Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಶಕ್ತಿಶಾಲಿ ಕ್ಷೇತ್ರ, ವಿಶೇಷತೆಯೇನು?
ಸಾಕಷ್ಟು ಭಕ್ತರು ಕಷ್ಟ ಬಂದಾಗ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಬರ್ತಾರೆ, ಆ ತಾಯಿಯನ್ನು ಭಕ್ತಿಯಿಂದ ಬೇಡಿದರೆ ಇಷ್ಟಾರ್ಥಗಳು ನೆರವೇರುವುದು, ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು. ದಸರಾ ಸಮಯ ಕೂಡ ಸಮೀಪಿಸುತ್ತಿದೆ, ಹಾಗಾಗಿ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾಧಿಗಳ ಸಂಖ್ಯೆಯು ಹೆಚ್ಚಿರುತ್ತದೆ.
ನಾವಿಲ್ಲಿ ಈ ಚಾಮುಂಡಿ ಬೆಟ್ಟ, ಚಾಮುಂಡಿ ತಾಯಿಯ ಶಕ್ತಿ ಬಗ್ಗೆ ತಿಳಿಯೋಣ:

18 ಶಕ್ತಿ ಪೀಠಗಳಲ್ಲಿ ಚಾಮುಂಡಿ ಬೆಟ್ಟ ಒಂದಾಗಿದೆ
ನಮ್ಮ ದೇಶದಲ್ಲಿ ಇರುವ ಪ್ರಮುಖ ಶಕ್ತಿ ಪೀಠಗಳಲ್ಲಿ ಚಾಮುಂಡಿ ದೇವಿಯ ಸ್ಥಳ ಕೂಡ ಒಂದಾಗಿದೆ. ಇಲ್ಲಿ ಸತಿ ದೇವಿಯ ಕೂದಲು ಬಿದ್ದಿದೆ ಎಂದು ನಂಬಲಾಗಿದೆ. ಈ ಚಾಮುಂಡೇಶ್ವರಿ ದೇವಾಲಯವು ಸಾವಿರ ವರ್ಷಕ್ಕಿಂತಲೂ ಹಳೆಯ ದೇವಾಲಯವಾಗಿದೆ. ಪೌರಾಣಿಕ ಕತೆಯ ಪ್ರಕಾರ ಮಹಿಷಾಸುರ ಎಂಬ ರಾಕ್ಷಸನ್ನು ಸಂಹರಿಸಲು ಚಾಮುಂಡಿ ದೇವಿ ಅವತರಿಸಿದಳು ಎಂದು ಹೇಳಲಾಗುತ್ತದೆ. ಚಾಮುಂಡಿ ತನ್ನ ಭಕ್ತರನ್ನು ಸದಾ ರಕ್ಷಿಸುತ್ತಾಳೆ ಎಂಬ ನಂಬಿಕೆ ಹೊಂದಿದೆ.
ಚಾಮುಂಡೇಶ್ವರಿ ದೇವಿಯದು ಅಷ್ಟಭುಜಗಳ ಉಗ್ರರೂಪ
ಚಾಮುಂಡೇಶ್ವರಿ ಉಗ್ರ ರೂಪವನ್ನು ಹೊಂದಿರುವ ದೇವಿ ಸ್ವರೂಪವಾಗಿದೆ. ಎಂಟು ಕೈಗಳನನ್ನು ಹೊಂದಿರುವ ಉಗ್ರ ಸ್ವರೂಪಿಣಿ ರೂಪದಲ್ಲಿ ದೇವಿ ಕಂಗೊಳಿಸುತ್ತಾಳೆ, ಈ ದೇವಿಯ ಸ್ವರೂಪ ದುಷ್ಟರನ್ನು ಸಂಹರಿಸಿ, ಭಕ್ತರನ್ನು ರಕ್ಷಣೆ ಮಾಡುತ್ತೇನೆ ಎಂದು ತನ್ನ ಭಕ್ತರಿಗೆ ಅಭಯ ನೀಡುವ ರೀತಿಯಲ್ಲಿದೆ.
ಚಾಮುಂಡೇಶ್ವರಿ ದೇವಾಲಯದ ವಿಶೇಷತೆ
ಚಾಮುಂಡೇಶ್ವರಿ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ, ಈ ದೇವಾಲಯ ಹೆಬ್ಬಾಗಲು, ನಂತರ ಪ್ರವೇಶ ದ್ವಾರ, ಅಂತರಾಳ, ಗರ್ಭಗೃಹ, ಪ್ರಾಕಾರಗಳನ್ನು ಹೊಂದಿದೆ ಏಳು ಅಂತಸ್ತುಗಳ ಗೋಪುರ 19ನೇ ಶತಮಾನದಲ್ಲಿ ನಿರ್ಮಿತವಾಗಿದ್ದು ಎಂದು ಹೇಳಲಾಗುತ್ತಿದೆ, ಈ ಶಿಖರಗಳಲ್ಲಿ ಏಳು ಚಿನ್ನದ ಲೇಪಿತ ಕಲಶವನ್ನು ಕಾಣಬಹುದು.
ದೇವಾಲಯದ ಬೃಹತ್ ಹೆಬ್ಬಾಗಿಲನ್ನು ಇದಕ್ಕೆ ಬೆಳ್ಳಿಯ ತಗಡಿನ ಹೊದಿಕೆ ಇದೆ. ಈ ಬಾಗಿಲಿನಲ್ಲಿ ದೇವಿಯ ಹಲವು ಸ್ವರೂಪಗಳನ್ನು ಕೆತ್ತಲಾಗಿದೆ, ಅಲ್ಲದೆ ಈ ದೇವಾಲಯದಲ್ಲಿ ಅಷ್ಟದಿಕ್ಪಾಲರ ವಿಗ್ರಹಗಳಿವೆ. ಈ ದೇವಾಲಯದಲ್ಲಿ ದಕ್ಷಿಣಾಭಿಮುಖವಾಗಿ ಗಣಪತಿಯ ಪುಟ್ಟ ವಿಗ್ರಹವಿದೆ.
ಪ್ರತಿನಿತ್ಯವೂ ಇಲ್ಲಿ ದೇವಿಯನ್ನು ಅಲಂಕರಿಸಿ ಪೂಜಿಸಲಾಗುವುದು
ಈ ಚಾಮುಂಡೇಶ್ವರಿ ದೇವಿಗೆ ಪ್ರತಿನಿತ್ಯ ಅಲಂಕರಿಸಿ ಪೂಜಿಸಲಾಗುವುದು, ಪ್ರತಿನಿತ್ಯ ಈ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ, ಇಲ್ಲಿ ನೆನೆಸಿದ್ದು ನೆರವೇರುವುದರಿಂದ ದೇವಿಶಕ್ತಿಯ ಮೇಲೆ ಅಚಲ ನಂಬಿಕೆಯಿದೆ ಭಕ್ತರಿಗೆ.
ದಸರಾ ಸಮಯದಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನ ಚಾಮುಂಡೇಶ್ವರಿಯನ್ನು ನೋಡುವುದೇ ಕಣ್ಣಿಗೆ ಹಬ್ಬ
ದಸರಾ ದಿನದಂದು 750 ಕೆಜಿ ತೂಕದ ಅಂಬಾರಿಯಲ್ಲಿ ಚಾಮುಂಡಿದೇವಿಯನ್ನು ಹೊತ್ತುಕೊಂಡು ಬರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಜಂಬೂ ಸವಾರಿ ವಿಶ್ವಪ್ರಸಿದ್ಧವಾಗಿದ್ದು ಈ ಸಮಯದಲ್ಲಿ ಮೈಸೂರಿನಲ್ಲಿ ಎಲ್ಲಿ ನೋಡಿದರೂ ಜನ ಸಾಗರವೇ.... ಅಲಂಕೃತಗೊಂಡ ದೇವಿಯನ್ನು ನೋಡುವುದೇ ಚೆಂದ.



Click it and Unblock the Notifications
