Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ನಿಮಗೆ ಬಿಪಿಎಲ್ ಕಾರ್ಡ್ ಇದೆಯೇ? ಕ್ಯಾನ್ಸಲ್ ಆಗಿದೆಯೇ ಎಂದು ಪರಿಶೀಲಿಸಿ
ನಿಮ್ಮದು ಬಿಪಿಎಲ್ ಕಾರ್ಡ್ ಇದೆಯೇ? ಹಾಗಾದರೆ ಇನ್ಮುಂದೆ ನಿಮಗೆ ಬಿಪಿಎಲ್ ಕಾರ್ಡ್ ಸೌಲಭ್ಯ ಸಿಗಲಿದೆಯೇ ಎಂಬುವುದರ ಬಗ್ಗೆ ಪರಿಶೀಲನೆ ಮಾಡುವುದು ಒಳ್ಳೆಯದು. ಏಕೆಂದರೆ ಸರ್ಕಾರ ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ ಎಪಿಲ್ ಕಾರ್ಡ್ ಮಾಡಿದೆ, ಈ ಮೂಲಕ ಬಿಪಿಎಲ್ ಸೌಲಭ್ಯ ಇನ್ಮುಂದೆ ಬಹುತೇಕರಿಗೆ ಪಡೆಯಲು ಸಾಧ್ಯವಿಲ್ಲ.

ಯಾರಿಗೆ ಬಿಪಿಎಲ್ ಕಾರ್ಡ್ ಇರಲ್ಲ
ಕುಟುಂಬದಲ್ಲಿ ಯಾರಾದರು ಸರ್ಕಾರಿ ಕೆಲಸದಲ್ಲಿದ್ದರೆ
ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ
ಕೃಷಿ ಭೂಮಿ 3 ಹೆಕ್ಟರ್ ಅಥವಾ ಹೆಚ್ಚಿದರೆ ಅವರಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ ಇರಲ್ಲ
ನಗರ ಪ್ರದೇಶದಲ್ಲಿ 1000ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಸ್ವಂತ ಮನೆ ಹೊಂದಿದ್ದರೆ ಈ ಸೌಲಭ್ಯವಿಲ್ಲ
ನಾಲ್ಕು ಚಕ್ರದ ವಾಹನ ಹೊಂದಿದ್ದರೆ ( ಯೆಲ್ಲೋ ಬೋರ್ಡ್ ವಾಹನಕ್ಕೆ ಇದು ಅನ್ವಯಿಸುವುದಿಲ್ಲ)
ಕುಟುಂಬದ ವಾರ್ಷಿಕ ಆದಾಯ 1. 20ಲಕ್ಷಕ್ಕಿಂತಲೂ ಅಧಿಕವಿದ್ದರೆ
ಇವರುಗಳು ಬಿಪಿಎಲ್ ಸೌಲಭ್ಯ ಪಡೆಯಲು ಅರ್ಹರಲ್ಲ.
ಇದೊಂದು ಒಳ್ಳೆ ನಿರ್ಧಾರ ಹೌದು
ಎಷ್ಟೋ ಜನರು ಬಡತನ ರೇಖೆಗಿಂತ ಕಡಿಮೆ ಇರುತ್ತಾರೆ, ಆದರೆ ಇನ್ನು ಕೆಲವರು ಬಡತನ ರೇಖೆಗಿಂತ ಮೇಲೆ ಇರುತ್ತಾರೆ, ಅವರು ಕೂಡ ಬಿಪಿಎಲ್ ಸೌಲಭ್ಯ ಪಡೆಯುತ್ತಿದ್ದಾರೆ. ಇನ್ಮುಂದೆ ಅಂಥವರಿಗೆ ಈ ಬಿಪಿಎಲ್ ಸೌಲಭ್ ಸಿಗಲ್ಲ, ಇದೊಂದು ಉತ್ತಮ ನಿರ್ಧಾರವಾಗಿದೆ.ಬಿಪಿಎಲ್ ಕಾರ್ಡ್ ಇರುವರಿಗೆ ಸರ್ಕಾರದಿಂದ ಉಚಿತ ಅಕ್ಕಿ ಸೌಲಭ್ಯ ದೊರೆಯುತ್ತಿದೆ, ಆಸ್ಪತ್ರೆಗಳಲ್ಲಿ ಸೌಲಭ್ಯ ದೊರೆಯುತ್ತಿದೆ, ಆದರೆ ಎಪಿಎಲ್ ಅರ್ಹರಾಗಿರುವ ಎಷ್ಟೋ ಜನ ಬಿಪಿಎಲ್ ಸೌಲಭ್ಯ ಪಡೆಯುತ್ತಿರುವುದರಿಂದ ಸರ್ಕಾರಕ್ಕೆ ತುಂಬಾ ಆರ್ಥಿಕ ಹೊಡೆತ ಉಂಟಾಗುತ್ತಿದೆ. ಈಗ ಆ ಹೊರೆ ಕಡಿಎಯಾಗಲಿದೆ, ಅರ್ಹರಿಗೆ ಸೌಲಭ್ಯ ಪಡೆಯಲು ಸಾಧ್ಯವಾಗುವುದು.
ಈಗ ಲಕ್ಷಾಂತರ ಮಂದಿಯ ಬಿಪಿಎಲ್ ಕ್ಯಾನ್ಸಲ್ ಆಗಿರುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಕಡಿಮೆಯಾಗುವುದು ಮಾತ್ರ ಅರ್ಹರಷ್ಟೇ ಈ ಕಾರ್ಡ್ ಸೌಲಭ್ಯ ಪಡೆಯುವಂತಾಗುವುದು.
ರೇಷನ್ ಅಕ್ಕಿ ಎಷ್ಟೋ ಜನರಿಗೆ ಹೊಟ್ಟೆ ತುಂಬಿಸುವ ಆಹಾರ, ಆದರೆ ಇನ್ನು ಕೆಲವರು ಉಚಿತ ಅಕ್ಕಿ ದೊರೆಯುತ್ತಿದೆ ಎಂದು ಖರೀದಿಸಿ ಮನೆಯಲ್ಲಿ ನಾಯಿ, ಕೋಳಿ, ದನಕ್ಕೆ ಆಹಾರ ನೀಡುತ್ತಿದ್ದಾರೆ. ರೇಷನ್ ಅಕ್ಕಿಯಿಂದಾಗಿ ಎಷ್ಟೋ ಕುಟುಂಬಗಳು ಹಸಿವಿನಿಂದ ಮಲಗುವುದು ತಪ್ಪುತ್ತಿದೆ. ದುಡಿಯಲು ಅಸಮರ್ಥವಾಗಿರುವವರಿಗೆ ಈ ರೇಷನ್ ಅಕ್ಕಿ ವರದಾನವಾಗಿದೆ. ಸರ್ಕಾರವು ಈಗ ಮಾಡಿರುವ ಕಾರ್ಯ ಒಳ್ಳೆಯದೇ, ಆದರೆ ಕೆಲವೊಂದು ಕುಟುಂಬಕ್ಕೆ ಇದರ ಅಗ್ಯತ ತುಂಬಾನೇ ಇರುತ್ತದೆ, ಅಂಥ ಕುಟುಂಬವನ್ನು ಗುರುತಿಸುವ ಪ್ರಯತ್ನ ಮಾಡಬೇಕಾಗುತ್ತದೆ, ಅವರಿಗೆ ಮತ್ತಷ್ಟು ಉಚಿತ ಸೌಲಭ್ಯ ನೀಡುವ ಕಾರ್ಯ ಮಾಡಬೇಕು. ಈಗ ಒಬ್ಬ ಸದಸ್ಯನಿಗೆ 5 ಕೆಜಿ ಅಕ್ಕಿ ನೀಡುತ್ತಿದೆ, ಕೆಲವರಿಗೆ ವಯಸ್ಸಾಗಿರುತ್ತದೆ, ದುಡಿದು ತಂದು ಹಾಕುವವರು ಇರಲ್ಲ, ಅಂಥ ಕುಟುಂಬ ಗುರುತಿಸಿ ಅವರಿಗೆ ಒಬ್ಬ ಸದಸ್ಯನಿಗೆ 10-12 ಕೆಜಿ ಅಕ್ಕಿ ಕೊಟ್ಟರೆ ಅವರ ಜೀವನ ಮತ್ತಷ್ಟು ಸುಲಭವಾಗುವುದು.
ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆದರೆ ಏನಾಗುತ್ತೆ?
ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆದರೆ ಅವರಿಗೆ ಎಪಿಎಲ್ ಕಾರ್ಡ್ ಸಿಗಲಿದೆ, ಎಪಿಎಲ್ ಕಾರ್ಡ್ ಇರುವವರಿಗೆ ಯಾವುದೇ ಬದಲಾವಣೆಯಾಗುವುದಿಲ್ಲ.
ಅನರ್ಹ ವ್ಯಕ್ತಿಗಳು ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆದರೆ ಏನಾಗುತ್ತೆ?
ನೀವು ಬಿಪಿಎಲ್ ಕಾರ್ಡ್‌ನ ಮಾನದಂಡದೊಳಗಡೆ ಇರದಿದ್ದರೆ ಬಿಪಿಎಲ್ ಸೌಲಭ್ಯ ಪಡೆಯುವಂತಿಲ್ಲ, ಒಂದು ವೇಳೆ ಪಡೆದರೆಪ್ರತಿ ಕೆಜಿಗೆ 33 ರುಪಾಯಿಯಂತೆ ದಂಡ ಕಟ್ಟಬೇಕಾಗುತ್ತದೆ. ದಂಡ ಪಾವತಿ ಮಾಡಲು ನಿರಾಕರಿಸಿದವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



Click it and Unblock the Notifications
