Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಹನುಮಂತನ ಈ ಬಗೆಯ ಫೋಟೋಗಳನ್ನು ಮನೆಯಲ್ಲಿಡಬಾರದು, ಇಡುವುದಾದರೆ ಯಾವ ಫೋಟೋ ಬಳಸಬಹುದು?
ಬದುಕಿನಲ್ಲಿ ಏನಾದರು ಕಷ್ಟ ಬಂದಾಗ ಹನುಮಂತನ ಭಕ್ತಿಯಿಂದ ಪ್ರಾರ್ಥಿಸಿದರೆ ಸಾಕು ಆ ಕಷ್ಟಗಳು ದೂರಾಗುವುದು, ಶನಿ ನೀಡುವ ಕಾಟ ಕೂಡ ಹನುಮಂತನ ಕೃಪೆಯಿಂದ ತಡೆಗಟ್ಟಬಹುದು ಎಂಬ ಬಲವಾದ ನಂಬಿಕೆ ಹನುಮಂತನ ಆರಾಧಿಸುವ ಭಕ್ತರಲ್ಲಿದೆ.
ಪ್ರತಿ ಮಂಗಳವಾರ ಹನುಮಂತನ ಪೂಜೆ ಮಾಡಿದರೆ ಶ್ರೇಷ್ಠ ಎಂದು ನಂಬಲಾಗುವುದು. ನೀವು ಹನುಮಂತನ ಭಕ್ತರಾಗಿದ್ದರೂ ಮನೆಯಲ್ಲಿ ಹನುಮಂತನ ಫೋಟೋ ಅಥವಾ ಮೂರ್ತಿ ಇಟ್ಟು ಪೂಜಿಸಬಾರದು ಎಂದು ಹೇಳಲಾಗುವುದು, ಅದರಲ್ಲಿಯೂ ಹನುಮಂತನ ಈ ಬಗೆಯ ಮೂರ್ತಿಗಳನ್ನು ಇಡಲೇಬಾರದು ಎಂದು ಎಂದು ಹೇಳಲಾಗುವುದು.

ಹನುಮಂತ ಎದೆಯನ್ನು ಸೀಳಿಕೊಂಡಿರುವ ಫೋಟೋ
ಪೌರಾಣಿಕ ಕತೆ ಪ್ರಕಾರ ಹನುಮಂತ ಶ್ರೀರಾಮನ ಮಹಾನ್ ಭಕ್ತ. ತಾನು ಶ್ರೀರಾಮನ ಎಷ್ಟುಆರಾಧಿಸುತ್ತೇನೆ ಎಂಬುವುದರ ಸಾಕ್ಷಿಯಾಗಿ ತನ್ನ ಎದೆಯನ್ನು ಸೀಳುತ್ತಾನೆ, ಅಲ್ಲಿ ಶ್ರೀರಾಮ-ಸೀತೆಯೇ ಕಾಣಿಸುತ್ತಾರೆ ಎಂಬ ಕತೆಯಿದೆ. ಆದರೆ ಈ ಬಗೆಯ ಫೋಟೋ ಮನೆಯಲ್ಲಿ ಇಒ
ಸಂಜೀವಿನಿ ಬೆಟ್ಟ ಎತ್ತಿಕೊಂಡು ಹಾರುತ್ತಿರುವ ಹನುಮಂತ
ಈ ಫೋಟೋವನ್ನು ಕೂಡ ಮನೆಯಲ್ಲಿ ಇಡಬಾರದು, ಈ ಫೋಟೋ ಅಸ್ಥಿರತೆ ಉಂಟು ಮಾಡುತ್ತದೆ, ಹಾಗಾಗಿ ಈ ಬಗೆಯ ಫೋಟೋವನ್ನು ಇಡಲೇಬಾರದು ಎಂದು ಹೇಳಲಾಗುವುದು.
ಲಂಕಾ ಸುಡುತ್ತಿರುವ ಹನುಮಂತ
ಸೀತೆಯ ರಕ್ಷಣೆಗೆ ಹೋಗುವ ಹನುಮಂತ ಲಂಕೆಯನ್ನು ಸುಟ್ಟು ಹಾಕುತ್ತಾನೆ, ಆದರೆ ಈ ಫೋಟೋ ಮನೆಯಲ್ಲಿಡಬಾರದು, ಇದು ನಕರಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುವುದು
ಶ್ರೀರಾಮ ಮತ್ತು ಲಕ್ಷ್ಮಣರನ್ನು ಭುಜದ ಮೇಲೆ ಎತ್ತಿಕೊಂಡಿರುವ ಫೋಟೋ
ಈ ಫೋಟೋವನ್ನು ಕೂಡ ಮನೆಯಲ್ಲಿ ಇಡಬಾರದು, ಹನುಮಂತ ತನ್ನ ಶ್ರೀರಾಮ ಮತ್ತು ಲಕ್ಷ್ಮಣರನ್ನು ಭುಜದ ಮೇಲೆ ಹೊತ್ತುಕೊಂಡಾಗ ಬೇರೆ ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ, ಹಾಗಾಗಿ ಹನುಮಂತನ ಪ್ರಭಾವ ನಿಮ್ಮ ಮನೆ ಮೇಲೆ ಇರುವುದಿಲ್ಲ, ಹಾಗಾಗಿ ಈ ಬಗೆಯ ಫೋಟೊ ಮನೆಯಲ್ಲಿರಬಾರದು.
ಬೆಡ್ ರೂಂನಲ್ಲಿ ಹನುಮಂತನ ಫೋಟೋಇಡಬಾರದು
ಹನುಮಂತ ಬ್ರಹ್ಮಚಾರಿ, ಹಾಗಾಗಿ ವಿವಾಹಿತರು ತಮ್ಮ ಬೆಡ್ ರೂಂನಲ್ಲಿ ಹನುಮಂತನ ಫೋಟೋ ಇಡಬಾರದು.
ಇದರ ಬದಲಿಗೆ ಮನೆಯಲ್ಲಿ ಹನುಮಂತನ ಯಾವ ಫೋಟೋ ಇಡಬಹುದು
ರಾಮ್ ದರ್ಬಾರ್ ಫೋಟೋ ಇಟ್ಟು ಪೂಜಿಸಬಹುದು. ಇದರಲ್ಲಿ ಶ್ರೀರಾಮ-ಸೀತೆ, ಲಕ್ಷ್ಮಣ ಇವರ ಜೊತೆಗೆ ಹನುಮಂತಕೂಡ ಇರುತ್ತಾನೆ, ಇಂಥ ಫೋಟೋ ಇಟ್ಟು ಪೂಜಿಸಿದರೆ ಮನೆಗೆ ಶ್ರೇಯಸ್ಸು ಉಂಟಾಗುವುದು.
ಹನುಮಂತನ ದೇವಾಲಯಕ್ಕೆ ಹೋಗಿ ಪೂಜಿಸುವುದು
ಹನುಮಂತನ ಆರಾಧಿಸಬೇಕೆಂದರೆ ಕೆಲವೊಂದು ಕಠಿಣ ನಿಯಮಗಳೀವೆ, ಅದರಂತೆ ಪೂಜೆಯನ್ನು ಮಾಡಬೇಕು, ಇಲ್ಲದಿದ್ದರೆ ದೋಷ ಉಂಟಾಗುವುದು, ಹಾಗಾಗಿ ಹನುಮಂತ ಮೂರ್ತಿಯನ್ನು ಮನೆಯಲ್ಲಿ ಪೂಜಿಸುವುದು ಒಳ್ಳೆಯದಲ್ಲ. ಹನುಮಂತನ ಭಕ್ತರು ಮಂಗಳವಾರ ಹಾಗೂ ಶನಿವಾರ ಹನುಮಂತನ ದೇವಾಲಯಕ್ಕೆ ಹೋಗಿ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿ ಬರಬಹುದು.
ಹನುಮಾನ್ ಚಾಲೀಸ ಪಠಿಸಿ
ಹನುಮಾನ್ ಕೃಪೆ ಪಡೆಯಲು ಮನೆಯಲ್ಲಿ ಹನುಮಂತನ ಫೋಟೋ ಇಡಬೇಡಿ ಬದಲಿಗೆ ನೀವು ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications
