Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸುಧಾ ಮೂರ್ತಿಯನ್ನು ಕಂಪನಿಯಿಂದ ಹೊರಗಿಟ್ಟಿದ್ದೇಕೆ..? ನಾರಾಯಣಮೂರ್ತಿ ಹೇಳಿದಿಷ್ಟು..!
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಪತ್ನಿ ಸುಧಾ ಮೂರ್ತಿ ಸದಾ ಸುದ್ದಿಯಲ್ಲಿರುವ ದಂಪತಿಯಾಗಿದ್ದಾರೆ. ಕೇವಲ ಉದ್ಯಮ ವಿಚಾರವಾಗಿ ಮಾತ್ರವಲ್ಲ ಸಮಾಜ ಸೇವೆ, ದೇಣಿಗೆ ಹೀಗೆ ಹತ್ತಾರು ಕೆಲಸಗಳಿಂದಲೂ ಎಲ್ಲರ ಗಮನ ಸೆಳೆಯುತ್ತಾರೆ. ಆದರೆ ಇತ್ತೀಚಿಗೆ ಅವರು ಕೆಲಸದ ಅವಧಿ ಕುರಿತು ನೀಡಿದ್ದ ಹೇಳಿಕೆಯಿಂದ ಭಾರೀ ವಿರೋಧವನ್ನು ಎದುರಿಸಿದ್ದರು.
ಸುಧಾ ಮೂರ್ತಿ ಅವರನ್ನು ಡ್ರಾಪ್ ಮಾಡಲು ಟಿಕೆಟ್ ಇಲ್ಲದೆ 11 ಗಂಟೆಗಳ ಕಾಲ ರೈಲಿನಲ್ಲಿ ಪ್ರಯಾಣಿಸಿದ್ದ ದಿನವನ್ನು ಇತ್ತೀಚೆಗೆ ನೆನಪಿಸಿಕೊಂಡಿದ್ದಾರೆ. ಬಿಲಿಯನೇರ್ CNBC-TV18 ನೊಂದಿಗೆ ಮಾತನಾಡುತ್ತಿದ್ದರು. "ಅದು ಬೇರೆ ವಯಸ್ಸು. ಆದರೆ ನಾನು ದೀರ್ಘಕಾಲದಿಂದ ಜೊತೆಗಿರುವ ದಾಂಪತ್ಯದ ಬಗ್ಗೆ ಮಾತನಾಡುತ್ತಿದ್ದೇನೆ. ಆರಂಭದ ದಿನಗಳಲ್ಲಿ ನಾನು ಟಿಕೆಟ್ ಪಡೆಯದೆ ರೈಲಿನಲ್ಲಿ ಓಡಾಡಿದ್ದೆ ಎಂದಿದ್ದಾರೆ.
ಅಮೇರಿಕಾ ಮೂಲದ ಭಾರತೀಯ ಮೂಲದ ಲೇಖಕಿ ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರು ಬರೆದಿರುವ ಅವರ ಜೀವನಚರಿತ್ರೆ 'An Uncommon Love: The Early Life of Sudha and Narayana Murthy' ಬಿಡುಗಡೆಯ ಸಮಯದಲ್ಲಿ ಅವರು ಹಲವು ವಿಚಾರಗಳ ಮುಂದಿಟ್ಟಿದ್ದರು. ಸುಧಾ ಮೂರ್ತಿಯನ್ನು ಬಿಡಲು 11 ಗಂಟೆಗಳ ಕಾಲ ರೈಲಿನಲ್ಲಿ ಪ್ರಯಾಣಿಸಿದ್ದೆ ಅದೂ ಕೂಡ ಟಿಕೆಟ್ ಇಲ್ಲದೆಯೇ ಎಂದಿದ್ದಾರೆ.

ಕಂಪನಿಯಿಂದ ಪತ್ನಿಯನ್ನು ಹೊರಗಿಟ್ಟಿದ್ದೇಕೆ?
ಇತ್ತೀಚೆಗೆ, ಸುಧಾ ಮೂರ್ತಿಯನ್ನು ಕಂಪನಿಯಿಂದ ಹೊರಗಿಟ್ಟ ಕುರಿತು ಮಾತನಾಡಿರುವ ಅವರು, ಸುಧಾ ಮೂರ್ತಿಯವರನ್ನು ಕಂಪನಿಯಿಂದ ಹೊರಗಿಟ್ಟು ತಪ್ಪು ಮಾಡಿದೆ ಎನಿಸಿತ್ತು. ಅವಳು ತನಗಿಂತ ಹೆಚ್ಚು ಅರ್ಹತೆ ಹೊಂದಿದ್ದಾಳೆ. ನಾನು ಆದರ್ಶವಾದಿಯಾಗಿ ಕಂಪನಿಯ ಜೊತೆ ಕುಟುಂಬವನ್ನು ಸೇರಿಸಬಾರದು ಎಂದು ನಂಬಿದ್ದೆ. ಈ ರೀತಿ ಮಾಡುವುದು ನನಗೆ ಸರಿಯಾಗಿ ಕಾಣಿಸಲಿಲ್ಲ. ಹೀಗಾಗಿ ಸುಧಾ ಮೂರ್ತಿಯನ್ನು ಕಂಪನಿಯಿಂದ ಹೊರಗಿಟ್ಟೆ ಎಂದಿದ್ದಾರೆ.
"ಉತ್ತಮ ಸಾಂಸ್ಥಿಕ ಆಡಳಿತ ಎಂದರೆ ಕುಟುಂಬವನ್ನು ಒಳಗೊಳ್ಳುವುದಿಲ್ಲ ಎಂದು ನಾನು ಭಾವಿಸಿದೆ. ಏಕೆಂದರೆ ಆ ದಿನಗಳಲ್ಲಿ ಮಕ್ಕಳು ಕಂಪನಿಗೆ ಬಂದು ಕಂಪನಿಯನ್ನು ನಡೆಸುತ್ತಿದ್ದರು. ಬಹಳಷ್ಟು ಕಾನೂನುಗಳ ಉಲ್ಲಂಘನೆಯಾಗುತ್ತಿತ್ತು. ಆದರೆ ಕೆಲವು ವರ್ಷಗಳ ಹಿಂದೆ, ನಾನು ಒಂದೆರಡು ತತ್ವಶಾಸ್ತ್ರದ ಪ್ರಾಧ್ಯಾಪಕರೊಂದಿಗೆ ಚರ್ಚೆ ನಡೆಸಿದ್ದೇನೆ ಮತ್ತು ಅವರು ನನ್ನ ನಿರ್ಧಾರ ತಪ್ಪು ಎಂದು ಹೇಳಿದರು. ಅವರು ನಿಮ್ಮ ಹೆಂಡತಿಯಾಗಲಿ, ನಿಮ್ಮ ಮಗ ಅಥವಾ ನಿಮ್ಮ ಮಗಳಾಗಲಿ ಇತರ ವ್ಯಕ್ತಿಯಂತೆ ಅರ್ಹತೆ ಇದೆ ಎಂದು ಹೇಳಿದರು. ಅವರು ಅರ್ಹತೆಯನ್ನು ಹೊಂದಿರುವವರೆಗೆ ಮತ್ತು ಸಾಮಾನ್ಯ ಕಾರ್ಯವಿಧಾನದ ಮೂಲಕ ಹೋದರೆ, ಆ ವ್ಯಕ್ತಿಯನ್ನು ಕಂಪನಿಯ ಭಾಗವಾಗದಂತೆ ತಡೆಯಲು ನಿಮಗೆ ಯಾವುದೇ ಹಕ್ಕಿಲ್ಲ ಏಕೆಂದರೆ ನೀವು ನಿಮ್ಮ ಕೆಲವು ಹಕ್ಕುಗಳನ್ನು ಕಸಿದುಕೊಳ್ಳುತ್ತೀರಿ ಎಂದಿದ್ದರು'' ಎಂದು ಅವರು ಹೇಳಿದರು.
ನಾರಾಯಣ ಮೂರ್ತಿ ಅವರ ಈ ಜೀವನಚರಿತ್ರೆ ಪುಸ್ತಕದಲ್ಲಿ ಅವರ ಬಾಲ್ಯದಿಂದ ಹಿಡಿದು ಇಂದಿನವರೆಗೆ ಅವರ ಜೀವನ ಪ್ರಯಾಣವನ್ನು ಬರೆಯಲಾಗಿದೆ. ಅವರ ಜೀವನದ ಟರ್ನಿಂಗ್ ಪಾಯಿಂಟ್ ಆಗಿದ್ದ ಇನ್ಫೋಸಿಸ್ ಭಾಗವನ್ನು ನಾರಾಯಣಮೂರ್ತಿ ಅವರು ಲೇಕಕರ ಬಳಿ ಚರ್ಚಿಸಿದ್ದರಂತೆ. ಈ ಪುಸ್ತಕ ಎಲ್ಲಾ ಮಳಿಗೆಗಳಲ್ಲೂ ಲಭ್ಯವಿದೆ. ಜೊತೆ ಆನ್‌ಲೈನ್ ಸ್ಟೋರ್‌ಗಳಿಂದಲೂ ಖರೀದಿಸಬಹುದು.



Click it and Unblock the Notifications