Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೋಳಿ ಹಬ್ಬ ಏಕೆ ಆಚರಿಸುತ್ತಾರೆ..? ಹಿಂದಿರುವ ಪುರಾತನ ಕಥೆ ಗೊತ್ತಾ.?
ಪ್ರತಿ ವರ್ಷದಂತೆ ಈ ವರ್ಷವೂ ಹೋಳಿ ಆಚರಿಸಲಾಗುತ್ತಿದೆ. ಹಿಂದೂಗಳ ಹಬ್ಬವಾದ ಹೋಳಿ ಹಬ್ಬವನ್ನು ವಿಶ್ವದ ನಾನಾ ಭಾಗದಲ್ಲೂ ಆಚರಿಸಲಾಗುತ್ತದೆ. ಈ ವರ್ಷ ಹೋಳಿ ಹಬ್ಬವು ಮಾರ್ಚ್ 25ರಂದು ಬಂದಿದೆ. ಬಣ್ಣಗಳ ಓಕುಳಿಯಾಟ ಸರ್ವ ಮತಬಾಂಧವರನ್ನು ಒಂದುಗೂಡಿಸುತ್ತದೆ. ಜಾತಿ ಮತಗಳ ಭೇದವಿಲ್ಲದೆ ಆಚರಿಸುವ ಬಣ್ಣಗಳ ಹಬ್ಬ ಹೋಳಿ ತನ್ನದೇ ಆಚಾರ ಸಂಪ್ರದಾಯಗಳನ್ನು ಹೊಂದಿದೆ.
ಪ್ರತಿಯೊಂದು ಹಬ್ಬಕ್ಕೂ ಆಚಾರ ಸಂಪ್ರದಾಯ ಪ್ರಮುಖವಾಗಿರುತ್ತದೆ ಅದಕ್ಕೆ ಹೋಳಿ ಹಬ್ಬ ಕೂಡ ಹೊರತಲ್ಲ. ಹಾಗಾದರೆ ಹೋಳಿ ಹಬ್ಬ ಹುಟ್ಟಿಕೊಂಡಿದ್ದು ಹೇಗೆ? ಇದರ ಹಿಂದಿರುವ ಪುರಾತನ ಕಥೆ ಏನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಹೋಲಿಕಾನ ಕಥೆ
ರಾಕ್ಷಸ ರಾಜ ಹಿರಣ್ಯಕಶಿಪುವಿನ ತಂಗಿಯಾದ ಹೋಲಿಕಾನ ಕಥೆ ಎಲ್ಲರಿಗೂ ತಿಳಿದಿದೆ. ತನ್ನ ಸೋದರಳಿಯ ಪ್ರಹ್ಲಾದನನ್ನು ಸಾಯಿಸಲು ಪ್ರಯತ್ನಿಸಿದ ಆಕೆ ಸ್ವತಃ ಅಗ್ನಿಗೆ ಆಹುತಿಯಾದಳು. ಅಲ್ಲಿಂದೀಚೆಗೆ ಹೋಲಿಕಾ ದಹನವೆಂಬ ಆಚರಣೆ ಚಾಲ್ತಿಗೆ ಬಂದಿತು.
ಹೋಲಿಕಾ ದಹನ
ಹೋಳಿಯ ನಿಜವಾದ ಹಬ್ಬ ಆರಂಭಗೊಳ್ಳುತ್ತಿದ್ದಂತೆ, ಜನರು ಹೋಲಿಕಾ ದಹನಕ್ಕಾಗಿ ಒಟ್ಟು ಸೇರುತ್ತಾರೆ. ಹೋಳಿ ಹಬ್ಬದ ಸಂಜೆ ಹೋಲಿಕಾ ದಹನವನ್ನು ಏರ್ಪಡಿಸಲಾಗುತ್ತದೆ. ದುಷ್ಟತೆಯ ವಿರುದ್ಧ ಒಳ್ಳೆಯ ಅಂಶಗಳ ಗೆಲುವೆಂಬ ನೀತಿ ಹೋಲಿಕಾ ದಹನದಲ್ಲಿ ಸಮ್ಮಿಳಿತವಾಗಿದೆ. ಬೆಂಕಿಯು ತನ್ನ ಕೆನ್ನಾಲಿಗೆಯನ್ನು ಚಾಚಿ ಪ್ರಖರವಾಗಿ ಉರಿಯಲು ಪ್ರಾರಂಭಗೊಳ್ಳುತ್ತಿದ್ದಂತೆ ದೀಪೋತ್ಸವದ ಸುತ್ತ ನೆರೆದಿದ್ದ ಜನರು ಹಾಡುಗಳನ್ನು ಹಾಡಲು ಪ್ರಾರಂಭಿಸುತ್ತಾರೆ.
ಹಿಂದೂ ಧರ್ಮಗ್ರಂಥಗಳ ಪ್ರಕಾರ
ಹಿಂದೂ ಧರ್ಮಗ್ರಂಥಗಳ ಪ್ರಕಾರ ಹಿರಣ್ಯಕಶಿಪು ರಾಕ್ಷಸರಾಜನಾಗಿದ್ದು ಬ್ರಹ್ಮನನ್ನು ಮೆಚ್ಚಿಸಿ ವರವನ್ನು ಪಡೆದುಕೊಂಡ ಅಸುರನಾಗಿದ್ದ. ಜನರು ತನ್ನನ್ನು ಪೂಜಿಸಬೇಕು ಮತ್ತು ತನ್ನ ಸಹೋದರ ಹಿರಣ್ಯಾಕ್ಷನ ಅಂತ್ಯಕ್ಕೆ ಕಾರಣನಾದ ವಿಷ್ಣುವನ್ನು ಸಂಹರಿಸಬೇಕೆಂಬ ಹೆಬ್ಬಯಕೆಯನ್ನು ಹಿರಣ್ಯಕಶಿಪು ಹೊಂದಿದ್ದ.
ಪ್ರಹ್ಲಾದನ ಮೇಲೆ ಸೇಡು
ಹಿರಣ್ಯಕಶಿಪುವಿಗೆ ಹೆದರಿ ಆತನ ಆಳ್ವಿಕೆಯಲ್ಲಿದ್ದ ಜನರು ಅವನನ್ನು ಪೂಜಿಸಲು ಆರಂಭಿಸುತ್ತಾರೆ. ಆದರೆ ಹಿರಣ್ಯಕಶಿಪುವಿನ ಮಗನಾದ ಪ್ರಹ್ಲಾದ ನಾರಾಯಣ ಭಕ್ತನಾಗಿರುತ್ತಾನೆ. ವಿಷ್ಣುವಿನ ಅಪರಾವತಾರವಾದ ನಾರಾಯಣನ ಭಕ್ತನಾಗಿದ್ದ ಪ್ರಹ್ಲಾದನನ್ನು ಕೊಲ್ಲಲು ಹಿರಣ್ಯಕಶಿಪು ಹಲವು ಸಲ ಪ್ರಯತ್ನಪಡುತ್ತಾನೆ ಆದರೆ ತನ್ನ ಭಕ್ತನಿಗೆ ಕೂದಲೆಳೆಯ ಅಪಾಯವೂ ತಗುಲದಂತೆ ಶ್ರೀಮನ್ನಾರಾಯಣನು ಪ್ರಹ್ಲಾದನನ್ನು ಕಾಪಾಡುತ್ತಾನೆ.
ಆದರೆ ಎಷ್ಟುಬಾರಿ ಸಾಯಿಸಲು ಪ್ರಯತ್ನಿಸಿದರೂ, ಮರಣ ಹೊಂದದ ಪ್ರಹ್ಲಾದನನ್ನು ಕೊಲ್ಲಿಸುವುದಕ್ಕಾಗಿ ಹಿರಣ್ಯಕಶಿಪು ತನ್ನ ಸಹೋದರಿ ಹೋಲಿಕಾಳ ನೆರವನ್ನು ಪಡೆಯುತ್ತಾನೆ. ಹೋಲಿಕಾ ಬೆಂಕಿಯಲ್ಲಿ ಧಹಿಸದೇ ಇರುವ ವರವನ್ನು ಪಡೆದುಕೊಂಡಿರುತ್ತಾಳೆ. ಉಪಾಯದಿಂದ ತನ್ನ ಸೋದರಳಿಯ ಪ್ರಹ್ಲಾದನನ್ನು ಚಿತೆಯ ಮೇಲೆ ತನ್ನೊಂದಿಗೆ ಕುಳಿತುಕೊಳ್ಳುವಂತೆ ಹೋಲಿಕಾ ಮಾಡುತ್ತಾಳೆ. ಪ್ರಹ್ಲಾದನಿಗೆ ಈ ಷಡ್ಯಂತ್ರದ ಅರಿವಾಗುತ್ತದೆ ಆದರೆ ದೃಢಚಿತ್ತದಿಂದ ಹೆದರದೇ ಶ್ರೀಮನ್ನಾರಾಯಣನ ನಾಮಸ್ಮರಣೆಯನ್ನು ಮಾಡುತ್ತಾನೆ.
ಚಿತೆಗೆ ಬೆಂಕಿಯನ್ನು ನೀಡಿದೊಡನೆ ಅದು ಉರಿಯಲು ಆರಂಭವಾಗುತ್ತದೆ. ಬೆಂಕಿಯಲ್ಲಿ ಸುಡದೇ ಇರುವ ಹೋಲಿಕಾ ತಾನು ಪಡೆದುಕೊಂಡ ವರದಿಂದಲೇ ಸಾವನ್ನು ಹೊಂದುತ್ತಾಳೆ. ಒಬ್ಬ ವ್ಯಕ್ತಿಯು ಬೆಂಕಿಯನ್ನು ಪ್ರವೇಶಿಸಿದಾಗ ಮಾತ್ರವೇ ತನ್ನ ವರ ಫಲಿಸುವುದು ಎಂಬುದನ್ನು ಆಕೆ ಮರೆತಿರುತ್ತಾಳೆ. ನಂತರ ನರಸಿಂಹನ ರೂಪವನ್ನು ತಾಳಿ ಹಿರಣ್ಯಕಶಿಪುವನ್ನು ವಿಷ್ಣುವು ಸಂಹರಿಸುತ್ತಾನೆ. ಬೆಂಕಿಯಲ್ಲಿ ಹೋಲಿಕಾ ಧಹಿಸಿದ ನಂತರ ಈ ಹಬ್ಬಕ್ಕೆ ಹೋಳಿ ಹೆಸರನ್ನು ಇಡಲಾಯಿತು ಎಂಬುದು ಪ್ರತೀತಿಯಲ್ಲಿದ್ದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಎಂಬ ಅಚರಣೆಯನ್ನು ಹೋಳಿ ಇಲ್ಲಿ ಪ್ರತನಿಧಿಸುತ್ತದೆ.
ಕಾಮದೇವ ಮತ್ತು ಶಿವ ದೇವರು
ಪ್ರೇಮದ ಅಧಿದೇವತೆ ಎಂದೇ ಖ್ಯಾತಿವೆತ್ತಿರುವ ಕಾಮದೇವನೂ ಕೂಡ ಹೋಳಿ ಹಬ್ಬಕ್ಕೆ ಪುರಾಣ ಹಿನ್ನಲೆಯನ್ನು ಒದಗಿಸಿದ್ದಾನೆ. ಪತ್ನಿ ದಾಕ್ಷಾಯಿಣಿಯ ಮರಣದ ನಂತರ ಶಿವನು ದೀರ್ಘ ತಪಸ್ಸನ್ನು ಆಚರಿಸುತ್ತಾನೆ. ಆದರೆ ಶಿವನನ್ನೇ ತನ್ನ ಪತಿಯಾಗಿ ಸ್ವೀಕರಿಸಬೇಕೆಂಬ ಇಚ್ಛೆಯನ್ನು ಹೊಂದಿ ಮರುಜನ್ಮವನ್ನು ಪಡೆದಿದ್ದ ದಾಕ್ಷಾಯಿಣಿಯು ಪಾರ್ವತಿಯ ರೂಪದಲ್ಲಿ ಘೋರ ತಪಸ್ಸನ್ನು ಮಾಡುತ್ತಿರುತ್ತಾಳೆ.
ಶಿವನಿಗೆ ಇದರ ಅರಿವಿರುವುದಿಲ್ಲ ಏಕೆಂದರೆ ಆತ ಘೋರ ತಪ್ಪಸ್ಸಿನಲ್ಲಿರುತ್ತಾನೆ. ಇದನ್ನರಿತ ಬ್ರಹ್ಮನು ಶಿವನ ತಪೋಭಂಗವನ್ನು ಮಾಡಲು ಕಾಮದೇವನನ್ನು ಕಳುಹಿಸುವ ಯೋಜನೆಯನ್ನು ಸಿದ್ಧಪಡಿಸುತ್ತಾನೆ. ಕಾಮದೇವನು ದಕ್ಷಿಣ ತಂಗಾಳಿಯಲ್ಲಿ ನಂದಿನಿಯ ಮೂಲಕ ಹಾದು ಹೋಗಿ ಶಿವನ ನಿವಾಸವನ್ನು ಪ್ರವೇಶಿಸುತ್ತಾನೆ. ಹೂಗಳ ಬಾಣವನ್ನು ಧ್ಯಾನಸ್ಥಿತಿಯಲ್ಲಿರುವ ಶಿವನ ಮೇಲೆ ಮದನನು ಹೂಡುತ್ತಾನೆ. ಇದರಿಂದ ತಪೋಭಂಗಗೊಂಡ ಶಿವನು ಕ್ರೋಧನಾಗಿ ಮೂರನೆಯ ಕಣ್ಣಿನಿಂದ ಕಾಮದೇವನನ್ನು ಸುಟ್ಟು ಭಸ್ಮ ಮಾಡುತ್ತಾನೆ. ಕಾಮದೇವನನ್ನು ಶಿವನು ಹೋಳಿಯಂದೇ ಭಸ್ಮ ಮಾಡಿರುವುದಾಗಿ ಪ್ರತೀತಿ ಇದ್ದು ಜನರು ಕಾಮದೇವನ ದೇಹತ್ಯಾಗವನ್ನು ಕೊಂಡಾಡುತ್ತಾ ಹೋಳಿ ಹಬ್ಬವನ್ನು ಆಚರಿಸುತ್ತಾರೆ.



Click it and Unblock the Notifications











