Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಘೋರಿ ಯಾರು? ಕುಂಭಮೇಳದಲ್ಲಿ ಇವರೇ ಪ್ರಮುಖ ಆಕರ್ಷಣೆ, ಏಕೆ?
ಅಘೋರಿಗಳನ್ನು ಕೆಲವರು ನೋಡಿರುತ್ತಾರೆ ಆದರೆ ಎಲ್ಲರಿಗೂ ಈ ಅಘೋರಿಗಳ ಬಗ್ಗೆ ಓದಿಯೋ ಅಥವಾ ಯಾರಾದರು ಹೇಳಿರುವುದನ್ನು ಕೇಳಿ ಗೊತ್ತಿರುತ್ತದೆ. ಅಘೋರಿಗಳು ಮನುಷ್ಯರೇ ಆದರು ಸಾಮಾನ್ಯ ಜನರಿಗೆ ಅವರನ್ನು ನೋಡುವಾಗ ಭಯ ಉಂಟಾಗುತ್ತೆ.
ಅವರನ್ನು ಕುತೂಹಲದಿಂದ ಕಣ್ಣುಗಳಿಂದ ನೋಡುತ್ತೇವೆ, ಅದಕ್ಕೆ ಕಾರಣವ ಅವರ ವೇಷ ಭೂಷಣ ಮಾತ್ರವಲ್ಲ ಅವರ ಆಚಾರಗಳು ಕೂಡ, ಯಾವುದೋ ಶಕ್ತಿ ಅವರನ್ನು ಆವರಿಸಿಕೊಂಡಿದೆ ಎಂದನಿಸುವುದು.

ಅಘೋರಿಗಳು ಹಿಮಾಲಯದಲ್ಲಿ ಕಂಡು ಬರುತ್ತಾರೆ, ಇನ್ನು ಕೆಲವೊಂದು ಧಾರ್ಮಿಕ ಆಚರಣೆಗಳಲ್ಲಿ ಕಂಡು ಬರುತ್ತಾರೆ, ಅದರಲ್ಲಿಯೂ ಕುಂಭಮೇಳ ನಡೆಯುವಾಗ ಸಾಕಷ್ಟು ಸಂಖ್ಯೆಯಲ್ಲಿ ಅಘೋರಿಗಳು ಬರುತ್ತಾರೆ. ಯಾರು ಈ ಅಘೋರಿಗಳು, ಈ ಅಘೋರಿಗಳ ವಿಶೇಷತೆಯೇನು? ಎಂದು ನೋಡೋಣ ಬನ್ನಿ:
ಅಘೋರಿಗಳು ಎಂದರೇನು?
ಅಘೋರಿಗಳು ಶಿವ ಭಕ್ತರು, ಮೋಕ್ಷ ಪಡೆಯುವುದೇ ಅವರ ಪ್ರಮುಖ ಗುರಿಯಾಗಿರುತ್ತದೆ, ಅಘೋರಿ ಎಂಬು ಸಂಸ್ಕೃತ ಪದ, ಅಘೋರ ಎಂಬುವುದು ಭಯವಿಲ್ಲದವರು ಎಂದರ್ಥ, ಇವರಿಗೆ ಯಾವುದೇ ಭಯವಿರಲ್ಲ, ಇವರಿಗೆ ಯಾವುದೇ ಭಾವನಾತ್ಮಕ ಬಾಂಧವ್ಯ ಇರಲ್ಲ, ಸಮಾಜದ ಯಾವುದೇ ನಿಯಮಗಳು ಕಟ್ಟುಪಾಡುಗಳಿಲ್ಲ.
ಅಘೋರಿಗಳ ನಿಯಮಗಳು ತುಂಬಾನೇ ವಿಚಿತ್ರವಾಗಿರುತ್ತದೆ?
ಅಘೋರಿಗಳನ್ನು ನೋಡುವಾಗಲೇ ಅವರು ಅಘೋರಿಗಳು ಎಂದು ಗೊತ್ತಾಗುತ್ತದೆ. ಅಘೋರಿಗಳನ್ನು ನೋಡುವಾಗಲೇ ಅವರು ಅಘೋರಿಗಳು ಎಂದು ಗೊತ್ತಾಗುವುದು. ಅವರ ಮೈಪೂರ್ತಿ ಬೂದಿಯನ್ನು ಮೆತ್ತಿರುತ್ತಾರೆ. ಇವರು ವಾಮಾಚರ, ಮಂತ್ರಗಳನ್ನು ಅಭ್ಯಾಸ ಮಾಡುತ್ತಿರುತ್ತಾರೆ, ಅಲ್ಲದೆ ಇವರು ಶವ ಸಂಭೋಗ ಮಾಡುತ್ತಾರೆ, ಸತ್ತ ಮನುಷ್ಯ ಮಾಂಸವನ್ನು ಭಕ್ಷ್ಯ ಮಾಡುತ್ತಾರೆ, ಶವದ ಮೇಲೆ ಕುಳಿತು ಇವರು ಪೂಜೆಗಳನ್ನು ಮಾಡುತ್ತಾರೆ. ಅಘೋರಿಗಳಿಗೆ ಎಲ್ಲರನ್ನೂ ಒಂದೇ ರೀತಿ ನೋಡುತ್ತಾರೆ. ಇವರು ಗಾಂಜಾ ಸೇವಿಸುತ್ತಾರೆ.
ಅಘೋರಿಗಳು ಒಂದೇ ಜಾಗದಲ್ಲಿ ನೆಲೆ ನಿಲ್ಲುವುದಿಲ್ಲ
ಅಘೋರಿಗಳು ಯಾವುದೇ ಒಂದೇ ಸ್ಥಳದಲ್ಲಿ ನೆಲೆ ನಿಲ್ಲುವುದಿಲ್ಲ, ವಾರಾಣಸಿ, ಕಾಶಿ, ಹಿಮಾಲಯ ಈ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ, ಇವರು ಮದ್ಯ, ಮಾಂಸ, ಗಾಂಜಾ ಇವೆಲ್ಲವನ್ನೂ ಸೇವಿಸುತ್ತಾರೆ. ಇವರು ತಮ್ಮ ಜೊತೆ ಯಾವಾಗಲೂ ಮಾನವನ ತಲೆಬುರುಡೆಗಳನ್ನು ತಮ್ಮ ಜೊತೆ ಇಟ್ಟುಕೊಳ್ಳುತ್ತಾರೆ, ಅಲ್ಲದೆ ಮೈಗ ಬಟ್ಟೆ ಧರಿಸಿದೆ ಮೈಗೆ ಬೂದಿ ಮೆತ್ತಿ ಸುತ್ತಾಡುತ್ತಿರುತ್ತಾರೆ. ಕೆಲವರು ಖಾವಿ ವಸ್ತ್ರ ಧರಿಸಿರುತ್ತಾರೆ.
ಅಘೋರಿಗಳು ಸತ್ತಾಗ ಅವರನ್ನು ನಮ್ಮಂತೆ ಶವ ಸಂಸ್ಕಾರ ಮಾಡುವುದಿಲ್ಲ
ಅಘೋರಿಗಳು ಸತ್ತಾಗ ಅವರನ್ನು ನಮ್ಮಂತೆ ಹೂಳುವುದು ಅಥವಾ ಸುಡುವುದು ಮಾಡುವುದಿಲ್ಲ, ಅದರ ಬದಲಿಗೆ ಅವರ ಶವವನ್ನು ಗಂಗಾನದಿಯಲ್ಲಿ ತೇಲಿ ಬಿಡಲಾಗುವುದು. ಅಘೋರಿಗಳು ತಮ್ಮ ಸಾವನ್ನು ತಾವೇ ನಿಶ್ಚಯ ಮಾಡುತ್ತಾರೆ. ಇವರು ಸಾವಿನ ಸಮಯ ಸಮೀಪಿಸಿದಾಗ ಹಿಮಾಲಯದಲ್ಲಿ ಲೀನವಾಗುತ್ತಾರೆ ಎಂದು ಹೇಳಲಾಗುವುದು.
ಕುಂಭ ಮೇಳದಲ್ಲಿ ಗಮನ ಸೆಳೆಯುವ ಅಘೋರಿಗಳು
ಕುಂಭ ಮೇಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಘೋರಿಗಳು ಬರ್ತಾರೆ, ಅವರನ್ನು ನೋಡಲೆಂದೇ ತುಂಬಾ ಜನ ಬರುತ್ತಾರೆ. ಕುಂಭ ಮೇಳಕ್ಕೆ ಬರುವ ಅಘೋರಿಗಳು ಅಲ್ಲಿ, ಪೂಜೆ, ವಿವಿಧ ಭಂಗಿಯಲ್ಲಿ ಧ್ಯಾನ ಅಂತ ಗಮನ ಸೆಳೆಯುತ್ತಾರೆ. ಕುಂಭ ಮೇಳಕ್ಕೆ ಬರುವ ವಿದೇಶಿಗರಿಗಂತೂ ಇವರೇ ಪ್ರಮುಖ ಆಕರ್ಷಣೆ, ಇವರ ಬಗ್ಗೆ ಡಾಕ್ಯೂಮೆಂಟ್ ಮಾಡುತ್ತಾರೆ. ಕೆಲವರು ಇವರ ಬಗ್ಗೆ ತಪ್ಪಾಗಿ ಕೂಡ ಮಾತನಾಡುತ್ತಾರೆ, ಆದರೆ ಅಘೋರಿಗಳು ಯಾರನ್ನೂ ಹೆದರುವುದಿಲ್ಲ, ಯಾರ ಬಗ್ಗೆ ಕೂಡ ಕೇರ್ ಮಾಡುವುದಿಲ್ಲ.



Click it and Unblock the Notifications