Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಗಂಡ ಅವಲಕ್ಕಿ ಮಾಡಲಿಲ್ಲ ಎಂದು ಪತ್ನಿ ಮಾಡಿದ್ದೇನು ಗೊತ್ತಾ?
ಇತ್ತೀಚಿಗೆ ಗಂಡ ಹೆಂಡತಿ ನಡುವೆ ಯಾವೆಲ್ಲಾ ವಿಚಾರಗಳಿಗೆ ವಿಚ್ಛೇದನವಾಗುತ್ತಿದೆ, ಆತ್ಮಹತ್ಯೆ ನಡೆಯುತ್ತಿದೆ ಅನ್ನೋದನ್ನ ನೋಡಿರುತ್ತೀರಿ, ಕೆಲವೊಮ್ಮೆ ಎಂತಹ ವಿಚಿತ್ರ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅನ್ನೋದನ್ನು ನಾವು ಊಹಿಸಲು ಸಹ ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಈ ವಿಚಿತ್ರ ಆತ್ಮಹತ್ಯೆ ಹಾಗೂ ವಿಚ್ಛೇದನ ಪ್ರಕರಣಗಳು ವರದಿಯಾಗುವುದು ಹೆಚ್ಚಾಗುತ್ತಲೇ ಇದೆ.
ಈಗ ಮಧ್ಯ ಪ್ರದೇಶದಲ್ಲಿ ವರದಿಯಾದ ಒಂದು ಪ್ರಕರಣ ಎಲ್ಲರಲ್ಲೂ ಅಚ್ಚರಿಯ ಜೊತೆಗೆ ಇಷ್ಟು ಸಣ್ಣ ವಿಚಾರಕ್ಕೆ ಆತ್ಮಹತ್ಯೆ ನಡೆಯುತ್ತಾ ಎಂಬ ಅನುಮಾನಕ್ಕೂ ಕಾರಣವಾಗಿದೆ. ಇದು ಅಭಿವೃದ್ಧಿ ಹೊಂದಿದ ಸಮಾಜದ ಪಿಡುಗಿಗೆ ಸಾಕ್ಷಿ ನೀಡುತ್ತಿದೆ. ಸಮಾಜದಲ್ಲಿ ಎಂತಹ ವಿಚಾರಗಳಿಗೆ ಆತ್ಮಹತ್ಯೆ ಎಂಬ ದೊಡ್ಡ ದುರಂತಕ್ಕೆ ಕಾರಣವಾಗುತ್ತಿದೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ.

ಮಧ್ಯ ಪ್ರದೇಶದ ಗ್ವಾಲಿಯರ್‌ನ ಮುರಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವವಿವಾಹಿತ ಮಹಿಳೆ ಬೆಳಗ್ಗೆ ತಿಂಗೆ ಅವಲಕ್ಕಿ ವಿಚಾರವಾಗಿ ಗಂಡನ ಜೊತೆ ಜಗಳ ಆಡಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ವರದಿಯಾಗಿದೆ. ಕವಿತಾ ಎಂಬ ಮಹಿಳೆ ತನ್ನ ಪತಿ ಬಾಲ್ಕಿಶನ್‌ಗೆ ಅವಲಕ್ಕಿ ಮಾಡಿ ತಿನ್ನಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಳು, ಆದರೆ ಪತಿ ಅವಳಿಗೆ ಅವಲಕ್ಕಿ ಬದಲು ಡ್ರೈ ಫ್ರೂಟ್ಸ್ ನೀಡಿದ್ದಾನೆ. ಇದರಿಂದ ಕೋಪಗೊಂಡ ಆಕೆ ನೇಣಿಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ.
ಮುರಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಎಂಎಸ್ ಇಂಟರ್ಸೆಕ್ಷನ್ ಬಳಿ ವಾಸಿಸುವ ಬಾಲ್ಕಿಶನ್ ಜದೌನ್ ಕಳೆದ ವರ್ಷ ಕವಿತಾ ಎಂಬ ಹುಡುಗಿಯನ್ನು ಮದುವೆಯಾಗಿದ್ದರು. ಹೊಸದಾಗಿ ಮದುವೆಯಾದ ಕವಿತಾ ಬೆಳಗ್ಗೆ ತಿಂಡಿಗೆ ಅವಲಕ್ಕಿ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದಳು. ಆದರೆ ಪತಿ ಅವಲಕ್ಕಿ ಬದಲು ಒಂದು ತಟ್ಟೆಯಲ್ಲಿ ಡ್ರೈ ಫ್ರೂಟ್ಸ್ ನೀಡಿ ತಿನ್ನಲು ಹೇಳಿದ್ದನು. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ.
ಈ ಗಲಾಟೆ ತೀವ್ರಗೊಂಡು ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿತ್ತು, ಬಳಿಕ ಆಕೆ ಸಿಟ್ಟಿಗೆದ್ದು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. ಆದರೆ ಎಷ್ಟು ಹೊತ್ತಾದರು ಆಕೆ ಹೊರಬಾರದಿದ್ದಾಗ ಪತಿ ಅನುಮಾನಗೊಂಡು ಬಾಗಿಲು ಒಡೆದಿದ್ದಾನೆ. ಈ ವೇಳೆ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನೆ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆದರೆ ಘಟನೆ ಸಂಬಂಧ ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಆದರೆ ಮೇಲ್ನೋಟಕ್ಕೆ ಇದು ಅವಲಕ್ಕಿ ಸಂಬಂಧವಾಗಿಯೇ ನಡೆದಿರುವ ಆತ್ಮಹತ್ಯೆ ಪ್ರಕರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೆಚ್ಚುವರಿ ಎಸ್‌ಪಿ ನಿರಂಜನ್ ಶರ್ಮಾ ಹೇಳಿದ್ದಾರೆ.
ಆದ್ರೆ ಇಂತಹ ವಿಚಿತ್ರ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಹತ್ತು ಹಲವು ಪ್ರಕರಣಗಳು ವರದಿಯಾಗಿರುವುದನ್ನು ನಾವು ನೋಡಿದ್ದೇವೆ. ಹಾಗೆ ವಿಚಿತ್ರ ಕಾರಣಗಳಿಗೆ ವಿಚ್ಛೇದನ ನೀಡುವ ಹಲವು ಪ್ರಕರಣಗಳು ಸಹ ನಾವು ನೋಡಿದ್ದೇವೆ. ಅದ್ರಲ್ಲೂ ತಂದೆ ತಾಯಿ ಬೈದರೆ ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳು, ಜಗಳವಾಡಿ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳು, ಪತ್ನಿ ಹೀಗೆ ಒಂದಲ್ಲಾ ಒಂದು ಘಟನೆ ನಾವು ನೋಡುತ್ತಲೇ ಇರುತ್ತೇವೆ.



Click it and Unblock the Notifications