Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ರಾಧಾಷ್ಟಮಿ: ಪ್ರಾಣ ಪ್ರಿಯೆ ರಾಧಾಳನ್ನು ಶ್ರೀಕೃಷ್ಣ ಮದುವೆಯಾಗಿಲ್ಲ ಏಕೆ?
ಭಾದ್ರಪದ ಮಾಸದ ಶುಕ್ಲ ಅಷ್ಟಮಿಯಂದು ರಾಧಾಷ್ಟಮಿಯನ್ನು ಆಚರಿಸಲಾಗುವುದು. ಈ ದಿನದಂದು ಕೃಷ್ಣ-ರಾಧೆಯನ್ನು ಅಲಂಕರಿಸಿ ಪೂಜಿಸಲಾಗುವುದು. ಈ ದಿನ ರಾಧಾ-ಕೃಷ್ಣರ ಕೀರ್ತನೆಗಳನ್ನು ಹಾಡಲಾಗುವುದು. ಕೃಷ್ಣ ಅಂದ ತಕ್ಷಣ ರಾಧೆ ನೆನಪಿಗೆ ಬರುತ್ತಾಳೆ. ಪವಿತ್ರ ಪ್ರೀತಿಯನ್ನು ಕೃಷ್ಣ-ರಾಧೆಯ ಪ್ರೀತಿಗೆ ಹೋಲಿಸಲಾಗುವುದು.

ಕೃಷ್ಣ-ರಾಧೆಯ ಪ್ರೀತಿಗೆ ಮಿತಿಯಿಲ್ಲ, ಅಷ್ಟೊಂದು ತೀವ್ರವಾಗಿತ್ತು ಅವರ ಪ್ರೀತಿ, ಪ್ರೇಮಿಗಳೆಂದರೆ ಕೃಷ್ಣ-ರಾಧೆಯ ರೀತಿ ಇರಬೇಕು ಎಂದು ಹೇಳಲಾಗುವುದು. ಕೃಷ್ಣ-ರಾಧೆ ಅಷ್ಟೊಂದು ಪ್ರೀತಿಸುತ್ತಿದ್ದರು ಏಕೆ ಅವರಿಬ್ಬರು ಮದುವೆಯಾಗಿಲ್ಲ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತದೆ. ಕೃಷ್ಣ-ರಾಧೆ ಏಕೆ ಮದುವೆಯಾಗಲಿಲ್ಲ ಎಂಬುವುದಕ್ಕೆ ಈ ಕಾರಣಗಳನ್ನು ಹೇಳಲಾಗುವುದು:
ಅವರಿಬ್ಬರ ಪ್ರೀತಿಗೆ ಮದುವೆ ಬಂಧ ಬೇಕಾಗಿಲ್ಲ
ಅವರು ಅವರ ಪ್ರೀತಿಯನ್ನು ತೋರಿಸಲು ಅವರಿಗೆ ಮದುವೆಯ ಬಂಧ ಬೇಕಾಗಿಲ್ಲ, ಕೃಷ್ಣ ಯಾರಿಂದ ಏನೂ ಬಯಸುವುದಿಲ್ಲ, ಮದುವೆಯಲ್ಲಿ ನಿರೀಕ್ಷೆಗಳು ಜಾಸ್ತಿ, ಅದೇ ಇವರು ಪವಿತ್ರ ಪ್ರೀತಿಯಲ್ಲಿ ಯಾವುದೇ ನಿರೀಕ್ಷೆಗಳಿಲ್ಲ, ಅಲ್ಲಿ ಪ್ರೀತಿಯಷ್ಟೇ, ಪವಿತ್ರವಾದ ಪ್ರೀತಿಯಷ್ಟೇ.
ರಾಧಾ ರುಕ್ಮಣಿ ಒಂದೇ
ಇನ್ನು ಕೆಲವರು ರಾಧಾ-ರುಕ್ಮಣಿ ಒಂದೇ ಎಂದು ಹೇಳಲಾಗುವುದು. ರುಕ್ಮಿಣಿ ಭೀಷ್ಮ- ವಿಧರ್ಭಗೆ ಜನಿಸಿದ ಮಗಳು ರುಕ್ಮಣಿ. ರುಕ್ಮಣಿ ಲಕ್ಷ್ಮಿಯ ಅವತಾರ ಎಂದು ಹೇಳಲಾಗುವುದು, ಸ್ರೀ ಕೃಷ್ಣನನ್ನು ಶ್ರೀ ವಿಷ್ಣುವಿನ 8ನೇ ಅವತಾರ ಎಂದು ಹೇಳಲಾಗುತ್ತಿದ್ದು ಈ ರಾಧೆ- ಕೃಷ್ಣ ಬೇರೆ-ಬೇರೆಯಲ್ಲ, ಇಬ್ಬರು ಒಂದೇ ಎಂದು ಹೇಳಲಾಗುವುದು.
ರಾಧಾಗೆ ಅಯಾನ್‌ನ ಮದುವೆಯಾಗಬೇಕೆಂಬ ನಿಯಮಿವಿತ್ತು
ಶ್ರೀ ವಿಷ್ಣುವಿನ ಭಕ್ತನೊಬ್ಬ ಕಠಿಣ ತಪಸ್ಸು ಮಾಡುತ್ತಾನೆ, ಅವನ ಪ್ರೀತಿಗೆ ಮೆಚ್ಚಿದ ಶ್ರೀ ವಿಷ್ಣು ನಿನಗೆ ಏನು ಬೇಕು ಎಂಬ ವರ ಕೇಳುತ್ತಾನೆ, ಅದಕ್ಕೆ ಮುಂದಿನ ಜನ್ಮದಲ್ಲಿ ಲಕ್ಷ್ಮಿಯನ್ನು ಮದುವೆಯಾಗುವ ಆಸೆ ವ್ಯಕ್ತಿ ಪಡಿಸುತ್ತಾನೆ, ಲಕ್ಷ್ಮಿ ರಾಧೆಯಾಗಿ ಜನಿಸುತ್ತಾಳೆ. ರಾಧೆ ಕೃಷ್ಣನನ್ನು ಪ್ರೀತಿಸುತ್ತಾಳೆ, ಆದರೆ ಅಯಾನ್ ಶ್ರೀ ವಿಷ್ಣುವಿನ ವರ ಪಡೆದ ಕಾರಣಕ್ಕೆ ರಾಧೆ ಅಯಾನ್‌ನ ಮದುವೆಯಾಗುತ್ತಾಳೆ, ಆದರೆ ಅಯಾನ್ ಶಿಖಂಡಿಯಾಗಿರುತ್ತಾನೆ. ರಾಧೆ ಆತನ ಜೊತೆಗಿರುತ್ತಾಳೆ, ಆದರೆ ಆಕೆಯ ಸಂಪೂರ್ಣ ಧ್ಯಾನ ಶ್ರೀ ಕೃಷ್ಣ ಮೇಲಿರುತ್ತದೆ, ಸದಾ ಶ್ರೀ ಕೃಷ್ಣ ಧ್ಯಾನದಲ್ಲಿಯೇ ಕಳೆಯುತ್ತಾಳೆ.
ರಾಧಾ ಎಂಬುವುದು ಕಾಲ್ಪನಿಕವಷ್ಟೇ ಎಂಬ ವಾದವೂ ಇದೆ
ಶ್ರೀಮದ್ ಬಾಗವತಂ ಅಥವಾ ಮಹಾಭಾರತದಲ್ಲಿ ಅಥವಾ ಹರಿವಂಶಮ್‌ನಲ್ಲಿ ರಾಧೆಯ ಉಲ್ಲೇಖವಿಲ್ಲ.ಾಚಾರ್ಯ ನಿಂಬಾರಕ್ ಅಮತ್ತು ಜಯದೇವ ಎಂಬ ಕವಿಯ ಕಲ್ಪನೆಯಲ್ಲಿ ಮೂಡಿದ್ದು ರಾಧೆ ಎಂಬ ವಾದವೂ ಇದೆ.
ಕೃಷ್ಣ ರಾಧೆಯನ್ನು ಮದುವೆಯಾಗದೆ ರುಕ್ಮಣಿಯನ್ನು ಮದುವೆಯಾಗಿದ್ದು ಏಕೆ?
ರುಕ್ಮಣಿ ವಿಧರ್ಭ ಹೊಟ್ಟೆಯಲ್ಲಿ ಜನಿಸಿದಾಗ ರಾಕ್ಷಸಿ ಪೂತನಿ ಮಗುವಿಗೆ ತನ್ನ ಹಾಲುಣಿಸಲು ಪ್ರಯತ್ನಿಸುತ್ತಾಳೆ, ಆ ಮಗು ತಿರಸ್ಕಾರ ಮಾಡಿದಾಗ ಮಗುವನ್ನು ಎತ್ತಿಕೊಂಡು ಹಾರಿ ಹೋಗುತ್ತಾಳೆ, ಆದರೆ ಆ ಮಗು ತುಂಬಾ ತೂಕವಾಗಿ ಬೆಳೆಯುತ್ತೆ, ಪೂತನಿ ಎತ್ತಿಕೊಂಡು ಹಾರಲು ಸಾಧ್ಯವಾಗದಷ್ಟು ಭಾರವಾಗುತ್ತಾಳೆ, ಆವಾಗ ಆ ಮಗುವನ್ನು ಕೆಳಗೆ ಹಾಕಲಾಗುವುದು, ಆ ಮಗು ಹೋಗಿ ತಾವರೆ ಮೇಲೆ ಬೀಳುತ್ತದೆ, ತಾವರೆಯಲ್ಲಿದ್ದ ಮುದ್ದಾದ ಮಗುವನ್ನು ನೋಡಿದ ವೃಷಾಭಾನು ಹಾಗೂ ಕೀರ್ತಿ ಮಗುವನ್ನು ತಂದು ರಾಧೆ ಎಂಬ ಹೆಸರಿನಲ್ಲಿ ಬೆಳೆಸುತ್ತಾರೆ. ತುಂಬಾ ವರ್ಷವಾದ ಮೇಲೆ ರಾಧೆ ವಿದರ್ಭ ಬಳಿ ಬರುತ್ತಾಳೆ, ನಂತರ ರುಕ್ಮಣಿಯನ್ನು ಮದುವೆಯಾಗುತ್ತಾಳೆ, ಹೀಗಾಗಿ ರಾಧೆ-ರುಕ್ಮಣಿ ಒಂದೇ ಹೇಳಲಾಗುವುದು.
ಏನೇ ಆಗಲಿ ರಾಧೆ ನಮಗೆ ಪ್ರೀತಿಯ ಸಂದೇಶವನ್ನು ಸಾರುತ್ತಾಳೆ, ಇವರ ಜೋಡಿ ಪ್ರೇಮಿಗಳೆಂದರೆ ಹೀಗಿರಬೇಕು ಎಂಬ ಆದರ್ಶವನ್ನು ಮೂಡಿಸುತ್ತದೆ, ರಾಧೆ ಎಂದೆಂದಿಗೂ ಕೃಷ್ನ ಪ್ರಿಯಳು, ಕೃಷ್ಣನೇ ರಾಧೆಯ ಸರ್ವಸ್ವ, ಹಾಗಾಗಿ ಪ್ರೀತಿಯೆಂದರೆ ಕೃಷ್ಣ-ರಾಧೆಯರಂತೆ ಇರಬೇಕು ಎಂದು ಹೇಳುವುದು.



Click it and Unblock the Notifications