Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಹಾಶಿವರಾತ್ರಿಯಂದು ಏನು ಮಾಡಬೇಕು? ಏನು ಮಾಡಬಾರದು? ಇಲ್ಲಿದೆ ಮಾಹಿತಿ.!
ಮಹಾಶಿವರಾತ್ರಿ ಶಿವನನ್ನು ಒಲಿಸಿಕೊಳ್ಳಲು ಮತ್ತು ಅವನ ಆಶೀರ್ವಾದ ಪಡೆಯಲು ಇರುವ ಪವಿತ್ರ ದಿನವಾಗಿದೆ. ಈ ವರ್ಷ ಮಾರ್ಚ್ 8ರಂದು ಮಹಾಶಿವರಾತ್ರಿ ಹಬ್ಬ ಬಂದಿದೆ. ಈ ವರ್ಷ, ಇದನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು, ಅಂದರೆ ಮಾರ್ಚ್ 8 ರಂದು ಆಚರಿಸಲಾಗುತ್ತದೆ.
ಪದ್ಮರಾಜರಾತ್ರಿ ಎಂದೂ ಕರೆಯುವ ಶಿವರಾತ್ರಿ 2024 ಸಾಲಿನಲ್ಲಿ ಮಾರ್ಚ್ 8ರಂದು ಆಚರಿಸಲಾಗುತ್ತಿದೆ. ಆಡಂಬರ ಬಯಸದ ಶಿವ ಶುದ್ಧ ಮನಸ್ಸಿನಿಂದ, ಶುಭ್ರ ಬಟ್ಟೆತೊಟ್ಟು ಪೂಜಿಸಿ. ಈ ದಿನ ಬೆಳಿಗ್ಗೆಯೇ ಶಿವಲಿಂಗಕ್ಕೆ ಹಾಲು, ತುಪ್ಪ, ಜೇನುತುಪ್ಪ, ಗಂಧ, ಅರಿಶಿನ, ಗಂಗಾಜಲದಲ್ಲಿ ಅಭಿಷೇಕ ಮಾಡಿದರೆ ಶಿವನ ಕೃಪೆಗೆ ಪಾತ್ರರಾಗಬಹುದು ಎಂಬ ನಂಬಿಕೆ ಇದೆ.

ಈ ದಿನದೊಂದಿಗೆ ಸಂಬಂಧಿಸಿದ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲಾದ ನಿಯಮಗಳನ್ನು ಅನುಸರಿಸುವುದು ನಿಮಗೆ ತುಂಬಾ ಪ್ರಯೋಜನಕಾರಿ ಮತ್ತು ಮಂಗಳಕರವಾಗಿರುತ್ತದೆ. ಈ ಹಬ್ಬವು ಭಗವಾನ್ ಶಿವನನ್ನು ಬಹಳ ವೈಭವದಿಂದ ಪೂಜಿಸಲು ಸಮರ್ಪಿಸಲಾಗಿದೆ. ಹಾಗಾದರೆ ಶಿವನ ಆರಾಧನೆಯ ಈ ಶುಭದಿನದಂದು ನಾವು ಯಾವ ಕೆಲಸ ಮಾಡಬೇಕು ಯಾವ ಕೆಲಸ ಮಾಡಬಾರದು ಎಂಬುದನ್ನು ನೋಡಿ.
ಮಹಾಶಿವರಾತ್ರಿಯ ದಿನಂದು ಏನು ಮಾಡಬೇಕು?
ಮಹಾಶಿವರಾತ್ರಿಯ ದಿನದಂದು ಉಪವಾಸವನ್ನು ಆಚರಿಸಲು ಮತ್ತು ಸಂತೋಷ ಮತ್ತು ಸಮೃದ್ಧಿ ವೃದ್ಧಿಗೆ ಶಿವನ ಆರಾಧಿಸಲಾಗುತ್ತದೆ. ಹೀಗಾಗಿ ಇಂದು ಶಿವನ ಆರಾಧನೆ ಚಾಚು ತಪ್ಪದೆ ಮಾಡಿ.
ಅಲ್ಲದೆ, ಶಿವನ ದೇವಾಲಯಕ್ಕೆ ಭೇಟಿ ನೀಡಿ ಮತ್ತು ಶಿವಲಿಂಗಕ್ಕೆ ನೀರನ್ನು ಅರ್ಪಿಸಿ.
ವ್ರತ ಕಥಾವನ್ನು ಆಲಿಸಿ ಅಥವಾ ಪಠಿಸಿ ಮತ್ತು ಭಗವಾನ್ ಶಿವ ಮತ್ತು ಪಾರ್ವತಿ ದೇವಿಯನ್ನು ಧ್ಯಾನಿಸಿ.
ಶಿವನನ್ನು ಮೆಚ್ಚಿಸಲು ಮತ್ತು ಅವನ ಆಶೀರ್ವಾದವನ್ನು ಪಡೆಯಲು ನೀವು ಬೆಲ್ಪತ್ರೆ ಮತ್ತು ಹೂವುಗಳನ್ನು ಪೂಜಿಸುವಾಗ ಬಳಸಬೇಕು.
ಮಹಾಶಿವರಾತ್ರಿಯಂದು ಅಗತ್ಯವಿರುವವರಿಗೆ ಸಿಹಿತಿಂಡಿಗಳು, ಆಹಾರ, ಬಟ್ಟೆಯನ್ನು ದಾನ ಮಾಡುವುದರಿಂದ ಶ್ರೇಯಾಭಿವೃದ್ಧಿಯಾಗಲಿದೆ.
ಶಿವನ ಮೆಚ್ಚಿಸಲು ನೀವು ಈ ದಿನದಂದು ಭಜನೆ-ಕೀರ್ತನೆಯನ್ನು ಸಮರ್ಪಿತವಾಗಿ ಮಾಡಬೇಕು. ಜೊತೆಗೆ ಶಿವನ ದೇವಾಲಯಕ್ಕೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲಿರುವ ಶಿವನ ಮೂರ್ತಿ ಇಲ್ಲವೆ ಪೋಟೋಗೆ ಹಣತೆ ಹಚ್ಚಿ.
ಶಿವನಿಗೆ ಪ್ರಿಯವಾದ ವಾಹನವಾದ ನಂದಿಗೆ ಸಾಧ್ಯವಾದಷ್ಟು ಆಹಾರ ನೀಡಿ, ಇಲ್ಲವೆ ನಂದಿಯ ಕಾಲು ತೊಳೆದು ಪೂಜೆ ಮಾಡಿದರೆ ಒಳಿತಾಗಲಿದೆ.
ಈ ದಿನದಂದು ಶಿವನ ದೇವಾಲಯಕ್ಕೆ ತೆರಳಲು ಸಾಧ್ಯವಾಗದಿದ್ದರೆ ಗಣಪತಿ ದೇವಾಲಯದಲ್ಲೂ ಪೂಜೆ ನೆರವೇರಿಸಬಹುದು.
ಮಹಾಶಿವರಾತ್ರಿಯಂದು ಯಾವ ಕೆಲಸ ಮಾಡಬಾರದು?
ನೀವು ಮಹಾಶಿವರಾತ್ರಿಯಂದು ಮಾಂಸ ಅಥವಾ ಮದ್ಯವನ್ನು ಸೇವಿಸಬಾರದು ಮತ್ತು ಸಾತ್ವಿಕ ಆಹಾರವನ್ನು ಅನುಸರಿಸಬೇಕು.
ಶಿವರಾತ್ರಿಯಂದು ಸುಳ್ಳು ಹೇಳುವುದು, ಮೋಸ ಮಾಡುವ ಕೆಲಸಕ್ಕೆ ಕೈ ಹಾಕಬೇಡಿ.
ವಿಶೇಷವಾಗಿ ಈ ದಿನದಂದು ನೀವು ಯಾವುದೇ ಪಕ್ಷಿ ಅಥವಾ ಪ್ರಾಣಿಯನ್ನು ನೋಯಿಸಿದರೆ ಅದು ಶಿವನನ್ನು ಕೆರಳಿಸುತ್ತದೆ ಎಂದು ನಂಬಲಾಗಿದೆ.
ನೀವು ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು ಮತ್ತು ಯಾವುದೇ ಘರ್ಷಣೆಗಳಲ್ಲಿ ಪಾಲ್ಗೊಳ್ಳಬಾರದು.
ಶಿವಲಿಂಗಕ್ಕೆ ನೀರನ್ನು ಅರ್ಪಿಸಲು ತಾಮ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಲೋಹವನ್ನು ನೀವು ಬಳಸಬಾರದು (ಶಿವಲಿಂಗದ ಜಲ ಅಭಿಷೇಕವನ್ನು ನಿರ್ವಹಿಸುವ ಪಠಣಗಳು).
ಒಂದು ವೇಳೆ ನೀವು ಶಿವನ ಅಷ್ಟೋತ್ತರ ಮತ್ತು ಶಿವನ ಮಂತ್ರ ಪಠಿಸುವುದಾದರೆ ತಪ್ಪು ತಪ್ಪಾಗಿ ಪಠಿಸಬಾರದು. ಪಠಿಸದಿದ್ದರೂ ಏಣು ಹಾನಿಯಿಲ್ಲ. ಆದರೆ ತಪ್ಪಾಗಿ ಪಠಿಸಬೇಡಿ.
ಇಂದು ನಂದಿ ಇಲ್ಲವೆ ಹಸು, ಗೋವುಗಳಿಗೆ ಹೊಡೆಯುವುದು, ಗಾಯಗೊಳಿವುದನ್ನು ಮಾಡಲೇಬೇಡಿ. ಇದರಿಂದ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.



Click it and Unblock the Notifications
