Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ ರಾಶಿಯವರು ಸ್ನೇಹಿತರಿಗೆ ಸೆಕೆಂಡ್ ಚಾನ್ಸ್ ನೀಡುತ್ತಾರೆ
ಸ್ನೇಹಕ್ಕಿಂತ ಮುಗಿಲಾದ ಸಂಬಂಧ ಮತ್ತೊಂದಿಲ್ಲ. ನಮ್ಮ ಪೋಷಕರು ಬಿಟ್ರೆ ಕಷ್ಟ ಕಾಲದಲ್ಲಿ ನಮ್ಮ ಬೆನ್ನಿಗೆ ನಿಲ್ಲೋದು ನಮ್ಮ ಸ್ನೇಹಿತರೆ. ಆದರೆ ಎಲ್ಲರ ಸ್ನೇಹವು ಪರಿಶುದ್ಧ ಸ್ನೇಹ ಅಂತ ಹೇಳೋದಿಕ್ಕಾಗೋದಿಲ್ಲ. ಕೆಲವೇ ಕೆಲವು ಜನ ಮಾತ್ರ ಸ್ನೇಹವನ್ನು ಪವಿತ್ರವಾಗಿ ಕಡೆಯವರೆಗೂ ಉಳಿಸಿಕೊಂಡು ಹೋಗುತ್ತಾರೆ. ಆದರೆ ಇನ್ನೂ ಕೆಲವರು ತಮ್ಮ ಲಾಭದ ಉದ್ದೇಶಗಾಗಿ ಸ್ನೇಹ ಮಾಡುವವರಿದ್ದಾರೆ. ಇಂತಹ ಸ್ನೇಹಿತರು ಅರ್ಧದಲ್ಲೇ ಬಿಟ್ಟು ಹೋಗುತ್ತಾರೆ. ಆದರೆ ಇಂತವರಿಗೂ ಸೆಕೆಂಡ್ ಚಾನ್ಸ್ ನೀಡುವ ಮಹಾನ್ ಗುಣದವರು ಅನೇಕ ಜನರಿದ್ದಾರೆ. ಹಾಗಾದ್ರೆ ಸ್ನೇಹಿತರಿಗೆ ಸೆಕೆಂಡ್ ಚಾನ್ಸ್ ನೀಡುವ ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ಮೀನ ರಾಶಿ
ಮೀನ ರಾಶಿಯವರು ಸ್ನೇಹಿತರಿಗೆ ಬೆಲೆ ನೀಡುತ್ತಾರೆ. ಸ್ನೇಹಿತರು ಅವರೊಂದಿಗೆ ಎಷ್ಟು ವಾದಿಸಿದರೂ ಕೂಡ ಮೀನ ರಾಶಿಯವರು ನಿಮ್ಮೊಂದಿಗೆ ವಾದಿಸೋದಕ್ಕೆ ಇಷ್ಟ ಪಡೋದಿಲ್ಲ. ಯಾಕಂದ್ರೆ ಅವರಿಗೆ ನಿಮ್ಮ ಸ್ನೇಹ ಕಳೆದುಕೊಳ್ಳೋದಕ್ಕೆ ಇಷ್ಟ ಇರೋದಿಲ್ಲ. ಸ್ನೇಹಿತರು ಅವರಿಗೆ ಎಷ್ಟೇ ಮೋಸ ಮಾಡಿದರೂ ಅವರು ಸೆಕೆಂಡ್ ಚಾನ್ಸ್ ನೀಡೋದಕ್ಕೆ ಇಷ್ಟ ಪಡುತ್ತಾರೆ. ಒಂದು ಸಾರಿ ಅವರ ಬಾಳಿನಲ್ಲಿ ಬಂದವರನ್ನು ಅಷ್ಟು ಸುಲಭವಾಗಿ ಬಿಟ್ಟು ಬಿಡೋದಿಲ್ಲ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಕೂಡ ಸ್ನೇಹಿತರನ್ನು ತುಂಬಾನೇ ನಂಬುತ್ತಾರೆ. ನೀವು ಅವರ ಹೃದಯವನ್ನು ಒಡೆದಿರಬಹುದು. ಆದರೂ ಕೂಡ ಅವರು ನಿಮ್ಮ ಬಿಟ್ಟು ಕೊಡೋದಿಲ್ಲ. ಸ್ನೇಹಕ್ಕೆ ಬೆಲೆ ಕೊಟ್ಟು ನಿಮ್ಮೊಂದಿಗೆ ಇರೋದಕ್ಕೆ ಇಷ್ಟ ಪಡುತ್ತಾರೆ. ನೀವು ಸ್ನೇಹಕ್ಕೆ ಮೋಸ ಮಾಡಿರಬಹುದು. ಆದರೆ ನೀವು ಅವರಲ್ಲಿ ಒಂದು ಸಾರಿ ಕ್ಷಮೆ ಕೇಳಿದರೆ ಅವರು ಕರಗಿ ಹೋಗುತ್ತಾರೆ. ಕರ್ಕಾಟಕ ರಾಶಿಯವರಲ್ಲಿ ದಯಾ ಗುಣ ಹೆಚ್ಚಾಗಿರುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರ ಜೊತೆಗೆ ಸ್ನೇಹ ಬೆಳೆಸುವವರು ಸ್ನೇಹದಿಂದ ಲಾಭ ಪಡೆಯಲು ಬಯಸುತ್ತಾರೆ. ತಮಗೆ ಬೇಕಾದದ್ದು ಸಿಕ್ಕ ಮೇಲೆ ಇವರು ವೃಶ್ಚಿಕ ರಾಶಿಯವರನ್ನು ಬಿಟ್ಟು ಹೋಗುತ್ತಾರೆ. ಇವರ ಮುಗ್ಧತೆಯಿಂದಾಗಿ ಈ ರಾಶಿಯವರಿಗೆ ನಂಬಿಕೆ ದ್ರೋಹ ಮಾಡುವವರೇ ಹೆಚ್ಚು. ಆದರೆ ಕೆಲವು ಸಮಯದ ಬಳಿಕ ಅವರು ಮತ್ತೆ ಬಂದು ಕ್ಷಮೆ ಕೇಳಿದರೆ. ಈ ರಾಶಿಯವರು ತಮ್ಮ ಸ್ನೇಹಿತನನ್ನು ಮತ್ತೆ ಒಪ್ಪಿಕೊಂಡು ಅವರಿಗೆ ಸೆಕೆಂಡ್ ಚಾನ್ಸ್ ನೀಡುತ್ತಾರೆ. ಯಾಕಂದ್ರೆ ಸ್ನೇಹಿತರು ನನಗೆ ಮೋಸ ಮಾಡುವುದಿಲ್ಲ ಎಂಬ ಆಳವಾದ ನಂಬಿಕೆಯನ್ನು ಇವರು ಹೊಂದಿದ್ದಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ಸ್ನೇಹಕ್ಕೆ ಬೆಲೆ ಕೊಡುತ್ತಾರೆ. ನೀವು ಸ್ನೇಹದ ವಿಚಾರವಾಗಿ ಸಿಂಹ ರಾಶಿಯವರಿಗೆ ನೋವು ಮಾಡಿದರೆ ಖಂಡಿತ ನೆನಪಿನಲ್ಲಿಡುತ್ತಾರೆ. ಆದರೆ ನೀವು ಕ್ಷಮೆ ಕೇಳಿದರೆ ಖಂಡಿತ ಒಪ್ಪಿಕೊಳ್ಳುತ್ತಾರೆ. ಯಾಕಂದ್ರೆ ಸ್ನೇಹಿತರ ಜೊತೆಗೆ ಎಷ್ಟೇ ದೊಡ್ಡ ಜಗಳವಾಡಿದರೂ ಅವರಿಗೆ ಸೆಕೆಂಡ್ ಚಾನ್ಸ್ ನೀಡುತ್ತಾರೆ. ಸಿಂಹ ರಾಶಿಯವರು ಎಂದಿಗೂ ಒಬ್ಬರ ಮೇಲೆ ದ್ವೇಷ ಇಟ್ಟುಕೊಟ್ಟುಕೊಳ್ಳುವವರಲ್ಲ.



Click it and Unblock the Notifications
