ತಂಗಿ ದುಷ್ಯಲೆಯ ಗಂಡನನ್ನು ಅರ್ಜುನ ಕೊಂದಿದ್ಯಾಕೆ ಗೊತ್ತಾ?

ಮಹಾಭಾರತ ಕಥೆಗಳನ್ನು ನಾವೆಲ್ಲರೂ ಓದಿ ತಿಳಿದುಕೊಂಡಿದ್ದೇವೆ. ಮಹಾಭಾರತದಲ್ಲಿ ಬರುವ ಪ್ರತಿಯೊಂದು ಪಾತ್ರಗಳಿಂದ ನಾವು ಅನೇಕ ಜೀವನ ಪಾಠಗಳನ್ನು ಕಲಿಯಬಹುದು. ನಮಗೆಲ್ಲಾ ಕುರುಕ್ಷೇತ್ರ ಯುದ್ಧ, ದ್ರೌಪತಿಯ ವಸ್ತ್ರಾಭರಣ ಕಥೆಗಳ ಬಗ್ಗೆ ಗೊತ್ತಿದೆ. ಆದ್ರೆ ಪಾಂಡವರು ತಮ್ಮ ಭಾವನಾದ ಯಜದ್ರತನ ತಲೆಯನ್ನು ಬೋಳು ಮಾಡಿರುವ ಕಥೆಯನ್ನು ಕೇಳಿದ್ದೀರಾ? ಅಷ್ಟಕ್ಕು ಜಯದತ್ರನಿಗೆ ಈ ಶಿಕ್ಷೆ ಕೊಟ್ಟಿದ್ದು ಯಾಕೆ? ಭಾವನನ್ನು ಕೊಲ್ಲೋದಕ್ಕೆ ಅರ್ಜುನ ಮುಂದಾಗಿದ್ಯಾಕೆ ಅನ್ನೋದನ್ನು ತಿಳಿಯೋಣ.

ಜಯದ್ರತ ಯಾರು ಗೊತ್ತಾ?
ಐದು ಜನ ಪಾಂಡವರು ಹಾಗೂ ನೂರು ಜನ ಕೌರವರ ಏಕೈಕ ಹಾಗೂ ಮುದ್ದಿನ ತಂಗಿಯಾದ ದುಷ್ಯಲೆಯ ಗಂಡನೇ ಜಯದ್ರತ. ಈತನ ಸ್ವಭಾವ ಒಳ್ಳೆಯದಿರಲಿಲ್ಲ. ಒಂದು ಸಲ ಇದ್ದ ಹಾಗೆ ಮತ್ತೊಂದು ಸಲ ಇರಲಿಲ್ಲ. ಒಂದು ರೀತಿ ಸ್ಪಿಲ್ಟ್‌ ಪರ್ಸನಾಲಿಟಿಯನ್ನು ಹೊಂದಿದ್ದನು. ಅಷ್ಟೇ ಅಲ್ಲದೇ ಇವನಿಗೆ ವಿಪರೀತ ಹುಡುಗಿಯರ ಹುಚ್ಚು. ಈ ಹುಚ್ಚೇ ಕೊನೆಗೆ ಆತನಿಗೆ ಸಾವನ್ನು ತಂದೊಡ್ಡುತ್ತದೆ.

Why did the Pandavas Shave the Head of their Brother in Law Jayadratha in Kannada

ಪಾಂಡವರು ಹನ್ನೆರಡು ವರ್ಷ ವನವಾಸ ಹಾಗೂ ಒಂದು ವರ್ಷ ಅಜ್ಞಾತ ವಾಸಕ್ಕಾಗಿ ಕಾಡಿಗೆ ಹೋಗಿದ್ರು. ಈ ವೇಳೆ ಜಯದ್ರತ ಶಲ್ವ ದೇಶಕ್ಕೆ ಹೋಗಬೇಕಾಗಿ ಬರುತ್ತದೆ. ಇಂತಹ ಸಂದರ್ಭದಲ್ಲಿ ಅವನು ಅದೇ ದಾರಿಯಲ್ಲಿ ಹೋಗುವ ಸಂದರ್ಭದಲ್ಲಿ ದ್ರೌಪತಿಯನ್ನು ನೋಡಿತ್ತಾನೆ. ಆಕೆ ಆಶ್ರಮದ ಪಕ್ಕದಲ್ಲಿ ಕುಳಿತಿರುತ್ತಾಳೆ. ದ್ರೌಪತಿಯನ್ನು ಕಂಡ ಕೂಡಲೇ ಜಯದ್ರತನಿಗೆ ಆಕೆಯ ಮೇಲೆ ಮನಸಾಗುತ್ತದೆ. ಆಕೆಯ ಸೌಂದರ್ಯವನ್ನು ನೋಡಿ ಮನಸೋತು ಹೋಗುತ್ತಾನೆ. ಆಕೆಯನ್ನೇ ಮದುವೆಯಾಗಬೇಕು ಅನ್ನೋ ಹುಚ್ಚು ಆಸೆ ಆತನ ಮನದಲ್ಲಿ ಹುಟ್ಟಿಕೊಳ್ಳುತ್ತದೆ.

ದ್ರೌಪತಿಯ ಬಗ್ಗೆ ಮಾಹಿತಿ ಕಲೆ ಹಾಕಿದ ಜಯದ್ರತ
ಶಲ್ಯ ದೇಶಕ್ಕೆಂದು ಹೊರಟಿದ್ದ ಜಯದ್ರತ ತನ್ನ ಸೈನ್ಯವನ್ನು ಅಲ್ಲೆ ತಂಗುವಂತೆ ಸೂಚನೆ ನೀಡುತ್ತಾನೆ. ನಂತರ ತನ್ನ ಸ್ನೇಹಿತನಾದ ಕೋಟಿಕಷ್ಯನನ್ನು ಕರೆದು ಆಶ್ರಮ ಬಳಿ ಇರುವ ಹುಡುಗಿಯ ಬಗ್ಗೆ ಮಾಹಿತಿ ಪಡೆದುಕೊಂಡು ಬರುವಂತೆ ಸೂಚಿಸುತ್ತಾನೆ. ಜಯದ್ರತನ ಮಾತಿನಂತೆ ಹುಡುಗಿಯ ಹತ್ತಿರ ಬರುವ ಕೋಟಿಕಷ್ಯ ಆಕೆಯನ್ನು ಮಾತನಾಡಿಸಲು ಮುಂದಾಗುತ್ತಾನೆ.

ದ್ರೌಪತಿ ಬಳಿ ಬಂದ ಕೋಟಿಕಷ್ಯನು ಯಾರು ನೀನು? ದೇವತೆಯೇ ಅಥವಾ ಅಪ್ಸರೆಯೇ? ಎಂದು ಪ್ರಶ್ನಿಸುತ್ತಾನೆ. ಆಗ ದ್ರೌಪತಿ ಉತ್ತರಿಸುತ್ತಾ, ನನ್ನ ಹೆಸರು ದ್ರೌಪತಿ. ನಾನು ಪಾಂಡವರ ಪತ್ನಿ ಎಂದು ಹೇಳುತ್ತಾಳೆ. ಅವರು ಈಗಾಗಲೇ ಹೊರಗಡೆ ಹೋಗಿದ್ದು, ನಾನು ಅವರ ಬರುವಿಕೆಗಾಗಿ ಕಾಯುತ್ತಿದ್ದೇನೆ ಎಂದು ಹೇಳುತ್ತಾಳೆ. ಈ ಸಂದರ್ಭದಲ್ಲಿ ಆಕೆಯು ಪಾಂಡವರು ಬರುವಾಗ ತಡವಾಗಬಹುದು. ಅಲ್ಲಿಯವರೆಗೂ ನೀವು ಇಲ್ಲೇ ಉಳಿದುಕೊಂಡು ನನ್ನ ಸತ್ಕಾರಗಳನ್ನು ಸ್ವೀಕರಿಸಿ ಎಂದು ಕೋಟಿಕಷ್ಯನಲ್ಲಿ ಹೇಳುತ್ತಾಳೆ.

ದ್ರೌಪತಿಯನ್ನು ಅಪಹರಿಸಿದ ಜಯದ್ರತ
ದ್ರೌಪತಿಯ ಬಳಿ ಮಾತನಾಡಿದ ನಂತರ ಕೋಟಿಕಷ್ಯ ಎಲ್ಲಾ ವಿಚಾರವನ್ನು ಜಯದ್ರತನಿಗೆ ಹೇಳುತ್ತಾನೆ. ನಂತರ ಆಶ್ರಮದ ಬಳಿ ಬಂದ ಜಯದ್ರನು ದ್ರೌಪತಿಯನ್ನು ಉದ್ದೇಶಿಸಿ ಮಾತನಾಡುತ್ತಾನೆ, ನೀನು ನಿನ್ನ ಗಂಡಂದಿರಿಂದ ಯಾವ ಸುಖವನ್ನು ಪಡೆದಿದ್ದೀಯಾ? ಅವರಿಂದಾಗಿ ನೀವು ಕಾಡಿನಿಂದ ಕಾಡಿಗೆ ಅಲೆದಾಡುತ್ತಿದ್ದೀಯಾ. ನನ್ನ ಜೊತೆಗೆ ಬಾ. ನನ್ನನ್ನು ಮದುವೆಯಾಗು ನೀನು ಸುಖವಾಗಿರುತ್ತೀಯಾ ಎಂದು ಹೇಳುತ್ತಾನೆ.

ಜಯದ್ರತನ ಮಾತುಗಳು ದ್ರೌಪತಿಗೆ ಸ್ವಲ್ಪವೂ ಇಷ್ಟವಾಗೋದಿಲ್ಲ, ಹಾಗೂ ಆಕೆ ಅದನ್ನು ತಿರಸ್ಕರಿಸುತ್ತಾಳೆ. ಆದರೆ ಜಯದ್ರತನು ದ್ರೌಪತಿಯ ಕೈ ಹಿಡಿದು ಆತನ ಸಾರೋಟಿನ ಹತ್ತಿರ ಎಳೆದುಕೊಂಡು ಹೋಗುತ್ತಾನೆ. ಅಷ್ಟೊತ್ತಿಗಾಗಲೇ ದೌಮ್ಯ ಋಷಿಯು ಆಕೆಯನ್ನು ಕಾಪಾಡೋದಕ್ಕೆ ಬರುತ್ತಾರೆ. ಆದರೆ ಜಯದ್ರತ ಋಷಿಗಳನ್ನು ಒದ್ದು ದ್ರೌಪತಿಯನ್ನು ಎಳೆದೊಯ್ಯುತ್ತಾನೆ.

ಜಯದ್ರತನ ತಲೆ ಬೋಳಿಸಿದ ಪಾಂಡವರು
ಪಾಂಡವರು ಆಶ್ರಮಕ್ಕೆ ವಾಪಾಸ್ಸಾದಾಗ ಅಲ್ಲಿ ದ್ರೌಪತಿ ಇರಲಿಲ್ಲ. ದೌಮ್ಯ ಮುನಿಗಳು ಆದ ಘಟನೆಯನ್ನು ವಿವರಿಸುತ್ತಾರೆ. ಅಲ್ಲಿಂದ ಜಯದ್ರತನನ್ನು ಬೆನ್ನಟ್ಟಿದ ಪಾಂಡವರು ಆತನ ಹೋದ ದಾರಿಯಲ್ಲೇ ಸಾಗುತ್ತಾರೆ. ಕೊಂಚ ದೂರ ಹೋಗುತ್ತಿದ್ದಂತೆ ಪಾಂಡವರನ್ನು ಗಮನಿಸಿದ ಜಯದ್ರತ ದ್ರೌಪತಿಯನ್ನು ಬಿಟ್ಟು ಅಲ್ಲಿಂದ ಓಡಿಹೋಗುತ್ತಾನೆ. ಆದರೆ ಪಾಂಡವರು ಆತನನ್ನು ಸೆರೆ ಹಿಡಿಯುತ್ತಾರೆ.

ಅರ್ಜುನ ಹಾಗೂ ಭೀಮನು ತನ್ನ ಪತ್ನಿಯ ಮೇಲೆ ಆಸೆ ಪಟ್ಟ ಜಯದ್ರತನನ್ನು ಕೊಲ್ಲೋದಕ್ಕೆ ಮುಂದಾಗುತ್ತಾರೆ. ಆದರೆ ಯುಧಿಷ್ಠಿರನು ತಂಗಿ ದುಷ್ಯಲೆಯ ಗಂಡನನ್ನು ಕೊಲ್ಲೋದು ಸರಿಯಲ್ಲ. ಇದರ ಬದಲಾಗಿ ಆತನಿಗೆ ಬೇರೆ ಶಿಕ್ಷೆಯನ್ನುನೀಡುವಂತೆ ಹೇಳುತ್ತಾನೆ. ಆಗ ದ್ರೌಪತಿಯು ಜಯಪ್ರದನ ತಲೆಯನ್ನು ಬೋಳಿಸುವಂತೆ ಕೇಳಿಕೊಳ್ಳುತ್ತಾಳೆ. ಹಾಗೂ ಐದು ಜಾಗದಲ್ಲಿ ಆತನ ಕೂದಲನ್ನು ಹಾಗೇ ಬಿಡಿ. ಇದರಿಂದ ಆತ ಬೇರೆಯವರಿಗೆ ಮುಖ ತೋರಿಸೋದಕ್ಕೆ ಸಾಧ್ಯವಾಗಬಾರದೆಂದು ಹೇಳುತ್ತಾಳೆ.

ಜಯದ್ರತನ ಶಿರಚ್ಛೇಧ ಮಾಡಿದ ಅರ್ಜುನ
ದ್ರೌಪತಿಯ ಮಾತಿನಂತೆ ಅರ್ಜುನನು ಜಯದ್ರತನ ತಲೆ ಬೋಲಿಸುತ್ತಾನೆ. ಇದರಿಂದ ಅವಮಾನಿತನಾದ ಜಯದ್ರತನು ಶಿವನನ್ನು ಕುರಿತು ಘೋರ ತಪಸ್ಸನ್ನು ಮಾಡುತ್ತಾನೆ. ಕೊನೆಗೆ ಶಿವನನ್ನು ಒಲಿಸಿಕೊಂಡು ಆತನಿಂದ ವರ ಪಡೆದುಕೊಳ್ಳುತ್ತಾನೆ. ಆದರೆ ವಿಪರ್ಯಾಸ ಅಂದ್ರೆ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನೇ ಆತನ ಶಿರಚ್ಛೇಧ ಮಾಡುತ್ತಾನೆ. ಕೊನೆಗೂ ಪಾಂಡವರ ಕೈಯಿಂದಲೇ ಜಯದ್ರತನ ಸಾವಾಗುತ್ತದೆ.

English summary

Why did the Pandavas Shave the Head of their Brother in Law Jayadratha in Kannada

What is the reason for Pandavas Shave the Head of their Brother in Law Jayadratha. Read More.
Story first published: Wednesday, April 26, 2023, 11:46 [IST]
X
Desktop Bottom Promotion