Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
ಮುಂದಿನ ತಿಂಗಳಾದ ಏಪ್ರಿಲ್‌ನಲ್ಲಿ ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಈ ರೀತಿಯ ಸೂರ್ಯಗ್ರಹಣ 53 ವರ್ಷದ ಬಳಿಕ ಸಂಭವಿಸುತ್ತಿದೆ. ಹೀಗಾಗಿ ಇದೊಂದು ಅಪರೂಪದ ವಿಧ್ಯಮಾನವಾಗಿದೆ. ಇತ್ತ ಮಾರ್ಚ್ 25ರಂದು ಚಂದ್ರಗ್ರಹಣ ಸಹ ಸಂಭವಿಸಿತ್ತು. ಆದರೆ ಭಾರತದಲ್ಲಿ ಗೋಚರವಾಗಿರಲಿಲ್ಲ.
ಇನ್ನು ಈ ಸೂರ್ಯ ಗ್ರಹಣ ಸಹ ಭಾರತದಲ್ಲಿ ಗೋಚರವಾಗುತ್ತಿಲ್ಲ. ಬದಲಿಗೆ ಯೂರೋಪಿಯನ್ ರಾಷ್ಟ್ರಗಳಲ್ಲಿ ಗೋಚರವಾಗಿತ್ತಿದೆ. ಆದರೆ ಅದರ ಪರಿಣಾಮವು ಇಡೀ ಭೂ ಮಂಡಲದ ಮೇಲೆ ಇರಲಿದೆ.

ಏಪ್ರಿಲ್ 09ರಂದು ಸೂರ್ಯಗ್ರಹಣ ಸಂಭವಿಸುತ್ತಿದ್ದು, ಸೂರ್ಯಗ್ರಹಣ ಎಂದಾಗ ನಮ್ಮಲ್ಲಿ ಹಲವಾರು ನಂಬಿಕೆಗಳು ಎದುರಾಗುತ್ತವೆ. ಆ ನಂಬಿಕೆಗಳನ್ನು ಕೆಲವರು ನಂಬಿದರೆ ಇನ್ನು ಕೆಲವರಿಗೆ ಅದು ಮೂಢನಂಬಿಕೆ ಆಗಬಹುದು, ನಂಬಿಕೆಗಳು ಅವರವರ ಅನುಭವ ಹಾಗೂ ಆಲೋಚನೆಗೆ ಬಿಟ್ಟದ್ದು.
ಇನ್ನು ಸೂರ್ಯಗ್ರಹಣದ ವೇಳೆ ಹಲವು ಕಾರ್ಯಗಳು ಹಿಂದೂ ಸಂಪ್ರದಾಯದಲ್ಲಿ ನಿಷಿದ್ಧ, ಅದರಲ್ಲೂ ಈ ಗ್ರಹಣ ಕಾಲದಲ್ಲಿ ಊಟ, ಉಪಹಾರ ಸೇವನೆಯಂತು ಮಾಡುವಂತೆಯೇ ಇಲ್ಲ. ಹಾಗಾದರೆ ಗ್ರಹಣ ಕಾಲದಲ್ಲಿ ಊಟ ಮಾಡಬಾರದು ಎಂದು ಹಿರಿಯರು ಹೇಳುವುದೇಕೆ? ಅದರ ಹಿಂದಿರುವ ಕಾರಣವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗ್ರಹಣದ ಸಮಯದಲ್ಲಿ ಆಹಾರದಿಂದ ದೂರವಿರುವುದು ಒಳ್ಳೆಯದು, ಏಕೆಂದರೆ ವೈಜ್ಞಾನಿಕವಾಗಿ ಸೂರ್ಯನ ಬೆಳಕಿನ ಅನುಪಸ್ಥಿತಿಯಲ್ಲಿ ಬ್ಯಾಕ್ಟೀರಿಯಾಗಳು ಸಕ್ರಿಯವಾಗಬಹುದು, ಇದು ಆಹಾರದ ಮೇಲೆ ದುಷ್ಪರಿಣಾಮ ಬೀರಬಹುದು ಮತ್ತು ನಿಮ್ಮ ಆರೋಗ್ಯವನ್ನು ಹಾನಿಗೊಳಿಸಬಹುದು ಎನ್ನುತ್ತಾರೆ ತಜ್ಞರು. ಗ್ರಹಣದ ಮೊದಲು ಮತ್ತು ನಂತರ ಬೇಯಿಸಿದ ಆಹಾರಗಳಲ್ಲಿ ಸಹ ರಾಸಾಯನಿಕ ಬದಲಾವಣೆ ಅಗುವ ಸಾಧ್ಯತೆ ಇದೆ. ಹಾಗಾಗಿ ಗ್ರಹಣದ ಸಮಯದಲ್ಲಿ ಅಡುಗೆ ಮಾಡುವುದನ್ನು ತಪ್ಪಿಸುವುದು ಉತ್ತಮ.
ಗ್ರಹಣದ ಸಮಯದಲ್ಲಿ ಮಕ್ಕಳು, ವೃದ್ಧರು, ಅಸ್ವಸ್ಥ ರೋಗಿಗಳು ಮತ್ತು ಗರ್ಭಿಣಿಯರು ಹೇಗಿರಬೇಕು ಎಂಬ ಗೊಂದಲ ಕಾಡುವುದು ಸಹಜ. ಇವರೆಲ್ಲಾ ಗ್ರಹಣದ ಸಮಯದಲ್ಲಿ ಸಾತ್ವಿಕ ಆಹಾರಗಳನ್ನು ಸೇವಿಸಬಹುದು. ಗ್ರಹಣದ ಸಮಯದಲ್ಲಿ ನೀರು ಕುಡಿಯುವುದನ್ನು ಸಹ ತಪ್ಪಿಸಲಾಗುತ್ತದೆ. ಹಾಗೂ ನೀವು ನೀರನ್ನು ಸೇವಿಸಲು ಬಯಸಿದರೆ ಗ್ರಹಣ ಪ್ರಾರಂಭವಾಗುವ ಮೊದಲು ತುಳಸಿ ಎಲೆಗಳನ್ನು ಸೇರಿಸಿ ಕುಡಿಯಬಹುದು.
ಧರ್ಮಗ್ರಂಥಗಳ ಪ್ರಕಾರ
ಗ್ರಹಣವು ದುರದೃಷ್ಟಕರ ಮತ್ತು ಅನೇಕ ರೋಗಗಳಿಗೆ ಕಾರಣವಾಗುವುದರಿಂದ ಆಹಾರ ಸೇವಿಸುವುದನ್ನು ತಪ್ಪಿಸಬೇಕು ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಪವಿತ್ರ ಸ್ಕಂದ ಪುರಾಣದಲ್ಲಿ, ಈ ಅವಧಿಯಲ್ಲಿ ಆಹಾರವನ್ನು ನೀಡುವುದು/ದಾನ ಮಾಡುವುದು ಸಹ ಅಶುಭ ಎಂಬ ನಂಬಿಕೆ ಇದೆ. ಈ ವಿಕಿರಣಗಳು ಎಷ್ಟು ಶಕ್ತಿಯುತವಾಗಿವೆ ಎಂದರೆ ಮುಂದಿನ ಜನ್ಮದಲ್ಲೂ ಅವು ಪರಿಣಾಮಗಳನ್ನು ಬೀರಬಹುದು.
ಸೂರ್ಯಗ್ರಹಣದ ಕಿರಣಗಳು ಬೇಯಿಸಿದ ಆಹಾರದ ಮೇಲೆ ಪರಿಣಾಮ ಬೀರುವುದರಿಂದ ಇಂಥಾ ಆಹಾರವನ್ನು ಸೇವಿಸಿದಾಗ ಅಜೀರ್ಣ ಮತ್ತು ಹೊಟ್ಟೆಯ ತೊಂದರೆ ಉಂಟಾಗುತ್ತದೆ. ಕೆಲವು ಸಂಶೋಧಕರು ಗ್ರಹಣದ ಸಮಯದಲ್ಲಿ ತಿನ್ನುವುದು ಅಜೀರ್ಣಕ್ಕೆ ಕಾರಣವಾಗುತ್ತದೆ ಎಂಬ ಅಂಶವನ್ನು ಒಪ್ಪಿಕೊಂಡಿದ್ದಾರೆ.
ಇದಿಷ್ಟೇ ಅಲ್ಲ ಗ್ರಹಣ ಕಾಲದಲ್ಲಿ ಮನೆಯಿಂದಲೂ ಹೊರಬಾರದು ಎನ್ನುತ್ತಾರೆ, ಇದಕ್ಕೂ ಹಲವು ವೈಜ್ಞಾನಿಕ ಕಾರಣಗಳಿವೆ. ಗ್ರಹಣ ಕಾಲದಲ್ಲಿ ಸೂರ್ಯನಿಂದ ಹೊರಡುವ ಕಿರಣಗಳು ಅತ್ಯಂತ ವಿಕಿರಿಣಗಳ ಹೊಂದಿರುತ್ತವೆ. ಇದರಿಂದ ನಿಮ್ಮ ಕಣ್ಣು ಮತ್ತು ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ಗ್ರಹಣ ಸಮಯದಲ್ಲೇ ಕಣ್ಣಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಅಧಿಕವಾಗಿರುತ್ತದೆ.
ಗ್ರಹಣದಲ್ಲಿ ದೇವಾಲಯಗಳನ್ನು ಮುಚ್ಚಲಾಗಿರುತ್ತದೆ. ಗ್ರಹಣ ಆರಂಭಕ್ಕೂ ಮುನ್ನ ಪೂಜೆ ಸಲ್ಲಿಸಿ ಬಾಗಿಲು ಹಾಕಿದರೆ ಗ್ರಹಣ ಮುಗಿದ ಬಳಿಕ ಇಡೀ ದೇವಾಲಯ ಸ್ವಚ್ಛಗೊಳಿಸಿದ ಬಳಿಕವೇ ಸಾರ್ವಜನಿಕರಿಗೆ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿತ್ತದೆ.



Click it and Unblock the Notifications