನ್ನು ಕೂಡ ಕಿಲ್ಲರ್ ವೆಂಕಟೇಶ್ ನೆನಪಿಸಿಕೊಂಡಿದ್ದಾರೆ. ದಶಕಗಳಿಂದ ವೆಂಕಟೇಶ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೂಗುದೀಪ ಶ್ರೀನಿವಾಸ್ ಅವರ ಜೊತೆಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಹಾಗಾಗಿ ದರ್ಶನ್ ಅವರಿಗೂ ವೆಂಕಟೇಶ್ ಅಂತಹ ಬಹಳ ಇಷ್ಟ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಹಾಗೂ 'ಬೃಂದಾವನ' ಸಿನಿಮಾಗಳಲ್ಲಿ ದರ್ಶನ್ ಜೊತೆ ನಟಿಸುವ ಅವಕಾಶ ಕೂಡ ಸಿಕ್ಕಿತ್ತು. ಇನ್ನು ದರ್ಶನ್ ಇಂದಿನ ಸ್ಥಿತಿ ಬಗ್ಗೆ ವೆಂಕಟೇಶ್ ಮಾತನಾಡಿದ್ದಾರೆ.
ದರ್ಶನ್ ಅವರ ತಂದೆ ಜೊತೆ ನಟಿಸುತ್ತಿದ್ದೆ ಅಲ್ವಾ ಹಾಗಾಗಿ ಬಹಳ ಹತ್ತಿರ ಇದ್ರು. ಕಲಾವಿದರಿಗೆ ಗೌರವ ಕೊಟ್ಟು ಮಾತನಾಡಿಸುತ್ತಿದ್ರು. ಆದರೆ ಲಾಕ್ ಆಗಿಬಿಟ್ರು(ರೇಣುಕಾಸ್ವಾಮಿ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ರು) ಎಂದು ವೆಂಕಟೇಶ್ ಬೇಸರ ವ್ಯಕ್ತಪಡಿಸಿದ್ದಾರೆ. "ಇದೆಲ್ಲಾ ಅವರಿಗೆ ಬೇಕಾಗಿರಲಿಲ್ಲ, ತಪ್ಪು ಮಾಡಿಬಿಟ್ರು ಅನ್ನಿಸುತ್ತೆ. ಅವರಿಗೆ 2 ವರ್ಷ ಕೆಟ್ಟ ಸಮಯ, ಏನೇನೋ ಆಗಿಬಿಡ್ತು. ಅಲ್ಲಿ ಕೊಂಚ ಕಂಟ್ರೋಲ್ ಆಗಿಬಿಟ್ಟಿದ್ರೆ, ಇಷ್ಟೆಲ್ಲಾ ಆಗ್ತಿರಲಿಲ್ಲ. ಮುಂದಾಲೋಚನೆ ಇರಬೇಕಿತ್ತು. ದರ್ಶನ್ ಹೀರೊ ಆಗುವ ಸಮಯಕ್ಕೆ ಅವರ ತಂದೆ ಇರಲಿಲ್ಲ. ಇದ್ದಿದ್ದರೆ ಬುದ್ಧಿವಾದ ಹೇಳುತ್ತಿದ್ರು. ಬೇರೆಯವರ ಮಾತು ಕೇಳುವ ಪರಿಸ್ಥಿತಿ ಬರ್ತಿರಲಿಲ್ಲ. ಹಾಗಾಗಿ ಹಾದಿ ತಪ್ಪಿಬಿಟ್ರು" ಎಂದು ವೆಂಕಟೇಶ್ ವಿವರಿಸಿದ್ದಾರೆ.
ಮಾತು ಮುಂದುವರೆಸಿ "ದರ್ಶನ್ ಪಟ್ಟಾಲಂನಲ್ಲಿ ಬುದ್ಧಿ ಹೇಳುವವರು ಇರಲಿಲ್ಲ. ಎಲ್ಲರೂ ಹೊಡಿಮಗ ಕಡಿ ಮಗ ಎನ್ನುತ್ತಿದ್ದವರು. ಗುಂಡು, ತುಂಡು.. ಬುದ್ಧಿ ಹೇಳುವವರು ಇದ್ದಿದ್ದರೆ ಸರಿ ದಾರಿಗೆ ತರುತ್ತಿದ್ರು. ಅಲ್ಲಿ ಲಾಕ್ ಆದವರು (ಪರಪ್ಪನ ಅಗ್ರಹಾರ) ಅಷ್ಟು ಸುಲಭವಾಗಿ ಹೊರಗೆ ಬರಲ್ಲ. ಸುದೀಪ್ ಜೊತೆ ಇದ್ದಾಗ ಸ್ನೇಹ ಚೆನ್ನಾಗಿತ್ತು. ಆದರೆ ಈಗ ಪ್ರಕರಣದಲ್ಲಿ ಜೊತೆಗೆ ಒಳಗೆ ಹೋಗಿರುವವರೆಲ್ಲಾ ಅಂಥವರೇ. ದರ್ಶನ್ ಹೊರಗೆ ಬರುವ ವೇಳೆಗೆ ಕಾಲ ಮಿಂಚಿ ಹೋಗಿರುತ್ತದೆ" ಎಂದು ಹೇಳಿದ್ದಾರೆ.
ಹಾಲು ಮಾರುತ್ತಾ, ಕ್ಯಾಮರಾ, ಲೈಟ್ ಹೊತ್ತು ಕಷ್ಟ ಬಿದ್ದು ಬೆಳೆದು ಬಂದವರು ದರ್ಶನ್. ಚಿತ್ರರಂಗದಲ್ಲಿ ದೊಡ್ಡಮಟ್ಟಕ್ಕೆ ಬೆಳೆದು ನಿಂತಿದ್ದರು. ದೇವರು ವರ ಕೊಟ್ಟ ಕೊಟ್ಟ, ನೋಡ್ದ ನೋಡ್ದ.. ಓಹ್ ಯಾಕೋ ಉಲ್ಟಾ ಆಗ್ತಾಯಿದೆ ಎಂದು ಅಲ್ಲಿಗೆ ಸಮಾಪ್ತಿ ಮಾಡಿಬಿಟ್ಟ ಎಂದು ನಟ ಕಿಲ್ಲರ್ ವೆಂಕಟೇಶ್ ಹೇಳಿರುವುದು ವೈರಲ್ ಆಗ್ತಿದೆ.
Credit: Filmibeat



Click it and Unblock the Notifications

