Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಶಿವನ ತಲೆ ಮೇಲೆ ಅರ್ಧ ಚಂದ್ರ ಏಕಿದೆ..? ಇದರ ಹಿಂದಿದೆ ಸುಂದರ ಕಥೆ.!
ಮಹಾಶಿವರಾತ್ರಿ ಹಿಂದೂಗಳ ಮಹತ್ವದ ಹಬ್ಬವಾಗಿದೆ. ಅಂದು ಶಿವನಿಗೆ ವಿಶೇಷ ರೀತಿಯಲ್ಲಿ ಪೂಜಿಸುವುದು ಸೇರಿ ಶಿವನ ಆಶೀರ್ವಾದ ಪಡೆಯಲು ನಾನಾ ರೀತಿಯಲ್ಲಿ ಆಚರಿಸಲಾಗುತ್ತದೆ. ರಾತ್ರಿಯಿಡಿ ಜಾಗರಣೆ ಮಾಡಿ ವಿಶೇಷ ಖಾದ್ಯ ಅರ್ಪಿಸಿ ಪೂಜಿಸಲಾಗುತ್ತದೆ. ಇಂತಹ ಪವಿತ್ರ ಹಬ್ಬವು ನಾಳೆ ಮಾರ್ಚ್ 8ರಂದು ಆರಂಭವಾಗುತ್ತಿದೆ.
ಇನ್ನು ಈ ಶಿವರಾತ್ರಿಯಲ್ಲಿ ನಾವು ಶಿವನ ಕುರಿತ ಕೆಲವು ಅಚ್ಚರಿ ಅಂಶಗಳನ್ನು ತಿಳಿದುಕೊಳ್ಳೋಣ. ಅದರಲ್ಲೂ ಶಿವನ ತಲೆಯ ಮೇಲೆ ಅರ್ಧ ಚಂದ್ರ ಏಕಿದೆ? ಎಂಬುದನ್ನು ನೀವೆಂದಾದರು ಯೋಚಿಸಿದ್ದೀರಾ? ಹಾಗಾದರೆ ನಾವಿಂದು ನಿಮಗೆ ಹೇಳುತ್ತೇವೆ ನೋಡಿ. ಈ ಅರ್ಧ ಚಂದ್ರನ ಹಿಂದಿರುವ ಕಥೆ ಏನು ಎಂಬುದನ್ನು ನೋಡಿ.

ಭಗವಾನ್ ಶಿವನ ತಲೆಯ ಮೇಲಿನ ಅರ್ಧಚಂದ್ರಾಕೃತಿಯು ಅವನ ಒಟ್ಟಾರೆ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ಅಲಂಕರಿಸುತ್ತದೆ. ನೀವು ಶಿವನ ಬಹುತೇಕ ಎಲ್ಲಾ ಫೋಟೋಗಳು, ಮೂರ್ತಿಗಳಲ್ಲೂ ನಂದಿ ಹಾಗೂ ಅರ್ಧ ಚಂದ್ರ ಹಾಗೂ ಗಂಗೆಯನ್ನು ಕಾಣಬಹುದು. ಹಾಗಾದ್ರೆ ಇದರ ಹಿಂದಿರುವ ಕಥೆ ಏನು ಗೊತ್ತಾ? ಈ ಶಿವನ ತಲೆ ಮೇಲಿರುವ ಅರ್ಧ ಚಂದ್ರನಿಗೆ ಬಹಳ ಮಹತ್ವವಿದೆ. ಹೀಗಾಗಿ ಶಿವನಿಗೆ ಚಂದ್ರಶೇಖರ ಎಂಬ ಹೆಸರೂ ಸಹ ಬಂದಿದೆ.
ದಕ್ಷ ಎಂಬಾತನಿಗೆ 27 ಮಂದಿ ಹೆಣ್ಣು ಮಕ್ಕಳಿದ್ದರಂತೆ. ಅವರನ್ನು ಚಂದ್ರ ದೇವರು ಮದುವೆಯಾದನಂತೆ, ಆದರೆ ಈ ದಕ್ಷನ ಮಗಳಲ್ಲಿ ರೋಹಿಣಿ ಎಂಬಾಕೆಯನ್ನು ಮಾತ್ರ ಚಂದ್ರ ಹೆಚ್ಚಾಗಿ ಪ್ರೀತಿಸುತ್ತಿದ್ದ, ಆಕೆಗೆ ತನ್ನೆಲ್ಲಾ ಪ್ರೀತಿ ನೀಡುತ್ತಿದ್ದ ಇತರ 26 ಮಡದಿಯರನ್ನು ಕಡೆಗಣಿಸಿದ ಎಂಬ ಕಥೆ ಇದೆ. ಹೀಗಾಗಿ ಈ 26 ಮಡದಿಯರು ತನ್ನ ತಂದೆ ದಕ್ಷನಲ್ಲಿ ದೂರು ನೀಡಿದರು. ಇದರಿಂದ ಕೋಪಗೊಂಡ ದಕ್ಷ ಚಂದ್ರನ ಮೇಲೆ ಮುನಿಸಿಕೊಂಡ.
ಹೀಗೆ ಮುನಿಸಿಕೊಂಡಿದ್ದ ದಕ್ಷ ಚಂದ್ರನಿಗೆ ಶಾಪ ಕೊಟ್ಟನಂತೆ. ನಿನ್ನೆಲ್ಲಾ ಹೊಳಪು ಮಸುಕಾಗಲಿ, ನೀನು ಹೊಳಪನ್ನು ಕಳೆದುಕೊಂಡು ಬೂದಿಯಾಗುವಂತೆ ಶಾಪ ನೀಡಿದನಂತೆ. ಈ ಶಾಪಕ್ಕೆ ಹೆದರಿದ ಚಂದ್ರ ದೇವ ತಕ್ಷಣ ಸಹಾಯ ಕೋರಿ ಬ್ರಹ್ಮನ ಬಳಿ ತೆರಳಿದ. ಆದರೆ ಬ್ರಹ್ಮ ನಿನ್ನನ್ನು ರಕ್ಷಿಸಲು ನನ್ನಿಂದ ಸಾಧ್ಯವಿಲ್ಲ, ಆದರೆ ಆ ಶಿವನಿಂದ ಸಾಧ್ಯವಿದೆ ಎಂದನು. ಶಿವನ ಬಳಿ ತೆರಳಿದ ಚಂದ್ರ ತನ್ನ ಶಾಪದ ಬಗ್ಗೆ ತಿಳಿಸಿದ. ಆದರೆ ಶಾಪವೂ ಈಗಾಗಲೇ ಚಂದ್ರನನ್ನು ಮಸುಕಾಗಿಸುತ್ತಿದೆ. ಹೀಗಾಗಿ ನೀನು 15 ದಿನ ಬೆಳಕಾಗಿಯೂ ಇನ್ನು 15 ದಿನ ಮಂಕಾಗಿ ಇಡೀ ಭೂಮಂಡಲ ಬೆಳಗುವಂತೆ ತಿಳಿಸಿದ.
ಹೀಗಾಗಿ 15 ದಿನಕ್ಕೊಮ್ಮೆ ಅಮಾವಾಸ್ಯೆ ಹಾಗೂ 15 ದಿನಕ್ಕೊಮ್ಮೆ ಹುಣ್ಣಿಮೆ ಬರುತ್ತಿದೆ ಎಂಬ ಉಲ್ಲೇಖವಿದೆ. ಇದಾದ ಬಳಿಕ ಶಿವನಿಗೆ ಚಂದ್ರಶೇಖರ ಎಂಬ ಹೆಸರೂ ಸಹ ಬಂದಿದೆ. ಶಿವನು ಸಮಯಕ್ಕೆ ಅಧಿಪತಿಯಾಗಿದ್ದು ಆತ ಸಮಯಾತೀತ (ಅಂದರೆ ಸಮಯದ ಕಟ್ಟುಪಾಡಿಗೆ ಬಗ್ಗದವರು) ಎಂಬುದಾಗಿ ಚಂದ್ರನು ಸಂಕೇತಿಸಿದ್ದಾನೆ.
ಹಣೆಯಲ್ಲಿರುವ ತಿಲಕ
ಶಿವನ ಹಣೆಯಲ್ಲಿರುವ ಗೋಲಾಕಾರದ ತಿಲಕವು ಜ್ಞಾನದ ಮೂರನೇ ಕಣ್ಣು ಎಂದೇ ಪ್ರಸಿದ್ಧವಾಗಿದೆ. ಮೂರನೇ ಕಣ್ಣು ತೆರೆದಲ್ಲಿ, ಎದುರಿಗಿರುವವರನ್ನೇ ಇದು ಸುಟ್ಟು ಬೂದಿ ಮಾಡುತ್ತದೆ ಎಂದೇ ಹೇಳಲಾಗಿದೆ. ದುಷ್ಟ ನಾಶ ಮತ್ತು ಅಜ್ಞಾನದ ಅಂತ್ಯವನ್ನು ಇದು ಸಂಕೇತಿಸುತ್ತದೆ.
ಶಿವನ ಕೈಯಲ್ಲಿರುವ ಜಪಮಾಲೆ
ದೇವರ ಕೈಯಲ್ಲಿರುವ ಜಪಮಾಲೆಯನ್ನು ರುದ್ರಾಕ್ಷಿ ಮಣಿಗಳಿಂದ ತಯಾರಿಸಲಾಗಿದೆ. ಇದು ಶುದ್ಧತೆಯ ಸಂಕೇತವಾಗಿದೆ. ಈ ಮಾಲೆಯು, ದೇವರ ಬಲಗೈಯಲ್ಲಿ ಇದ್ದು ಏಕಾಗ್ರತೆಯ ಸಂಕೇತವಾಗಿದೆ.
ಶಿವನೇಕೆ ಹುಲಿಯ ಚರ್ಮ ಏಕೆ ಧರಿಸುತ್ತಾನೆ?
ಶಿವ ಪುರಾಣದ ಪ್ರಕಾರ ಶಿವನು ಸಂಚಾರ ಪ್ರಿಯನಾಗಿದ್ದನು. ಸದಾಕಾಲ ಪ್ರಪಂಚವನ್ನು ಸುತ್ತುತ್ತಿದ್ದನು. ಒಮ್ಮೆ ಅತ್ಯಂತ ಶಕ್ತಿವಂತರಾದ ಋಷಿಗಳ ಆಶ್ರಮವನ್ನು ಹೊಂದಿರುವ ಅರಣ್ಯವೊಂದರೊಳಗೆ ಹೋದನು. ಆ ಸಮಯದಲ್ಲಿ ಋಷಿಗಳ ಸಕಿಯರು ಶಿವನ ಕಂಡು ಆಕರ್ಷಿತರಾದರಂತೆ. ಹೀಗಾಗಿ ಶಿವನಿಗೆ ಪಾಠ ಕಲಿಸಬೇಕು ಇನ್ನೆಂದು ಈ ದಾರಿಯಲ್ಲಿ ಬರಬಾರದೆಂದು ದಾರಿಯಲ್ಲಿ ದೊಡ್ಡ ಹೊಂಡೆ ತೆಗೆದು ಶಿವ ಆ ಹೊಂಡದಲ್ಲಿ ಬೀಳುವಂತೆ ಮಾಡಿದರು.
ಇದೇ ಹೊಂಡಕ್ಕೆ ಹುಲಿಯೊಂದು ಬಿದ್ದು ಶಿವನ ಮೇಲೆ ಎರಗಿತ್ತಂತೆ. ಆದರೆ ಶಿವ ಆ ಹುಲಿಯನ್ನು ಸಂಹಾರ ಮಾಡಿ ಹುಲಿಯ ಚರ್ಮವನ್ನು ವಿಜಯದ ಸಂಕೇತವಾಗಿ ಮೈ ಮೇಲೆ ಹೊದ್ದು ಮಲಗಿದನಂತೆ. ಹೀಗಾಗಿ ಆತನ ಬಳಿ ಯಾವಾಗಲು ನಾವು ಹುಲಿಯ ಚರ್ಮ ನೋಡಬಹುದು.



Click it and Unblock the Notifications
